Range Rover: ಬಿಎಂಡಬ್ಲ್ಯು, ಬೆಂಝ್ ಎದೆಯಲ್ಲಿ ನಡುಕ ಹುಟ್ಟಿಸಲು ಸಜ್ಜಾದ 'ರೇಂಜ್ ರೋವರ್'

ರೇಂಜ್ ರೋವರ್ (Range Rover) ಎಲೆಕ್ಟ್ರಿಕ್ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದು, ಬಿಎಂಡಬ್ಲ್ಯು ಐಎಕ್ಸ್ ಮತ್ತು ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಎಸ್‌ಯುವಿಯಂತಹ ಪ್ರತಿಸ್ಪರ್ಧಿಗಳೊಂದಿಗೆ ಮುಖಾಮುಖಿ ಪೈಪೋಟಿ ಸಜ್ಜಾಗುತ್ತಿದೆ. ಈಗಾಗಲೇ ರೇಂಜ್ ರೋವರ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ವಿಶ್ವದಾದ್ಯಂತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ರೇಂಜ್ ರೋವರ್ (Range Rover) ಎಲೆಕ್ಟ್ರಿಕ್ ಆಗಮನದ ಬಗ್ಗೆ ಜಾಗತಿಕವಾಗಿ 16,000 ಕ್ಕೂ ಹೆಚ್ಚು ಸಂಭಾವ್ಯ ಖರೀದಿದಾರರಿಂದ ಬೇಡಿಕೆ ವ್ಯಕ್ತವಾಗಿದೆ. ಇದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯೆಗಳಿದ್ದು, ಬಿಡುಗಡೆಗೂ ಮುನ್ನವೇ ಗ್ರಾಹಕರಿಂದ ವ್ಯಕ್ತವಾಗಿರುವ ಬೇಡಿಕೆಯು ಬಲವಾದ ಮಾರುಕಟ್ಟೆಯನ್ನು ಸೃಷ್ಟಿಸುವುದು ಖಚಿತ ಎಂದು ಹೇಳಲಾಗುತ್ತಿದೆ.

range-rover-electric-interested-buyers-worldwide-over-16-000

ಪರ್ಫಾಮೆನ್ಸ್ ಮತ್ತು ಸಾಮರ್ಥ್ಯ: ಮೂಲಗಳ ಪ್ರಕಾರ ಮುಂಬರುವ ರೇಂಜ್ ರೋವರ್ ಎಲೆಕ್ಟ್ರಿಕ್ ಎಸ್‌ಯುವಿ ಪ್ರಸ್ತುತದ V8 ಮಾದರಿಗಳಿಗೆ ಸಮನಾಗಿರುತ್ತದೆ. ಉತ್ತಮ ಪರ್ಫಾಮೆನ್ಸ್ ಕೂಡ ನಿರೀಕ್ಷಿಸಲಾಗಿದೆ. ಇದು 500bhp ಗಿಂತ ಹೆಚ್ಚಿನ ಪವರ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ವರದಿಗಳು ಸೂಚಿಸುತ್ತಿವೆ. ಇದರ ಆಲ್ - ವೀಲ್ - ಡ್ರೈವ್ ಪರಾಕ್ರಮವನ್ನು ಹೆಚ್ಚಿಸುವ ಟ್ವಿನ್-ಮೋಟಾರ್ ಸೆಟಪ್ ನೀಡಲಾಗುವುದು.

ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ಸರಿಸಾಟಿಯಿಲ್ಲದ ಟೋವಿಂಗ್, ವೇಡಿಂಗ್ ಮತ್ತು ಆಲ್ - ಟೆರೈನ್ ಕಾರ್ಯಕ್ಷಮತೆಯ ರೇಂಜ್ ರೋವರ್‌ನ "ಗೋ - ಎನಿವೇರ್" ಖ್ಯಾತಿಯನ್ನು ಈ ಸೆಟಪ್ ನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ಬ್ಯಾಟರಿ ಬಾಳಿಕೆ ಮತ್ತು ಹೀಟಿಂಗ್ ಪರ್ಫಾಮೆನ್ಸ್‌ನಂತಹ ನಿರ್ಣಾಯಕ ಅಂಶಗಳ ಮೇಲೆ ಕೇಂದ್ರೀಕರಿಸಿ, ವೈವಿಧ್ಯಮಯ ಹವಾಮಾನಗಳಲ್ಲಿ ಕಠಿಣ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

range-rover-electric-interested-buyers-worldwide-over-16-000

ಉತ್ಪಾದನೆ ಯಾವಾಗ: ಎಲೆಕ್ಟ್ರಿಕ್ ರೇಂಜ್ ರೋವರ್ ಸೋಲಿಹಲ್ ಸ್ಥಾವರದಲ್ಲಿ ಉತ್ಪಾದನಾ ಮಾರ್ಗದಿಂದ ಹೊರಗುಳಿಯಲಿದೆ, ಆರಂಭದಲ್ಲಿ ಮೂರನೇಯವರಿಂದ ಬ್ಯಾಟರಿಗಳ ಪೂರೈಕೆಯಾಗಲಿದೆ. ಜೊತೆಗೆ ಸೋಮರ್ ಸೆಟ್‌ನಲ್ಲಿರುವ ಟಾಟಾದ ಹೊಸ ಗಿಗಾಫ್ಯಾಕ್ಟರಿಯಲ್ಲಿ ಉತ್ಪಾದಿಸಲಾದ ಬ್ಯಾಟರಿ ಪ್ಯಾಕ್‌ಗಳಿಗೆ ಪರಿವರ್ತನೆಯ ಯೋಜನೆಗಳು ಜಾರಿಯಲ್ಲಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ.

ಪ್ರತಿಸ್ಪರ್ಧಿಗಳು: ಇದು ಬಿಎಂಡಬ್ಲ್ಯು ಐಎಕ್ಸ್ (BMW iX) ಮತ್ತು ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಎಸ್‌ಯುವಿ (Mercedes - Benz EQS SUV) ಗಳ ವಿರುದ್ಧ ಸ್ಪರ್ಧಿಸಲಿದೆ, ರೇಂಜ್ ರೋವರ್ ಎಲೆಕ್ಟ್ರಿಕ್ ವಿನ್ಯಾಸದ ವಿವರಗಳು ರಹಸ್ಯವಾಗಿ ಇಡಲಾಗಿದೆ. ಆದರೆ ಅದರ ಇಂಧನಚಾಲಿತ ಎಸ್‌ಯುವಿಗಳನ್ನು ಪ್ರತಿಬಿಂಬಿಸುವ ಸಂಪ್ರದಾಯ ಮತ್ತು ನಾವೀನ್ಯತೆಗಳ ಮಿಶ್ರಣವನ್ನು ಒಳಗೊಂಡು ಇವಿ ಡಿಸೈನ್ ಇರಲಿದೆಯಂತೆ.

range-rover-electric-interested-buyers-worldwide-over-16-000

ಒಟ್ಟಾರೆ ರೇಂಜ್ ರೋವರ್ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿ ಮಾರುಕಟ್ಟೆಯಲ್ಲಿ ಅಸಾಧಾರಣ ಸ್ಪರ್ಧಿಯಾಗಿ ರೂಪುಗೊಳ್ಳುತ್ತಿದೆ. ವಿಶ್ವಾದ್ಯಂತ ಸಂಭಾವ್ಯ ಖರೀದಿದಾರರು ಈಗಾಗಲೇ ಗಮನಾರ್ಹ ಆಸಕ್ತಿಯನ್ನು ತೋರಿಸಿದ್ದಾರೆ, ಆಟೋಮೋಟಿವ್ ಸಮುದಾಯವು ಅದರ ಆಗಮನಕ್ಕಾಗಿ ಕುತೂಹಲದಿಂದ ಕಾಯುತ್ತಿದೆ ಎಂಬುದು ಸ್ಪಷ್ಟವಾಗಿದೆ. ಇನ್ನೇನು ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕುರಿತು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, February 10, 2024, 8:30 [IST]
English summary
Range rover electric interested buyers worldwide over 16 000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+