Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್‌ಗಳು

ಪ್ರತಿಯೊಬ್ಬರಿಗೂ ಜೀವನದಲ್ಲಿ ಹೊಸ ಬೈಕ್ ಖರೀದಿಸಬೇಕೆಂಬ ಆಸೆಯಿರುತ್ತದೆ. ಆದರೆ, ತಮ್ಮ ಬಜೆಟ್ ಬೆಲೆಗೆ ಯಾವ ಮೋಟಾರ್‌ಸೈಕಲ್‌ ತೆಗೆದುಕೊಳ್ಳಬಹುದು, ಎಷ್ಟು ಮೈಲೇಜ್ ನೀಡುತ್ತದೆ ಎಂಬ ಗೊಂದಲವಿರುತ್ತದೆ. ಇಲ್ಲಿ ಕೈಗೆಟುಕುವ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ಹೋಂಡಾ (Honda) ಕಂಪನಿಯ ದ್ವಿಚಕ್ರ ವಾಹನಗಳ ಬಗ್ಗೆ ವಿವರಿಸಿದ್ದೇವೆ.

ಹೋಂಡಾ ಎಸ್‌ಪಿ 125 (Honda SP 125) ಮೋಟಾರ್‌ಸೈಕಲ್‌ ಬಗ್ಗೆ ಮಾತನಾಡೋಣ. ಇದು ರೂ.87,410 - 91,960 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ದೊರೆಯುತ್ತದೆ. 123.94 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 10.87 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 10.9 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದ್ದು, 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಒಳಗೊಂಡಿದೆ.

Poor People Also Buy This Bikes easily Honda SP 125 Shine Unicorn Low Price

ಈ ಹೋಂಡಾ ಎಸ್‌ಪಿ 125 ಬೈಕ್, 60 ಕೆಎಂಪಿಎಲ್ ವರೆಗೂ ಮೈಲೇಜ್ ನೀಡಲಿದ್ದು, ಎಲ್ಇಡಿ ಹೆಡ್ ಲ್ಯಾಂಪ್, ಫುಲ್-ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ. 116 ಕೆಜಿ ತೂಕವಿರುವ ಈ ಮೋಟಾರ್‌ಸೈಕಲ್‌, 11.2-ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಪಡೆದಿದೆ.

ಹೋಂಡಾ ಶೈನ್ (Honda Shine) ಮೋಟಾರ್‌ಸೈಕಲ್‌, ರೂಪಾಂತರ (ವೇರಿಯೆಂಟ್)ಗಳಿಗೆ ಅನುಗುಣವಾಗಿ ರೂ.81,100 - 85,100 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಪಡೆದಿದ್ದು, 10.74 ಪಿಎಸ್ ಪವರ್ ಮತ್ತು 11 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೂ ದೊರೆಯಲಿದ್ದು, 55 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

Poor People Also Buy This Bikes easily Honda SP 125 Shine Unicorn Low Price

ನೂತನ ಹೋಂಡಾ ಶೈನ್ ಬೈಕ್, ಬ್ಲ್ಯಾಕ್, ಜೆನ್ನಿ ಗ್ರೇ ಮೆಟಾಲಿಕ್, ಡೀಸೆಂಟ್ ಬ್ಲೂ ಮೆಟಾಲಿಕ್ ಸೇರಿದಂತೆ 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಸೈಲೆಂಟ್ ಸ್ಟಾರ್ಟ್ ಸಿಸ್ಟಮ್, ಇಂಜಿನ್ ಕಿಲ್ ಸ್ವಿಚ್, ಅಲಾಯ್ ವೀಲ್ಸ್, ಅನಾಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 10.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ.

ಹೋಂಡಾ ಯುನಿಕಾರ್ನ್ (Honda Unicorn) ಕೂಡ ಜನಪ್ರಿಯ ಬೈಕ್ ಆಗಿದ್ದು, ರೂ.1.10 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. 162.71 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಪಡೆದಿದ್ದು, 12.91 ಪಿಎಸ್ ಪವರ್ ಹಾಗೂ 14.58 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದ್ದು, 60 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

Poor People Also Buy This Bikes easily Honda SP 125 Shine Unicorn Low Price

ಈ ಹೋಂಡಾ ಯುನಿಕಾರ್ನ್, ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ಎಂಜಿನ್ ಕಿಲ್ ಸ್ವಿಚ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. 140 ಕೆಜಿ ತೂಕವಿರುವ ಈ ಬೈಕ್, 13-ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, April 25, 2024, 19:08 [IST]
English summary
Poor people also buy this bikes easily honda sp 125 honda shine unicorn low price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+