ಸಿಂಗಲ್ ಚಾರ್ಜ್‌ನಲ್ಲಿ ಬೆಂಗಳೂರಿಂದ ಮೈಸೂರಿಗೆ ಹೋಗಿ ಬರಬಹುದು: ಈ ಹೊಸ ಬೈಕ್‌ನ ಪ್ರಮುಖ ವಿಷಯಗಳು
ಬೆಂಗಳೂರು ಮೂಲದ ಎಲೆಕ್ಟ್ರಿಕ್ ಬೈಕ್ ನಿರ್ಮಾಣ ಕಂಪನಿ ಅಲ್ಟ್ರಾವೈಲೆಟ್ ಇತ್ತೀಚೆಗಷ್ಟೇ ಹೊಸ ಅಲ್ಟ್ರಾವೈಲೆಟ್ F77 ಮ್ಯಾಕ್ 2 ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. F77 ಬೈಕ್‌ಗಿಂತಲೂ ಸಾಕಷ್ಟು ಅಪ್‌ಡೇಟ್ ಮತ್ತು ಹಲವು ಬಣ್ಣಗಳ ಆಯ್ಕೆಯೊಂದಿಗೆ ಬಂದಿರುವ ಈ ಬೈಕ್, ಹಾರ್ಡ್‌ಕೋರ್ ಎಲೆಕ್ಟ್ರಿಕ್ ಬೈಕ್ ಅಭಿಮಾನಿಗಳಿಗೆ ನೆಚ್ಚಿನ ಬೈಕ್ ಆಗಿ ಮಾರ್ಪಾಡಾಗಲಿದೆ. ಹೊಸ ಅಲ್ಟ್ರಾವೈಲೆಟ್ F77 ಮ್ಯಾಕ್ 2 ಸಹ ಹೊಸ ಅಪ್‌ಡೇಟ್‌ಗಳೊಂದಿಗೆ ಬಂದಿದ್ದರೂ ಅದು ಮೊದಲ ಬೈಕ್ ರೀತಿಯಲ್ಲೇ ಪವರ್ ಮತ್ತು ಟಾರ್ಕ್ ಹಾಗೂ ವಿನ್ಯಾಸ ಶೈಲಿಗಳನ್ನು ಉಳಿಸಿಕೊಂಡಿದೆಯೇ ಎಂಬುದು ಎಲ್ಲರ ಕುತೂಹಲ.
ವಿನ್ಯಾಸ: ಈ ಬೈಕ್‌ನ ನೋಟದ ವಿಚಾರದಲ್ಲಿ ನೋಡುವುದಾದರೆ, ತನ್ನ ಫ್ಯೂಚರಿಸ್ಟಿಕ್ ಲುಕ್ ಅನ್ನು ಮುಂದುವರೆಸುತ್ತಿದೆ. ನಿಮಗೆಲ್ಲಾ ತಿಳಿದಿರಿವಂತೆ ಅಲ್ಟ್ರಾವೈಲೆಟ್ ತನ್ನ ಮೊದಲ ಮಾದರಿಯಾದ ಎಫ್‌೭೭ ಬೈಕ್‌ಗೆ ಕೇವಲ ಮೂರು ಬಣ್ಣದ ಆಯ್ಕೆಗಳನ್ನಷ್ಟೇ ನೀಡುತ್ತಿತ್ತು. ಒಂದು ರೀತಿಯಲ್ಲಿ ಹೇಳುವುದಾದರೆ ಗ್ರಾಹಕರೂ ಸಹ ಅಧಿಕ ಬಣ್ಣಗಳ ಆಯ್ಕೆಗಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುತ್ತಿದ್ದರು.

ಈ ಕಾರಣದಿಂದಲೇ ಈ ಬಾರಿ ಕಂಪನಿಯು ಹೊಸ ಬೈಕ್‌ಗೆ ಹೊಸ ಒಂಬತ್ತು ಬಣ್ಣಗಳಲ್ಲಿ ಲಭ್ಯವಿದೆ. ಲೈಟಿಂಗ್ ಬ್ಲೂ, ಬೂದು, ಟರ್ಬೊ ರೆಡ್, ಆಫ್ಟರ್‌ಬರ್ನರ್ ಹಳದಿ, ಸ್ಟೆಲ್ತ್ ಗ್ರೇ, ಕಾಸ್ಮಿಕ್ ಬ್ಲಾಕ್, ಪ್ಲಾಸ್ಮಾ ರೆಡ್, ಸೂಪರ್‌ಸಾನಿಕ್ ಸಿಲ್ವರ್ , ಮತ್ತು ಸ್ಟೆಲ್ಲರ್ ವೈಟ್.
ರೀಜೆನ್ ಬ್ರೇಕಿಂಗ್: F77 ಮ್ಯಾಕ್ 2 ಬೈಕ್‌ನಲ್ಲೂ (Ultraviolette F77 Mach 2) ಮೂರು ಲೆವೆಲ್‌ಗಳ ರೀಜಿನ್ ಬ್ರೇಕಿಂಗ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ. ಆದರೆ ಮಾಲೀಕರಿಗೆ ಬೇಕಾದರೆ ಇದನ್ನು ಹತ್ತು ಸ್ಟೆಪ್‌ಗಳ ವರೆಗೆ ಸೆಟ್ ಮಾಡಬಹುದಾಗಿದ್ದು, ಬೈಕ್ ರೈಡ್ ಮಾಡುವಾಗ ಹೆಚ್ಚಿನ ಎನರ್ಜಿಯನ್ನು ಉತ್ಪಾದಿಸಬಹುದಾಗಿದೆ. ಇದಕ್ಕಾಗಿಯೇ ಬಹುತೇಕ ಎಲೆಕ್ಟ್ರಿಕ್ ವಾಹನದಲ್ಲಿ ರೀಜೆನ್ ಬ್ರೇಕಿಂಗ್ ಅನ್ನು ನೀಡಲಾಗುತ್ತದೆ.

ಟ್ರಾಕ್ಷನ್ ಕಂಟ್ರೋಲ್: ಈ ಬೈಕ್‌ಗೆ ಹೊಸ 4 ಸ್ಟೆಪ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಸಹ ಪರಿಚಯಿಸಲಾಗುತ್ತಿದೆ. ಇದು ಬೈಕ್ ಅನ್ನು ಜಾರುವ ಪ್ರದೇಶ ಮತ್ತು ಹೆಚ್ಚು ಮರಳಿರುವ ಪ್ರದೇಶಗಳಲ್ಲಿ ಓಡಿಸುವಾಗ ಹೆಚ್ಚಿನ ಸಹಾಯ ಮಾಡುತ್ತದೆ. ಈ ಸಂಧರ್ಭದಲ್ಲಿ ನಿಮ್ಮ ಬೈಕ್‌ನ ಜಾರದಂತೆ ಮತ್ತು ವ್ಹೀಲ್ ಸ್ಪಿನ್ ಆಗದಂತೆ ಅಥವಾ ಅದನ್ನು ಕಡಿಮೆ ಮಾಡಲು F77 ಮ್ಯಾಕ್ 2 ಬೈಕ್‌ನ ಈ ಹೊಸ 4 ಸ್ಟೆಪ್ ಟ್ರ್ಯಾಕ್ಷನ್ ಕಂಟ್ರೋಲ್ ಸಹಾಯ ಮಾಡುತ್ತದೆ.
ಬ್ಯಾಟರಿ: . ಬ್ಯಾಟರಿ ಸಾಮರ್ಥ್ಯವು (ರೀಕಾನ್‌ನ) ಮೊದಲಿನ 10.3kWh ಆಗಿದ್ದರೂ, IDC ಶ್ರೇಣಿಯು ಒಂದೇ ಚಾರ್ಜ್‌ನಲ್ಲಿ ಸಿಗುವ ರೇಂಜ್ ಸುಮಾರು 16 ಕಿಮೀನಷ್ಟು ಹೆಚ್ಚಾಗಿದ್ದು ಈಗ 323 ಕಿಮೀ ನಷ್ಟು ಓಡುತ್ತದೆ. ಅಲ್ಟ್ರಾವಯೊಲೆಟ್‌ನ ಸ್ವಂತ ಸೂಪರ್‌ನೋವಾ ಚಾರ್ಜರ್ ಕೇವಲ 45 ನಿಮಿಷಗಳಲ್ಲಿ 20-80 ಪ್ರತಿಶತದಷ್ಟು ರೀಚಾರ್ಜ್‌ಗೆ ಅವಕಾಶ ನೀಡುವ ಜೊತೆಗೆ ಈಗ ವೇಗವಾಗಿ ಚಾರ್ಜಿಂಗ್ ಆಯ್ಕೆಗಳು ಲಭ್ಯವಿದೆ.

ಪವರ್: ಬ್ಯಾಟರಿಯನ್ನು ಈಗ 40.23bhp (1.35bhp ಯಿಂದ) ಮತ್ತು 100Nm (5Nm ವರೆಗೆ) ಉತ್ಪಾದಿಸುವ ಸ್ವಲ್ಪ ಹೆಚ್ಚು ಶಕ್ತಿಯುತ ಮೋಟಾರ್‌ಗೆ ಸಂಪರ್ಕ ಹೊಂದಿದೆ. ಈ ನವೀಕರಣಗಳ ಪ್ರಕಾರ ಹೊಸ ಮ್ಯಾಕ್ 2 ಕೇವಲ 2.8 ಸೆಕೆಂಡ್‌ಗಳಲ್ಲಿ 0-60 ಕಿಮೀ/ಗಂ ವೇಗವನ್ನು ಪಡೆಯುತ್ತದೆ ಮತ್ತು 0-100 ಕಿಮೀ/ಗಂ ವೇಗವನ್ನು ಈಗ ಕೇವಲ 7.7 ಸೆಕೆಂಡುಗಳಲ್ಲಿ ತಲುಪುತ್ತದೆ. ಗರಿಷ್ಠ ವೇಗವು 8 ಕಿಮೀ ಹೆಚ್ಚಾಗಿದ್ದು ಈ ಬೈಕ್ 155 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
ರೈಡಿಂಗ್ ಮೋಡ್: ಹೊಸ F77 ಮ್ಯಾಕ್ 2 ಬೈಕ್‌ನ ರೈಡಿಂಗ್ ಮೋಡ್ ಬಗ್ಗೆ ಹೇಳಲೇ ಬೇಕು. ಇದರಲ್ಲಿ ನಿಮಗೆ ಗ್ಲೈಡ್, ಕಾಂಬಾಟ್, ಬಲಾಸ್ಟಿಕ್ ಎಂಬ ಮೂರು ರೈಡಿಂಗ್ ಮೋಡ್‌ಗಳು ಸಿಗುತ್ತದೆ. ನೀವು ಓಡಿಸುತ್ತಿರುವ ಪ್ರದೇಶ, ಮತ್ತು ವೇಗಕ್ಕೆ ಅನುಗುಣವಾಗಿ ನೀವು ಈ ಮೋಡ್‌ಗಳನ್ನು ಬಳಸಲಬಹುದಾಗಿದೆ. ಇವುಗಳಲ್ಲಿ ಅತೀ ಹೆಚ್ಚು ಪವರ್ ನೀಡುವ ರೈಡಿಂಗ್ ಮೋಡ್ ಎಂದರೆ ಅದು ಬಲಾಸ್ಟಿಕ್.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








