ಯುವಕರ ಹೃದಯ ಕದ್ದ ಜಾವಾ ಬೈಕ್ EMI, ಆನ್-ರೋಡ್ ಬೆಲೆ ಎಷ್ಟು?
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ ಹೊಸ ಜಾವಾ 42 ಎಫ್‌ಜೆ (Jawa 42 FJ) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಜಾವಾದ 42 ಸರಣಿಯಲ್ಲಿ ಜಾವಾ 42 ಎಫ್‌ಜೆ ಮಾದರಿಯು ಸ್ಪೋರ್ಟಿಯರ್ ಮತ್ತು ಹೆಚ್ಚು ಶಕ್ತಿಶಾಲಿ ಮಾದರಿಯಾಗಿದೆ. ಇದು ಇತರ ಜಾವಾ 42 ಮೋಟಾರ್‌ಸೈಕಲ್‌ಗಳಿಗಿಂತ ಹಲವಾರು ಬದಲಾವಣೆಗಳೊಂದಿಗೆ ಬಂದಿದೆ. ಈ ಹೊಸ ಜಾವಾ 42 ಎಫ್‌ಜೆ ಬೈಕಿನ ಇಎಂಐ ಮತ್ತು ಆನ್ ರೋಡ್ ಬೆಲೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಈ ಹೊಸ ಜಾವಾ 42 ಎಫ್‌ಜೆ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1,99,142 ಆದರೆ ಆನ್ ರೋಡ್ ಬೆಲೆಯು ರೂ.2,20,748 ಆಗಿದೆ. ಈ ಬೈಕಿನ ಲೋ ವೆರಿಯೆಂಟ್ ಮಾದರಿಗೆ 6% ಬಡ್ಡಿ ದರದಲ್ಲಿ ಐದು ವರ್ಷದ ಲೋನ್ ಮಾಡಿದರೆ ಪ್ರತಿ ತಿಂಗಳು ನೀವು 6,046 ಗಳಷ್ಟು ಇಎಂಐ ಪಾವತಿಸಬೇಕು. ಇನ್ನು ಈ ಜಾವಾ 42 ಎಫ್‌ಜೆ ಬೈಕಿನ ಡೌನ್ ಪೇಮೆಂಟ್ ರೂ.22000 ಆಗಿದೆ.

ಹೊಸ ಜಾವಾ 42 ಎಫ್‌ಜೆ ಬೈಕ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಆಸಕ್ತ ಗ್ರಾಹಕರು ಆನ್‌ಲೈನ್ ಮತ್ತು ಡೀಲರ್‌ಶಿಪ್‌ಗಳಿಗೆ ತೆರಳಿ ಕೇವಲ 942 ರೂ. ಪಾವತಿಸಿ ಬುಕ್ ಮಾಡಬಹುದು. ಹೊಸ ಜಾವಾ 42 ಎಫ್‌ಜೆ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಹೊಸ ಬೈಕ್ ಆಧುನಿಕ ರೆಟ್ರೊ ಥೀಮ್ ಹೊಂದಿದೆ. ಟಿಯರ್ ಡ್ರಾಪ್-ಆಕಾರದ ಇಂಧನ ಟ್ಯಾಂಕ್ ಬದಿಯಲ್ಲಿ ಅಲ್ಯೂಮಿನಿಯಂ ಪ್ಲೇಟ್‌ನಿಂದ ಇದು ಸ್ಪಷ್ಟವಾಗಿದೆ.
ಬ್ರ್ಯಾಂಡ್‌ನ ಇತಿಹಾಸವನ್ನು ಇಟ್ಟುಕೊಂಡು ಇತರ ಜಾವಾ 42s ನಲ್ಲಿರುವಂತೆ ಸೈಡ್ ಪ್ಯಾನೆಲ್ ಹೋಲುತ್ತದೆ. ಇನ್ನು ಜಾವಾ 42 ಎಫ್‌ಜೆ ಬೈಕಿನ ಹಿಂಭಾಗದ ಫೆಂಡರ್‌ನಿಂದ ಚಾಚಿಕೊಂಡಿರುವ ವಿಶಿಷ್ಟವಾದ ಜಾವಾ ಟೈಲ್ ಲೈಟ್‌ನೊಂದಿಗೆ ಫೆಂಡರ್‌ಗಳನ್ನು ಸಾಕಷ್ಟು ಅಂದವಾಗಿ ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ ಈ ಹೊಸ ಜಾವಾ 42 ಎಫ್‌ಜೆ ಬೈಕ್ ಮಲ್ಟಿ-ಸ್ಪೋಕ್ ಅಲಾಯ್ ವೀಲ್‌ಗಳು, ಬ್ಲ್ಯಾಕ್ಡ್-ಔಟ್ ಎಂಜಿನ್ ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಪೈಪ್‌ಗಳು ಬೈಕ್‌ನ ಸ್ಪೋರ್ಟಿ ಅಂಶಗಳನ್ನು ಸೇರಿಸುತ್ತವೆ.

ಈ ಬೇಸ್ ಮಾಡೆಲ್ ವೈರ್-ಸ್ಪೋಕ್ ವ್ಹೀಲ್ ಗಳನ್ನು ಹೊಂದಿದೆ. ಒಟ್ಟಾರೆಯಾಗಿ, ಜಾವಾ 42 ಎಫ್‌ಜೆ ಉತ್ತಮವಾಗಿ ಕಾಣುತ್ತದೆ. 'ಜಾವಾ 42 FJ' ನಲ್ಲಿ 'FJ' ಎಂದರೆ, ಇದು ಜಾವಾ ಮೋಟಾರ್‌ಸೈಕಲ್‌ಗಳ ಸಂಸ್ಥಾಪಕ ಫ್ರಾಂಟಿಸೆಕ್ ಜಾನೆಕೆಕ್ ಅವರ ಹೆಸರು ಆಗಿದೆ. ಈ ಜಾವಾ 42 ಎಫ್‌ಜೆ ಬೈಕ್ ವಿಭಿನ್ನ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.
ಇವುಗಳು ಕಾಸ್ಮೊ ಬ್ಲೂ ಮ್ಯಾಟ್, ಅರೋರಾ ಗ್ರೀನ್ ಮ್ಯಾಟ್, ಮಿಸ್ಟಿಕ್ ಕಾಪರ್, ಡೀಪ್ ಬ್ಲ್ಯಾಕ್ ಮ್ಯಾಟ್ ರೆಡ್ ಕ್ಲಾಡ್ ಮತ್ತು ಡೀಪ್ ಬ್ಲ್ಯಾಕ್ ಮ್ಯಾಟ್ ಬ್ಲ್ಯಾಕ್ ಕ್ಲಾಡ್ ಎಂಬ ಬಣ್ಣಗಳಿವೆ. ಈ ಹೊಸ ಜಾವಾ 42 FJ ಬೈಕ್ ಆಲ್ಫಾ 2, 334cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, DOHC ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 21.45PS ಪವರ್ ಮತ್ತು 29.62Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಕ್ಲಾಸಿಕ್ ಲೆಜೆಂಡ್ಸ್ ಪ್ರಕಾರ, ಹೊಸ ಜಾವಾ 42 ಎಫ್‌ಜೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿರುವ ತನ್ನ ವಿಭಾಗದ ಮೊದಲ ಬೈಕ್ ಆಗಿದೆ. ಪ್ರತಿ ಗೇರ್‌ಗೆ ವಿಶಿಷ್ಟವಾದ ಎಂಜಿನ್ ಮ್ಯಾಪಿಂಗ್ ಅನ್ನು ಮೋಟಾರ್‌ಸೈಕಲ್ ಒಳಗೊಂಡಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಈ ಜಾವಾ 42 FJ ಬೈಕ್ ಸ್ಪೋರ್ಟಿ ಹ್ಯಾಂಡ್ಲಿಂಗ್ ಗುಣಲಕ್ಷಣಗಳಿಗಾಗಿ ಡಬಲ್ ಕ್ರೇಡಲ್ ಫ್ರೇಮ್ ಅನ್ನು ಬಳಸುತ್ತದೆ.
ಈ ಹೊಸ ಜಾವಾ 42 ಎಫ್‌ಜೆ ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ ಹೊಂದಿದೆ. ಪ್ರಮುಖವಾಗಿ ಈ ಬೈಕಿನ ಬ್ರೇಕಿಂಗ್ ಗಾಗಿ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳ ಜೊತೆ ಫ್ಲೋಟಿಂಗ್ ಕ್ಯಾಲಿಪರ್‌ಗಳಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








