ಮಂಗಳೂರಿಗೆ ಹೊಸ ಯುವಿ ಸ್ಪೇಸ್ ಸ್ಟೇಷನ್‌: ಅತ್ಯಾಧುನಿಕ ಅನುಭವ ಕೇಂದ್ರದ ವಿಶೇಷತೆಗಳು!

ಬೆಂಗಳೂರು ಮೂಲದ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾದ ಅಲ್ಟ್ರಾವೈಲೆಟ್, ಮಂಗಳೂರಿನಲ್ಲಿ ತನ್ನ ಹೊಸ UV ಸ್ಪೇಸ್ ಸ್ಟೇಷನ್‌ ಅನ್ನು ತೆರೆದಿದೆ. ಇದು ಕಂಪನಿಯ ವಿಸ್ತರಣೆ ಕಾರ್ಯತಂತ್ರದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಈ ಅತ್ಯಾಧುನಿಕ ಸೌಲಭ್ಯವು ಅಲ್ಟ್ರಾವೈಲೆಟ್‌ನ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಗ್ರಾಹಕರಿಗೆ ತಲುಪಲು ಸಹಕರಿಸಲಿದೆ. ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಗ್ರಾಹಕರಿಗೆ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಖರೀದಿಸಲು ಇನ್ನೂ ಸುಲಭಗೊಳಿಸುತ್ತದೆ. ಕರ್ನಾಟಕದಲ್ಲಿ ಕಂಪನಿಯ ಎರಡನೇ ಹೊಸ ಕೇಂದ್ರವಾಗಿದ್ದು, ಈ ವರ್ಷದ ಅಂತ್ಯದ ವೇಳೆಗೆ ಹನ್ನೆರಡು ನಗರಗಳಲ್ಲಿ ಪ್ರಸ್ತುತಪಡಿಸುವ ಗುರಿ ಇರುವುದಾಗಿ ಕಂಪನಿ ತಿಳಿಸಿದೆ.

ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿರುವ ಹೊಸ ಅನುಭವ ಕೇಂದ್ರ (Experience Center)ವನ್ನು ಗ್ರಾಹಕರಿಗೆ ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ತಿಳಿವಳಿಕೆ ನೀಡಲು ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಮಂಗಳೂರು ಅನುಭವ ಕೇಂದ್ರದಲ್ಲಿ ಅಲ್ಟ್ರಾವೈಲೆಟ್ F77 MACH 2 ಮೋಟಾರ್‌ಸೈಕಲ್ ಅನ್ನು ಪ್ರದರ್ಶಿಸುವುದರ ಜೊತೆಗೆ ಅದರ ಪ್ರಮುಖ ಎಲೆಕ್ಟ್ರಿಕ್ ಕಾರ್ಯಕ್ಷಮತೆಯ ಬಗ್ಗೆ ವಿವರಿಸಲಾಗುವುದು.

ultraviolette-inaugurates-of-its-new-experience-center-in-mangaluru

ಇದು ಮಾತ್ರವಲ್ಲದೇ ಮಂಗಳೂರು UV ಸ್ಪೇಸ್ ಸ್ಟೇಷನ್‌ ಮಾರಾಟ, ಸೇವೆ ಮತ್ತು ಬಿಡಿಭಾಗಗಳನ್ನು ಒದಗಿಸುವ ಸಮಗ್ರ 3S ಸೌಲಭ್ಯವಾಗಿ ಕಾರ್ಯನಿರ್ವಹಿಸುತ್ತದೆ. ಅತ್ಯಾಧುನಿಕ ಡಿಜಿಟಲ್ ಡಯಾಗ್ನೋಸ್ಟಿಕ್ಸ್ ಮತ್ತು ಅಲ್ಟ್ರಾವೈಲೆಟ್‌ನ ಬೆಂಗಳೂರು ಪ್ರಧಾನ ಕಛೇರಿಯಿಂದ ರಿಯಲ್ ಟೈಮ್ ಟೆಕ್ನಿಕಲ್ ಸಪೋರ್ಟ್ ಹೊಂದಿದೆ. ಜೊತೆಗೆ ಹೊಸ ಖರೀದಿಗಳು ಹಾಗೂ ನಿರ್ವಹಣೆಗೆ ಈ ಸೌಲಭ್ಯವು ಅತ್ಯುನ್ನತ ಗುಣಮಟ್ಟದ ಸೇವೆಯೊಂದಿಗೆ ಒಳಗೊಂಡಿರಲಿದೆ ಎಂದು ಕಂಪನಿ ಹೇಳಿದೆ.

ಕಂಪನಿಯ ಪ್ರಕಾರ ತನ್ನ F77 MACH 2 ಮೋಟಾರ್‌ಸೈಕಲ್ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಆಗಲಿದೆ. ಇದರ ಪ್ರಭಾವಶಾಲಿ ಶ್ರೇಣಿ, ಹೈ-ಪರ್ಫಾಮೆನ್ಸ್ ಸಾಮರ್ಥ್ಯ ಮತ್ತು ಫ್ಯೂಚರಿಸ್ಟಿಕ್ ಡಿಸೈನ್‌ಗೆ ಹೆಸರುವಾಸಿಯಾಗಿದ್ದು, F77 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಇವಿ ಉದ್ಯಮದಲ್ಲಿ ನವೀನತೆ, ತಂತ್ರಜ್ಞಾನ ಮತ್ತು ಸುಸ್ಥಿರತೆಗೆ ಕಂಪನಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ಹೇಳಿದೆ.

ultraviolette-inaugurates-of-its-new-experience-center-in-mangaluru

ಕಂಪನಿಯ ಸಿಇಒ ಮತ್ತು ಸಹ-ಸಂಸ್ಥಾಪಕ ನಾರಾಯಣ ಸುಬ್ರಮಣ್ಯಂ ಮಾತನಾಡಿ, "ಕರ್ನಾಟಕವು ಇವಿ ಅಳವಡಿಕೆಯಲ್ಲಿ ಪ್ರವರ್ತಕನಾಗಿ ಹೊರಹೊಮ್ಮಿದೆ. ಮಂಗಳೂರಿನಲ್ಲಿ ನಮ್ಮ ಹೆಜ್ಜೆಗುರುತನ್ನು ವಿಸ್ತರಿಸಲು ನಾವು ರೋಮಾಂಚನಗೊಂಡಿದ್ದೇವೆ. ಈ ಹೊಸ ಡೀಲರ್‌ಶಿಪ್‌ನೊಂದಿಗೆ, ಬೆಳೆಯುತ್ತಿರುವ ಗ್ರಾಹಕರ ಸಮುದಾಯಕ್ಕೆ ನಮ್ಮ ತಾಂತ್ರಿಕವಾಗಿ ಮುಂದುವರಿದ ವಾಹನಗಳನ್ನು ಹೆಚ್ಚಾಗಿ ನೀಡುವ ಗುರಿಯನ್ನು ಹೊಂದಿದ್ದೇವೆ ಎಂದರು.

ಕಂಪನಿಯ CTO ಮತ್ತು ಸಹ-ಸಂಸ್ಥಾಪಕ ನಿರಜ್ ರಾಜ್ಮೋಹನ್, ಸಾಟಿಯಿಲ್ಲದ ಪರ್ಫಾಮೆನ್ಸ್ ಮತ್ತು ವಿಶ್ವಾಸಾರ್ಹತೆಯನ್ನು ನೀಡಲು ನಾವು F77 MACH 2 ಅನ್ನು ವಿನ್ಯಾಸಗೊಳಿಸಿದ್ದೇವೆ. ಇಂತಹ ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಒಳಗೊಂಡಿರುವ ಮೋಟಾರ್‌ಸೈಕಲ್ ಅನ್ನು ಮಂಗಳೂರು ಜನ ಕೂಡ ಅನುಭವಿಸಲು ನಾವು ಉತ್ಸುಕರಾಗಿದ್ದೇವೆ. ಈ ವಿಸ್ತರಣೆಯು ರಾಷ್ಟ್ರವ್ಯಾಪಿ ಎಲೆಕ್ಟ್ರಿಕ್ ವಾಹನಗಳಿಗೆ ದೃಢವಾದ ಪರಿಸರ ವ್ಯವಸ್ಥೆಯನ್ನು ರಚಿಸಲು ನಮ್ಮ ದೃಷ್ಟಿಗೆ ಹೊಂದಿಕೆಯಾಗುತ್ತದೆ.

ultraviolette-inaugurates-of-its-new-experience-center-in-mangaluru

ಈ ಹಿಂದೆ ಬೆಂಗಳೂರು, ಪುಣೆ, ಅಹಮದಾಬಾದ್, ಕೊಚ್ಚಿ, ಹೈದರಾಬಾದ್ ಮತ್ತು ನೇಪಾಳದಲ್ಲಿ ಯಶಸ್ವಿಯಾಗಿ ಅನುಭವ ಕೇಂದ್ರಗಳನ್ನು ಪ್ರಾರಂಭಿಸಿದ ಬಳಿಕ ಇದೀಗ ಮಂಗಳೂರಿನಲ್ಲಿ ತೆರೆಯಲಾಗಿದೆ. ಹೊಸ ಅನುಭವ ಕೇಂದ್ರವು ಗ್ರಾಹಕರಿಗೆ ಉತ್ತಮ ದರ್ಜೆಯ ಗ್ರಾಹಕ ಅನುಭವವನ್ನು ನೀಡುವ ಮೂಲಕ F77 MACH 2 ಅನ್ನು ಎಕ್ಸ್‌ಪ್ಲೋರ್ ಮಾಡಲು, ಟೆಸ್ಟ್ ರೈಡ್ ಮಾಡಲು ಮತ್ತು ಖರೀದಿಸಲು ಅನನ್ಯ ಅವಕಾಶಗಳನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, November 19, 2024, 10:00 [IST]
English summary
Ultraviolette inaugurates of its new experience center in mangaluru
Read more on ultraviolette india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+