ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ... ಅಗ್ಗದ ಬೆಲೆ, ಖರ್ಚಿಲ್ಲದೆ ದಿನಕ್ಕೆ 250 ಕಿ.ಮೀ ಓಡಿಸಬಹುದು!
ದೇಶದಲ್ಲಿ ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಇದರ ಲಾಭವನ್ನು ಪಡೆದುಕೊಳ್ಳಲು ಇವಿ ತಯಾರಕ ಕಂಪನಿಗಳು ಹೆಚ್ಚಾಗುತ್ತಿವೆ. ಇದೀಗ ತಮಿಳುನಾಡು ಮೂಲದ ಶ್ರೀವಾರು ಮೋಟಾರ್ಸ್ ಗುರುವಾರ ತನ್ನ ಎರಡು ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಾಣಾ 2.0 ನ ನವೀಕರಿಸಿದ ಆವೃತ್ತಿ ಹಾಗೂ ಪ್ರಾಣಾ ಎಲೈಟ್ ಎಂಬ ಮೋಟಾರ್ ಸೈಕಲ್‌ಗಳು ಲಾಂಚ್ ಆಗಿವೆ. ಈ ಎರಡೂ ಮೋಟಾರ್‌ಸೈಕಲ್‌ಗಳ ಬೆಲೆ, ವೈಶಿಷ್ಟ್ಯಗಳು ಸೇರಿದಂತೆ ಕಂಪನಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯೋಣ.
"ಎರಡು ವರ್ಷಗಳ ಕಾಲ ನಮ್ಮ ಉತ್ಪನ್ನಗಳ ಸರಣಿ ಪರೀಕ್ಷೆಗಳನ್ನು ನಡೆಸಿದ ನಂತರ ನಾವು ಇಂದು ಬಿಡುಗಡೆ ಮಾಡಿದ್ದೇವೆ. ಪ್ರಾಣಾ 2.0 ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಉತ್ತಮ ನಿರ್ಮಾಣ ಗುಣಮಟ್ಟವನ್ನು ಹೊಂದಿದೆ. ಸುಲೂರಿನ (ಕೊಯಮತ್ತೂರು ಬಳಿ) ನಮ್ಮ ಉತ್ಪಾದನಾ ಸೌಲಭ್ಯದಲ್ಲಿ ವಾಹನಗಳನ್ನು ಉತ್ಪಾದಿಸುತ್ತಿದ್ದೇವೆ, ಇಲ್ಲಿ ತಿಂಗಳಿಗೆ ಸುಮಾರು 2,000 ಬೈಕ್‌ಗಳನ್ನು ಉತ್ಪಾದಿಸಲಾಗುತ್ತದೆ" ಎಂದು ಕಂಪನಿ ತಿಳಿಸಿದೆ.

ಕೊಯಮತ್ತೂರು ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಯು ಒಟ್ಟಾರೆ ಸುಮಾರು 10,000 ಬೈಕ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಪ್ರಾಣಾ 2.0 ಎಲೆಕ್ಟ್ರಿಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2,55,150 (ಎಕ್ಸ್ ಶೋರೂಂ ಚೆನ್ನೈ) ಗಳಾಗಿದೆ. ಪ್ರಾಣಾ ಎಲೈಟ್ ಬೆಲೆಯು 3,20,250 ರೂ.(ಎಕ್ಸ್ ಶೋರೂಂ ಚೆನ್ನೈ) ಗಳಾಗಿದೆ.
ಪ್ರಾಣಾ 2.0 ಎಲೆಕ್ಟ್ರಿಕ್ ಬೈಕ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ವರೆಗೆ ಪ್ರಯಾಣಿಸಬಹುದು. ಹಾಗೆಯೇ ಪ್ರಾಣಾ ಎಲೈಟ್ ಬೈಕ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿ.ಮೀ ವರೆಗೆ ರೇಂಜ್ ನೀಡುತ್ತದೆ. ದೇಶದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯಲ್ಲಿ ತಮಿಳುನಾಡು ಶೇ.40ರಷ್ಟು ಪಾಲು ಹೊಂದಿರುವುದರಿಂದ ಸ್ಥಳಿಯವಾಗಿ ಉತ್ತಮ ಬೇಡಿಕೆ ಪಡೆಯಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಭಾರತದಲ್ಲಿ ಸುಮಾರು 10,000 ಬೈಕ್‌ಗಳನ್ನು ಮಾರಾಟ ಮಾಡಿದ ಬಳಿಕ ನಮ್ಮ ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳನ್ನು ಆಸಿಯಾನ್ ದೇಶಗಳಲ್ಲಿ ಸಹ ಮಾರಾಟ ಮಾಡುತ್ತೇವೆ. ಮಲೇಷ್ಯಾ ಮತ್ತು ಸಿಂಗಾಪುರದಿಂದ ಮಾರಾಟವನ್ನು ಪ್ರಾರಂಭಿಸುತ್ತೇವೆ, ಈ ಪ್ರದೇಶಗಳಲ್ಲಿ ನಾವು ಹೆಚ್ಚಿನ ಮೂಲಸೌಕರ್ಯವನ್ನು ಹೊಂದಿದ್ದೇವೆ" ಎಂದು ಕಂಪನಿ ತಿಳಿಸಿದೆ.
ಆರಂಭಿಕವಾಗಿ ಕಂಪನಿಯು "100 ಕ್ಕಿಂತ ಕಡಿಮೆ" ಶಾಖೆಗಳನ್ನು ಹೊಂದಲು ಉದ್ದೇಶಿಸಿದೆ. ಕಂಪನಿಯ ಒಡೆತನದ ಚಿಲ್ಲರೆ ಮಳಿಗೆಗಳು ಮತ್ತು ಫ್ರ್ಯಾಂಚೈಸ್ ಮಾದರಿಗಳನ್ನು ಒಳಗೊಂಡಿರುತ್ತದೆ. "ಇದು ಒಂದು ಅಥವಾ ಎರಡು ವರ್ಷಗಳಲ್ಲಿ ಸಂಭವಿಸಬಹುದು. ಆರಂಭದಲ್ಲಿ, ನಾವು ಮೆಟ್ರೋ ನಗರಗಳಲ್ಲಿ ಗಮನ ಹರಿಸುತ್ತಿದ್ದೇವೆ ಎಂದು ಹೇಳಿಕೊಂಡಿದೆ.

2023 ರಲ್ಲಿ, ಭಾರತದ ಮೋಟಾರ್‌ಸೈಕಲ್ ಮಾರುಕಟ್ಟೆ 25.6 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಆದಾಯವನ್ನು ಸಾಧಿಸಿದೆ. 2027ರ ವೇಳೆಗೆ ಬೆಳವಣಿಗೆಯನ್ನು 36.1 ಬಿಲಿಯನ್ ಡಾಲರ್‌ಗೆ ಅಂದಾಜಿಸಲಾಗಿದೆ. 2030ರ ವೇಳೆಗೆ, ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ಮಾರುಕಟ್ಟೆ ಪಾಲಿನಲ್ಲಿ ಶೇ50 ರಷ್ಟು ಪಾಲನ್ನು ಹೊಂದಿರುತ್ತವೆ ಎಂದು ನಿರೀಕ್ಷಿಸಿರುವುದಾಗಿ ಕಂಪನಿ ಭರವಸೆ ವ್ಯಕ್ತಪಡಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications