ಹೊಸ ಸ್ಟೈಲಿಷ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭ: ವಿಶೇಷತೆಗಳೇನು?

ಬಿಎಂಡಬ್ಲ್ಯು ಮೋಟರಾಡ್ (BMW Motorrad)ಇಂಡಿಯಾ ತನ್ನ ಹೊಸ BMW CE 02 ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಬುಕಿಂಗ್ ಆರಂಭಿಸಿದೆ. ಹೊಸ BMW CE 02 ಪ್ರಪಂಚದಲ್ಲೇ BMW ಮೊಟೊರಾಡ್‌ನಿಂದ ಭಾರತದಲ್ಲಿ ಸ್ಥಳೀಯವಾಗಿ ಉತ್ಪಾದಿಸಲಾದ ಮೊದಲ BEV ವಾಹನವಾಗಿದೆ. ಕಂಪನಿಯ ಪ್ರಕಾರ ಹೊಸ BMW CE 02 ಅನ್ನು ನಗರ ಮತ್ತು ಸ್ವಚ್ಛ ಪರಿಸರಕ್ಕಾಗಿ ರಚಿಸಲಾಗಿದೆ. ಹೊಸ BMW CE 02 ಕ್ರಾಂತಿಕಾರಿ, ಐಕಾನಿಕ್ ವಾಹನವಾಗಿದ್ದು ಆಕರ್ಷಕ ವಿನ್ಯಾಸ ಮತ್ತು ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಹೊರಹೊಮ್ಮಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಹೊಸ BMW CE 02 ಅನ್ನು ಬುಕ್ ಮಾಡಲು ಗ್ರಾಹಕರು ತಮ್ಮ ಹತ್ತಿರದ ಅಧಿಕೃತ BMW Motorrad ಡೀಲರ್‌ಶಿಪ್ ಅನ್ನು ಸಂಪರ್ಕಿಸಬಹುದು. ಬಿಎಂಡಬ್ಲ್ಯು ಸಿಇ 04 ಸ್ಕೂಟರ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸ್ಕೂಟರ್‌ನ ಸುತ್ತಲೂ ದೊಡ್ಡ ಏಪ್ರನ್ ಮತ್ತು ಫ್ಲಾಟ್ ಬಾಡಿ ಪ್ಯಾನೆಲ್‌ಗಳು ಆಕರ್ಷಣೆಯನ್ನು ಹೆಚ್ಚಿಸಿವೆ. ಬೆಂಚ್ ತರಹದ ಸೀಟ್ ಗಮನ ಸೆಳೆಯುವ ಮತ್ತೊಂದು ವಿನ್ಯಾಸ ಅಂಶವಾಗಿದೆ.

pre-launch-bookings-open-for-new-bmw-ce-02

780 ಎಂಎಂ ಸೀಟ್ ಎತ್ತರದೊಂದಿಗೆ ಇಬ್ಬರು ಆರಾಮವಾಗಿ ಕುಳಿತುಕೊಳ್ಳಲು ಸಾಕಷ್ಟು ಸ್ಥಲಾವಕಾಶವನ್ನು ಒದಗಿಸುತ್ತದೆ. ಸಿಇ 04 ಸ್ಟೀಲ್ ಡಬಲ್ ಲೂಪ್ ಫ್ರೇಮ್ ಅನ್ನು ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್-ಬ್ರಿಡ್ಜ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಹಿಂಜ್ ಸಸ್ಪೆಂಷನ್ ಸ್ಟ್ರಟ್ ಹೊಂದಿರುವ ಸಿಂಗಲ್ ಸೈಡೆಡ್ ಸ್ವಿಂಗ್ ಆರ್ಮ್ ಅನ್ನು ಹೊಂದಿದೆ. ಸ್ಕೂಟರ್ 15 ಇಂಚಿನ ವೀಲ್‌ಗಳನ್ನು ಹೊಂದಿದೆ.

ವೈಶಿಷ್ಟ್ಯಗಳು: ಫೋನ್ ಅನ್ನು ಚಾರ್ಜ್‌ ಮಾಡಲು ಇದು ಯುಎಸ್‌ಬಿ ಟೈಪ್-ಸಿ ಚಾರ್ಜರ್ ಅನ್ನು ಸಹ ಹೊಂದಿದೆ. ನಿಮ್ಮ ಸ್ಮಾರ್ಟ್‌ಫೋನ್‌ಗಾಗಿ ನಿಫ್ಟಿ ಸ್ಟೋರೇಜ್ ಕಂಪಾರ್ಟ್ಮೆಂಟ್ ಇದ್ದು, ಇದರಲ್ಲಿ ಗಾಳಿಯಾಡುವ ಜೊತೆಗೆ ನೀರು ಇಳಿಯದಂತೆ ನೋಡಿಕೊಳ್ಳುತ್ತದೆ. ಇದು ಕನೆಕ್ಟಿವಿಟಿ ಮತ್ತು ನ್ಯಾವಿಗೇಷನ್ ನೊಂದಿಗೆ 10.25 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇಯನ್ನು ಹೊಂದಿದೆ.

pre-launch-bookings-open-for-new-bmw-ce-02

ಸುರಕ್ಷತೆ: ವಾಹನದ ಸುರಕ್ಷತಾ ದೃಷ್ಟಿಯಿಂದ ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ ಮತ್ತು ಎಬಿಎಸ್ ಪ್ರೊ ಅನ್ನು ಆಪ್ಷನಲ್ ಎಕ್ಸ್ಟ್ರಾಗಳಾಗಿ ನೀಡಲಾಗಿದೆ. ಇಕೋ, ರೈನ್ ಮತ್ತು ರೋಡ್ ಎಂಬ ಮೂರು ರೈಡ್ ಮೋಡ್‌ಗಳು ಕೂಡ ಇವೆ. ಎರಡೂ ತುದಿಗಳಲ್ಲಿ 265 ಎಂಎಂ ಡಿಸ್ಕ್ (ABS ಸ್ಟ್ಯಾಂಡರ್ಡ್) ಬ್ರೇಕ್‌ಗಳನ್ನು ಹೊಂದಿದೆ.

ಪವರ್ & ಪರ್ಫಾಮೆನ್ಸ್: ಬ್ಯಾಟರಿ ಖಾಲಿಯಾದ ನಂತರ, ಸ್ಟ್ಯಾಂಡರ್ಡ್ ಚಾರ್ಜರ್ ಬಳಸಿ ಶೇ100 ರಷ್ಟು ಚಾರ್ಜ್ ಮಾಡಲು ನಾಲ್ಕು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಇದರ ಬ್ಯಾಟರಿ ಸಾಮರ್ಥ್ಯವು 8.9 ಕಿಲೋವ್ಯಾಟ್ ಇದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 130 ಕಿ.ಮೀ ರೇಂಜ್ ನೀಡುತ್ತದೆ. ಹೈ ಸ್ಪೀಡ್ ಚಾರ್ಜರ್ ಮೂಲಕ ಕೇವಲ ಒಂದು ಗಂಟೆ ನಲವತ್ತು ನಿಮಿಷಗಳಲ್ಲಿ ಬ್ಯಾಟರಿಯನ್ನು ಚಾರ್ಜ್‌ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

pre-launch-bookings-open-for-new-bmw-ce-02

ಬಿಎಂಡಬ್ಲ್ಯು ಸಿಇ 04 ಸ್ಕೂಟರ್ 15 ಕಿಲೋವ್ಯಾಟ್, ಪರ್ಮನೆಂಟ್ ಮ್ಯಾಗ್ನೆಟ್, ಲಿಕ್ವಿಡ್ ಕೂಲ್ಡ್ ಸಿಂಕ್ರೊನಸ್ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು, 41 ಬಿಹೆಚ್‌ಪಿ ಪವರ್ ಮತ್ತು 61 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಬಿಎಂಡಬ್ಲ್ಯು ಸ್ಕೂಟರ್ ಕೇವಲ 2.6 ಸೆಕೆಂಡುಗಳಲ್ಲಿ 50 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಇದರ ಟಾಪ್ ಸ್ಪೀಡ್ 120 ಕಿ.ಮೀಗಳಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, September 9, 2024, 13:57 [IST]
English summary
Pre launch bookings open for new bmw ce 02
Read more on bmw motorrad india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+