ಕರ್ನಾಟಕದಲ್ಲಿ ನಿರ್ಮಿಸಿದ ಬೈಕ್ ಯೂರೋಪ್‌ನಲ್ಲಿ ಬಿಡುಗಡೆ: ಇದು ಕನ್ನಡಿಗರ ತಾಕತ್ತು!

ಬೆಂಗಳೂರು ಮೂಲದ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಅಲ್ಟ್ರಾವೈಲಟ್ (Ultraviolette), ಮಿಲನ್‌ನಲ್ಲಿ ನಡೆಯುತ್ತಿರುವ EICMA 110ನೇ ಆವೃತ್ತಿಯಲ್ಲಿ ಯುರೋಪ್‌ ಮಾರುಕಟ್ಟೆಗಾಗಿ F77 MACH 2 ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಹಾಗೆಯೇ ಇದೇ ವೇದಿಕೆಯನ್ನು ಬಳಸಿಕೊಂಡು F99 ರೇಸಿಂಗ್ ಪ್ಲಾಟ್‌ಫಾರ್ಮ್ ಮತ್ತು ಫ್ಯೂಚರಿಸ್ಟಿಕ್ ಕಾನ್ಸೆಪ್ಟ್ X ಮೋಟಾರ್‌ಸೈಕಲ್ ಅನ್ನು ಪರಿಚಯಿಸಿದೆ. ಹೈ - ಪರ್ಫಾಮೆನ್ಸ್ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣದಲ್ಲಿ ಅಲ್ಟ್ರಾವೈಲಟ್ ಕಂಪನಿಯು ವಿಶ್ವ ನಾಯಕನಾಗುವ ಗುರಿಯನ್ನು ಹೊಂದಿರುವುದಾಗಿ ಹೇಳಿದೆ.

9,990 € ಬೆಲೆಯ (ಅಂದಾಜು 9,05,653 ರೂಪಾಯಿ) F77 MACH 2 ಮೋಟಾರ್‌ಸೈಕಲ್ ಹೈ - ಪರ್ಫಾಮೆನ್ಸ್ ಮತ್ತು ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ. ಇದು 40.2 hp ಪವರ್ ಮತ್ತು 100 Nm ಟಾರ್ಕ್ ಅನ್ನು ಹೊರಹಾಕುವ ಪವರ್‌ಟ್ರೇನ್‌ನೊಂದಿಗೆ ಎಲೆಕ್ಟ್ರಿಕ್ ವಿಭಾಗದಲ್ಲಿ ಅತ್ಯುತ್ತಮ ಪರ್ಫಾಮೆನ್ಸ್ ಮೋಟಾರ್‌ಸೈಕಲ್ ಎನ್ನಿಸಿಕೊಂಡಿದೆ. ಇದನ್ನು ನಿರೂಪಿಸುವಂತೆ ಕೇವಲ 2.8 ಸೆಕೆಂಡುಗಳಲ್ಲಿ 60 ಕಿ.ಮೀ ವೇಗವನ್ನು ತಲುಪಬಲ್ಲದು.

ultraviolette-f77-mach-2-launched-at-9990-at-eicma

10.3 kWh ಬ್ಯಾಟರಿಯನ್ನು ಹೊಂದಿದ್ದು, ಇದು ಸ್ಮಾರ್ಟ್ ಕನ್ಸೋಲ್ ಮತ್ತು OTA ನವೀಕರಣಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ಸಹ ಪಡೆದುಕೊಂಡಿದೆ. 155 ಕಿಲೋಮೀಟರ್ ಟಾಪ್ ಸ್ಪೀಡ್, ಆಕ್ರಮಣಕಾರಿ ಸವಾರಿ ಮತ್ತು ಪ್ಯೂಚರಿಸ್ಟಿಕ್ ಎಲ್ಇಡಿ ಹೆಡ್ಲೈಟ್ ವಿನ್ಯಾಸದೊಂದಿಗೆ, F77 ಮ್ಯಾಕ್ 2 ಮುಂದಿನ ಹಂತದ ಸವಾರಿ ಅನುಭವಕ್ಕಾಗಿ ಡೈನಾಮಿಕ್ ಕಾರ್ಯಕ್ಷಮತೆಯೊಂದಿಗೆ ನಿರ್ಮಿಸಲಾದ ಅತ್ಯಾಧುನಿಕ ಆವಿಷ್ಕಾರವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇನ್ನು F77 ಮ್ಯಾಕ್ 2 ಮಾತ್ರವಲ್ಲದೆ ಕಂಪನಿಯ F99 ರೇಸಿಂಗ್ ಪ್ಲಾಟ್‌ಫಾರ್ಮ್ ಸುಧಾರಿತ, ಉನ್ನತ-ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆಗಿದ್ದು, EV ತಂತ್ರಜ್ಞಾನದ ಮಿತಿಗಳನ್ನು ಮೀರಿ ಅಭಿವೃದ್ಧಿಪಡಿಸಲಾಗಿದೆ. ಇದು ಅತ್ಯಾಧುನಿಕ ಬ್ಯಾಟರಿ ಮತ್ತು ಮೋಟಾರ್ ತಂತ್ರಜ್ಞಾನವನ್ನು ಸಂಯೋಜಿಸಿ ಪ್ರಭಾವಶಾಲಿ ವೇಗವನ್ನು ಸಾಧಿಸಬಲ್ಲದು. ಸುರಕ್ಷತೆ ಮತ್ತು ಏರೋಡೈನಮಿಕ್ ಡಿಸೈನ್‌ನೊಂದಿಗೆ ಬರುತ್ತದೆ.

ultraviolette-f77-mach-2-launched-at-9990-at-eicma

F99 ಮೋಟಾರ್‌ಸೈಕಲ್ 90kW ಮೋಟಾರ್‌ನಿಂದ ಚಾಲಿತವಾಗಿದೆ, ಇದು ಮೂರು ಸೆಕೆಂಡುಗಳಲ್ಲಿ 100 ಟಾಪ್‌ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಇದು ಸಕ್ರಿಯ ಏರೋ ಮತ್ತು ಕೂಲಿಂಗ್ ಡಕ್ಟ್‌ಗಳನ್ನು ಹೊಂದಿದೆ, ಮೋಟರ್ ಕಡೆಗೆ ಗಾಳಿಯನ್ನು ಹರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. 178 ಕೆ.ಜಿ ತೂಕದೊಂದಿಗೆ, F99 ಮೋಟಾರ್‌ಸೈಕಲ್ ಬರೋಬ್ಬರಿ 265 ಕಿ.ಮೀ ವೇಗವನ್ನು ತಲುಪಬಲ್ಲದು ಎಂದು ಕಂಪನಿ ಹೇಳಿದೆ.

ಉಳಿದಂತೆ ಹೊಚ್ಚಹೊಸ ಕಾನ್ಸೆಪ್ಟ್ ಎಕ್ಸ್ ಮೋಟಾರ್‌ಸೈಕಲ್ ಬಗ್ಗೆ ಹೇಳುವುದಾದ್ರೆ, ಕಂಪನಿಯ ಪ್ರಕಾರ ಇದು ಎಲೆಕ್ಟ್ರಿಕ್ ಮೊಬಿಲಿಟಿಯ ಭವಿಷ್ಯದ ಬಗ್ಗೆ ಒಂದು ನೋಟವನ್ನು ನೀಡುತ್ತದೆ. ಕಾನ್ಸೆಪ್ಟ್ X, ಸುಧಾರಿತ ಮೋಟಾರ್‌ಸೈಕ್ಲಿಂಗ್ ಅನುಭವಗಳ ಕಡೆಗೆ ರಾಜಿಯಾಗದ ದೃಷ್ಟಿಯೊಂದಿಗೆ ಮಿಶ್ರಣ ರೂಪ ಮತ್ತು ಕಾರ್ಯದ ಕಡೆಗೆ ಅಲ್ಟ್ರಾವೈಲಟ್ ದಿಟ್ಟ ವಿಧಾನವನ್ನು ಪ್ರತಿನಿಧಿಸುವುದಾಗಿ ಕಂಪನಿ ತಿಳಿಸಿದೆ.

ultraviolette-f77-mach-2-launched-at-9990-at-eicma

ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ನಾರಾಯಣ ಸುಬ್ರಮಣ್ಯಂ ಮಾತನಾಡಿ, "ಅಲ್ಟ್ರಾವೈಲೆಟ್ ಜಾಗತಿಕ ಗ್ರಾಹಕರನ್ನು ಸೆಳೆಯುವ ಪ್ರಯಾಣದಲ್ಲಿದೆ. ಈ ಪ್ರಯಾಣದಲ್ಲಿ F77 MACH 2, F99 ರೇಸಿಂಗ್ ಪ್ಲಾಟ್‌ಫಾರ್ಮ್, ಮತ್ತು ಕಾನ್ಸೆಪ್ಟ್ X ಇವೆಲ್ಲವೂ ಎಲೆಕ್ಟ್ರಿಕ್ ಭವಿಷ್ಯವನ್ನು ನಿರ್ಮಿಸುವ ನಮ್ಮ ದೃಷ್ಟಿಯ ಭಾಗವಾಗಿದೆ. EICMA ನಲ್ಲಿನ ನಮ್ಮ ವಾಹನಗಳ ಪ್ರದರ್ಶನವು ನಿರಂತರವಾಗಿ ಆವಿಷ್ಕರಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

ಕಂಪನಿಯು ಟರ್ಕಿ, ಜರ್ಮನಿ, ಆಸ್ಟ್ರಿಯಾ ಮತ್ತು ಸ್ವಿಟ್ಜರ್‌ಲ್ಯಾಂಡ್, ಯುರೋಪಿನಾದ್ಯಂತ ತನ್ನ ಹೆಜ್ಜೆಗುರುತನ್ನು ಆಕ್ರಮಣಕಾರಿಯಾಗಿ ವಿಸ್ತರಿಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಯುರೋಪ್, ಉತ್ತರ ಅಮೆರಿಕಾ, ಲ್ಯಾಟಿನ್ ಅಮೇರಿಕಾ ಮತ್ತು ಆಗ್ನೇಯ ಏಷ್ಯಾದಲ್ಲಿ ಅಸ್ತಿತ್ವವನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವುದಾಗಿ ಬೆಂಗಳೂರು ಮೂಲದ ಅಲ್ಟ್ರಾವೈಲಟ್ ಕಂಪನಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, November 7, 2024, 12:48 [IST]
English summary
Ultraviolette f77 mach 2 launched at eicma pre orders go live in europe
Read more on ultraviolette
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+