ಧೂಮ್ ಚಿತ್ರದ ಮೂಲಕ ಯುವಕರ ಹೃದಯ ಕದ್ದ ಹಯಾಬುಸಾ ಬೈಕ್ ಹಿಂಪಡೆದ ಸುಜುಕಿ: ಯಾಕೆ ಗೊತ್ತಾ?

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸೂಪರ್‌ಬೈಕ್‌ಗಳ ವಿಭಾಗದಲ್ಲಿ ಸುಜುಕಿ ಹಯಾಬುಸಾ ಸಂಚಲವನ್ನು ಮೂಡಿಸಿದ ಸೂಪರ್‌ಬೈಕ್‌ ಆಗಿದೆ. ಆದರೆ ಈ ಹಯಾಬುಸಾ ಸೂಪರ್‌ಬೈಕ್ ಆರಂಭಿಕ ಹಂತದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ. ನಂತರ ಭಾರತೀಯ ಮಾರುಕಟ್ಟೆಗು ಲಗ್ಗೆಯಿಟ್ಟಿತು. ಈ ಐಕಾನಿಕ್ ಸುಜುಕಿ ಹಯಾಬುಸಾ ಬೈಕ್ ಇಂದಿಗೂ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಧೂಮ್ ಎಂಬ ಸೂಪರ್ ಹಿಟ್ ಚಿತ್ರದಲ್ಲಿ ಜಾನ್ ಅಬ್ರಹಾಂ ಈ ಹಯಾಬುಸಾ ಬೈಕನ್ನು ಚಲಾಯಿಸುತ್ತಾರೆ. ಅಲ್ಲಿಂದ ಈ ಬೈಕ್ ಭಾರತದಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿತ್ತು. ಇದೀಗ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾವು ಭಾರತೀಯ ಮಾರುಕಟ್ಟೆಯಲ್ಲಿ ಮೂರನೇ ತಲೆಮಾರಿನ ಹಯಬುಸಾ ಬೈಕನ್ನು ಮಾರಾಟ ಮಾಡುತ್ತಿದೆ.

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಈ ಮೂರನೇ ತಲೆಮಾರಿನ ಹಯಬುಸಾವನ್ನು ರಿಕಾಲ್ ಮಾಡುವುದಾಗಿ ಘೋಷಿಸಿದೆ. ಬ್ರೇಕ್ ಲಿವರ್‌ನ ಸಮಸ್ಯೆಗೆ ಸಂಬಂಧಿತವಾಗಿ 2021ರ ಮಾರ್ಚ್ ತಿಂಗಳಿನಿಂದ 2024ರ ಸೆಪ್ಟೆಂಬರ್ ತಿಂಗಳ ನಡುವೆ ತಯಾರಿಸಲಾದ 1056 ಬೈಕುಗಳನ್ನು ಹಿಂಪಡೆಯುತ್ತಿವೆ. ಸಮಸ್ಯೆಯನ್ನು ಹೇಗೆ ಪರಿಹರಿಸಲು ಯೋಜಿಸಿದೆ ಎಂಬುದರ ಕುರಿತು ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

Suzuki Hayabusa

2021ರಲ್ಲಿ ಬಿಡುಗಡೆಯಾದ ಸುಜುಕಿ ಹಯಾಬುಸಾವನ್ನು ಭಾರತದಲ್ಲಿ CKD (ಸಂಪೂರ್ಣವಾಗಿ ನಾಕ್ ಡೌನ್) ಕಿಟ್‌ಗಳಿಂದ ಜೋಡಿಸಲಾಗಿದೆ. ಈ ಸುಜುಕಿ ಹಯಾಬುಸಾ (Suzuki Hayabusa) ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.16.90 ಲಕ್ಷವಾಗಿದೆ. ಸುಜುಕಿ ಕಂಪನಿಯ ಪ್ರಕಟಣೆಯ ಪ್ರಕಾರ, ಹಯಬುಸಾದ ಮುಂಭಾಗದ ಬ್ರೇಕ್ ಲಿವರ್ ಪ್ಲೇ ಹೆಚ್ಚಾಗುತ್ತದೆ ಮತ್ತು ಲಿವರ್ ಥ್ರೊಟಲ್ ಹಿಡಿತ ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.

ಇದು ಬ್ರೇಕಿಂಗ್ ಪವರ್ ಕಡಿಮೆಯಾಗಲು ಕಾರಣವಾಗುತ್ತದೆ ಮತ್ತು ತರುವಾಯ ಬ್ರೇಕಿಂಗ್ ದೂರವನ್ನು ಹೆಚ್ಚಿಸುತ್ತದೆ, ಇದು ಹೆಚ್ಚಿನ ಕಾರ್ಯಕ್ಷಮತೆಯ ಮೋಟಾರ್‌ಸೈಕಲ್‌ನಲ್ಲಿ ವಿಶೇಷವಾಗಿ ಅಪಾಯಕಾರಿಯಾಗಿದೆ. ಹಯಬುಸಾ ಬ್ರೆಂಬೋ ಸ್ಟೈಲ್ಮಾ 4-ಪಿಸ್ಟನ್ ಕ್ಯಾಲಿಪರ್ ಗ್ರಿಪ್ಪಿಂಗ್ ಟ್ವಿನ್ ಡಿಸ್ಕ್‌ಗಳನ್ನು ಮುಂಭಾಗದಲ್ಲಿ ಮತ್ತು ನಿಸ್ಸಿನ್, 1-ಪಿಸ್ಟನ್ ಕ್ಯಾಲಿಪರ್ ಜೊತೆಗೆ ಒಂದೇ ಡಿಸ್ಕ್ ಅನ್ನು ಹೊಂದಿದೆ.

Suzuki Hayabusa

ಸುಜುಕಿ ಹಯಾಬುಸಾ ಬೈಕಿನ ಸಾಂಪ್ರದಾಯಿಕ ಶೈಲಿಯನ್ನು ಉಳಿಸಿಕೊಂಡಿದೆ. ಒಟ್ಟಾರೆ ಸಿಲೂಯೆಟ್ ಅನ್ನು ಒಂದೇ ರೀತಿ ಇರಿಸಲಾಗಿದ್ದರೂ, ಸೂಪರ್ ಬೈಕ್ ಹೆಚ್ಚು ಅಗ್ರೇಸಿವ್ ವಿನ್ಯಾಸದೊಂದಿಗೆ ಅಗ್ರೇಸಿವ್ ಲೈನ್ ಗಳು ಮತ್ತು ಹೊಸ ಫಾಸಿಕದೊಂದಿಗೆ ಆಕರ್ಷಕವಾಗಿದೆ. ಈ ಸೂಪರ್ ಬೈಕ್ ಎಲ್ಇಡಿ ಲೈಟ್ ಗಳನ್ನು ಹೊಂದಿವೆ. ಇದು ಹೆಡ್ ಲ್ಯಾಂಪ್ ಮತ್ತು ಟೈಲ್ ಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿ ಇಂಡಿಕೇಟರ್ ಸ್ಥಾನ ಲೈಟ್ ಗಳೊಂದಿಗೆ ಸಂಯೋಜಿಸಲಾಗಿದೆ.

ಈ ಸೂಪರ್ ಬೈಕ್ ಮುಂಭಾಗದ ಏರ್ ಟೆಕ್ ಹೊರಭಾಗದಲ್ಲಿ ಇರಿಸಲಾಗಿದ್ದು, ದೊಡ್ಡ ಡ್ಯುಯಲ್ ಕ್ರೋಮ್-ಲೇಪಿತ ಎಕ್ಸಾಸ್ಟ್ ಪೈಪ್ಸ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಅನ್ನು ಹೊಂದಿದ್ದು, ಇದರಲ್ಲಿ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಹೊಸ ಟಿಎಫ್‌ಟಿ ಡಿಸ್ ಪ್ಲೇಯನ್ನು ಕೂಡ ನೀಡಲಾಗಿದೆ. ಇದು ಹೊಸ ಸ್ವಿಚ್‌ಗಿಯರ್ ಜೊತೆಗೆ ರೈಡರಿಗೆ ವಿವಿಧ ರೈಡರ್ ಅಸಿಸ್ಟ್ ಆಯ್ಕೆಗಳ ನಡುವೆ ನ್ಯಾವಿಗೇಟ್ ಅನ್ನು ಹೊಂದಿದೆ.

Suzuki Hayabusa

ಈ ಸುಜುಕಿ ಹಯಾಬುಸಾದಲ್ಲಿ ಕೆಲವು ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಏಡ್ಸ್, ಮೂರು ಪವರ್ ಮೋಡ್‌ಗಳು, ಲಾಂಚ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಕೂಡ ಹೊಂದಿವೆ. ಇದರೊಂದಿಗೆ ಕಾರ್ನರಿಂಗ್ ಎಬಿಎಸ್, ಹಿಲ್-ಹೋಲ್ಡ್ ಕಂಟ್ರೋಲ್, ಆಕ್ಟಿವ್ ಸ್ಪೀಡ್ ಲಿಮಿಟರ್, ಲೋ ಆರ್ಪಿಎಂ ಅಸಿಸ್ಟ್, ಕಂಬೈನ್ಡ್ ಬ್ರೇಕ್ ಸಿಸ್ಟಂ, ಹೊಸ ಸಿಕ್ಸ್-ಆಕ್ಸಿಸ್ ಐಎಂಯು ಮತ್ತು ಸ್ವಿಚ್ ಮಾಡಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ನಂತ ವಿವಿಧ ಫೀಚರ್ಸ್ ಗಳನ್ನು ಒಳಗೊಂಡಿದೆ.

ಹಯಾಬುಸಾ ಸೂಫರ್ ಬೈಕಿನಲ್ಲಿ 1340 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 187.7 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಮತ್ತು ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್‌ನೊಂದಿಗೆ ಜೋಡಿಸಲಾಗಿದೆ.

More from DriveSpark

Article Published On: Tuesday, October 29, 2024, 13:45 [IST]
English summary
Suzuki hayabusa recalled over brake issue details
Read more on suzuki motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+