ದ್ವಿಚಕ್ರ ವಾಹನ ಮಾರಾಟದಲ್ಲಿ ಹೆಬ್ಬುಲಿ ಹೀರೋವನ್ನೇ ಹಿಂದಿಕ್ಕಿ ನಂಬರ್‌ 1 ಆದ ಹೋಂಡಾ!

90's ಕಿಡ್ಸ್‌ಗಳಿಗೆ ಹೀರೋಹೋಂಡಾ ಕಂಪನಿಯನ್ನು ಮರೆಯಲು ಸಾಧ್ಯವೇ ಇಲ್ಲ. ಆ ಕಾಲದಲ್ಲಿ ರಸ್ತೆಯನ್ನಾಳುತ್ತಿದ್ದ ಹೀರೋಹೋಂಡಾ ಕಂಪನಿಯ ಬೈಕ್‌ ಆನಂತರದಲ್ಲಿ ಬೇರೆ ಬೇರೆಯಾಗಿ ಮಾರುಕಟ್ಟೆಯಲ್ಲಿ ಬೈಕ್‌ಗಳನ್ನು ಮಾರಾಟ ಮಾಡಲು ಆರಂಭಿಸಿದರು. ಏನೇ ಆದರೂ ಭಾರತದಲ್ಲಿ ಹೀರೋ ಕಂಪನಿಯ ಮಾರಾಟವನ್ನು ಹಿಂದಿಕ್ಕಲು ಯಾರಿಗೂ ಸಾಧ್ಯವಾಗಿರಲಿಲ್ಲ.

ಆದರೆ ಈಗ ಅದಕ್ಕೆ ಒಂದು ಉತ್ತರ ಸಿಕ್ಕಿದೆ. ಈ ಬಾರಿ ಹೋಂಡಾ, 2024 ರ ಎಪ್ರಿಲ್‌ ತಿಂಗಳಲ್ಲಿ ಅತೀ ಹೆಚ್ಚು ದ್ವಿಚಕ್ರ ವಾಹನಗಗಳನ್ನು ಮಾರಾಟ ಮಾಡುವ ಮೂಲಕ ನಂಬರ್‌ 1 ಆಗಿ ಬದಲಾಗಿದೆ. ಎಪ್ರಿಲ್‌ ತಿಂಗಳಲ್ಲಿ ಹೀರೋ ಮಾರಾಟ ಮಾಡಿರುವುದಕ್ಕಿಂತ ಅಧಿಕ ಬೈಕ್‌ಗಳನ್ನು ಮಾರಾಟ ಮಾಡುವ ಮೂಲಕ ಹೋಂಡಾ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಮಾರಾಟದ ಲೆಕ್ಕಾಚಾರದಲ್ಲಿ ಹೀರೋವನ್ನು ಹಿಂದಿಕ್ಕಿದೆ. ಇದರಲ್ಲಿ ಭಾರತದ ಒಳಗಿನ ಮಾರಾಟ ಮತ್ತು ರಫ್ತನ್ನು ಸಹ ಒಳಗೊಂಡಿದೆ.

Honda surpasses Hero MotoCorp In April 2024 sales

ಎಪ್ರಿಲ್‌ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಹೋಂಡಾ ಮತ್ತು ಹೀರೋ ಕಂಪನಿಗಳ ಮಾರಾಟದ ಲೆಕ್ಕವನ್ನು ನೋಡುವುದಾದರೆ, ಹೋಂಡಾ ಕಂಪನಿಯು ಬರೋಬ್ಬರಿ 5,41,946 ಯೂಬಿಟ್‌ಗಳನ್ನು ಮಾರಾಟ ಮಾಡಿದೆ. ಇದೇ ಸಂಧರ್ಭದಲ್ಲಿ ಹೀರೋ ಕಂಪನಿ ಸುಮಾರು 5,33,585 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಇನ್ನುಳಿದಂತೆ ಟಿವಿಎಸ್‌, ಬಜಾಜ್‌ ಮತ್ತು ಸುಜುಕಿ ಕಂಪನಿಗಳು ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ.

ಎಪ್ರಿಲ್‌ ತಿಂಗಳಲ್ಲಿ ಹೋಂಡಾ ಮಾರಾಟ ಮಾಡಿರುವ ದ್ವಿಚಕ್ರ ವಾಹನದಲ್ಲಿ ಆಕ್ಟೀವಾ ಸ್ಕೂಟರ್‌ನದ್ದೇ ಮೇಲುಗೈ. ಕೆಲವೇ ಸಮಯದಲ್ಲಿ ಆಕ್ಟಿವಾ 7ಜಿ ಶೋರೂಂಗಳನ್ನು ತಲುಪುವ ನಿರೀಕ್ಷೆಯಿದೆ ಎಂದು ಮೂಲಗಳು ಸೂಚಿಸುತ್ತಿವೆ. ನಿಖರವಾದ ಬೆಲೆ ವಿವರಗಳ ಬಗ್ಗೆ ಒಂದಷ್ಟು ಮಾಹಿತಿ ಹೊರಬಂದಿದ್ದು, ವೈಶಿಷ್ಟ್ಯಗಳನ್ನು ಅವಲಂಬಿಸಿ 80,000 ರೂ.ಗಳಿಂದ 1,20,000 ರೂ.ಗಳ ನಡುವೆ ಬೆಲೆ ಇರಬಹುದು.

Honda surpasses Hero MotoCorp In April 2024 sales

ಹೋಂಡಾ ಬಳಕೆದಾರ ಸ್ನೇಹಿ ವೈಶಿಷ್ಟ್ಯಗಳತ್ತ ಗಮನ ಹರಿಸಿದ್ದು, ಆಕ್ಟಿವಾ 7ಜಿ ಸ್ಕೂಟರ್‌ನಲ್ಲಿ ಇನ್ಫರ್ಮೇಷನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವಿಶಾಲವಾದ ಅಂಡರ್ ಸೀಟ್ ಸ್ಟೋರೇಜ್ ಮತ್ತು ರಾತ್ರಿಯಲ್ಲಿ ವರ್ಧಿತ ಗೋಚರತೆಗಾಗಿ ಎಲ್ಇಡಿ ಹೆಡ್ ಲ್ಯಾಂಪ್ ಅನ್ನು ಅಳವಡಿಸುವ ಸಾಧ್ಯತೆಯಿದೆ. ಜೊತೆಗೆ ನಿಮ್ಮ ವೈಯಕ್ತಿಕ ಶೈಲಿಗೆ ಸರಿಹೊಂದುವಂತೆ ರೋಮಾಂಚಕ ಬಣ್ಣ ಆಯ್ಕೆಗಳ ಶ್ರೇಣಿಯನ್ನು ನಿರೀಕ್ಷಿಸಬಹುದು.

ಹೀರೋ ಕಂಪನಿ ಮಾರಾಟ ಮಾಡಿದ ಬೈಕ್‌ಗಳಲ್ಲಿ ಸ್ಪ್ಲೆಂಡರ್‌ ಬೈಕ್‌ನದ್ದೇ ಕಾರುಬಾರು. ಈ ಬೈಕ್ ರೂ.75,191 ದಿಂದ ರೂ.76,396 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ವಿವಿಧ ಆಕರ್ಷಕ ಬಣ್ಣಗಳೊಂದಿಗೂ ದೊರೆಯುತ್ತದೆ. ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ಐಡಲ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Honda surpasses Hero MotoCorp In April 2024 sales

ಈ ಹೀರೋ (Hero MotoCorp)ಸ್ಪ್ಲೆಂಡರ್ ಪ್ಲಸ್ 97.2 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.02 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 8.05 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 4-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದ್ದು, 80.6 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟ್ರಿಮ್ (Hero Splendor Plus XTEC) ಬೈಕ್, ಬರೋಬ್ಬರಿ ರೂ.1 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಇದು 97.2 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 8.02 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 8.05 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದ್ದು, 83.2 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, May 5, 2024, 13:00 [IST]
English summary
Honda surpasses hero motocorp in april 2024 sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+