popular bikes: ರೂ.70 ಸಾವಿರದೊಳಗೆ ಸಿಗುವ ಜನಪ್ರಿಯ ಕಂಪನಿಯ ಬೈಕ್‌ಗಳವು.. 70 ಕಿ.ಮೀ ಮೈಲೇಜ್

ಇವತ್ತಿನ ದಿನಮಾನದಲ್ಲಿ ಬೈಕ್‌ಗಳು (bikes) ಪ್ರತಿಯೊಬ್ಬರ ಜೀವನಾಧಾರವಾಗಿವೆ. ಆದರೆ, ಕೆಲವೊಬ್ಬರಿಗೆ ಯಾವ ಮೋಟಾರ್ ಸೈಕಲ್ ಗರಿಷ್ಠ ಮೈಲೇಜ್ ನೀಡುತ್ತದೆ. ಬಜೆಟ್ ಬೆಲೆಗೆ ಬರುತ್ತದೆಯೇ ಎಂಬ ಹಲವು ಗೊಂದಲವಿರುತ್ತದೆ. ಇಲ್ಲಿ ರೂ.70 ಸಾವಿರದೊಳಗೆ ದೊರೆಯುವ ಹೀರೋ (hero), ಬಜಾಜ್ (Bajaj), ಟಿವಿಎಸ್ (Tvs) ಕಂಪನಿಗಳ ಜನಪ್ರಿಯ ಬೈಕ್‌ಗಳ ಬಗ್ಗೆ ವಿವರಿಸಿದ್ದೇವೆ.

ಮೊದಲಿಗೆ ಹೋದ ವರ್ಷದ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಹೀರೋ ಹೆಚ್ಎಫ್ ಡಿಲಕ್ಸ್ (Hero HF Deluxe) ಮೋಟಾರ್ ಸೈಕಲ್ ಕುರಿತು ಮಾತನಾಡೋಣ. ಈ ಬೈಕ್ ರೂ.60,760 ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಬಿಎಸ್6 ಹಂತ-2 ಎಮಿಷನ್ ಮಾನದಂಡಗಳ ಅನ್ವಯ ಮೇಲ್ದರ್ಜೆರಿಸಿರುವ 97.2 ಸಿಸಿ ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ ಪಡೆದಿದೆ.

popular bikes: ರೂ.70 ಸಾವಿರದೊಳಗೆ ಸಿಗುವ ಜನಪ್ರಿಯ ಕಂಪನಿಯ ಬೈಕ್‌ಗಳವು.. 70 ಕಿ.ಮೀ ಮೈಲೇಜ್

ಈ ಎಂಜಿನ್ 7.9 bhp ಗರಿಷ್ಠ ಪವರ್ ಹಾಗೂ 8.05 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 4 - ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಒಳಗೊಂಡಿದೆ. ಜೊತೆಗೆ 70 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಸುತ್ತಳತೆ ಬಗ್ಗೆ ಹೇಳುವುದಾದರೆ, ಈ ಹೀರೋ ಹೆಚ್ಎಫ್ ಡಿಲಕ್ಸ್ ಬೈಕ್ 1,965 ಎಂಎಂ ಉದ್ದ, 720 ಎಂಎಂ ಅಗಲ ಮತ್ತು 1,045 ಎಂಎಂ ಎತ್ತರವನ್ನು ಹೊಂದಿದೆ. 70 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಈ ಹೊಸ ಮೋಟಾರ್ ಸೈಕಲ್, ಅಲಾಯ್ ವೀಲ್ಸ್, ಟ್ಯೂಬ್‌ಲೆಸ್ ಟೈಯರ್ಸ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸೈಡ್-ಸ್ಟ್ಯಾಂಡ್ ಇಂಡಿಕೇಟರ್, ಟೋ-ಗಾರ್ಡ್, ಅನಾಲಾಗ್ ಕನ್ಸೋಲ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ಸಲುವಾಗಿ ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) 130 ಎಂಎಂ ಡ್ರಮ್ ಬ್ರೇಕ್‌ ಅನ್ನು ಹೊಂದಿದೆ.

popular bikes: ರೂ.70 ಸಾವಿರದೊಳಗೆ ಸಿಗುವ ಜನಪ್ರಿಯ ಕಂಪನಿಯ ಬೈಕ್‌ಗಳವು.. 70 ಕಿ.ಮೀ ಮೈಲೇಜ್

ಬಜಾಜ್ ಪ್ಲಾಟಿನಾ 100 (Bajaj Platina 100) ಸಹ ಕಡಿಮೆ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಈ ಬೈಕ್ ರೂ.67,808 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಇದು 102 ಸಿಸಿ ಎಂಜಿನ್ ಒಳಗೊಂಡಿದ್ದು, 7.9 PS ಪವರ್, 8.3 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4 - ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. 90 kmph ಟಾಪ್ ಸ್ವೀಡ್ ಹೊಂದಿದೆ.

ವಿವಿಧ ಬಣ್ಣಗಳ ಆಯ್ಕೆಯಲ್ಲಿ ದೊರೆಯುವ ಈ ಬೈಕ್, ಮುಂಭಾಗ 130 ಎಂಎಂ, ಹಿಂಭಾಗ 110 ಎಂಎಂ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ CBS (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ. ಈ ಮೋಟಾರ್ ಸೈಕಲ್ 117 ಕೆಜಿ ತೂಕವಿದೆ. 200 ಎಂಎಂ ಅಳತೆಯ ಗ್ರೌಂಡ್ ಕ್ಲಿಯರೆನ್ಸ್ ಪಡೆದಿದೆ. 70 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಟಿವಿಎಸ್ ಸ್ಪೋರ್ಟ್ (TVS Sport), ರೂಪಾಂತರಗಳಿಗೆ ಅನುಗುಣವಾಗಿ ರೂ.59,431 ದಿಂದ ರೂ.70,773 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಈ ಬೈಕ್, 109.7ಸಿಸಿ ಏರ್-ಕೋಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.29 PS ಗರಿಷ್ಠ ಪವರ್, 8.7 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4 - ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಸಿಗಲಿದ್ದು, 90 kmph ಟಾಪ್ ಸ್ವೀಡ್ ಒಳಗೊಂಡಿದೆ.

popular bikes: ರೂ.70 ಸಾವಿರದೊಳಗೆ ಸಿಗುವ ಜನಪ್ರಿಯ ಕಂಪನಿಯ ಬೈಕ್‌ಗಳವು.. 70 ಕಿ.ಮೀ ಮೈಲೇಜ್

ಮೈಲೇಜ್ ವಿಚಾರಕ್ಕೆ ಬರುವುದಾದರೆ, ಈ ಟಿವಿಎಸ್ ಸ್ಪೋರ್ಟ್ ಬೈಕ್ 70 ಕಿ.ಮೀ ಮೈಲೇಜ್ ಕೊಡುತ್ತದೆ. ಎಲ್ಇಡಿ ಹೆಡ್ ಲೈಟ್, ಡಿಜಿಟಲ್ ಕನ್ಸೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಕುರಿತು ಹೇಳುವುದಾದರೆ, ಮುಂಭಾಗ 130 ಎಂಎಂ, ಹಿಂಭಾಗ 110 ಎಂಎಂ ಡ್ರಮ್ ಬೈಕ್ ಆಯ್ಕೆಯನ್ನು ಪಡೆದಿದ್ದು, 112 ಕೆ.ಜಿ ತೂಕವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, January 21, 2024, 9:00 [IST]
English summary
Popular bikes under 70000 hero hf deluxe bajaj platina 100 tvs sport 70 km mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+