ಮತ್ತಷ್ಟು ಸ್ಪೋರ್ಟಿ ಲುಕ್‌ನಲ್ಲಿ ಮೈಲೇಜ್ ಕಿಂಗ್ ಹೋಂಡಾ SP125 ಬಿಡುಗಡೆ: ಬೆಲೆಯೆಷ್ಟು?
ಭಾರತದಲ್ಲಿ ಮೋಟಾರ್‌ಸೈಕಲ್‌ಗಳಿಗೆ ಭಾರೀ ಬೇಡಿಕೆಯಿದೆ, ಅದರಲ್ಲೂ 125ಸಿಸಿ ಸೆಗ್ಮೆಂಟಿನಲ್ಲಿ ಬರುವ ಎಲ್ಲಾ ಬ್ರಾಂಡ್‌ಗಳ ಮೋಟಾರ್‌ಸೈಕಲ್‌ಗಳು ಉತ್ತಮ ಮಾರಾಟವನ್ನು ಕಾಣುತ್ತವೆ. ಹೋಂಡಾ ಕಂಪನಿ ಕೂಡ ಈ ವಿಭಾಗದಲ್ಲಿ ತನ್ನ ಬೆಸ್ಟ್ ಮೋಟಾರ್‌ಸೈಕಲ್ ಆಗಿರುವ ಹೋಂಡಾ SP125 (Honda SP125) ಅನ್ನು ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಮಾರಾಟ ಮಾಡುತ್ತಿದೆ. ಈ ಮೋಟಾರ್‌ಸೈಕಲ್ ಅನ್ನು ಗ್ರಾಹಕರಿಗೆ ಇನ್ನೂ ಆಕರ್ಷಕ ಡಿಸೈನ್‌ನಲ್ಲಿ ನೀಡಲು ಹೊಸ ಅಪ್‌ಡೇಟ್‌ಗಳೊಂದಿಗೆ SP125 ಅನ್ನು ಇದೀಗ ಬಿಡುಗಡೆ ಮಾಡಿದೆ. ಈ ಮೋಟಾರ್‌ಸೈಕಲ್ ಬೆಲೆ ಸೇರಿದಂತೆ ಹೊಸ ಅಪ್‌ಡೇಟ್‌ಗಳನ್ನು ಇಲ್ಲಿ ನೋಡೋಣ.
ಹೊಸ ಹೋಂಡಾ SP125 ಭಾರತೀಯ ಮಾರುಕಟ್ಟೆಗಳಲ್ಲಿ ಹೋಂಡಾ ನೀಡುತ್ತಿರುವ ಪ್ರವೇಶ ಮಟ್ಟದ 125cc ಕಮ್ಯೂಟರ್ ಬೈಕ್‌ಗಳಲ್ಲಿ ಒಂದಾಗಿದೆ. ಕಂಪನಿಯ ಪ್ರಕಾರ ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗಿರುವ ಹೋಂಡಾ SP125, ಹೋಂಡಾ ಶೈನ್ 125 ಗಿಂತ ಸ್ವಲ್ಪ ಮೇಲಿರುತ್ತದೆ. ಜೊತೆಗೆ ಹೆಚ್ಚು ಪ್ರೀಮಿಯಂ ಸ್ಟೈಲಿಂಗ್ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಹೊಸ ಮೋಟಾರ್‌ಸೈಕಲ್ ಅನ್ನು 91,771 (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಮುಂಬರುವ OBD2B ನಿಯಮಗಳನ್ನು ಅನುಸರಿಸಲು Honda SP125 ಅನ್ನು ಈಗ ನವೀಕರಿಸಲಾಗಿದೆ. ತನ್ನ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧೆಯಲ್ಲಿ ಪ್ರಬಲವಾಗಿರಲು ಹೊಸ ವಿನ್ಯಾಸ ಮತ್ತು ಹೊಸ ಆಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡು ಬಿಡುಗಡೆಯಾಗಿದೆ.
ಡಿಸೈನ್ ಅಪ್‌ಡೇಟ್ಗಳು: ಹೊಸ LED ಹೆಡ್‌ಲ್ಯಾಂಪ್ ಮತ್ತು ಟೈಲ್‌ಲ್ಯಾಂಪ್ ಸೇರಿದಂತೆ ಫ್ಯೂಲ್ ಟ್ಯಾಂಕ್ ಎರಡೂ ಬದಿಗಳಲ್ಲಿ ಸುತ್ತುವರೆದಿರುವ ಸ್ಪೋರ್ಟಿ ಟ್ಯಾಂಕ್ ಹೊದಿಕೆಗಳನ್ನು ನೀಡಲಾಗಿದೆ. ಎಕ್ಸಾಸ್ಟ್ ಮಫ್ಲರ್ ಈಗ ಕ್ರೋಮ್ ಕವರ್ ಅನ್ನು ಪಡೆದುಕೊಂಡಿದ್ದು, ಬೈಕ್‌ನಲ್ಲಿರುವ ಗ್ರಾಫಿಕ್ಸ್ ಅನ್ನು ಸಹ ಹೊಸದಾಗಿ ನೀಡಲಾಗಿದೆ. ಒಟ್ಟಾರೆ ಈಗ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.

ಬಣ್ಣಗಳು ಮತ್ತು ವೇರಿಯೆಂಟ್‌ಗಳು: ಡ್ರಮ್ ಮತ್ತು ಡಿಸ್ಕ್ ಎಂಬ ವೇರಿಯೆಂಟ್‌ಗಳಲ್ಲಿ ಖರೀದಗೆ ಲಭ್ಯವಿದೆ. ಪರ್ಲ್ ಸೈರನ್ ಬ್ಲೂ, ಇಂಪೀರಿಯಲ್ ರೆಡ್ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮತ್ತು ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಎಂಬ ಐದು ಬಣ್ಣದ ಆಯ್ಕೆಗಳೊಂದಿಗೆ ಸಿಗುತ್ತದೆ.
ಎಂಜಿನ್: ಹೊಸ ಹೋಂಡಾ SP125 ಮೋಟಾರ್‌ಸೈಕಲ್ 124cc, ಸಿಂಗಲ್-ಸಿಲಿಂಡರ್, ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್ ಹೊಂದಿದೆ. ಈ ಎಂಜಿನ್ 10.7 bh ಪವರ್ ಮತ್ತು 10.9 Nm ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಈ ವಾಹನದ ಮೈಲೇಜ್ ಹೆಚ್ಚಿಸಲು ಐಡಲಿಂಗ್ ಸ್ಟಾಪ್ ವ್ಯವಸ್ಥೆಯನ್ನು ನೀಡಲಾಗಿದೆ. ಜೊತೆಗೆ ಇದು OBD2B ಕಂಪ್ಲೈಂಟ್ ಆಗಿದೆ.
ಫೀಚರ್ಸ್: ಈಗ ಹೊಸ ಆವೃತ್ತಿಯು ನ್ಯಾವಿಗೇಷನ್ ಮತ್ತು ವಾಯಿಸ್ ಅಸಿಸ್ಟ್ ವೈಶಿಷ್ಟ್ಯಗಳಿಗಾಗಿ ಹೋಂಡಾ ರೋಡ್‌ಸಿಂಕ್ ಅಪ್ಲಿಕೇಶನ್ ಹೊಂದಾಣಿಕೆಯನ್ನು ಸಹ ಪಡೆದಿದೆ. ಹಾಗೆಯೇ ಬ್ಲೂಟೂತ್ ಸಂಪರ್ಕದೊಂದಿಗೆ 4.2-ಇಂಚಿನ TFT ಡಿಸ್ಪ್ಲೇ ಮತ್ತು ಹೆಚ್ಚಿನ ಅನುಕೂಲಕ್ಕಾಗಿ USB ಟೈಪ್-C ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ.
ಬೆಲೆ ಮತ್ತು ಲಭ್ಯತೆ: ಎಂಟ್ರಿ ಲೆವಲ್ ಡ್ರಮ್ ಬ್ರೇಕ್ ವೇರಿಯೆಂಟ್ ರೂ.91,771 (ಎಕ್ಸ್ ಶೋ ರೂಂ) ಬೆಲೆ ಇದೆ. ಟಾಪ್ - ಸ್ಪೆಕ್ ಡಿಸ್ಕ್ ಬ್ರೇಕ್ ವೇರಿಯೆಂಟ್ ಬೆಲೆಯು ರೂ.1,00,284 (ಎಕ್ಸ್ ಶೋ ರೂಂ) ಬೆಲೆ ಹೊಂದಿದೆ. ಇದು ಭಾರತದಾದ್ಯಂತ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಡೀಲರ್‌ಶಿಪ್‌ಗಳಲ್ಲಿ ಖರೀದಿಸಲು ಲಭ್ಯವಿದೆ ಎಂದು ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








