ರಸ್ತೆಯಲ್ಲಿ ಸದ್ದು ಮಾಡಲು ಸಜ್ಜು: ಹೊಸ ಜಾವಾ 350 ಸರಣಿ ಬಿಡುಗಡೆ

ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ (Jawa Yezdi Motorcycles) ಕಂಪನಿಯು ತನ್ನ ಜಾವಾ 350 ಸರಣಿಯನ್ನು (Jawa 350 Range) ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಜಾವಾ 350 ಸರಣಿಯ ಆರಂಭಿಕ ಬೆಲೆಯು ರೂ.1.99 ಲಕ್ಷವಾಗಿದೆ. ಜಾವಾ 350 ಸರಣಿ ಹೊಸ ಅಲಾಯ್ ವೀಲ್ ರೂಪಾಂತರಗಳ ಆಗಮನವಾಗಿದ್ದು, ಈ ನಿಯೋ-ರೆಟ್ರೋ ಬೈಕ್ ನಾಲ್ಕು ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ಗ್ರಾಹಕರ ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ ಜಾವಾ 350 ನಲ್ಲಿ ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಕೂಡ ಅಲಾಯ್ ವ್ಹೀಲ್ ಗಳನ್ನು ಪರಿಚಯಿಸಲು ಕಂಪನಿ ನಿರ್ಧರಿಸಿದೆ.

ಹೊಸ ಜಾವಾ 350 ಸರಣಿಯು ರೂ 1,98,950 ರಿಂದ ಪ್ರಾರಂಭವಾಗುವ ಸ್ಪೋಕ್ ವೀಲ್‌ಗಳೊಂದಿಗೆ ಮೂಲ ರೂಪಾಂತರಕ್ಕೆ ಮೂರು ಹೊಸ ಅಬ್ಸಿಡಿಯನ್ ಬ್ಲ್ಯಾಕ್, ಗ್ರೇ ಮತ್ತು ಡೀಪ್ ಫಾರೆಸ್ಟ್ ಎಂಬ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಅಲಾಯ್ ವ್ಹೀಲ್ ಗಳನ್ನು ಆರಿಸುವುದರಿಂದ ಬೇಸ್ ಜಾವಾ 350 ಬೆಲೆ 2,08,950 ರೂ. ಆಗುತ್ತದೆ.

Jawa 350 Range

ಜಾವಾ 350 ಕ್ರೋಮ್ ರೂಪಾಂತರವು ಸ್ಪೋಕ್ಡ್ ವೀಲ್‌ಗಳನ್ನು 2,14,950 ರೂಗಳಲ್ಲಿ ನೀಡಲಾಗುತ್ತದೆ, ಇದು ಮರೂನ್, ಕಪ್ಪು, ಮಿಸ್ಟಿಕ್ ಆರೆಂಜ್ ಮತ್ತು ವೈಟ್ (ಹೊಸ) ಎಂಬ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಇನ್ನು ಹೊಸ ಅಲಾಯ್ ವ್ಹೀಲ್ ಗಳೊಂದಿಗೆ ಕ್ರೋಮ್ ರೂಪಾಂತರದ ಬೆಲೆಯು ರೂ.2,23,950 ಆಗುತ್ತದೆ.

ಈ ಮೇಲಿನ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಇನ್ನು ಈ ಜಾವಾ 350 ರೇಂಜ್ 334cc, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು, ಈ ಎಂಜಿನ್ 22.2bhp ಮತ್ತು 28.2Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

Jawa 350 Range

ಹೊಸ ಜಾವಾ 350 ಲೈನ್‌ಅಪ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 35 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಹೊಂದಿದೆ ಮತ್ತು ಒರಟು ವಿಷಯವನ್ನು ಎದುರಿಸಲು ಹಿಂಭಾಗದಲ್ಲಿ ಟ್ವಿನ್ ಶಾಕ್ ಗಳನ್ನು ಹೊಂದಿದೆ. ಈ ಜಾವಾ 350 ಲೈನ್‌ಅಪ್ 178 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ ಮತ್ತು ಇದರ ಸೀಟ್ ನೆಲದಿಂದ 802 ಎಂಎಂ ಎತ್ತರದಲ್ಲಿದೆ.

ನಿಯೋ-ರೆಟ್ರೊ ಬೈಕ್ ಮುಂಭಾಗದಲ್ಲಿ 18-ಇಂಚಿನ ವ್ಹೀಲ್ ಮತ್ತು ಹಿಂಭಾಗದಲ್ಲಿ 17-ಇಂಚಿನ ವ್ಹೀಲ್ ಅನ್ನು ಹೊಂದಿದ್ದು ಅದು MRF ನ ಝಾಪರ್ ಶ್ರೇಣಿಯಿಂದ 100/90-18 (ಮುಂಭಾಗ) ಮತ್ತು 130/80-17 (ಹಿಂಭಾಗ) ಟೈರ್‌ಗಳನ್ನು ಹೊಂದಿದೆ. ಇನ್ನು ಬ್ರೇಕಿಂಗ್ ಸಿಸ್ಸ್ತಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 280 ಎಂಎಂ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಗಳನ್ನು ಹೊಂದಿದ್ದು, ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

Jawa 350 Range

ಜಾವಾ ಯೆಜ್ಡಿ ಮೋಟಾರ್‌ಸೈಕಲ್‌ನ ಸಿಇಒ ಆಶಿಶ್ ಸಿಂಗ್ ಜೋಶಿ ಅವರು ಮಾತನಾಡಿ, ಜಾವಾ 350 ಮಾದರಿಯ 353 ಮತ್ತು 354 ಮಾದರಿಗಳ ಕ್ರಾಂತಿಕಾರಿ ವಿನ್ಯಾಸಕ್ಕೆ ನಮ್ಮ ಗೌರವವಾಗಿದೆ. ಈ ಮಾದರಿಯ ವಿನ್ಯಾಸ ಮತ್ತು ಆಧುನಿಕ ಇಂಜಿನಿಯರಿಂಗ್, ಜಾವಾ 350 ಮೋಟಾರ್‌ಸೈಕಲ್ ಉದ್ಯಮದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವುದನ್ನು ಮುಂದುವರೆಸಿದೆ, ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್‌ನಲ್ಲಿ, ಗ್ರಾಹಕರ ತೃಪ್ತಿಗೆ ಆದ್ಯತೆ ನೀಡಲು ನಾವು ಜಾವಾ 350 ಶ್ರೇಣಿಯನ್ನು ಪ್ರಸ್ತುತಪಡಿಸಲು ಸಂತೋಷಪಡುತ್ತೇವೆ ಎಂದು ಹೇಳಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Tuesday, June 25, 2024, 19:19 [IST]
English summary
Jawa 350 range launched specs features colour options
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+