ಬಡವರು ಖರೀದಿಸಬಹುದು.. ಸುಜುಕಿ ಆಕ್ಸೆಸ್ 125 ಸ್ಕೂಟರ್‌ನ ಆನ್ ರೋಡ್ ಬೆಲೆ ಎಷ್ಟು, EMI ಏನು?
ಪ್ರತಿಯೊಬ್ಬರಿಗೂ ಜೀವನದಲ್ಲಿ ಹೊಸ ದ್ವಿಚಕ್ರ ವಾಹನ (New Two Wheeler) ಖರೀದಿಸಬೇಕೆಂಬ ಆಸೆಯಿರುತ್ತದೆ. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಸಾಧ್ಯವಾಗುವುದಿಲ್ಲ. ಅಂತಹವರಿಗಾಗಿ ಸುಜುಕಿ ಆಕ್ಸೆಸ್ 125 (Suzuki Access 125) ಸ್ಕೂಟರ್ ತುಂಬಾ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದ್ದು, ಕೆಲವೇ ಸಾವಿರ ಹಣವಿದ್ದರೂ ಮನೆಗೆ ತರಬಹುದು. ಇಲ್ಲಿ ನೂತನ ಸ್ಕೂಟರ್‌ನ ಆನ್ ರೋಡ್ ಬೆಲೆ (On Road Price) ಹಾಗೂ ಇಎಂಐ (EMI) ಆಯ್ಕೆಯ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.
ಹೊಸ ಸುಜುಕಿ ಆಕ್ಸೆಸ್ 125 ವಿವಿಧ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಬೆಂಗಳೂರಿನಲ್ಲಿ ಇದರ 'ರೈಡ್ ಕನೆಕ್ಟ್ ಎಡಿಷನ್ - ಡಿಸ್ಕ್' ಮಾದರಿಯು ರೂ.1,16,923 ಆನ್ ರೋಡ್ ಬೆಲೆಯನ್ನು ಹೊಂದಿದೆ. ನೀವು ರೂ.10,000 ಡೌನ್‌ಪೇಮೆಂಟ್ ಪಾವತಿಸಿ ಈ ಸ್ಕೂಟರ್‌ನ್ನು ಕೊಂಡುಕೊಂಡರೆ, ಶೇಕಡ 9.7% ಬಡ್ಡಿ ದರದಲ್ಲಿ ರೂ.1,06,923 ಸಾಲದ ಮೊತ್ತಕ್ಕೆ ಮೂರು ವರ್ಷದ ಅವಧಿಗೆ (36 ತಿಂಗಳು) ಮಾಸಿಕ ರೂ.3,435 ಇಎಂಐ ಕಟ್ಟಬೇಕು.

ಸುಜುಕಿ ಆಕ್ಸೆಸ್ 125 'ಸ್ಪೆಷಲ್ ಎಡಿಷನ್ - ಡಿಸ್ಕ್' ಆವೃತ್ತಿಯು ರೂ.1,12,574 ಆನ್ ರೋಡ್ ದರವನ್ನು ಪಡೆದಿದೆ. ರೂ.10,000 ಡೌನ್‌ಪೇಮೆಂಟ್ (Down Payment) ಕಟ್ಟಿ ಈ ಸ್ಕೂಟರ್‌ನ್ನು ಮನೆಗೆ ತಂದರೆ, ರೂ.1,02,574 ಸಾಲದ ಮೊತ್ತಕ್ಕೆ ಶೇಕಡ 9.7% ಬಡ್ಡಿಯನ್ನು ಹಾಕಿ 3 ವರ್ಷಗಳಿಗೆ ತಿಂಗಳಿಗೆ ರೂ.3,295 ಇಎಂಐ ಪಾವತಿಸಬೇಕು.
ಆಕ್ಸೆಸ್ 125 'ಡಿಸ್ಕ್' ಮಾದರಿಯು ರೂ.1,10,531 ಆನ್ ರೋಡ್ (On Road) ಬೆಲೆಯನ್ನು ಹೊಂದಿದೆ. ರೂ.10,000 ಡೌನ್‌ಪೇಮೆಂಟ್ ಪಾವತಿಸಿ ಈ ಸ್ಕೂಟರ್‌ನ್ನು ಖರೀದಿಸಿದರೆ, ಉಳಿದ ರೂ.1,00,531 ಸಾಲದ ಹಣಕ್ಕೆ ಶೇಕಡ 9.7% ಬಡ್ಡಿ ದರದಲ್ಲಿ ಮೂರು ವರ್ಷದ ಅವಧಿಗೆ ಮಾಸಿಕ ರೂ.3,230 ಇಎಂಐ ಕಟ್ಟಬೇಕು.

ನೂತನ ಸುಜುಕಿ ಆಕ್ಸೆಸ್ 125 (Suzuki Access 125) 'ಡ್ರಮ್' ರೂಪಾಂತರವು ರೂ.1,02,689 ಆನ್ ರೋಡ್ ದರವನ್ನು ಒಳಗೊಂಡಿದೆ. ರೂ.10,000 ಡೌನ್‌ಪೇಮೆಂಟ್ ಕಟ್ಟಿ ಈ ಸ್ಕೂಟರ್‌ನ್ನು ಕೊಂಡುಕೊಂಡರೆ, ಶೇಕಡ 9.7% ಬಡ್ಡಿಯನ್ನು ಸೇರಿಸಿ ರೂ.92,689 ಸಾಲದ ಮೊತ್ತಕ್ಕೆ 3 ವರ್ಷಗಳಿಗೆ ತಿಂಗಳಿಗೆ ರೂ.2,978 ಇಎಂಐ ಪಾವತಿಸಬೇಕು.
ಹೊಚ್ಚ ಹೊಸ ಸುಜುಕಿ ಆಕ್ಸೆಸ್ 125 ಸ್ಕೂಟರ್, 124 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.7 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 10 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 45 ಕೆಎಂಪಿಎಲ್ ವರೆಗೆ ಮೈಲೇಜ್ ಕೊಡುತ್ತದೆ. ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ಆಕ್ಸೆಸ್ 125 ಮಾದರಿಯು ಎಲ್ಇಡಿ ಹೆಡ್ ಲೈಟ್, ಸೆಮಿ ಡಿಜಿಟಲ್ ಇನ್ಫಾರ್ಮಶನ್ ಪ್ಯಾನೆಲ್, ಸುಜುಕಿ ರೈಡ್ ಕನೆಕ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಫ್ರಂಟ್ (ಮುಂಭಾಗ) ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಸೆಟಪ್ ಹೊಂದಿದ್ದು, ಬರೋಬ್ಬರಿ 103 ಕೆಜಿ ತೂಕವಿದೆ. ಈ ಸ್ಕೂಟರ್‌ಗೆ ಹೋಂಡಾ ಆಕ್ಟಿವಾ 125, ಟಿವಿಎಸ್ ಜುಪಿಟರ್ 125 ಮಾದರಿಗಳು ದೊಡ್ಡ ಎದುರಾಳಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








