ಬಡವರ ಬಂಡಿ: ವಿಶ್ವದ ಮೊದಲ CNG ಬೈಕ್... 330 ಕಿ.ಮೀ ಓಡುವ ಬಜಾಜ್ ಫ್ರೀಡಂ ಬೆಲೆ ಎಷ್ಟು?

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ (Bajaj Auto) ವಿಶ್ವದ ಮೊದಲ ಸಿಎನ್‌ಜಿ ಬೈಕ್ ಅನ್ನು ಬಿಡುಗಡೆಗೊಳಗಿದೆ. ಈ ಬೈಕಿಗೆ ಬಜಾಜ್ ಫ್ರೀಡಂ 125 (Bajaj Freedom 125) ಎಂಬ ಹೆಸರನ್ನು ನೀಡಲಾಗಿದೆ. ಸಿಎನ್‌ಜಿ ಚಾಲಿತ ಕಾರುಗಳು ಬಂದು ದಶಕಕ್ಕೂ ಹೆಚ್ಚು ಆದರೂ, ಸಿಎನ್‌ಜಿ-ಚಾಲಿತ ಬೈಕ್ ಬರುತ್ತಿರುವುದು ಇದೀಗ ಮೊದಲ ಬಾರಿಗೆ ಮಾತ್ರ, ಭಾರತಕ್ಕೆ ಮಾತ್ರವಲ್ಲದೆ ವಿಶ್ವಲ್ಲೇ ಇದೇ ಮೊದಲು ಆಗಿದೆ. ಬಜಾಜ್ ಫ್ರೀಡಮ್ ಬೈಕ್ ಒಂದು ಬಟನ್ ಒತ್ತಿದರೆ ಚಲಿಸುವಾಗ ಪೆಟ್ರೋಲ್ ಮತ್ತು CNG ನಡುವೆ ಬದಲಾಯಿಸಬಹುದು.

ಬಜಾಜ್ ಫ್ರೀಡಂ 125 ಬೈಕ್ ಡ್ರಮ್, ಡ್ರಮ್ ಎಲ್ಇಡಿ ಮತ್ತು ಡಿಸ್ಕ್ ಎಲ್ಇಡಿ ಎಂಬ ಮೂರೂ ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಬಜಾಜ್ ಫ್ರೀಡಮ್ ಸಿಎನ್‌ಜಿ ಬೈಕ್ ಬೇಸ್ ಡ್ರಮ್ ರೂಪಾಂತರವು ಯೆಲ್ಲೋ ಅಸ್ಸೆಂಟ್ ಗಳೊಂದಿಗೆ ಪ್ಯೂಟರ್ ಗ್ರೇ ಮತ್ತು ರೆಡ್ ಅಸ್ಸೆಂಟ್ ಗಳೊಂದಿಗೆ ಎಬೊನಿ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳೊಂದಿಗೆ ಬರುತ್ತದೆ.

Bajaj Freedom 125 CNG

ಇತರ ಎರಡು ರೂಪಾಂತರಗಳು ಕೆರಿಬಿಯನ್ ಬ್ಲೂ, ರೇಸಿಂಗ್ ರೆಡ್, ಸೈಬರ್ ವೈಟ್, ರೆಡ್ ಅಸ್ಸೆಟ್ ಗಳೊಂದಿಗೆ ಪ್ಯೂಟರ್ ಗ್ರೇ ಮತ್ತು ಗ್ರೇಸ್ ಎಬೊನಿ ಬ್ಲ್ಯಾಕ್ ಬಣ್ಣಗಳನ್ನು ಹೊಂದಿವೆ. ಬಜಾಜ್ ಫ್ರೀಡಂ 125 ಬೈಕ್ ಬೆಲೆಯು ರೂ.95,000 ದಿಂದ ಆರಂಭಿಕವಾಗಿ ಟಾಪ್ ಎಂಡ್ ರೂಪಾಂತರದ ಬೆಲೆಯು ರೂ.1.10 ಲಕ್ಷದವರೆಗೆ ಇದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಈ ಸಿಎನ್‌ಜಿ ಬೈಕಿನ ಪವರ್‌ಟ್ರೇನ್‌ಗಾಗಿ ಬಗ್ಗೆ ಹೇಳುವುದಾದರೆ, ಬಜಾಜ್ ಫ್ರೀಡಮ್ ಬೈಕ್ 125ಸಿಸಿ ಎಂಜಿನ್ ಅನ್ನು ಹೊಂದಿದ್ದು, 9.5 ಪಿಎಸ್ ಪವರ್ ಮತ್ತು 9.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬೈಕಿನ ಟ್ರೆಲ್ಲಿಸ್ ಫ್ರೇಮ್ 2 ಕೆಜಿ ಸಿಎನ್‌ಜಿ ಸಿಲಿಂಡರ್ ಅನ್ನು ಫ್ರೀಡಮ್‌ನ ಸೀಟಿನ ಕೆಳಗೆ ಬಜಾಜ್ ಸಂಯೋಜಿಸಿದೆ.

Bajaj Freedom 125 CNG

ಇದರಲ್ಲಿ 2-ಲೀಟರ್ ಪೆಟ್ರೋಲ್ ಟ್ಯಾಂಕ್ ಸೀಟ್ ಸ್ವಲ್ಪ ಮುಂದೆ ಇರುತ್ತದೆ ಮತ್ತು ಎರಡೂ ಟ್ಯಾಂಕ್‌ಗಳು ಒಟ್ಟಿಗೆ 330 ಕಿಲೋಮೀಟರ್‌ಗಳ ರೇಂಜ್ ಅನ್ನು ನೀಡುತ್ತದೆ. CNG ಯಲ್ಲಿ ಚಲಿಸುವಾಗ, ಪ್ರತಿ ಕಿಲೋಗ್ರಾಂ CNG ಗೆ 102 ಕಿಲೋಮೀಟರ್‌ಗಳವರೆಗೆ ಮೈಲೇಜ್ ನೀಡುತ್ತದೆ. ಅಲ್ಲದೇ CNG ನಲ್ಲಿ ಚಾಲನೆಯಲ್ಲಿರುವಾಗ, ಫ್ರೀಡಮ್ ದೈನಂದಿನ ಚಾಲನೆಯ ವೆಚ್ಚವನ್ನು 50 ಪ್ರತಿಶತದಷ್ಟು ಕಡಿತಗೊಳಿಸುತ್ತದೆ, 26 ಪ್ರತಿಶತದಷ್ಟು CO2 ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.

ಈ ಸಿಎನ್‌ಜಿ-ಚಾಲಿತ ಮೋಟಾರ್‌ಸೈಕಲ್ ಸಾಮಾನ್ಯ ಪೆಟ್ರೋಲ್ ಬೈಕಿಗೆ ಹೋಲಿಸಿದರೆ ಇಂಧನದ ಮೇಲಿನ ವೆಚ್ಚವನ್ನು ಶೇಕಡಾ 65 ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಜಾಜ್ ಫ್ರೀಡಂ ಸಿಎನ್‌ಜಿ ಬೈಕ್ ಬಿಡುಗಡೆಯು ಇಂತಹ ತಂತ್ರಜ್ಞಾನವನ್ನು ಹೆಚ್ಚಿನ ಮಾದರಿಗಳಿಗೆ ಕೊಂಡೊಯ್ಯಲು ದಾರಿ ಮಾಡಿಕೊಂಡಿದೆ. ಜಾಜ್ ಫ್ರೀಡಮ್ ಒಂದು ಕಮ್ಯೂಟರ್-ಕ್ಲಾಸ್ ಮೋಟಾರ್‌ಸೈಕಲ್ ಆಗಿದ್ದು, ಸಿಎನ್‌ಜಿ ಟ್ಯಾಂಕ್ ಅನ್ನು ಒಳಗೊಂಡಿದೆ.

Bajaj Freedom 125 CNG

ಈ ಹೊಸ ಬಜಾಜ್ ಸಿಎನ್‌ಜಿ ಸ್ಪೋರ್ಟಿ ಸ್ಟೈಲಿಂಗ್, ಎಲ್‌ಇಡಿ ಹೆಡ್ ಲ್ಯಾಂಪ್, ಬ್ಲೂಟ್‌ಟೂತ್ ಕನೆಕ್ಟಿವಿಟಿ, ಗ್ರಾಫಿಕ್ಸ್‌ನೊಂದಿಗೆ ಡ್ಯುಯಲ್ ಕಲರ್ ಸ್ಕೀಮ್ ಮತ್ತು ಫಸ್ಟ್-ಇನ್-ಕ್ಲಾಸ್ ಲಿಂಕ್ಡ್ ಮೊನೊಶಾಕ್ ಸಸ್ಪೆನ್ಷನ್ ಅನ್ನು ಪಡೆಯುತ್ತದೆ. ಇನ್ನು ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕ್ ಡಿಸ್ಕ್ ಬ್ರೇಕ್ ಸೆಟಪ್ ನೊಂದಿಗೆ ಆಲ್-ಡ್ರಮ್ ರೂಪಾಂತರವು ಸಹ ಲಭ್ಯವಿದೆ.

ಶುದ್ಧ-ಪೆಟ್ರೋಲ್ 125 cc ಮೋಟಾರ್‌ಸೈಕಲ್‌ಗೆ ಹೋಲಿಸಿದರೆ 5 ವರ್ಷಗಳಲ್ಲಿ 75,000 ರೂ.ವರೆಗೆ ಇಂಧನ ವೆಚ್ಚವನ್ನು ಉಳಿಸಲು ಮಾಲೀಕರಿಗೆ ಅನುವು ಮಾಡಿಕೊಡುತ್ತದೆ. ಇನ್ನು ಹೊಸ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌ಗಾಗಿ ಬುಕ್ಕಿಂಗ್‌ಗಳು ಈಗ ತೆರೆದಿದ್ದು, ಡೆಲಿವರಿಗಳು ಮೊದಲು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಪ್ರಾರಂಭವಾಗುತ್ತವೆ, ಉಳಿದ ರಾಜ್ಯಗಳು ಹಂತ ಹಂತವಾಗಿ ಪ್ರಾರಂಭವಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, July 7, 2024, 9:00 [IST]
English summary
New bajaj freedom 125 cng bike colour options details
Read more on Bajaj CNG Bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+