Royal Enfield Bullet: 70ರ ವಯಸ್ಸಲ್ಲಿ 20ರ ಆಟ: ಯುವಕರು ನಾಚುವಂತಿದೆ ಅಜ್ಜನ ಸ್ಟಂಟ್

Royal Enfield Bullet: ವಯಸ್ಸೆಂಬುದು ಕೇವಲ ಅಂಕಿಗಳಷ್ಟೆ ಎಂಬುದಕ್ಕೆ ಈ ವೃದ್ಧನೇ ಸಾಕ್ಷಿ. ಸಾಮಾನ್ಯವಾಗಿ ಬೈಕ್ ಸ್ಟಂಟ್ ಎಂದರೆ ಯುವಕರು ಮಾತ್ರ ಮಾಡುತ್ತಾರೆ ಅಥವಾ ಬೈಕ್ ಕ್ರೇಜ್ ಇರುವ ಯುವತಿಯರು ಕೂಡ ಮಾಡುತ್ತಾರೆ. ಆದರೆ 70ರ ವಯಸ್ಸಲ್ಲಿ ಬೈಕ್ ಸ್ಟಂಟ್ ಮಾಡುವುದನ್ನು ತುಂಬಾ ವಿರಳವಾಗಿ ನೋಡುತ್ತೇವೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ (Royal Enfield Bullet) ಮೋಟಾರ್‌ ಸೈಕಲ್‌ನಲ್ಲಿ ವೃದ್ಧರೊಬ್ಬರು ಸ್ಟಂಟ್ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಕುಳಿತ ಜಾಗದಲ್ಲೇ ಬೈಕ್ ಅನ್ನು ಥಟ್ಟನೆ ತಿರುಗಿಸುವ ವೃದ್ಧನ ಕೌಶಲ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಇದು ಬಹುಶಃ ನೀವು ಇಂದು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದಾದ ಅತ್ಯುತ್ತಮ ವಿಡಿಯೋಗಳಲ್ಲಿ ಒಂದಾಗಿರಬಹುದು. ಇದನ್ನು ಇನ್‌ಸ್ಟಾಗ್ರಾಂನಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ.

old-man-stunt-on-royal-enfield-bullet-bike

ಬೈಕ್ ಸವಾರಿ ಮಾಡುವ ವೃದ್ಧ 70ರ ಆಸುಪಾಸಿನ ವಯಸ್ಸಿನವರಾಗಿದ್ದು, ಬೈಕನ್ನು ತನ್ನ ಎಡಕ್ಕೆ ಬಗ್ಗಿಸಿ ಬಲಗಾಲನ್ನು ಧೃಡವಾಗಿ ನೆಲಕ್ಕಿಟ್ಟು ಹ್ಯಾಂಡಲ್‌ ಬಾರ್‌ ಅನ್ನು ತಿರುಗಿಸಿ ವೇಗವನ್ನು ಹೆಚ್ಚಿಸಿ ಥಟ್ಟನೆ ಬೈಕನ್ನು ತಿರುಗಿಸಿದ್ದಾರೆ. ಇದೆಲ್ಲವು ಕೆಲವೇ ಸೆಂಕೆಂಡುಗಳಲ್ಲಿ ಮಾಡಿದ್ದಾರೆ. ಇದನ್ನು ಬಹಳ ಹಿಂದಿನಿಂದಲೂ ಮಾಡಿರುವಂತೆ ತುಂಬಾ ವಿಶ್ವಾದಿಂದ ಸ್ಟಂಟ್ ಮಾಡುವುದನ್ನು ನೋಡಬಹುದು, ಜೊತೆಗೆ ವೃದ್ಧನ ಮುಖದಲ್ಲಿ ಆನಂದವನ್ನು ನೋಡಬಹುದು.

ಇದು ಸರಿಯೇ?: ವೃದ್ಧನ ಈ ಸಾಹಸ ನೋಡಲು ಖುಷಿಯನ್ನು ಕೊಡುತ್ತಿದೆಯಾದರೂ ಅವರು ನಿಯಮ ಪಾಲನೆ ಮಾಡಿಲ್ಲ. ವಿಡಿಯೋದಲ್ಲಿ ನಾವು ಗಮನಿಸಬೇಕಾದ ಎರಡು ವಿಷಯಗಳಿವೆ. ಮೊದಲನೆಯದಾಗಿ ವೃದ್ದ ಹೆಲ್ಮೆಟ್ ಧರಿಸಿಲ್ಲ, ಜೊತೆಗೆ ಇಂತಹ ಸ್ಟಂಟ್‌ಗಳನ್ನು ಮಾಡುವಾಗ ಸೇಫ್ಟಿ ಗೇರ್‌ ಧರಿಸಬೇಕು. ಎರಡನೆಯದು ಮುದುಕ ರಸ್ತೆ ಬದಿಯಲ್ಲಿ ಈ ಸಾಹಸವನ್ನು ಮಾಡಿದ್ದಾರೆ. ವಿಡಿಯೋದಲ್ಲಿ ವೃದ್ಧನ ಹಿಂಭಾಗದಲ್ಲಿ ಒಂದೆರಡು ವಾಹನಗಳು ಓಗುವುದನ್ನು ಕಾಣಬಹುದು.

old-man-stunt-on-royal-enfield-bullet-bike

ಒಂದು ವೇಳೆ ವೃದ್ಧ ಕಾರಣಾಂತರಗಳಿಂದ ಬೈಕ್‌ನ ನಿಯಂತ್ರಣ ಕಳೆದುಕೊಂಡರೆ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇಂತಹ ಸಂದರ್ಭಗಳಲ್ಲಿಯೇ ಹೆಲ್ಮೆಟ್ ಮಹತ್ವ ತಿಳಿಯುತ್ತದೆ. ಸರಿಯಾದ ರೈಡಿಂಗ್ ಗೇರ್ ಹಾಗೂ ಹೆಲ್ಮೆಟ್ ಧರಿಸಿದರೆ ಸಂಭವನೀಯ ಅಪಘಾತಗಳಲ್ಲಿ ಆಗುವ ತೀವ್ರ ಹಾನಿಗಳಿಂದ ತಪ್ಪಿಸಿಕೊಳ್ಳಬಹುದು. ಇಂತಹ ಸ್ಟಂಟ್‌ಗಳಲ್ಲಿ ಅಪಘಾತವಾಗಿ ಸುರಕ್ಷತಾ ಸಾಧನಗಳಿಂದ ಜೀವ ಉಳಿಸಿಕೊಂಡವರು ಹಲವರಿದ್ದಾರೆ.

ವಿಡಿಯೋದಲ್ಲಿ ಕಂಡುಬರುವ ಬುಲೆಟ್ ಬೈಕ್ ಎಷ್ಟು ಭಾರವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ವಯಸ್ಸಿನಲ್ಲಿರುವ ಯುವಕರೇ ಇದರ ಭಾರವನ್ನು ನಿಯಂತ್ರಿಸಲು ಪರದಾಡುತ್ತಾರೆ. ಒಮ್ಮೆ ಈ ಬೈಕ್ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದರೆ ಎಬ್ಬಿಸಲು ಇಬ್ಬರು ವ್ಯಕ್ತಿಗಳು ಮುಂದೆ ಬರಬೇಕಾಗುತ್ತದೆ. ವೃದ್ಧ ಈ ವಯಸ್ಸಿನಲ್ಲಿ ಸ್ಟಂಟ್ ಮಾಡಿರುವುದು ನಮಗೂ ಖುಷಿಯಾಗಿದೆ. ಆದರೆ ಸುರಕ್ಷತಾ ಸಾಧನಗಳು ಇದ್ದರೆ ಇನ್ನೂ ಉತ್ತಮ.

old-man-stunt-on-royal-enfield-bullet-bike

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ನೀವು ನಿಜವಾಗಿಯೂ ಇಂತಹ ಸಾಹಸಗಳನ್ನು ಮಾಡಲು ಬಯಸಿದರೆ, ನಿಮ್ಮ ಖಾಸಗಿ ಜಾಗ ಅಥವಾ ಟ್ರ್ಯಾಕ್ ಅನ್ನು ಹುಡುಕಿಕೊಳ್ಳಬೇಕು. ನಿಯಂತ್ರಿತ ವಾತಾವರಣದಲ್ಲಿ ಸ್ಟಂಟ್ ಮಾಡುವುದರಿಂದ, ನಿಮ್ಮ ಜೀವ ಹಾಗೂ ಇತರ ರಸ್ತೆ ಬಳಕೆದಾರರ ಜೀವವನ್ನು ಉಳಿಸಬಹದು ಎಂಬುದು ನಮ್ಮ ಅಭಿಪ್ರಾಯ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, March 15, 2024, 13:48 [IST]
English summary
Old man stunt on royal enfield bullet bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+