ಯುವ ಗ್ರಾಹಕರಿಗಾಗಿ ಹೊಸ ಟ್ರಯಂಫ್ ಡೇಟೋನಾ 660 ಸ್ಪೋರ್ಟ್ಸ್ ಬೈಕ್ ಅನಾವರಣ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟ್ರಯಂಫ್ ಮೋಟಾರ್‌ಸೈಕಲ್ಸ್ ತನ್ನ ಹೊಸ ಟ್ರಯಂಫ್ ಡೇಟೋನಾ 660 ಬೈಕ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ಟ್ರಯಂಫ್ ಡೇಟೋನಾ 660 (Triumph Daytona 660) ಬೈಕ್ ಬಿಗಡೆಯಾಗುವ ದಿನಾಂಕ ಬಹಿರಂಗವಾಗಿಲ್ಲ, ಭಾರತದಲ್ಲಿಯು ಈ ಹೊಸ ಟ್ರಯಂಫ್ ಬೈಕ್ ಬಿಡುಗಡೆಯಾಗಬಹುದು.
ಟ್ರಯಂಫ್ ಡೇಟೋನಾ 660 ಬೈಕಿನಲ್ಲಿ ಅದೇ ಇನ್-ಲೈನ್ ಮೂರು-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 11,250 rpm ನಲ್ಲಿ 93.70 bhp ಪವರ್ ಮತ್ತು 8,250 rpm ನಲ್ಲಿ 69 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಈ ಹೊಸ ಟ್ರಯಂಫ್ ಡೇಟೋನಾ 660 ಬೈಕಿನಲ್ಲಿ ರೋಡ್ ಮತ್ತು ರೈನ್ ರೈಡಿಂಗ್ ಮೋಡ್‌ಗಳ ಹೊರತಾಗಿ, ಬ್ರ್ಯಾಂಡ್ ಹೊಸ ಸ್ಪೋರ್ಟ್ ರೈಡಿಂಗ್ ಮೋಡ್ ಅನ್ನು ಸೇರಿಸಿದೆ. ಈ ಬೈಕಿನ ಸೀಟ್ ಎತ್ತರವು 810 ಎಂಎಂ ಆಗಿದ್ದು, ಇದು ತುಂಬಾ ಎತ್ತರವಾಗಿರುವುದಿಲ್ಲ. ಎಲ್ಲಾ ಜನರಿಗೆ ಆರಾಮದಾಯಕವಾದ ಸೀಟಿಂಗ್ ಆಗಿದೆ. ಈ ಹೊಸ ಟ್ರಯಂಫ್ ಡೇಟೋನಾ 660 ಬೈಕ್ ವಿನ್ಯಾಸವು ಸಾಕಷ್ಟು ಸ್ಪೋರ್ಟಿಯಾಗಿ ಕಾಣುತ್ತದೆ.
ಈ ಬೈಕ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳೊಂದಿಗೆ ಮುಂಭಾಗದಲ್ಲಿ ಸ್ಪ್ಲಿಟ್ ಎಲ್‌ಇಡಿ ಹೆಡ್‌ಲ್ಯಾಂಪ್ ಸೆಟಪ್ ಇದೆ ಆದ್ದರಿಂದ ರೈಡಿಂಗ್ ಭಂಗಿಯು ಟ್ರೈಡೆಂಟ್ 660 ಗಿಂತ ಸ್ವಲ್ಪ ಹೆಚ್ಚು ಅಗ್ರೇಸಿವ್ ಆಗಿದೆ. ಇನ್ನು ಈ ಬೈಕಿನಲ್ಲಿ ಟ್ರಯಂಫ್ ಸಂಪೂರ್ಣ ಎಲ್ಇಡಿ ಇಲ್ಯುಮಿನೇಷನ್ ಮತ್ತು ಡೇಟೋನಾ 660 ನಲ್ಲಿ ಸ್ಮಾರ್ಟ್ಫೋನ್ ಸಂಪರ್ಕದೊಂದಿಗೆ TFT ಅನ್ನು ನೀಡಿದೆ.

ಹೊಸ ಟ್ರಯಂಫ್ ಡೇಟೋನಾ 660 ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಕೊಳವೆಯಾಕಾರದ ಸ್ಟೀಲ್ ಫ್ರೇಮ್ 41 ಎಂಎಂ ಅಪ್-ಸೈಡ್ ಡೌನ್ ಪ್ರತ್ಯೇಕ ಕಾರ್ಯ ಬಿಗ್ ಪಿಸ್ಟನ್ ಫೋರ್ಕ್‌ಗಳಿಂದ ಸೆಟಪ್ ಇದೆ. ಇದರ ಮುಂಭಾಗದಲ್ಲಿ 110 ಎಂಎಂ ಟ್ರ್ಯಾವೆಲ್ ಮತ್ತು ಹಿಂಭಾಗದಲ್ಲಿ ಶೋವಾ ಮೊನೊಶಾಕ್ ಪ್ರಿ-ಲೋಡ್ ಮತ್ತು 130 ಎಂಎಂ ಟ್ರ್ಯಾವೆಲ್ ಅನ್ನು ಹೊಂದಿದೆ.
ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ, ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, 4-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಮುಂಭಾಗದಲ್ಲಿ ಟ್ವಿನ್ 310 ಎಂಎಂ ಡಿಸ್ಕ್‌ಗಳು ಮತ್ತು ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡುತ್ತದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ABS ಅನ್ನು ನೀಡಲಾಗಿದೆ. ಇದರೊಂದಿಗೆ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ನೀಡಲಾಗಿದೆ.

ಡೇಟೋನಾ 660 ಸ್ಪೋರ್ಟ್-ಆಧಾರಿತ ಮೈಕೆಲಿನ್ ಪವರ್ 6 ಟೈರ್‌ಗಳೊಂದಿಗೆ ಬರುತ್ತದೆ, ಇದು 660 ಸರಣಿಯಲ್ಲಿನ ಇತರ ಮಾದರಿಗಳಲ್ಲಿ ಕಂಡುಬರುವ ಸ್ಪೋರ್ಟ್-ಟೂರರ್ ಮೈಕೆಲಿನ್ ರೋಡ್ 5 ರಬ್ಬರ್‌ಗಿಂತ ಒಂದು ಹಂತವಾಗಿದೆ. ಈ ಬೈಕಿನಲ್ಲಿ ಲಗೇಜ್ ರ್ಯಾಕ್ ಗಳು, ರಕ್ಷಣಾತ್ಮಕ ಯುನಿಟ್ ಗಳು, ಡ್ಯಾಶ್‌ಬೋರ್ಡ್‌ಗಾಗಿ ಬ್ಲೂಟೂತ್ ಮಾಡ್ಯೂಲ್ ಮತ್ತು ಬೈಡೈರೆಕ್ಷನಲ್ ಕ್ವಿಕ್‌ಶಿಫ್ಟರ್ ಸೇರಿದಂತೆ ಅಧಿಕೃತ ರ್ಯಾಕ್ ಗಳನ್ನು ಹೊಂದಿದೆ.
ಇನ್ನು ಟ್ರಯಂಫ್ ಮೋಟಾರ್‌ಸೈಕಲ್ಸ್ ಭಾರತದಲ್ಲಿ ಟ್ರಯಂಫ್ ಸ್ಪೀಡ್ 400 (Triumph Speed 400) ಬೈಕನ್ನು ಬಿಡುಗಡೆಗೊಳಿಸಿತು. ಟ್ರಯಂಫ್ ಕಂಪನಿಯು ತನ್ನ ಈ ಟ್ರಯಂಫ್ ಸ್ಪೀಡ್ 400 ಬೈಕಿನ ವಿತರಣೆಯನ್ನು ಈಗಾಗಲೇ ಪ್ರಾರಂಭಿಸಿದೆ. ಈ ಬೈಕನ್ನು ಪರಿಚಯಾತ್ಮಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.23 ಲಕ್ಷವಾಗಿತ್ತು. ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, 398.15cc, ಲಿಕ್ವಿಡ್-ಕೂಲ್ಡ್, 4-ವಾಲ್ವ್, DOHC, ಓವರ್‌ಸ್ಕ್ವೇರ್ ಎಂಜಿನ್ ಅನ್ನು ಹೊಂದಿದೆ.
ಈ ಎಂಜಿನ್ 8,000rpm ನಲ್ಲಿ 39.5bhp ಮತ್ತು 6,500rpm ನಲ್ಲಿ 37.5Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಗೇರ್‌ಬಾಕ್ಸ್ ಅನ್ನು ಸಹ ಹೊಂದಿದೆ. ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನ ಸಸ್ಪೆಕ್ಷನ್ ಸಂಬಂಧಿಸಿದಂತೆ,ಬೋಲ್ಟ್-ಆನ್ ರಿಯರ್ ಸಬ್‌ಫ್ರೇಮ್ ಮತ್ತು ಟ್ವಿನ್-ಸೈಡೆಡ್ ಅಲ್ಯೂಮಿನಿಯಂ ಸ್ವಿಂಗರ್ಮ್‌ನೊಂದಿಗೆ ಫ್ರೇಮ್ ಅನ್ನು ಹೊಂದಿದೆ.


Click it and Unblock the Notifications








