ಮಹಾ ಶಿವರಾತ್ರಿ: ನಿಮ್ಮ ಮನೆಗೆ ತರಬಹುದಾದ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು.. ಕಡಿಮೆ ಬೆಲೆಗೂ ಲಭ್ಯ
ಮಹಾ ಶಿವರಾತ್ರಿ (Maha Shivaratri) ಹಬ್ಬದ ಶುಭ ಗಳಿಗೆಯಲ್ಲಿ ಹೊಚ್ಚ ಹೊಸ ವಾಹನವನ್ನು ಖರೀದಿಸಬೇಕು ಎಂದು ಹಲವಾರು ಬಯಸುತ್ತಾರೆ. ಇಲ್ಲಿ ಕಡಿಮೆ ಬೆಲೆಗೆ ಆಕರ್ಷಕ ವೈಶಿಷ್ಟ್ಯವನ್ನು ಹೊಂದಿರುವ ಟಿವಿಎಸ್, ಹೀರೋ, ಓಲಾ ಹಾಗೂ ಎಥರ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ವಿವರಿಸಿದ್ದೇವೆ.
ಮೊದಲಿಗೆ ಎಲ್ಲರ ಮೆಚ್ಚಿನ ಟಿವಿಎಸ್ ಐಕ್ಯೂಬ್ (TVS iQube) ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಮಾತನಾಡೋಣ. ಬೆಂಗಳೂರಿನಲ್ಲಿ ಇದರ ಸಾಮಾನ್ಯ (ಸ್ಟ್ಯಾಂಡರ್ಡ್) ರೂಪಾಂತರ ರೂ.1,47,968 ಹಾಗೂ ಎಸ್ ರೂಪಾಂತರ ರೂ.1,53,909 ಆನ್-ರೋಡ್ ಬೆಲೆಯನ್ನು ಹೊಂದಿದೆ. ಇವೆರೆಡು ಮಾದರಿಗಳು 3.04 ಕೆಡಬ್ಲ್ಯೂಹೆಚ್ (kWh) ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿದ್ದು, ಭರ್ತಿ ಚಾರ್ಜ್ ನಲ್ಲಿ 100 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತವೆ.

ಈ ಟಿವಿಎಸ್ ಐಕ್ಯೂಬ್ ರೂಪಾಂತರಗಳಲ್ಲಿ ಉಪಯೋಗಿಸಿರುವ ಎಲೆಕ್ಟ್ರಿಕ್ ಮೋಟಾರ್ 140 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ ಗಂಟೆಗೆ 75 ಕಿ.ಮೀ ಗರಿಷ್ಠ ವೇಗವನ್ನು ಹೊಂದಲಿದೆ. ಇವುಗಳ ಬ್ಯಾಟರಿ ಪ್ಯಾಕ್ ಕೇವಲ 4 ಗಂಟೆ 30 ನಿಮಿಷದಲ್ಲಿ 0-80% ಚಾರ್ಜ್ ಆಗುತ್ತದೆ. ಆಕರ್ಷಕ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ದೇಶೀಯ ಮಾರುಕಟ್ಟೆಯಲ್ಲಿ ಹೀರೋ (Hero) ತನ್ನ ಏಕೈಕ ವಿಡಾ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಮಾರಾಟಗೊಳಿಸುತ್ತದೆ. ಇದು ವಿ1 ಪ್ಲಸ್ ಹಾಗೂ ವಿ1 ಪ್ರೊ ಎಂಬ ರೂಪಾಂತರಗಳ ಆಯ್ಕೆಯಲ್ಲಿ ಸಿಗಲಿದ್ದು, ಬೆಂಗಳೂರಿನಲ್ಲಿ ಕ್ರಮವಾಗಿ ರೂ.1.15 ಲಕ್ಷ ಮತ್ತು ರೂ.1.45 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿವೆ. ವಿ1 ಪ್ಲಸ್ ಮಾದರಿ 3.44 ಕೆಡಬ್ಲ್ಯೂಹೆಚ್ (kWh) ಹಾಗೂ ವಿ1 ಪ್ರೊ ರೂಪಾಂತರ 3.94 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ಅನ್ನು ಪಡೆದಿದೆ.

ಹೀರೋ ವಿಡಾ ವಿ1 ಪ್ಲಸ್ ಸಂಪೂರ್ಣ ಚಾರ್ಜ್ ನಲ್ಲಿ100 ಕಿಲೋಮೀಟರ್ ಕ್ರಮಿಸುತ್ತದೆ. ಅದೇ ವಿ1 ಪ್ರೊ 110 ಕಿಲೋಮೀಟರ್ ಓಡುತ್ತದೆ. ಇವೆರೆಡು ರೂಪಾಂತರಗಳು ಗಂಟೆ 80 ಕಿ.ಮೀ ಗರಿಷ್ಠ ವೇಗವನ್ನು ಹೊಂದಿಲಿವೆ. ಎಲ್ಇಡಿ ಲೈಟಿಂಗ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿವೆ.
ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುವವರಿಗೆ ಓಲಾದ ಎಸ್1 ಎಕ್ಸ್ ಪ್ಲಸ್ (S1 X+) ಎಲೆಕ್ಟ್ರಿಕ್ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ. ಇದು ಮಾರ್ಚ್ ಅಂತ್ಯದವರೆಗೆ ರಿಯಾಯಿತಿ ಪ್ರಯೋಜನವನ್ನು ಪಡೆದಿರುವುದರಿಂದ ರೂ.84,999 ಎಕ್ಸ್ ಶೋರೂಂ ಬೆಲೆಗೆ ದೊರೆಯುತ್ತದೆ. 3 ಕೆಡಬ್ಲ್ಯೂಹೆಚ್ (Kwh) ಬ್ಯಾಟರಿ ಪ್ಯಾಕ್ ಪಡೆದಿದ್ದು, ಭರ್ತಿ ಚಾರ್ಜ್ ನಲ್ಲಿ 151 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ.

ಎಥರ್ 450ಎಸ್ (Ather 450S) ಎಲೆಕ್ಟ್ರಿಕ್ ಸ್ಕೂಟರ್ ಕೂಡ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಬೆಂಗಳೂರಿನಲ್ಲಿ ರೂ. 1,16,969 ಆನ್-ರೋಡ್ ಬೆಲೆಯನ್ನು ಹೊಂದಿದೆ. ಇದು 2.9 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಪೂರ್ತಿ ಚಾರ್ಜ್ ನಲ್ಲಿ 115 ಕಿ.ಮೀ ಕ್ರಮಿಸುತ್ತದೆ. ಕೇವಲ 3.9 ಸೆಕೆಂಡುಗಳಲ್ಲಿ 0-40 ಕೆಎಂಪಿಹೆಚ್ ವೇಗವನ್ನು ಪಡೆಯುತ್ತದೆ.
ಇನ್ನು, ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಒಂದಕ್ಕಿಂತ ಒಂದು ಹೆಚ್ಚು ಅತ್ಯಾಧುನಿಕವಾಗಿವೆ. ಜೊತೆಗೆ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ದೊರೆಯುವುದರಿಂದ ನಿಮ್ಮ ಇಷ್ಟದ ಸ್ಕೂಟರ್‌ನ್ನು ತೆಗೆದುಕೊಳ್ಳುವ ಮೂಲಕ ಅದ್ದೂರಿಯಾಗಿ ಶಿವರಾತ್ರಿ ಹಬ್ಬವನ್ನು ಆಚರಿಸಿ. ಈಗ ಖರೀದಿಸಲು ಸಾಧ್ಯವಾಗದಿದ್ದರೆ ಯುಗಾದಿಯಲ್ಲಿ ಹೆಚ್ಚಿನ ರಿಯಾಯಿತಿಯನ್ನು ಪಡೆಯುವುದರಿಂದ ಆಗ ಬೇಕಾದರೂ ಕೊಂಡುಕೊಳ್ಳಬಹುದು.


Click it and Unblock the Notifications








