ಕೇವಲ ನಾಲ್ಕೇ ದಿನ ಬಾಕಿ: ಅಗ್ಗದ ಬಜಾಜ್ CNG ಬೈಕ್ ಬಿಡುಗಡೆಗೆ ಸಜ್ಜು! ವಿಶೇಷತೆಗಳೇನು?

ದ್ವಿಚಕ್ರ ವಾಹನ ವಿಭಾಗದಲ್ಲಿ ಈವರೆಗೆ ಮೈಲೇಜ್ ಆಧಾರಿತ ಬೈಕ್‌ಗಳು ಹಲವು ಬಂದಿವೆ. ಅದರಲ್ಲೂ ಹೋಂಡಾ, ಹೀರೋ ಕಂಪನಿಯ ಬೈಕ್‌ಗಳು ಬಡವರ ಬಂಡಿಗಳಾಗಿ ಗುರ್ತಿಸಿಕೊಂಡಿವೆ. ಆದರೆ ಈಗ ಬಜಾಜ್‌ನಿಂದ ಬರುತ್ತಿರುವ ಹೊಸ CNG ಬೈಕ್ ಗೇಮ್ ಚೇಂಜರ್ ಆಗಲಿದೆ. ಸಾಮಾನ್ಯ ಮೈಲೇಜ್ ಬೈಕ್‌ಗಳಿಗೆ ಹೋಲಿಸಿಕೊಂಡರೆ ಈ ಬಜಾಜ್ ಸಿಎನ್‌ಜಿ ಬೈಕ್ ಅತ್ಯಧಿಕ ಮೈಲೇಜ್ ನೀಡುವುದರ ಜೊತೆಗೆ ಅಗ್ಗದ ಬೆಲೆಯಲ್ಲಿ ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಈ ಅಂಶಗಳಿಂದ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಬಜಾಜ್ ಸಿಎನ್‌ಜಿ ಬೈಕ್ ಬಿಡುಗಡೆ ಯಾವಾಗ ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ.

ಬಜಾಜ್ ತನ್ನ ಸಿಎನ್‌ಜಿ ಮೋಟಾರ್ ಸೈಕಲ್‌ ಅನ್ನು ಜುಲೈ 5 ರಂದು ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ದೃಢಪಡಿಸಿದೆ. ಇಲ್ಲಿಯವರೆಗೆ ರಸ್ತೆಗಳಲ್ಲಿ ಪರೀಕ್ಷೆ ನಡೆಸುವಾಗ ಹಲವು ಬಾರಿ ಕಾಣಿಸಿಕೊಂಡಿದ್ದ ಸಿಎನ್‌ಜಿ ಬೈಕ್‌ಗೆ 'ಬ್ರೂಜರ್' ಎಂದು ಹೆಸರಿಟ್ಟಿರುವುದಾಗಿ ಈ ಹಿಂದೆ ವರದಿಯಾಗಿತ್ತು. ಆದ್ರೆ ಆ ಹೆಸರನ್ನು ಬದಲಿಸಿ ಬಿಡುಗಡೆ ವೇಳೆ ಹೊಸ ಹೆಸರಿನೊಂದಿಗೆ ಪರಿಚಯಿಸುವ ಸಾಧ್ಯೆತಯಿದೆ.

new-2024-bajaj-cng-motorcycle-will-launch-on-5th-july

ಬಿಡುಗಡೆಯ ಬಳಿಕ ಬಜಾಜ್‌ನ ಹೊಸ ಮೋಟಾರ್‌ಸೈಕಲ್ ವಿಶ್ವದ ಮೊದಲ CNG ಬೈಕ್ ಎಂಬ ಖ್ಯಾತಿಯನ್ನು ಪಡೆಯಲಿದೆ. ಈ ಬೈಕ್ ಸಿಎನ್‌ಜಿ ಕಾರುಗಳಂತೆಯೇ ಸಿಎನ್‌ಜಿ ಮತ್ತು ಪೆಟ್ರೋಲ್‌ ಎರಡೂ ಇಂಧನಗಳಲ್ಲಿ ಓಡಲಿದೆ. ಸಿಎನ್‌ಜಿ ಟ್ಯಾಂಕ್ ಕೆಪಾಸಿಟಿ ಎಷ್ಟು, ಫುಲ್‌ಟ್ಯಾಂಕ್‌ನಲ್ಲಿ ಎಷ್ಟು ದೂರ ಚಲಿಸಬಲ್ಲದು, ಮೈಲೇಜ್ ಎಷ್ಟು ಎಂಬ ಕುತೂಹಲಕಾರಿ ಪ್ರಶ್ನೆಗಳಿಗೆ ಜುಲೈ 5 ರವರೆಗೆ ಕಾಯಬೇಕಿದೆ.

ಕಳೆದ ಕೆಲ ವರ್ಷಗಳಲ್ಲಿ ಪೆಟ್ರೋಲ್ ಬೆಲೆಗಳು ಗಗನಕ್ಕೇರಿವೆ, 100 ರೂ. ದಾಟಿ ಓಡುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸದ್ಯ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿವೆಯಾದರೂ, ಸುರಕ್ಷತೆಯ ವಿಷಯದಲ್ಲಿ ಜನರಲ್ಲಿ ಭಯವೂ ಕಾಡುತ್ತಿದೆ. ಹೀಗಿದ್ದಾಗ ಸಾಮಾನ್ಯ ಜನರಿಗೆ ವಿಶ್ವಾಸಾರ್ಹ ಕೈಗೆಟುಕುವ ಸಿಎನ್‌ಜಿ ಮೋಟಾರ್‌ಸೈಕಲ್‌ಗಳು ಗೇಮ್‌ ಚೇಂಜರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

new-2024-bajaj-cng-motorcycle-will-launch-on-5th-july

ನಿರೀಕ್ಷೆಗಳು: ಹೊಸ ಬೈಕ್ ಅನ್ನು ಬ್ರೂಜರ್ ಅಥವಾ ಫೈಟರ್ ಎಂದು ಕರೆಯುವ ನಿರೀಕ್ಷೆಯಿದೆ, ಆದರೆ ಇದರ ಬಹುತೇಕ ವಿನ್ಯಾಸ (ಡಿಸೈನ್) ಬಜಾಜ್ ಸಿಟಿ125ಎಕ್ಸ್ ಮೋಟಾರ್‌ಸೈಕಲ್‌ಗೆ ಹೋಲಿಕೆಯಾಗುತ್ತಿದೆ. ಹಾಗಾಗಿ ಬಜಾಜ್ ಕಂಪನಿಯು ತನ್ನ ಮುಂಬರಲಿರುವ ಹೊಸ ಸಿಎನ್‌ಜಿ ಬೈಕ್‌ಗೆ 'ಪ್ಲಾಟಿನಾ' ಎಂಬ ಹೆಸರನ್ನು ಕೂಡ ಇಡಬಹುದು.

ಕಮ್ಯೂಟರ್ ಬೈಕ್ ಆಗಿ ವಿನ್ಯಾಸಗೊಳಿಸಲಾದ ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.85,000 ವಿರಬಹುದು. ಸ್ಟ್ಯಾಂಡರ್ಡ್ ಕಮ್ಯೂಟರ್ ಮೋಟಾರ್ ಸೈಕಲ್‌ಗಳಿಗೆ ಹೋಲಿಸಿದರೆ ಬಜಾಜ್ ಸಿಎನ್‌ಜಿ ಬೈಕ್ ಕಾರ್ಯಾಚರಣಾ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹಾಗೆಯೇ ಮೈಲೇಜ್‌ಗೆ ಹೆಚ್ಚಿನ ಆದ್ಯತೆ ನೀಡುವವರಿಗೆ ಆಕರ್ಷಕ ಆಯ್ಕೆಯಾಗಲಿದೆ.

new-2024-bajaj-cng-motorcycle-will-launch-on-5th-july

ಇದು ಸಾಮಾನ್ಯ ಬೈಕ್‌ಗಳಂತಲ್ಲದೇ ಸ್ಟ್ಯಾಂಡರ್ಡ್ ಫ್ಯೂಯಲ್ ಟ್ಯಾಂಕ್ ಕೆಳಗೆ ಸಿಎನ್‌ಜಿ ಟ್ಯಾಂಕ್ ಅನ್ನು ಹೊಂದಿರುತ್ತದೆ. ಈ ಮೂಲಕ ದ್ವಿ-ಇಂಧನ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಚಲಿಸುವ ಇದರ ಸಾಮರ್ಥ್ಯವು ವಿವಿಧ ಭೂಪ್ರದೇಶಗಳಿಗೆ ಹೊಂದಿಕೊಳ್ಳುತ್ತದೆ. ಇದು 125 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿರಲಿದ್ದು, 5 ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ ಬರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, July 1, 2024, 14:20 [IST]
English summary
New 2024 bajaj cng motorcycle will launch on 5th july
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+