ರಾಯಲ್ ಎನ್‌ಫೀಲ್ಡ್ ಬೈಕಿಗೆ ನಡುಕ ಹುಟ್ಟುಸಿದ ಹೀರೋ ಬೈಕ್ ವಿತರಣೆ ಪ್ರಾರಂಭ: ರಸ್ತೆಗಿಳಿದು ಅಬ್ಬರಿಸುತ್ತಾ?
ಜನಪ್ರಿಯ ಮತ್ತು ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ (Hero Motocorp) ತನ್ನ ಬಹುನಿರೀಕ್ಷಿತ ಹೀರೋ ಮಾವ್ರಿಕ್ 440 (Hero Mavrick 440) ಬೈಕ್ ಅನ್ನು ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಇದು ಹೀರೋ ಮೋಟೋಕಾರ್ಪ್ - ಹಾರ್ಲೆ ಡೇವಿಡ್ಸನ್ (Harley Davidson) ಎಂನ ಎರಡೂ ದೈತ ಕಂಪನಿಗಳ ಪಾಲುದಾರಿಕೆಯಿಂದ ಹೊರಬಂದ ಎರಡನೇ ಮಾದರಿ ಇದಾಗಿದೆ.
ಹಾರ್ಲೆ ಡೇವಿಡ್ಸನ್ X440 ನೊಂದಿಗೆ ಸಹ-ಅಭಿವೃದ್ಧಿಪಡಿಸಲಾಗಿದೆ ಆದ್ದರಿಂದ ಎರಡೂ ಮೋಟಾರ್‌ಸೈಕಲ್‌ಗಳು ಕೆಲವು ಭಾಗಗಳನ್ನು ಹಂಚಿಕೊಳ್ಳುತ್ತವೆ. ಈಗ, ಬ್ರಾಂಡ್ ಈ ಹೊಸ ಹೀರೋ ಮಾವ್ರಿಕ್ 440 ಬೈಕಿನ ವಿತರಣೆಯು ಪ್ರಾರಂಭವಾಗಿದೆ. ಈ ಹೊಸ ಹೀರೋ ಮಾವ್ರಿಕ್ 440 ಬೈಕನ ಬೆಲೆಯು ರೂ.1.99 ಲಕ್ಷವಾಗಿದೆ. ಈ ಹೀರೋ ಮಾವ್ರಿಕ್ 440 ಬೈಕ್ ಬೇಸ್, ಮಿಡ್ ಮತ್ತು ಟಾಪ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

ಈ ಬೈಕಿನ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಮಾವ್ರಿಕ್ ಅನ್ನು ಹೀರೋನ ಪ್ರೀಮಿಯಾ ಡೀಲರ್‌ಶಿಪ್‌ಗಳ ಮೂಲಕ ಮಾತ್ರ ಮಾರಾಟ ಮಾಡಲಾಗುತ್ತದೆ. ಹೀರೋ ಮಾವ್ರಿಕ್ 440 ಬೈಕಿನಲ್ಲಿ ಹಾರ್ಲೆ ಡೇವಿಡ್ಸನ್ X440 ಬೈಕಿನಂತೆಯೇ ಅದೇ ಎಂಜಿನ್ 440 cc ಸಿಂಗಲ್-ಸಿಲಿಂಡರ್ ಏರ್/ಆಯಿಲ್-ಕೂಲ್ಡ್ ಎಂಜಿನ್ ಅನ್ನು ನೀಡಲಾಗಿದೆ.
ಈ ಎಂಜಿನ್ 6,000 rpm ನಲ್ಲಿ 27 bhp ಪವರ್ ಮತ್ತು 4,000 rpm ನಲ್ಲಿ 36 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. X440 ನ ಟಾರ್ಕ್‌ಗಿಂತ 2 Nm ಗಿಂತ ಸ್ವಲ್ಪ ಕಡಿಮೆ ಆಗಿದೆ. ಈ ಕಡಿಮೆ-ಮಟ್ಟದ ಟಾರ್ಕ್ ಅನ್ನು ಆದ್ಯತೆ ನೀಡಲು ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ.ನಗರ ಪ್ರಯಾಣ ಮತ್ತು ಹೆದ್ದಾರಿ ಪ್ರಯಾಣ ಎರಡಕ್ಕೂ ಉತ್ತಮ ಅನುಭವ ನೀಡುತ್ತದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ. ಈ ಹೀರೋ ಮಾವ್ರಿಕ್ 440 ಬೈಕ್ ಮಸ್ಕ್ಯುಲರ್ ಸ್ಟೈಲಿಂಗ್ ಅನ್ನು ಬಲ್ಬಸ್ ಫ್ಯುಯಲ್ ಟ್ಯಾಂಕ್‌ನೊಂದಿಗೆ ಸಂಪೂರ್ಣ ಶ್ರೌಡ್ಸ್, ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಸುತ್ತಿನ ಹೆಡ್‌ಲ್ಯಾಂಪ್ ಮತ್ತು ಅಗಲವಾದ ಹ್ಯಾಂಡಲ್‌ಬಾರ್‌ನೊಂದಿಗೆ ಪಡೆಯುತ್ತದೆ. ಇನ್ನು ಈ ಬೈಕ್ ಟೇಲ್ ವಿಭಾಗ ಮತ್ತು ಸ್ಕೂಪ್-ಔಟ್ ಸಿಂಗಲ್-ಪೀಸ್ ಸೀಟುಗಳು ಮಾಡೆಲ್‌ನ ಉತ್ಸಾಹಭರಿತ ಭಾವನೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಹೀರೋ ಮಾವ್ರಿಕ್ ಇನ್‌ಸ್ಟ್ರುಮೆಂಟ್ ಕನ್ಸೋಲ್‌ಗಾಗಿ ಎಲ್‌ಸಿಡಿ ಡಿಸ್ ಪ್ಲೇಯೊಂದಿಗೆ ಬರುತ್ತದೆ. ಇದು ಹಲವಾರು ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇನ್ನು ಈ ಡಿಸ್ ಪ್ಲೇಯು ಬ್ಲೂಟೂತ್ ಕನೆಕ್ಟ್ ನೊಂದಿಗೆ ಕರೆಗಳು ಮತ್ತು SMS ಅಲರ್ಟ್, ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಅನ್ನು ಹೊಂದಿರುತ್ತದೆ. ಆದರೆ ಕನೆಕ್ಟಿವಿಟಿ ಫೀಚರ್ಸ್ ಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಕನೆಕ್ಟ್ ಮಾಡಬಹುದು.

ಈ ಬೈಕಿನಲ್ಲಿ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಫುಲ್ ಎಲ್‌ಇಡಿ ಲೈಟಿಂಗ್ ಸಹ ಲಭ್ಯವಿದೆ. ಈ ಬೈಕ್ ಸಹ ಟ್ಯೂನಿಂಗ್ ಫೋರ್ಕ್-ಶೈಲಿಯ ಅಲಾಯ್ ವ್ಹೀಲ್ ಗಳು ಮತ್ತು ಆಕರ್ಷಕ ಎಕ್ಸಾಸ್ಟ್ ಅನ್ನು ಕೂಡ ಹೊಂದಿದೆ. ಇದು ಬ್ರ್ಯಾಂಡ್‌ನ ಹೊಸ ಮತ್ತು ಪ್ರೀಮಿಯಂ 'ಹೀರೋ ಪ್ರೀಮಿಯಾ' ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ ಮಾರಾಟವಾಗಲಿದೆ.
'ಹೀರೋ ಪ್ರೀಮಿಯಾ' ಡೀಲರ್‌ಶಿಪ್ ನೆಟ್‌ವರ್ಕ್ ನಲ್ಲಿ ಹಾರ್ಲೆ ಎಕ್ಸ್ 440, ಹೀರೋ ಕರಿಜ್ಮಾ ಎಕ್ಸ್‌ಎಂಆರ್, ವಿಡಾ ವಿ 1 ಮತ್ತು ಮುಂತಾದವುಗಳನ್ನು ಸಹ ಮಾರಾಟ ಮಾಡುತ್ತಿವೆ. ಹಾರ್ಲೆ ಡೇವಿಡ್ಸನ್ X440 ಬೈಕ್ ಗಿಂತ ಭಿನ್ನವಾಗಿರುವ ಸಸ್ಪೆಕ್ಷನ್ ಸೆಟಪ್ ಅನ್ನು ಹೊಂದಿದೆ. ಈ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 43 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಆಯ್ಕೆ ಮಾಡಿಕೊಂಡಿದೆ.
ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.ಈ ಹೀರೋ ಮಾವ್ರಿಕ್ 440 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಜಾವಾ 350, ಹೋಂಡಾ CB350 ಮತ್ತು ಹಾರ್ಲೆ-ಡೇವಿಡ್ಸನ್ X440 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








