ಅಗ್ಗದ ಬೆಲೆಗೆ ಮತ್ತಷ್ಟು ಪ್ರೀಮಿಯಂ ಫೀಚರ್ಸ್ ಪಡೆದ ಹೊಸ ಯೂನಿಕಾರ್ನ್ ವಿಶೇಷತೆಗಳು!

ಹೋಂಡಾ ಯುನಿಕಾರ್ನ್ ಎರಡು ದಶಕಗಳಿಂದ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹ ಬೈಕ್ ಆಗಿ ಗುರ್ತಿಸಿಕೊಂಡಿದೆ. ಆಕರ್ಷಕ ವಿನ್ಯಾಸ, ಸುಧಾರಿತ ತಂತ್ರಜ್ಞಾನದೊಂದಿಗೆ ಲಕ್ಷಾಂತರ ಸವಾರರಿಗೆ ಬೆಸ್ಟ್‌ ಆಯ್ಕೆಯಾಗಿದೆ. ಇದೀಗ ಹೊಸ 2025 ರ ಹೋಂಡಾ ಯುನಿಕಾರ್ನ್ ಹೈಟೆಕ್ ವೈಶಿಷ್ಟ್ಯಗಳೊಂದಿಗೆ ರೂ. 1,19,481 ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆಯಾಗಿದೆ. ಇತ್ತೀಚಿನ ಕಾರ್ಬನ್ ಹೊರಸೂಸುವಿಕೆ ಮಾನದಂಡಗಳಿಗೆ ಬದ್ಧವಾಗಿ ಡಿಸೈನ್, ಸೌಕರ್ಯ ಮತ್ತು ತಂತ್ರಜ್ಞಾನದ ಮಿಶ್ರಣದೊಂದಿಗೆ ಎಂಟ್ರಿಕೊಟ್ಟಿದೆ. ಹೊಸ ಯುನಿಕಾರ್ನ್ ಬೈಕ್‌ನ ಸುಧಾರಿತ ವೈಶಿಷ್ಟ್ಯಗಳು ಮತ್ತು ಹೊಸ ಎಂಜಿನ್ ಅಪ್‌ಡೇಟ್‌ ತಿಳಿಯೋಣ.

ಉತ್ತಮ ಬೇಡಿಕೆಯೊಂದಿಗೆ ಕಮ್ಯೂಟರ್ ಸೆಗ್ಮೆಂಟಿನಲ್ಲಿ ಜನಪ್ರಿಯತೆ ಪಡೆದಿರುವ ಹೋಂಡಾ ಯೂನಿಕಾರ್ನ್ ಮೋಟಾರ್‌ಸೈಕಲ್‌ ಅನ್ನು ಹೆಚ್ಚಿನ ಫೀಚರ್ಸ್ ಹಾಗೂ ರಿಫೈನ್ಡ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಹೊಸ OBD2B ಕಂಪ್ಲೈಂಟ್ ಆಗಿರುವ ಹೊಸ ಯೂನಿಕಾರ್ನ್ ಮೋಟಾರ್‌ಸೈಕಲ್‌, ಬದಲಾಗುತ್ತಿರುವ ಸವಾರರ ಬೇಡಿಕೆಗಳನ್ನು ಪೂರೈಸಲು ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಿರುವುದಾಗಿ ಕಂಪನಿ ತಿಳಿಸಿದೆ.

new-2025-unicorn-price-features-engine-details

ಹೊಸ ಹೋಂಡಾ ಯೂನಿಕಾರ್ನ್ ಎಂಜಿನ್ ಬಗ್ಗೆ ಹೇಳುವುದಾದ್ರೆ, ಇದು ಮುಂಬರುವ ಸರ್ಕಾರಿ ನಿಯಮಗಳನ್ನು ಪೂರೈಸಲು OBD2B ಕಂಪ್ಲೈಂಟ್ ಆಗಿದೆ. ಹೊಸ ಎಂಜಿನ್ 162.71cc, ಸಿಂಗಲ್-ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್‌ನೊಂದಿಗೆ ಬರುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ ಜೊತೆಗೆ ಈ ಎಂಜಿನ್ 7500 RPM ನಲ್ಲಿ 9.7 kW ಪವರ್ ಮತ್ತು 5250 RPM ನಲ್ಲಿ 14.58 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಅಪ್‌ಡೇಟ್‌ಗಳ ಭಾಗವಾಗಿ ಯುನಿಕಾರ್ನ್ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲ್ಯಾಕ್ ಮತ್ತು ರೇಡಿಯಂಟ್ ರೆಡ್ ಮೆಟಾಲಿಕ್ ಎಂಬ ಮೂರು ಬಣ್ಣದ ಆಯ್ಕೆಗಳೊಂದಿಗೆ ಸಿಂಗಲ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. ಇದು ಹೊಸ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಒಳಗೊಂಡಿದ್ದು, ಇದರಲ್ಲಿ ಇಕೋ ಇಂಡಿಕೇಟರ್, ಗೇರ್ ಇಂಡಿಕೇಷನ್, ಸರ್ವಿಸ್ ರೀಸನ್ ಇಂಡಿಕೇಟರ್‌ನಂತಹ ಮಾಹಿತಿಯನ್ನು ಪ್ರದರ್ಶಿಸುತ್ತದೆ.

new-2025-unicorn-price-features-engine-details

ಮೇಲಾಗಿ, ಪ್ರಯಾಣದಲ್ಲಿರುವಾಗ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಲು ಇದು USB ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಸಹ ಹೊಂದಿದೆ. ವಿನ್ಯಾಸದ ವಿಷಯಕ್ಕೆ ಬಂದರೆ ಮುಂಭಾಗದಲ್ಲಿ ಇದು ಕ್ರೋಮ್ ಅಲಂಕರಣಗಳೊಂದಿಗೆ ಹೊಸ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಪಡೆದುಕೊಂಡು ಅದರ ಸರಳವಾದ ವಿನ್ಯಾಸದೊಂದಿಗೆ ಮುಂದುವರಿದಿದೆ.

ಹೋಂಡಾ ಇಂಡಿಯಾದ ಸಿಇಒ ಟ್ಸುಟ್ಸುಮು ಒಟಾನಿ ಮಾತನಾಡಿ, ಹೋಂಡಾ ಯುನಿಕಾರ್ನ್ ಲಕ್ಷಾಂತರ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ, ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಸೌಕರ್ಯಗಳಿಗೆ ಸಮಾನಾರ್ಥಕವಾಗಿದೆ. ಭಾರತದ ಪ್ರೀಮಿಯಂ ಪ್ರಯಾಣಿಕ ವಿಭಾಗದಲ್ಲಿ ಪ್ರವರ್ತಕವಾಗಿದೆ. ಹೊಸ 2025 ಮಾದರಿಯ ಬಿಡುಗಡೆಯೊಂದಿಗೆ, ಅದರ ಪರಂಪರೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದೇವೆ. ಹೊಸ ವೈಶಿಷ್ಟ್ಯಗಳು ಮತ್ತು ನವೀಕರಣಗಳು ಯುನಿಕಾರ್ನ್‌ನ ಆಕರ್ಷಣೆಯನ್ನು ಹೆಚ್ಚಿಸಲಿದೆ ಎಂದು ಹೇಳಿದರು.

ಹೋಂಡಾ ಮಾರುಕಟ್ಟೆ ನಿರ್ದೇಶಕ ಯೋಗೇಶ್ ಮಾಥುರ್ ಮಾತನಾಡಿ, 2025 ಯುನಿಕಾರ್ನ್ ಹೋಂಡಾದ ಸಾಬೀತಾದ ಎಂಜಿನಿಯರಿಂಗ್ ಅನ್ನು ಸುಧಾರಿತ ವೈಶಿಷ್ಟ್ಯಗಳು, ಪ್ರಾಯೋಗಿಕತೆ ಮತ್ತು ನವೀಕರಿಸಿದ OBD2B-ಕಾಂಪ್ಲೈಂಟ್ ಎಂಜಿನ್‌ನಂತಹ ಪ್ರಬಲ ಅಂಶಗಳೊಂದಿಗೆ ಸಂಯೋಜಿಸುತ್ತದೆ. ವಿವೇಚನಾಶೀಲ ಸವಾರರಿಗೆ ಇದು ಆದ್ಯತೆಯ ಆಯ್ಕೆಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, December 28, 2024, 10:00 [IST]
English summary
New 2025 unicorn price features engine details
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+