Okaya EV: 129 ಕಿ.ಮೀ ಓಡುವ ಡಿಸ್ರಪ್ಟರ್‌ ಎಲೆಕ್ಟ್ರಿಕ್ ಬೈಕ್ ಬುಕ್ಕಿಂಗ್ ಶುರು.. ರೂ.500 ಸಾಕು!

ನವದೆಹಲಿ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಒಕಾಯಾ ಇವಿ (Okaya EV) ಒಡೆತನದ ಫೆರಾಟೊ ತನ್ನ ಮುಂಬರುವ ಇ-ಮೋಟಾರ್‌ಸೈಕಲ್ ಡಿಸ್ರಪ್ಟರ್‌ಗಾಗಿ ಗುರುವಾರದಿಂದ ಬುಕ್ಕಿಂಗ್ ಶುರು ಮಾಡಿದೆ. ಆಸಕ್ತ ಗ್ರಾಹಕರು, ಫೆರಾಟೊದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನೂತನ ಬೈಕ್‌ನ್ನು ಕಾಯ್ದಿರಿಸಬಹುದು.

ಮೊದಲ 1,000 ಗ್ರಾಹಕರು ವಿಶೇಷ ಕೊಡುಗೆಯ ಭಾಗವಾಗಿ ಹೊಸ ಫೆರಾಟೊ ಡಿಸ್ರಪ್ಟರ್‌ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು ರೂ.500 ಮೊತ್ತವನ್ನು ಮುಂಗಡವಾಗಿ ಕಟ್ಟಿ ಬುಕ್ಕಿಂಗ್ ಮಾಡಬಹುದು. ಆ ಬಳಿಕ, ಕಾಯ್ದಿರಿಸುವರೂ ರೂ.2,500 ಪಾವತಿಸಬೇಕು. ಈ ಎಲೆಕ್ಟ್ರಿಕ್ ಬೈಕ್‌ನ್ನು ಸಾಕಷ್ಟು ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿದೆ. ಸ್ಪ್ಲಿಟ್ - ಸೀಟ್ ಸೆಟಪ್ ಹಾಗೂ ಎಲ್ಇಡಿ ಲೈಟ್ಸ್ ಅನ್ನು ಹೊಂದಿದೆ.

Okaya EV Ferrato Disruptor Electric Bike Bookings Open Rs 500 Only

ನೂತನ ಫೆರಾಟೊ ಡಿಸ್ರಪ್ಟರ್‌ (Ferrato Disruptor) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌, 3.97 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಇದರಲ್ಲಿ ಬಳಕೆ ಮಾಡಿರುವ ಪಿಎಂಎಸ್ಎಂ ಎಲೆಕ್ಟ್ರಿಕ್ ಮೋಟಾರ್ 6.37 ಕೆಡಬ್ಲ್ಯೂ ಗರಿಷ್ಠ ಪವರ್ (ಶಕ್ತಿ) ಹಾಗೂ 228 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಸಂಪೂರ್ಣ ಚಾರ್ಜ್ ನಲ್ಲಿ 129 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಗಂಟೆಗೆ 95 ಕಿ.ಮೀ ಗರಿಷ್ಠ ವೇಗವನ್ನು ಪಡೆಯಲಿದೆ. ಇದರ ಪ್ರತಿ ಕಿಲೋಮೀಟರ್ ಚಾಲನೆಗೆ ಸವಾರರು ಕೇವಲ ರೂ.25 ಪೈಸೆಯನ್ನು ವ್ಯಯಿಸಬೇಕಾಗಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಪೋರ್ಕ್ಸ್, ಹಿಂಭಾಗ (ರೇರ್) ಮೊನೊ - ಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಹೊಂದಿದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಹೊಸ ಫೆರಾಟೊ ಡಿಸ್ರಪ್ಟರ್‌ (Ferrato Disruptor) ಎಲೆಕ್ಟ್ರಿಕ್ ಬೈಕ್ ಬೆಲೆ ಮೇ.2 ರಂದು ಘೋಷಣೆಯಾಗಲಿದೆ. ಈ ಮೋಟಾರ್‌ಸೈಕಲ್ ಬಹುತೇಕ ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ ಎಂದು ಅಂದಾಜಿಸಲಾಗಿದ್ದು, ಎಲೆಕ್ಟ್ರಿಕ್ ಬೈಕ್ ಹುಡುಕುತ್ತಿರುವ ಯುವಕರಿಗೆ ಡಿಸ್ರಪ್ಟರ್‌ ಉತ್ತಮ ಆಯ್ಕೆಯಾಗಬಲ್ಲದು. ನೂತನ ಇ-ಮೋಟಾರ್‌ಸೈಕಲ್‌ ಬಿಡುಗಡೆಯಾದ ಮೇಲೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಒಕಾಯಾ ಇವಿಯು ಹಲವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸುತ್ತಿದೆ. ಒಕಾಯಾ ಫ್ರೀಡಮ್ (Okaya Freedum) ಅತ್ಯಂತ ಕಡಿಮೆ ಬೆಲೆಗೆ ಖರೀದಿಗೆ ದೊರೆಯುತ್ತದೆ. ಇದು ರೂ.69,950 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.44 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಭರ್ತಿ ಚಾರ್ಜ್ ನಲ್ಲಿ 70 ರಿಂದ 75 ಕಿಲೋಮೀಟರ್ ಕ್ರಮಿಸುತ್ತದೆ.

ಒಕಾಯಾ ಫಾಸ್ಟ್ (Okaya Faast) ಎಲೆಕ್ಟ್ರಿಕ್ ಸ್ಕೂಟರ್ ರೂ.1.10 ದಿಂದ ರೂ.1.20 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಇದರಲ್ಲಿ 4.4 ಕೆಡಬ್ಲ್ಯೂಹೆಚ್ ಪ್ಯಾಕ್ ಬಳಕೆ ಮಾಡಲಾಗಿದೆ. ಪೂರ್ತಿ ಚಾರ್ಜ್ ನಲ್ಲಿ 140-160 ಕಿ.ಮೀ ಓಡುತ್ತದೆ. ಒಕಾಯಾ ಫಾಸ್ಟ್ ಎಫ್2ಬಿ, ಒಕಾಯಾ ಫಾಸ್ಟ್ ಎಫ್2ಎಫ್, ಒಕಾಯಾ ಮೋಟೋಫಾಸ್ಟ್, ಒಕಾಯಾ ಫಾಸ್ಟ್ ಎಫ್2ಟಿ ಸ್ಕೂಟರ್‌ಗಳು ಸಹ ಖರೀದಿಗೆ ಲಭ್ಯವಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, April 28, 2024, 9:30 [IST]
English summary
Okaya ev ferrato disruptor electric bike bookings open rs 500 only
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+