ಹೊರಬರಲಿದೆ ರಾಯಲ್‌ ಎನ್‌ಫೀಲ್ಡ್‌ ಟ್ರಂಪ್‌ಕಾರ್ಡ್‌: ಇನ್ನು ಟ್ರಯಂಫ್‌ಗೆ ನೇರಾನೇರ ಪೈಪೋಟಿ ಶುರು

ಪ್ರಸಿದ್ದ ಬೈಕ್‌ ನಿರ್ಮಾಣ ಕಂಪನಿ ರಾಯಲ್‌ ಎನ್‌ಫೀಲ್ಡ್ ಗ್ರಾಹಕರಿಗೆ ಆಗಾಗ ಹೊಸ ಸುದ್ದಿಯನ್ನು ನೀಡುತ್ತಲೇ ಇರುತ್ತದೆ. ಈ ವರ್ಷ ಈಗಾಗಲೇ ಹಿಮಾಲಯನ್‌ ೪೫೦ ರಿಲೀಸ್ ಮಾಡುವುದರ ಮೂಲಕ ಹೊಸ ವರ್ಷಕ್ಕೆ ಭರ್ಜರಿ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ. ಇದೀಗ ರಾಯಲ್‌ ಎನ್‌ಫೀಲ್ಡ್‌ ಗ್ಗೆ ಇನ್ನೊಂದು ಹೊಸ ಸುದ್ದಿ ಹರಿದಾಡುತ್ತಿದೆ.

ಮಾಹಿತಿಗಳ ಪ್ರಕಾರ ರಾಯಲ್‌ ಎನ್‌ಫೀಲ್ಡ್ ಹೊಸ ಬೈಕ್‌ ಒಂದನ್ನು ಅಭಿವೃದ್ದಿ ಪಡಿಸುತ್ತಿದೆ. ಈ ಹಿಂದೆ ಇದ್ದತಂಹ ಹಿಮಾಲಯನ್‌ 411 ಅನ್ನು ನಿಲ್ಲಿಸಿ ಹೊಸ ಹಿಮಾಲಯನ್‌ ಅನ್ನು ರಾಯಲ್‌ ಎನ್‌ಫೀಲ್ಡ್ ಮಾರುಕಟ್ಟೆಗೆ ಲಾಂಚ್ ಮಾಡಿತ್ತು. ಇದೀಗ ಮತ್ತೆ ರಾಯಲ್‌ ಎನ್‌ಫೀಲ್ಡ್‌ ಇದೇ ದಾರಿಯಲ್ಇ ಸಾಗುತ್ತಿದ್ದು, ಮೂಲಗಳ ಪ್ರಕಾರ ಇದು ಹೊಸ ಸ್ಕ್ರಾಮ್‌ 450 ಸಿಸಿಯನ್ನು ಅಭಿವೃದ್ದಿ ಪಡಿಸುತ್ತಿದೆ ಎಂದು ತಿಳಿದು ಬಂದಿದೆ.

Royal Enfield Scram 450 Will Be Hitting Indian Market Very Soon

ಹೌದು, ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್‌ ಎನ್‌ಫೀಲ್ಡ್‌ ಸ್ಕ್ರಾಮ್‌ 411 ಲಭ್ಯವಿದ್ದು, ಕೊಂಚ ಸಮಯದರಲ್ಲೇ ಈ ಬೈಕ್‌ನ ಉತ್ಪಾದನೆ ನಿಲ್ಲಲ್ಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸದ್ಯಕ್ಕೆ ಅಭಿವೃದ್ದಿ ಪಡಿಸುತ್ತಿರುವ ಹೊಸ ರಾಯಲ್‌ ಎನ್‌ಫೀಲ್ಡ್‌ ಸ್ಕ್ರಾಮ್‌ ೪೫೦ ಬಿಡುಗಡೆಯಾದ ನಂತರ ಹಳೆಯ ಸ್ಕ್ರಾಮ್‌ 411 ಗ್ರಾಹಕರಿಗೆ ಲಭ್ಯವಾಗಲಾರದು. ಹೀಗೆನ್ನಲು ಪ್ರಮುಖ ಕಾರಣವೇನೆಂದರೆ ಈ ಹಿಂದೆ ಹಿಮಾಲಯನ್‌ಗೂ ಸಹ ಇದೇ ಕ್ರಮವನ್ನು ಕೈಗೊಳ್ಳಲಾಗಿತ್ತು.

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಜನಪ್ರಿಯ ಹಿಮಾಲಯನ್ ಅಡ್ವೆಂಚರ್ ಟೂರರ್ ಆಧಾರಿತ ಬೈಕ್ ಆಗಿದೆ. ಹಿಮಾಲಯದಿಂದ ತನ್ನನ್ನು ಪ್ರತ್ಯೇಕಿಸಲು ದೃಶ್ಯ ಬದಲಾವಣೆಗಳನ್ನು ಪಡೆಯುತ್ತದೆ. ಈ ಹೊಸ ಬೈಕಿನಲ್ಲಿ ವೃತ್ತಾಕಾರದ ಹೆಡ್‌ಲ್ಯಾಂಪ್, ಡರ್ಟ್‌ಬೈಕ್-ಶೈಲಿಯ ಮಡ್‌ಗಾರ್ಡ್‌ಗಳು, ಸಿಂಗಲ್ ಪೀಸ್ ಸೀಟ್, ದೊಡ್ಡ ಇಂಧನ ಟ್ಯಾಂಕ್ ಮತ್ತು ಡ್ಯುಯಲ್-ಪರ್ಪಸ್ ಟೈರ್‌ಗಳು ಹೊಂದಿದೆ, ಇವುಗಳು ಸರಿಯಾದ ಸ್ಕ್ರಾಂಬ್ಲರ್‌ನ ವಿನ್ಯಾಸದ ಲಕ್ಷಣಗಳಾಗಿವೆ.

Royal Enfield Scram 450 Will Be Hitting Indian Market Very Soon

ಈ ಬೈಕ್‌ನ ಎಂಜಿನ್‌ ಬಗ್ಗೆ ನೋಡುವುದಾದರೆ,ಸದ್ಯಕ್ಕೆ ಇದು ಏರ್-ಕೂಲ್ಡ್, 411 ಸಿಸಿ, SOHC ಯುನಿಟ್ ಆಗಿದೆ. ರಾಯಲ್ ಎನ್‌ಫೀಲ್ಡ್ ಮೋಟಾರ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಮತ್ತು ಇದು 6,500 ಆರ್‌ಪಿಎಂನಲ್ಲಿ 24.3 ಬಿಹೆಚ್‍ಪಿ ಪವರ್ ಮತ್ತು 4,500 ಆರ್‌ಪಿಎಂನಲ್ಲಿ 32 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಸ್ಲಿಕ್-ಶಿಫ್ಟಿಂಗ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಈ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಡ್ಯೂಪ್ಲೆಕ್ಸ್ ಸ್ಪ್ಲಿಟ್ ಕ್ರೇಡಲ್ ಫ್ರೇಮ್ ನೊಂದಿಗೆ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಹೊಂದಿದ್ದು, ಇದು 190 ಎಂಎಂ ಟ್ರ್ವಾವೆಲ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅನ್ನು ಹೊಂದಿದೆ.

Royal Enfield Scram 450 Will Be Hitting Indian Market Very Soon

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬೈಕ್ ಗ್ರ್ಯಾಫೈಟ್ ರೆಡ್, ಗ್ರ್ಯಾಫೈಟ್ ಬ್ಲೂ, ಗ್ರ್ಯಾಫೈಟ್ ಯೆಲ್ಲೋ, ವೈಟ್ ಫ್ಲಾಮ್, ಸಿಲ್ವರ್ ಸ್ಪಿರಿಟ್, ಬ್ಲೇಜಿಂಗ್ ಬ್ಲ್ಯಾಕ್ ಮತ್ತು ಸ್ಕೈಲೈನ್ ಬ್ಲೂ ಎಂಬ ಏಳು ಬಣ್ಣಗಳ ಆಯ್ಕೆಗಳನ್ನು ಹೊಂದಿತ್ತು. ಈ ಬೈಕ್ ರಾಯಲ್ ಎನ್‌ಫೀಲ್ಡ್ 2,16 ಎಂ ಉದ್ದ, 840 ಎಂಎಂ ಅಗಲ ಮತ್ತು 1,165 ಎಂಎಂ ಎತ್ತರವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 29, 2024, 13:55 [IST]
English summary
Royal enfield scram 450 will be hitting indian market very soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+