Ferrato: ಶಕ್ತಿಯುತ ಫೆರಾಟೊ ಡಿಸ್ರಪ್ಟರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ.. ರೂ.1.59 ಲಕ್ಷ ಬೆಲೆ, ವಿಶೇಷತೆಗಳೇನು?
ನವದೆಹಲಿ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಒಕಾಯಾ ಇವಿ (Okaya EV) ಮಾಲೀಕತ್ವದ ಫೆರಾಟೊ, ಡಿಸ್ರಪ್ಟರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು ಗುರುವಾರ ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಈ ಬೈಕ್ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ದೇಶೀಯ ಮಾರುಕಟ್ಟೆಯಲ್ಲಿ ನೂತನ ಫೆರಾಟೊ ಡಿಸ್ರಪ್ಟರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ (Ferrato Disruptor Electric Motorcycle) ರೂ.1,59,999 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 3.97 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 129 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.

ಈ ಫೆರಾಟೊ ಡಿಸ್ರಪ್ಟರ್ ಇ-ಬೈಕ್‌ನಲ್ಲಿ ಬಳಕೆ ಮಾಡಿರುವ ಪಿಎಂಎಸ್ಎಂ ಎಲೆಕ್ಟ್ರಿಕ್ ಮೋಟಾರ್ 6.37 ಕೆಡಬ್ಲ್ಯೂ ಗರಿಷ್ಠ ಪವರ್ (ಶಕ್ತಿ) ಹಾಗೂ 228 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 95 ಕೆಎಂ/ಹೆಚ್ ಟಾಪ್ ಸ್ಪೀಡ್ (ಗರಿಷ್ಠ ವೇಗ) ಪಡೆದಿದೆ. ಇಕೋ, ಸಿಟಿ & ಸ್ಪೋರ್ಟ್ಸ್ ಎಂಬ ರೈಡಿಂಗ್ ಮೋಡ್ ಹೊಂದಿದ್ದು, ಹ್ಯಾಂಡಲ್ ಬಾರ್‌ನಲ್ಲಿರುವ ಸ್ವಿಚ್ ಮೂಲಕ ಬದಲಾಯಿಸಬಹುದು.
ನೂತನ ಫೆರಾಟೊ ಡಿಸ್ರಪ್ಟರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನಲ್ಲಿರುವ ಬ್ಯಾಟರಿಯು ಕೇವಲ 5 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಇದು ಮೊಬೈಲ್, ಬ್ಲ್ಯೂಟೂತ್, ಜಿಪಿಎಸ್ ಕನೆಕ್ಟಿವಿಟಿ ಜಿಯೋ ಫೆನ್ಸಿಂಗ್, 17 - ಇಂಚಿನ ಅಲಾಯ್ ವೀಲ್ಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್, ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಒಳಗೊಂಡಿದೆ.

ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದ್ದು, ಸ್ಪ್ಲಿಟ್-ಸೀಟ್ ಕೂಡ ಹೊಂದಿದೆ. ಈ ಎಲೆಕ್ಟ್ರಿಕ್ ಬೈಕ್‌ನಲ್ಲಿ ಉಪಯೋಗಿಸಲಾಗಿರುವ ಬ್ಯಾಟರಿ ಪ್ಯಾಕ್ ಐಪಿ - 67 ರೇಟಿಂಗ್ ಒಳಗೊಂಡಿದ್ದು, ಭಾರತದ ಹವಾಮಾನ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾಗಿದೆ. ಕಂಪನಿಯು ಬ್ಯಾಟರಿಗೆ 3 ವರ್ಷ/ 30,000 ಕಿಲೋಮೀಟರ್ ವಾರಂಟಿಯನ್ನು ಕೊಡುತ್ತಿದೆ.
ಈ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದ್ದು, ಇದನ್ನು ಒಂದು ಕಿಲೋಮೀಟರ್ ಚಾಲನೆ ಮಾಡಲು ಕೇವಲ ರೂ.25 ಪೈಸೆಯನ್ನು ಸವಾರರು ಖರ್ಚು ಮಾಡಬೇಕು ಎಂದು ಕಂಪನಿಯು ಹೇಳಿಕೊಂಡಿದೆ. ಕಳೆದ ಗುರುವಾರದಿಂದ ಬುಕ್ಕಿಂಗ್ ಆರಂಭವಾಗಿದ್ದು, ಆಸಕ್ತ ಗ್ರಾಹಕರು, ಫೆರಾಟೊದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನೂತನ ಬೈಕ್‌ನ್ನು ಕಾಯ್ದಿರಿಸಬಹುದು.

ಮೊದಲ 1,000 ಗ್ರಾಹಕರು ವಿಶೇಷ ಕೊಡುಗೆಯ ಭಾಗವಾಗಿ ಹೊಸ ಫೆರಾಟೊ ಡಿಸ್ರಪ್ಟರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು ರೂ.500 ಮೊತ್ತವನ್ನು ಮುಂಗಡವಾಗಿ ಕಟ್ಟಿ ಬುಕ್ಕಿಂಗ್ ಮಾಡಬಹುದು. ಆ ಬಳಿಕ, ಕಾಯ್ದಿರಿಸುವರೂ ರೂ.2,500 ಪಾವತಿಸಬೇಕು. ಮುಂದಿನ 90 ದಿನಗಳೊಳಗೆ ಹೊಸ ಎಲೆಕ್ಟ್ರಿಕ್ ಬೈಕ್‌ಗಳ ವಿತರಣೆಯು ಆರಂಭವಾಗಲಿದೆ. ಡಿಸ್ರಪ್ಟರ್ ಬೈಕ್ ಮಾತ್ರವಲ್ಲದೆ, ಈ ವರ್ಷದ ಅಂತ್ಯದೊಳಗೆ ಮತ್ತೆರೆಡು ಎಲೆಕ್ಟ್ರಿಕ್ ವಾಹನ (Electric Vehicles)ಗಳನ್ನು ಪರಿಚಯಿಸಲು ಕಂಪನಿಯು ತಯಾರಿಯನ್ನು ನಡೆಸುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








