ರಾಯಲ್‌ ಎನ್‌ಫೀಲ್ಡ್‌ ಗ್ರಾಹಕರಿಗೆ ಸಿಹಿ ಸುದ್ದಿ: ಹೊಸ ಅದ್ಬುತ ಉತ್ಪನ್ನ ಬಿಡುಗಡೆ

ಮಧ್ಯಮ ಗಾತ್ರದ (250-750cc) ಮೋಟಾರ್‌ಸೈಕಲ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್, ಇಂದು ಎಕ್ಸ್‌ಪ್ಲೋರರ್ V4 ರೈಡಿಂಗ್ ಜಾಕೆಟ್ ಅನ್ನು ಬಿಡುಗಡೆ ಮಾಡಿದೆ. ಹೊಸ ಮತ್ತು ಕ್ರಿಯಾತ್ಮಕತೆಯೊಂದಿಗೆ, ಸವಾರರ ಬೇಡಿಕೆಯ ಅಗತ್ಯಗಳನ್ನು ಪೂರೈಸಲು ಸುರಕ್ಷತೆಯೊಂದಿಗೆ ಇದನ್ನು ನಿರ್ಮಾಣ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ರಾಯಲ್ ಎನ್‌ಫೀಲ್ಡ್ ಎಕ್ಸ್‌ಪ್ಲೋರರ್ V4 ಅದರ ಹಳೆಯ ಎಕ್ಸ್‌ಪ್ಲೋರರ್ V3 ಯಿಂದ ಗಮನಾರ್ಹವಾದ ಅಪ್‌ಗ್ರೇಡ್ ಆಗಿ ಹೊರಹೊಮ್ಮಿದೆ. ಪ್ರವಾಸಿ ಜಾಕೆಟ್ ಅನುಭವವನ್ನು ಮರುವ್ಯಾಖ್ಯಾನಿಸುವಂತಹ ವರ್ಧಿತ ವೈಶಿಷ್ಟ್ಯಗಳೊಂದಿಗೆ ಸವಾರರನ್ನು ಸುರಕ್ಷಿತವಾಗಿರಿಸುತ್ತದೆ. ಎಕ್ಸ್‌ಪ್ಲೋರರ್ V4 ಹೆಚ್ಚು ರೋಮಾಂಚಕ ಮತ್ತು ವರ್ಣರಂಜಿತ ಡಿಸೈನ್‌ನಲ್ಲಿನ ವಿಕಸನವು ಕಂಡ ಕೂಡಲೇ ಸ್ಪಷ್ಟವಾಗುತ್ತದೆ.

royal-enfield-launches-explorer-v4-riding-jacket

ಇದರ ಕಾರ್ಯಕ್ಷಮತೆಯ ಬಗ್ಗೆ ಮಾತನಾಡುವುದಾದ್ರೆ, ಅಪ್‌ಗ್ರೇಡ್ D3O ಲೆವೆಲ್ 2 ಪ್ರೊಟೆಕ್ಟರ್‌ಗಳನ್ನು ಭುಜಗಳು ಮತ್ತು ಮೊಣಕೈಗಳಲ್ಲಿ ಒಳಗೊಂಡಿದೆ, ಇದು ಉತ್ತಮ ಪರಿಣಾಮದ ರಕ್ಷಣೆಯನ್ನು ಒದಗಿಸುತ್ತದೆ. ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲೂ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸೂಪರ್-ವೆಂಟಿಲೇಟೆಡ್ 2 ವೆದರ್ ರೈಡಿಂಗ್ ಜಾಕೆಟ್ ಪ್ರತಿ ಸವಾರಿಯ ಸಮಯದಲ್ಲಿ ಅತ್ಯುತ್ತಮ ಸೌಕರ್ಯವನ್ನು ಒದಗಿಸುವುದಾಗಿ ಕಂಪನಿ ಹೇಳಿದೆ.

ಎಕ್ಸ್‌ಪ್ಲೋರರ್ V4 ವಿಶೇಷತೆಗಳು: ಅನುಭವಿ ಮತ್ತು ವೃತ್ತಿಪರ ರೈಡರ್‌ಗಳಿಗೆ ಅನುಗುಣವಾಗಿ, ಜಾಕೆಟ್ "ಎರ್ಗೋ ಪ್ರೊ ಟೆಕ್" ಲೆವೆಲ್ 2 ಬ್ಯಾಕ್ ರಕ್ಷಾಕವಚ ಮತ್ತು ಎದೆಯ ರಕ್ಷಣೆಗೆ ಮೀಸಲಾದ ಪಾಕೆಟ್‌ಗಳನ್ನು ಹೊಂದಿದೆ. ಸೂಪರ್‌ಫ್ಲೋ ಮೆಶ್, 450 GSM 100% ಪಾಲಿ ಫ್ಯಾಬ್ರಿಕ್‌ನೊಂದಿಗೆ ರಚಿಸಲಾದ ಜಾಕೆಟ್ ಬಾಳಿಕೆಗೆ ಧಕ್ಕೆಯಾಗದಂತೆ ಉತ್ತಮ ವೆಂಟಿಲೇಷನ್ ಅನ್ನು ನೀಡುತ್ತದೆ.

royal-enfield-launches-explorer-v4-riding-jacket

ಭುಜಗಳು ಮತ್ತು ಮೊಣಕೈಗಳಲ್ಲಿ CORDURA ತೇಪೆಗಳೊಂದಿಗೆ ಬಲಪಡಿಸಲಾಗಿದೆ, ಇದು ಹೆಚ್ಚಿನ ಒತ್ತಡದ ಪ್ರದೇಶಗಳಲ್ಲಿ ಸ್ಥಿತಿಸ್ಥಾಪಕತ್ವ (Resilience)ವನ್ನು ತೋರಿಸುತ್ತದೆ. ಹಿಂಭಾಗ ಮತ್ತು ಮುಂಭಾಗದಲ್ಲಿ ಪ್ರತಿಫಲಿತ ಅಂಶಗಳ ಸಂಯೋಜನೆಯು ಗೋಚರತೆಯನ್ನು ಹೆಚ್ಚಿಸುತ್ತದೆ, ವಿವಿಧ ಬೆಳಕಿನ ಪರಿಸ್ಥಿತಿಗಳಲ್ಲಿ ಸುರಕ್ಷಿತ ಸವಾರಿಗಳನ್ನು ಉತ್ತೇಜಿಸುತ್ತದೆ.

ಎಕ್ಸ್‌ಪ್ಲೋರರ್ V4 ಜಾಕೆಟ್ ಹೆಚ್ಚಿನ ರಕ್ಷಣೆಗಾಗಿ 8000MM ನೈಲಾನ್‌ನಿಂದ ಮಾಡಲಾದ ಹೆಚ್ಚಿನ-ಗೋಚರತೆಯ ರೈನ್ ಜಾಕೆಟ್ ಅನ್ನು ಒಳಗೊಂಡಿದೆ. ನಿಜವಾದ YKK ಮುಂಭಾಗದ ಝಿಪ್ಪರ್‌ಗಳು ಮತ್ತು ಒಳಗಿನ TruDry ಜಲನಿರೋಧಕ ಪಾಕೆಟ್ ವಿವರಗಳಿಗೆ ನಿಖರವಾದ ಗಮನವನ್ನು ಒತ್ತಿಹೇಳುತ್ತದೆ, ಎಕ್ಸ್‌ಪ್ಲೋರರ್ V4 ರೈಡಿಂಗ್ ಜಾಕೆಟ್ ಅನ್ನು ಶೈಲಿ, ಸುರಕ್ಷತೆ ಮತ್ತು ಕ್ರಿಯಾತ್ಮಕತೆಯ ಪರಿಪೂರ್ಣ ಮಿಶ್ರಣವನ್ನು ಬಯಸುವ ಸವಾರರಿಗೆ ಅನಿವಾರ್ಯ ಆಯ್ಕೆಯನ್ನಾಗಿ ಮಾಡುತ್ತದೆ ಎಂದು ಕಂಪನಿ ಹೇಳಿದೆ.

royal-enfield-launches-explorer-v4-riding-jacket

ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ರಾಯಲ್ ಎನ್‌ಫೀಲ್ಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯದ್ವಿಂದರ್ ಸಿಂಗ್ ಗುಲೇರಿಯಾ, "ರೈಡರ್‌ಗಳಿಗೆ ನಮ್ಮ ಬದ್ಧತೆ ಮೋಟಾರ್‌ಸೈಕಲ್‌ಗಳನ್ನು ಮೀರುವಂತದ್ದು, ಇದು ಅವರ ಪ್ರಯಾಣದಲ್ಲಿ ಜೊತೆಯಲ್ಲಿರುವ ಗೇರ್‌ಗೆ ವಿಸ್ತರಿಸುತ್ತದೆ. ನಾವು ನಮ್ಮ ರೈಡರ್‌ಗಳೊಂದಿಗೆ ತೊಡಗಿಸಿಕೊಂಡಿದ್ದೇವೆ, ಅವರ ಅಗತ್ಯತೆಗಳನ್ನು ಅಧ್ಯಯನ ಮಾಡಿ ರೈಡಿಂಗ್ ಗೇರ್‌ ಅನ್ನು ನಿಖರವಾಗಿ ರಚಿಸಿದ್ದೇವೆ ಎಂದರು.

ನಮ್ಮ ಹೊಸ ಎಕ್ಸ್‌ಪ್ಲೋರರ್ V4 ರಕ್ಷಣೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಒಟ್ಟಾರೆ ಸವಾರಿ ಅನುಭವವನ್ನು ಹೆಚ್ಚಿಸುತ್ತದೆ. ರಾಯಲ್ ಎನ್‌ಫೀಲ್ಡ್ ಎಕ್ಸ್‌ಪ್ಲೋರರ್ V4 ರೈಡಿಂಗ್ ಜಾಕೆಟ್‌ನ ಬಿಡುಗಡೆಯು ಮುಕ್ತ ರಸ್ತೆಗಳನ್ನು ಶೈಲಿಯಲ್ಲಿ ನ್ಯಾವಿಗೇಟ್ ಮಾಡಲು ಆತ್ಮವಿಶ್ವಾಸದೊಂದಿಗೆ ಸವಾರರಿಗೆ ಸಾಟಿಯಿಲ್ಲದ ಸೌಕರ್ಯವನ್ನು ನೀಡುತ್ತದೆ ಎಂದರು.

royal-enfield-launches-explorer-v4-riding-jacket

ಎಕ್ಸ್‌ಪ್ಲೋರರ್ V4 ರೈಡಿಂಗ್ ಜಾಕೆಟ್‌ಗಳನ್ನು ರೈಡರ್-ಕೇಂದ್ರಿತತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ರೈಡರ್‌ನ ಅನನ್ಯ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸುವ ಎಲ್ಲಾ ಅಗತ್ಯಗಳನ್ನು ಒಳಗೊಳ್ಳಲು ಚಿಂತನಶೀಲವಾಗಿ ರಚಿಸಲಾಗಿದೆ. ನಗರ, ಕ್ರೂಸಿಂಗ್, ಪ್ರವಾಸ ಅಥವಾ ಸಾಹಸ ಪ್ರವಾಸ, ಪ್ರತಿ ಮೋಟಾರ್‌ಸೈಕಲ್‌ಗೆ ಪರಿಪೂರ್ಣ ಫಿಟ್ ಅನ್ನು ಖಚಿತಪಡಿಸುತ್ತದೆ ಎಂದರು.

More from DriveSpark

Article Published On: Wednesday, February 28, 2024, 11:45 [IST]
English summary
Royal enfield launches explorer v4 riding jacket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+