ರಸ್ತೆಗಳ ರಾಜ ರಾಯಲ್ ಎನ್‌ಫೀಲ್ಡ್ ಪಾರುಪತ್ಯ: ಮಾರಾಟವಾದ ಬೈಕ್‌ಗಳ ಸಂಖ್ಯೆ ಕೇಳಿದ್ರೆ ಬೆಚ್ಚಿಬೀಳ್ತಿರಾ!

ರಾಯಲ್ ಎನ್‌ಫೀಲ್ಡ್ (Royal Enfield) ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದ್ದು, ಇದರ ಬೈಕ್ ಗಳು ದಾಖಲೆಯ ಮಾರಾಟವಾಗುತ್ತಿದೆ. ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್‌ನ ಇತಿಹಾಸದಲ್ಲಿ ಅತ್ಯಧಿಕ ಮಾಸಿಕ ಮಾರಾಟವನ್ನು ವರದಿ ಮಾಡಿದೆ. 2024ರ ಅಕ್ಟೋಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಬರೊಬ್ಬರಿ 1.10 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿವೆ. ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 1.01 ಲಕ್ಷ ಯುನಿಟ್‌ಗಳಿಗಿಂತ ಹೆಚ್ಚು ಮಾರಾಟವಾಗಿದೆ. ಇನ್ನು ಇದೇ ತಿಂಗಳಿನಲ್ಲಿ 8,000 ಯುನಿಟ್‌ಗಳನ್ನು ರಫ್ತು ಮಾಡಿದೆ.

ವರ್ಷದಿಂದ ವರ್ಷಕ್ಕೆ, ಕಂಪನಿಯು 1,01,866 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಅಕ್ಟೋಬರ್ 2024 ರ ಅಂತ್ಯದ ವೇಳೆಗೆ ದೇಶೀಯ ಮಾರಾಟದಲ್ಲಿ ಶೇಕಡಾ 26 ರಷ್ಟು ಬೆಳವಣಿಗೆಯನ್ನು ವರದಿ ಮಾಡಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 84,435 ಯುನಿಟ್‌ಗಳನ್ನು ಮಾರಾಟವಾಗಿತ್ತು. ದೇಶಿಯ ಮಾರುಕಟ್ಟೆಯ ಮಾರಾಟದಲ್ಲಿ ಶೇ.31 ರಷ್ಟು ಏರಿಕೆಯನ್ನು ಕಂಡಿದೆ.

Royal Enfield

ಮೊದಲ ಬಾರಿಗೆ, 2024-2025ರ ಆರ್ಥಿಕ ವರ್ಷದಲ್ಲಿ ಬ್ರ್ಯಾಂಡ್ ಬೆಳವಣಿಗೆಯ ಹಾದಿಗೆ ಮರಳಿದೆ. ಮಾಡೆಲ್ ಲೈನ್‌ನಲ್ಲಿನ ಆವಿಷ್ಕಾರಗಳು ಮತ್ತು ಹೊಸ ಮೋಟಾರ್‌ಸೈಕಲ್‌ಗಳು ರಾಯಲ್ ಎನ್‌ಫೀಲ್ಡ್ ಅಂತಹ ಮಾರಾಟವನ್ನು ಸಾಧಿಸಲು ಸಹಾಯ ಮಾಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ವರ್ಷ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಮತ್ತು ಬ್ರ್ಯಾಂಡ್‌ನ ಹೆಚ್ಚು ಮಾರಾಟವಾದ ಮಾದರಿಯಾದ ಕ್ಲಾಸಿಕ್ 350 ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

ಮಿಲನ್‌ನಲ್ಲಿ ನಡೆಯುವ EICMA 2024 ಪ್ರದರ್ಶನದಲ್ಲಿ ಹೆಚ್ಚಿನ ಮಾದರಿಗಳು ಕಾಣಿಸಿಕೊಳ್ಳಲಿವೆ ಎಂದು ವರದಿಯಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಕೊನೆಗೂ 2024ರ EICMA ಮುಂಚಿತವಾಗಿ ತನ್ನ ಹೊಸ ಬೇರ್ 650 (Bear 650) ಬೈಕ್ ಅನ್ನು ಅನಾವರಣಗೊಳಿಸಲಾಗಿದೆ. ಇಂಟರ್‌ಸೆಪ್ಟರ್ 650 , ಕಾಂಟಿನೆಂಟಲ್ GT 650 , ಸೂಪರ್ Meteor 60 ನಂತರ 650 ಟ್ವಿನ್ ಪ್ಲಾಟ್‌ಫಾರ್ಮ್ ಆಧಾರಿಸಿರುವ ಹೊಸ ಬೇರ್ ಮಾದರಿಯು ಐದನೇ 650 cc ಬೈಕ್ ಆಗಿದೆ.

Royal Enfield

ಈ ರಾಯಲ್ ಎನ್‌ಫೀಲ್ಡ್ ಬೇರ್ 650 ಬೈಕಿನಲ್ಲಿ 648 cc ಏರ್/ಆಯಿಲ್-ಕೂಲ್ಡ್ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7240 rpm ನಲ್ಲಿ ಅದೇ 47 bhp ಪವರ್ ಮತ್ತು ಟಾರ್ಕ್ 5,150 rpm ನಲ್ಲಿ 56.5 Nm (4.2 Nm ಹೆಚ್ಚು) ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಈ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್ ಫ್ಯೂಯಲ್ ಟ್ಯಾಂಕ್ ಇಂಟರ್ಸೆಪ್ಟರ್ 650 ನಂತೆಯೇ ಇದೆ ಆದರೆ ಆಕರ್ಷಕವಾದ ಮೋಜಿನ ಬಣ್ಣಗಳ ಆಯ್ಕೆಗಳಿವೆ. ಈ ಬೇರ್ 650 ಬೈಕ್ ಎಲ್‌ಇಡಿ ಲೈಟಿಂಗ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಈ ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ರಾಯಲ್ ಎನ್‌ಫೀಲ್ಡ್ ಬೈಕ್ ಹೆಚ್ಚಿನ ಸಸ್ಪೆಕ್ಷನ್ ಚಲನೆಗಾಗಿ ಸ್ವಿಂಗರ್ಮ್ ಉದ್ದವಾಗಿದೆ. ಇದರ ಪರಿಣಾಮವಾಗಿ ಸುಮಾರು 61 ಮಿಮೀ ಉದ್ದದ ವೀಲ್‌ಬೇಸ್ ಇರುತ್ತದೆ.

ಈ ಬೇರ್ 650 ಬೈಕ್ ಗ್ರೌಂಡ್ ಕ್ಲಿಯರೆನ್ಸ್ 184 ಎಂಎಂ, ಇಂಟರ್‌ಸೆಪ್ಟರ್‌ಗಿಂತ 10 ಎಂಎಂ ಹೆಚ್ಚು ಆಗಿದೆ. ಈ ಸ್ಕ್ರ್ಯಾಂಬ್ಲರ್-ಸ್ಟೈಲಿಂಗ್ ಬೈಕಿನ ಹಿಂಭಾಗದಲ್ಲಿ ಸ್ವಲ್ಪ ಸ್ಕೂಪ್-ಅಪ್ ಸೀಟ್, ಎರಡು-ಇನ್-ಒನ್ ಎಕ್ಸಾಸ್ಟ್, ಸೈಡ್ ಪ್ಯಾನೆಲ್‌ನಲ್ಲಿ ನಂಬರ್ ಬೋರ್ಡ್‌ಗಳು, ಅಗಲವಾದ ಒನ್-ಪೀಸ್ ಹ್ಯಾಂಡಲ್‌ಬಾರ್ ಮತ್ತು ಸುತ್ತಿನ ಟೈಲ್ ಲ್ಯಾಂಪ್ ಅನ್ನು ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, November 2, 2024, 13:30 [IST]
English summary
Royal enfield sales in october 2024 details
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+