ಮತ್ತೊಂದು ಸ್ಪೀಡ್‌ಸ್ಟಾರ್‌ ಲಾಂಚ್‌ ಮಾಡಲಿರುವ ಬೆಂಗಳೂರಿನ ಅಲ್ಟ್ರಾವೈಲೆಟ್‌: ಎಂದು, ಎಲ್ಲಿ, ಯಾವುದು?

ಬೆಂಗಳೂರು ಮೂಲದ ಅಲ್ಟ್ರಾವೈಲೆಟ್‌ ಎಂಬ ಎಲೆಕ್ಟ್ರಿಕ್‌ ಬೈಕ್‌ ನಿರ್ಮಾಣ ಕಂಪನಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳೀ. ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಿ ಜನಪ್ರಿಯವಾಗಿರುವ ಅಲ್ಟ್ರಾವೈಲೆಟ್‌ ಕಂಪನಿಯ ಪ್ರಮುಖ ಬೈಕ್‌ ಮಾದರಿ ಎಫ್77. ಇದೀಗ ಕಂಪನಿ ಸದ್ಯದಲ್ಲೇ ತನ್ನ ಹೊಸ ಮಾಡೆಲ್‌ ಒಂದನ್ನು ಮಾರುಕಟ್ಟೆಗೆ ತರಲಿದೆ.

ಹೌದು, ಮಾಹಿತಿಗಳ ಪ್ರಕಾರ ಅಲ್ಟ್ರಾವೈಲೆಟ್‌ ಮುಂದಿನ ತಿಂಗಳು 24 ರಂದು ಅಂದರೆ ಎಪ್ರಿಲ್‌ 24 ರಂದು ಹೊಸ ಮಾದರಿಯನ್ನು ಮಾರುಕಟ್ಟೆಗೆ ಅನಾವರಣಗೊಳಿಸಲಿದ್ದು, ಎಲ್ಲರಲ್ಲೂ ಆಗಸದಷ್ಟು ನಿರೀಕ್ಷೆ ಮನೆ ಮಾಡಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಪ್ರಮುಖ ಕಾರಣವೇನು ಎಂದು ನೋಡುವುದಾದರೆ, ಅಲ್ಟ್ರಾವೈಲೆಟ್‌ ತನ್ನ ಮೊದಲ ಬೈಕ್‌ ಎಫ್77 ಅನ್ನು ಮಾರುಕಟ್ಟೆಗೆ ಲಾಂಚ್‌ ಮಾಡಿದಾಗ ಅಕ್ಷರಶಃ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು.

Ultraviolette is All Set To Launch Its New Model On April 24th

ಅಲ್ಟ್ರಾವೈಲೆಟ್ (Ultraviolette) ಎಫ್77 ಬೈಕ್‌ನ ಡಿಸೈನ್‌, ಅದರ ಪರ್ಫಾಮೆನ್ಸ್‌, ಬೈಕ್‌ನ ವೇಗ ಹೀಗೆ ಅದರಲ್ಲಿದ್ದ ಪ್ರತಿಯೊಂದು ವಿಷಯವೂ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತ್ತು ಎಂದರೆ ತಪ್ಪಾಗಲಾರದು. ಇದೀಗ ಅದೇ ಅಲ್ಟ್ರಾವೈಲೆಟ್‌ ಮತ್ತೊಂದು ಹೊಸ ಬೈಕ್‌ ಮಾದರಿಯನ್ನು ಮಾರುಕಟ್ಟೆಗೆ ತರಲಿದೆ ಎಂದು ಹೇಳಿರುವಾಗ ಎಲ್ಲರಲ್ಲೂ ಸಹಜವಾಗಿಯೇ ನಿರೀಕ್ಷೆ ಮನೆ ಮಾಡುತ್ತದೆ.

ಇನ್ನು ಎಲ್ಲರ ನಿರೀಕ್ಷೆಯಂತೆ ಈ ಬೈಕ್‌ F99 ಎಂಬ ಮಾಡೆಲ್‌ ಅನ್ನು ಆಧರಿಸಿದ ಬೈಕ್‌ ಲಾಂಚ್‌ ಮಾಡಬಹುದೇನೋ ಎಂದೆನಿಸುತ್ತದೆ. ಇದಕ್ಕೆ ಕಾರಣವೇನೆಂದರೆ ಅಲ್ಟ್ರಾವೈಲೆಟ್‌ ಈ ಹಿಂದೆ ಇವರ ರೇಸಿಂಗ್‌ ಪ್ಲಾಟ್‌ಫಾರ್ಮ್‌ನ F99 ಎಂಬ ಬೈಕ್‌ ಮಾದರಿಯನ್ನು ಅನಾವರಣ ಮಾಡಿತ್ತು. ಇದರಿಂದಾಗಿ ಮುಂಬರಲಿರುವ ಅವರ ಬೈಕ್ ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಬರಬಹುದೇನೋ ಎಂದು ಹಲವರು ಎದುರು ನೊಡುತ್ತಿದ್ದು, ಏನಾಗಬಹುದು ಎಂದು ಕಾದು ನೋಡಬೇಕಾಗಿದೆ.

Ultraviolette is All Set To Launch Its New Model On April 24th

ಮಾಹಿತಿಗಳ ಪ್ರಕಾರ F99 ಬೈಕ್‌ ಮಾದರಿಯ ಪೀಕ್‌ ಪವರ್‌ ಎಂಬುದು 118 ಬಿಹೆಚ್‌ಪಿ. ಇನ್ನು ಈ ಬೈಕ್‌ನ ಟಾಪ್‌ ಸ್ಪೀಡ್‌ ಎಂಬುದು ಬರೋಬ್ಬರಿ 265 ಕಿಮೀ ಪ್ರತೀ ಗಂಟೆಗೆ. ಸುಮಾರು 178 ಕೆಜಿ ತೂಗುವ ಈ ಬೈಕ್‌ 0-100 ತಲುಪಲು ಕೇವಲ ಮೂರು ಸೆಕೆಂಡ್‌ಗಳು ಸಾಕು. ಒಂದು ಸೂಪರ್‌ ಬೈಕ್‌ನ ಎಲ್ಲಾ ಲಕ್ಷಣಗಳಿರುವ ಈ F99, ಎಲೆಕ್ಟ್ರಿಕ್‌ ಸೂಪರ್‌ ಬೈಕ್‌ ಎಂಬುದು ಅಕ್ಷರಶಃ ಸತ್ಯ.

ಇನ್ನು ಅಲ್ಟ್ರಾವೈಲೆಟ್ ಎಫ್77 ಬಗ್ಗೆ ನೊಡುವುದಾದರೆ, ಈ ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕಿನ ಪ್ರಾರಂಭಿಕ ಬೆಲೆಯು ರೂ.3.8 ಲಕ್ಷವಾಗಿದೆ. ಇನ್ನು ಈ ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಬೈಕಿನ ಲಿಮಿಟೆಡ್ ಎಡಿಷನ್ ಬೆಲೆಗಳನ್ನು ಘೋಷಿಸಲಾಗಿಲ್ಲವಾದರೂ, ಇದು ರೆಕಾನ್ ರೂಪಾಂರಗಿಂತ ದುಬಾರಿಯಾಗಿರುತ್ತದೆ. ಈ ಬೈಕ್‌ ಈಗಾಗಲೇ ಹಲವಾರು ಸೆಲೆಬ್ರೆಟಿಗಳ ನೆಚ್ಚಿನ ಬೈಕ್‌ ಆಗಿ ಬದಲಾಗುತ್ತಿದೆ.

Ultraviolette is All Set To Launch Its New Model On April 24th

ಪ್ರತಿಯೊಂದು ಲಿಮೆಟಿಡ್ ಎಡಿಷನ್ F77 ಎಲೆಕ್ಟ್ರಿಕ್ ಸ್ಪೋರ್ಟ್ ಬೈಕು ವಿಶಿಷ್ಟ ಸಂಖ್ಯೆ ಮತ್ತು ವಿಶೇಷ ಪೇಂಟ್ ಸ್ಕೀಮ್ ಅನ್ನು ಪಡೆಯುತ್ತದೆ. ಈ ಪರ್ಫಾರ್ಮೆನ್ಸ್ ಬೈಕ್ ಎಲೆಕ್ಟ್ರಿಕ್ ಬೈಕ್‌ನ ಕಾರ್ಯಕ್ಷಮತೆಯ ಅಂಕಿಅಂಶಗಳು PMS ಎಲೆಕ್ಟ್ರಿಕ್ ಮೋಟಾರ್ 40.2 bhp ಅಥವಾ 30.2 kW ಪವರ್ ಮತ್ತು 100 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, March 31, 2024, 8:00 [IST]
English summary
Ultraviolette is all set to launch its new model on april 24th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+