ಹೊಸ ಬಜಾಜ್ ಪಲ್ಸರ್ N160, N150 ಬಿಡುಗಡೆ: 45 ಕಿ.ಮೀ ಮೈಲೇಜ್, ಆಧುನಿಕ ಟೆಕ್, ಕಡಿಮೆ ಬೆಲೆ!
ಬಜಾಜ್ ತನ್ನ ಜನಪ್ರಿಯ ಪಲ್ಸರ್ ಮೋಟಾರ್‌ಸೈಕಲ್ ಶ್ರೇಣಿಗಳಾದ ಪಲ್ಸರ್ N150 ಮತ್ತು ಪಲ್ಸರ್ N160ಗೆ ನವೀಕರಣಗಳ ಭಾಗವಾಗಿ ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದೆ. ಹೊಸ ತಂತ್ರಜ್ಞಾನ, ಸುಧಾರಿತ ಪರ್ಫಾಮೆನ್ಸ್ ಮತ್ತು ಸ್ಪೋರ್ಟಿ ಮೋಟಾರ್‌ಸೈಕಲ್‌ಗಳನ್ನು ಒದಗಿಸಲು ಪಲ್ಸರ್ ಸರಣಿಯನ್ನು ಅಭಿವೃದ್ಧಿಪಡಿಸಿರುವುದಾಗಿ ಕಂಪನಿ ಹೇಳಿದೆ.
ಸದ್ಯ ಭಾರತದಲ್ಲಿ ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಬಜಾಜ್ ಪಲ್ಸರ್ ಮೋಟಾರ್‌ಸೈಕಲ್‌ಗಳಿಗೆ ಭರ್ಜರಿ ಬೇಡಿಕೆಯಿದೆ. ಆದರೆ ಇದೇ ವಿಭಾಗದಲ್ಲಿ TVS Apache 160 ಮತ್ತು Apache 160 4V, ಯಮಹಾ FZ ಶ್ರೇಣಿ, Xtreme 160R 4V ಮತ್ತು ಸುಜುಕಿ Gixxer 150 ಮಾದರಿಗಳು ಆಧುನಿಕ ಡಿಸೈನ್ ಹೊಸ ತಂತ್ರಜ್ಞಾನದೊಂದಿಗೆ ಹೆಚ್ಚಿನ ಪೈಪೋಟಿ ನೀಡುತ್ತಿರುವ ಕಾರಣ, ಈಗ ಬಜಾಜ್ ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಿದೆ.

ಹೊಸ ಅಪ್‌ಡೇಟ್ ಭಾಗವಾಗಿ ಬಜಾಜ್ ಪಲ್ಸರ್ N160 ಮತ್ತು ಪಲ್ಸರ್ N150 ನಲ್ಲಿ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರೂಮೆಂಟ್ LCD ಕ್ಲಸ್ಟರ್ ನೀಡಲಾಗಿದೆ. ಇದು ರೈಡ್ ಕನೆಕ್ಟ್ ಅಪ್ಲಿಕೇಶನ್‌ನೊಂದಿಗೆ ಬ್ಲೂಟೂತ್ ಸಂಪರ್ಕವನ್ನು ಸಪೋರ್ಟ್ ಮಾಡುತ್ತದೆ. ಪ್ರಯಾಣದಲ್ಲಿರುವಾಗ ಈ ಇಂಟರ್ಫೇಸ್ ಮೂಲಕ ಕಾರ್ಯನಿರ್ವಹಿಸಲು ಎಡ ಸ್ವಿಚ್‌ಗಿಯರ್‌ನಲ್ಲಿ ಹೊಸ ಮೋಡ್ ಬಟನ್ ನೀಡಲಾಗಿದೆ.
ಬೆಲೆ: 2024 ಪಲ್ಸರ್ N160 ಬೆಲೆಯು ರೂ. 1,30,560 (ಎಕ್ಸ್ ಶೋರೂಂ)ರಿಂದ ಪ್ರಾರಂಭವಾಗುತ್ತದೆ. ಬ್ಲಾಕ್, ರೆಡ್ ಮತ್ತು ಬ್ಲೂ ಮೂರು ಬಣ್ಣಗಳಲ್ಲಿ ನೀಡಲಾಗುತ್ತದೆ. ಇನ್ನು ಪಲ್ಸರ್ N150 ಬೆಲೆಯು ರೂ. 1,17,677 (ಎಕ್ಸ್ ಶೋರೂಂ)ರಿಂದ ಪ್ರಾರಂಭವಾಗುತ್ತದೆ. ಬ್ಲಾಕ್ ಮತ್ತು ವೈಟ್ ಬಣ್ಣಗಳಲ್ಲಿ ನೀಡಲಾಗುತ್ತದೆ. ಡಿಸೈನ್‌ನಲ್ಲಿ 2024ರ ಪಲ್ಸರ್ N160 ಮತ್ತು N150, ತನ್ನ ದೊಡ್ಡಣ್ಣನಾದ ಪಲ್ಸರ್ N250 ನಿಂದ ಸ್ಫೂರ್ತಿ ಪಡೆದಿವೆ.

ಎಂಜಿನ್ & ಮೈಲೇಜ್: ವಿನ್ಯಾಸದಲ್ಲಿ ಕೆಲವನ್ನು ಹೊರತುಪಡಿಸಿ ಮಿಕ್ಕೆಲ್ಲವು ಮೊದಲಿನಂತೆಯೇ ಇರುತ್ತವೆ. ಪಲ್ಸರ್ N160, 164.82cc DTS-i ಎಂಜಿನ್ ಹೊಂದಿದ್ದು, ಇದು 15.8 bhp ಪವರ್ ಮತ್ತು 14.65 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ನಿಂದ ಸುಮಾರು 45 kmpl ಮೈಲೇಜ್ ಪಡೆಹಬುದು ಎಂದು ಕಂಪನಿ ಹೇಳಿಕೊಂಡಿದೆ.
ಮತ್ತೊಂದೆಡೆ, ಪಲ್ಸರ್ N150' 149.68cc ಎಂಜಿನ್ ಹೊಂದಿದ್ದು, ಇದು 14.3 bhp ಪವರ್ ಮತ್ತು 13.5 Nm ಟಾರ್ಕ್ ಉತ್ಪಾದಿಸುತ್ತದೆ, 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ನಯವಾದ ಗೇರ್ ಶಿಫ್ಟ್‌ಗಳು ಮತ್ತು ಎರಡೂ ಬೈಕ್‌ಗಳು ಒಂದೇ ರೀತಿಯ ಎಕ್ಸಾಸ್ಟ್ ನೋಟ್ ಹೊಂದಿದ್ದು, N150 ಮಾದರಿಯಿಂದ 45-50 kmpl ಮೈಲೇಜ್ ಪಡೆಯಬಹುದು.

ಹೊಸ ವೈಶಿಷ್ಟ್ಯಗಳು: ಬ್ಲೂಟೂತ್ ಸಂಪರ್ಕದ ಜೊತೆಗೆ, ಬಳಕೆದಾರರು ಈಗ ತಮ್ಮ ಸ್ಮಾರ್ಟ್‌ಫೋನ್ ಅನ್ನು ಪಲ್ಸರ್ N160 ಮತ್ತು N150 ನೊಂದಿಗೆ ಸಂಪರ್ಕಿಸಬಹುದು. ಈ ಮೂಲಕ ನೀವು ಪ್ರಯಾಣದಲ್ಲಿರುವಾಗ ಕರೆಗಳನ್ನು ಸ್ವೀಕರಿಸಬಹುದು, ಮೊಬೈಲ್ ನೋಟಿಫಿಕೇಷನ್ ಅಲರ್ಟ್, ಮೊಬೈಲ್ ಸಿಗ್ನಲ್ ಸ್ಟ್ರೆಂತ್ ಮತ್ತು ಬ್ಯಾಟರಿ ಲೆವಲ್ ಅನ್ನು ನೋಡಬಹುದು. ಹಾಗೆಯೇ ಗೇರ್ ಇಂಟಿಕೇಟರ್, ಕ್ವಿಕ್ ಫ್ಯೂಯಲ್ ಎಕಾನಮಿ, ಆವರೇಜ್ ಫ್ಯೂಯಲ್ ಎಕಾನಮಿನಮಿಗಳ ಬಗ್ಗೆ ತಿಳಿದುಕೊಳ್ಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








