ಡಿಸೆಂಬರ್ ತಿಂಗಳ ವಾಹನ ಮಾರಾಟದಲ್ಲಿ ಎಸ್‌ಯುವಿ ಕಿಂಗ್ ಎನಿಸಿಕೊಂಡ ಮಹೀಂದ್ರಾ

ಭಾರತದ ಪ್ರಮುಖ ಆಟೋಮೋಟಿವ್ ಕಂಪನಿಗಳಲ್ಲಿ ಒಂದಾದ ಮಹೀಂದ್ರಾ (Mahindra) ಡಿಸೆಂಬರ್ 2023 ರಲ್ಲಿ ಭರ್ಜರಿ ವಾಹನ ಮಾರಾಟವನ್ನು ದಾಖಲಿಸಿದೆ. ರಫ್ತು ಸೇರಿದಂತೆ ಒಟ್ಟು 60,188 ವಾಹನಗಳನ್ನು ಡಿಸೆಂಬರ್‌ನಲ್ಲಿ ಮಾರಾಟ ಮಾಡಿದ್ದು, ಶೇ 6 ರಷ್ಟು ಬೆಳವಣಿಗೆ ಸಾಧಿಸಿರುವುದಾಗಿ ತನ್ನ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ಯುಟಿಲಿಟಿ ವೆಹಿಕಲ್ಸ್ ವಿಭಾಗದಲ್ಲಿ, ಮಹೀಂದ್ರಾ ದೇಶೀಯ ಮಾರುಕಟ್ಟೆಯಲ್ಲಿ 35,171 ವಾಹನಗಳನ್ನು ಮಾರಾಟ ಮಾಡಿದೆ, ಇದರಲ್ಲಿ ರಫ್ತು ಸೇರಿದಂತೆ ಒಟ್ಟಾರೆ 36,349 ವಾಹನಗಳನ್ನು ಮಾರಾಟ ಮಾಡಿದೆ. ವಾಣಿಜ್ಯ ವಾಹನಗಳ ದೇಶೀಯ ಮಾರಾಟವು 17,888 ರಷ್ಟಿದೆ. ಇದು ವರ್ಷಾಂತ್ಯದ ಉತ್ತಮ ಮಾರಾಟ ಬೆಳವಣಿಗೆ ಎಂದು ಮಹೀಂದ್ರಾ ಹೇಳಿಕೊಂಡಿದೆ.

mahindra-became-the-suv-king-in-december-vehicle-sales

ಮಹೀಂದ್ರಾ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ ಮಾತನಾಡಿ, "ಡಿಸೆಂಬರ್‌ನಲ್ಲಿ ನಾವು ಒಟ್ಟು 35,171 SUVಗಳನ್ನು ಮಾರಾಟ ಮಾಡಿದ್ದೇವೆ, ಕಳೆದ ವರ್ಷಕ್ಕಿಂತ ಶೇ 24 ರಷ್ಟು ಬೆಳವಣಿಗೆಯಾಗಿದೆ. ಆಯ್ದ ಭಾಗಗಳಲ್ಲಿ ನಾವು ಕೆಲವು ಪೂರೈಕೆ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಈ ಸವಾಲುಗಳನ್ನು ತಗ್ಗಿಸಲು ನಾವು ನಮ್ಮ ಪೂರೈಕೆದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

1945 ರಲ್ಲಿ ಸ್ಥಾಪನೆಯಾದ ಮಹೀಂದ್ರಾ ಗ್ರೂಪ್ 100 ಕ್ಕೂ ಹೆಚ್ಚು ದೇಶಗಳಲ್ಲಿ 2,60,000 ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳ ಅತಿದೊಡ್ಡ ಬಹುರಾಷ್ಟ್ರೀಯ ಒಕ್ಕೂಟವಾಗಿದೆ. ಇದು ಭಾರತದಲ್ಲಿ ಕೃಷಿ ಉಪಕರಣಗಳು, ಯುಟಿಲಿಟಿ ವಾಹನಗಳು, ಮಾಹಿತಿ ತಂತ್ರಜ್ಞಾನ ಮತ್ತು ಹಣಕಾಸು ಸೇವೆಗಳಲ್ಲಿ ನಾಯಕತ್ವದ ಸ್ಥಾನವನ್ನು ಹೊಂದಿರುವುದಾಗಿ ಮಹೀಂದ್ರಾ ಹೇಳಿದೆ.

mahindra-became-the-suv-king-in-december-vehicle-sales

ಪರಿಮಾಣದ ಪ್ರಕಾರ ವಿಶ್ವದ ಅತಿದೊಡ್ಡ ಟ್ರಾಕ್ಟರ್ ಕಂಪನಿಯಾಗಿ ಮಹೀಂದ್ರಾ ಗುರ್ತಿಸಿಕೊಂಡಿದೆ. ನವೀಕರಿಸಬಹುದಾದ ಇಂಧನ, ಕೃಷಿ, ಲಾಜಿಸ್ಟಿಕ್ಸ್, ಆತಿಥ್ಯ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಇದು ಬಲವಾದ ಅಸ್ತಿತ್ವವನ್ನು ಹೊಂದಿದೆ. ಮಹೀಂದ್ರಾ ಗ್ರೂಪ್ ಜಾಗತಿಕವಾಗಿ ಇಎಸ್‌ಜಿಯನ್ನು ಮುನ್ನಡೆಸುವಲ್ಲಿ ಸ್ಪಷ್ಟ ಗಮನವನ್ನು ಹೊಂದಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ.

ಶೀಘ್ರದಲ್ಲೇ ಥಾರ್ 5 ಡೋರ್: ಭಾರತದಲ್ಲಿ 2024 ರಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಮಹೀಂದ್ರಾ ಥಾರ್ 5-ಡೋರ್ ಎಸ್‌ಯುವಿ ಕೂಡ ಒಂದು. ಈಗಾಗಲೇ ಟೆಸ್ಟಿಂಗ್ ಜೋರಾಗಿ ನಡೆಯುತ್ತಿದ್ದು, ಸಾರ್ವಜನಿಕ ರಸ್ತೆಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿದೆ. ಇದೇ ಜೂನ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

mahindra-became-the-suv-king-in-december-vehicle-sales

ಈಗಿರುವ ಸ್ಟ್ಯಾಂಡರ್ಡ್ ಥಾರ್‌ಗೆ ಹೋಲಿಸಿದರೆ 5-ಡೋರ್ ಆವೃತ್ತಿಯು ಟೋನ್-ಡೌನ್ ನೋಟವನ್ನು ಹೊಂದಿರಬಹುದು. ಮಹೀಂದ್ರಾ 5-ಡೋರ್ ಥಾರ್‌ನೊಂದಿಗೆ 4×2 ಮತ್ತು 4×4 ಎರಡನ್ನೂ ನೀಡುವ ಸಾಧ್ಯತೆಯಿದೆ. ಉದ್ದವಾದ ಬಾಡಿ ಮತ್ತು ವೀಲ್‌ಬೇಸ್‌ನಿಂದಾಗಿ ಕೆಲವು ಆಫ್-ರೋಡಿಂಗ್ ಸಾಮರ್ಥ್ಯಗಳು ಪರಿಣಾಮ ಬೀರುತ್ತವೆಯೇ ಎಂದು ನೋಡಬೇಕಾಗಿದೆ.

ಎಂಜಿನ್ ಆಯ್ಕೆ ವಿಷಯಕ್ಕೆ ಬಂದರೆ 2.0-ಲೀಟರ್ ಪೆಟ್ರೋಲ್ ಎಂಜಿನ್ 150 ಪಿಎಸ್ ಗರಿಷ್ಠ ಪವರ್ ಮತ್ತು 300 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 2.2-ಲೀಟರ್ ಡೀಸೆಲ್ 130 PS ಪವರ್ ಮತ್ತು 300 Nm ಟಾರ್ಕ್ ಉತ್ಪಾದಿಸುತ್ತದೆ. ಎರಡೂ ಎಂಜಿನ್‌ಗಳು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿರಲಿವೆ.

mahindra-became-the-suv-king-in-december-vehicle-sales

ಮಹೀಂದ್ರಾ 5-ಡೋರ್ ಅನ್ನು 16 ಲಕ್ಷದಿಂದ 20 ಲಕ್ಷ (ಎಕ್ಸ್‌ ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈಗಿರುವ 3-ಬಾಗಿಲಿನ ಥಾರ್ ರೂ. 10.98 ಲಕ್ಷ (RWD) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಟಾಪ್-ಸ್ಪೆಕ್ ಡೀಸೆಲ್ AT 4WD ರೂಪಾಂತರದ ಬೆಲೆ 16.94 ಲಕ್ಷ ರೂ. (ಇವು ಎಕ್ಸ್‌ ಶೋರೂಂ ಬೆಲೆಗಳು) ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 1, 2024, 16:03 [IST]
English summary
Mahindra became the suv king in december vehicle sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+