ದುಬಾರಿ ವೆಸ್ಪಾ ಸ್ಕೂಟರ್ ಬಿಡುಗಡೆ: ಇದೇ ಬೆಲೆಗೆ ಹೊಸ ಹ್ಯುಂಡೈ ಕ್ರೆಟಾ ಬರುತ್ತೆ! ವಿಶೇಷತೆಗಳೇನು?

ಇಟಾಲಿಯನ್ ಮೂಲದ ದೈತ್ಯ ಕಂಪಿಯಾದ ಪಿಯಾಜಿಯೊ, ಸೀಮಿತ ಆವೃತ್ತಿಯ (ಲಿಮಿಟೆಡ್ ಎಂಡಿಷನ್) ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್ ಅನ್ನು ಭಾರತದಲ್ಲಿ ಪರಿಚಯಿಸಿದೆ. ಲೂನಾರ್ ಹೊಸ ವರ್ಷವನ್ನು ಆಚರಿಸಲು ಜಾಗತಿಕವಾಗಿ ವಿಶೇಷ ಸಂಗ್ರಹವಾಗಿ ಈ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ವೆಸ್ಪಾ 946 ಡ್ರ್ಯಾಗನ್ ಸೀಮಿತ ಸಂಖ್ಯೆಯಲ್ಲಿ ಲಭ್ಯವಿರಲಿದೆ. ಈ ವಿಶೇಷ ಸ್ಕೂಟರ್ ಅನ್ನು ಸಂಪೂರ್ಣವಾಗಿ ನಿರ್ಮಿಸಿದ ಘಟಕಗಳಾಗಿ (CBU) ಭಾರತಕ್ಕೆ ತಂದು ಮಾರಾಟ ಮಾಡಲಾಗುವುದು. ವೆಸ್ಪಾ 946 ಡ್ರ್ಯಾಗನ್‌ಗಾಗಿ ಭಾರತದಾದ್ಯಂತ ಇರುವ ಪಿಯಾಜಿಯೊದ ಮೋಟೋಪ್ಲೆಕ್ಸ್ ಶೋರೂಮ್‌ಗಳಲ್ಲಿ ಬುಕ್ಕಿಂಗ್ ಮಾಡಬಹುದು.

ಇಟಲಿಯಲ್ಲಿ ಕೈಯಿಂದ ರಚಿಸಲಾದ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾದ ವೆಸ್ಪಾ 946 ಡ್ರ್ಯಾಗನ್‌ನ ವಿನ್ಯಾಸವು ಸಂಸ್ಕೃತಿ, ನಾವೀನ್ಯತೆ ಮತ್ತು ಅತ್ಯಾಧುನಿಕತೆಯ ಒಟ್ಟುಗೂಡಿಸುವಿಕೆಗೆ ಗೌರವವಾಗಿದೆ. ಇದು ಡ್ರ್ಯಾಗನ್‌ಗೆ ಸಂಬಂಧಿಸಿದ ಶಕ್ತಿ ಮತ್ತು ಶಕ್ತಿಯ ವಿಶಿಷ್ಟ ಪ್ರಜ್ಞೆಯನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.

vespa-collector-s-edition-946-dragon-launched-in-india

946 ಡ್ರ್ಯಾಗನ್ ಆವೃತ್ತಿಯು ಅದರ ಹೆಡ್‌ಲ್ಯಾಂಪ್‌ನ ಕೆಳಗೆ ವಿಶೇಷ ಡ್ರ್ಯಾಗನ್ ಲೈವರಿಯನ್ನು ಹೊಂದಿದೆ. ಇದು 150cc ಎಂಜಿನ್‌ನಿಂದ ಚಾಲಿತವಾಗಿದ್ದು, ಐರನ್ - ಮೊನೊಕೊಕ್ ಬಾಡಿಯನ್ನು ಹೊಂದಿದೆ. 12 - ಇಂಚಿನ ಸೊಗಸಾದ ವೀಲ್‌ಗಳನ್ನು ಹೊಂದಿರುವ ಈ ಸ್ಕೂಟರ್ ಮುಂಭಾಗದಲ್ಲಿ 220mm ಡಿಸ್ಕ್ ಬ್ರೇಕ್ ಅನ್ನು ಪಡೆದಿದೆ.

ವೆಸ್ಪಾ 946 ಡ್ರ್ಯಾಗನ್ ಜೊತೆಗೆ ವಿಶೇಷವಾದ ವಾರ್ಸಿಟಿ ಜಾಕೆಟ್ ಅನ್ನು ಸಹ ನೀಡಲಾಗುತ್ತಿದೆ. ಈ ಜಾಕೆಟ್ ಅನ್ನು ವೆಸ್ಪಾ 946 ಡ್ರ್ಯಾಗನ್‌ನ ವಿನ್ಯಾಸದಿಂದ ಚಿತ್ರಿಸಲಾಗಿದ್ದು, ಉಣ್ಣೆ ಮತ್ತು ಚರ್ಮದಲ್ಲಿ ತಯಾರಿಸಲಾಗಿದೆ. ಹಾಗೆಯೇ ವಾರ್ಸಿಟಿ ಜಾಕೆಟ್‌ನ ಎಡ ಪಾಕೆಟ್ ಮತ್ತು ಹಿಂಭಾಗದ ಪ್ಯಾನೆಲ್‌ನಲ್ಲಿ ಪ್ರಿಂಟ್‌ಗಳು ಮತ್ತು ಎಂಬ್ರಾಯಿಡರಿ ಜೊತೆಗೆ ಹಸಿರು ಬಣ್ಣದಲ್ಲಿ ಡ್ರ್ಯಾಗನ್ ಮೋಟಿಫ್ ಅನ್ನು ನೀಡಲಾಗಿದೆ.

vespa-collector-s-edition-946-dragon-launched-in-india

ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಡಿಯಾಗೋ ಗ್ರಾಫಿ ಮಾತನಾಡಿ, ಅಪರೂಪದ ಸಂಗ್ರಹಣೆಗಳನ್ನು ಮೆಚ್ಚುವ ಗ್ರಾಹಕರಿಗಾಗಿ ನಮ್ಮ ಸಂಗ್ರಾಹಕರ ಆವೃತ್ತಿ ವೆಸ್ಪಾ 946 ಡ್ರ್ಯಾಗನ್ ಅನ್ನು ಭಾರತಕ್ಕೆ ತರಲು ನಾವು ಉತ್ಸುಕರಾಗಿದ್ದೇವೆ. ವೆಸ್ಪಾ 946 ಡ್ರ್ಯಾಗನ್ ಖರೀದಿಯೊಂದಿಗೆ ಗ್ರಾಹಕರು ಪಡೆಯುವ ನಮ್ಮ ವಿಶೇಷ ವೆಸ್ಪಾ ಡ್ರ್ಯಾಗನ್ ವಾರ್ಸಿಟಿ ಜಾಕೆಟ್‌ನೊಂದಿಗೆ ಭಾರತದಲ್ಲಿ ನಮ್ಮ ಮೊದಲ ಫ್ಯಾಶನ್ ಐಟಂ ಅನ್ನು ಪ್ರಸ್ತುತಪಡಿಸಲು ನಾವು ಹೆಮ್ಮೆಪಡುತ್ತೇವೆ ಎಂದರು.

ಈ ವಾಹನದ ಬೆಲೆಯು ರೂ. 14,27,999 (ಎಕ್ಸ್ ಶೋರೂಂ, ಭಾರತ)ವಿದ್ದು, ಈಗ ಭಾರತದಾದ್ಯಂತ ಮೋಟೋಪ್ಲೆಕ್ಸ್ ಶೋರೂಮ್‌ನಲ್ಲಿ ಬುಕ್ಕಿಂಗ್‌ಗಳು ಎಲ್ಲರಿಗೂ ತೆರೆದಿವೆ. ಬೆಲೆ ನೋಡಿ ಅಚ್ಚರಿಗೊಳ್ಳಬಹುದು, ಅದ್ರೆ ವೆಸ್ಪಾ ಇಂತಹ ಸ್ಕೂಟರ್‌ಗಳನ್ನು ವಿಶೇಷ ಆವೃತ್ತಿಗಳಂತೆ ಆಗಾಗ್ಗೆ ಬಿಡುಗಡೆ ಮಾಡುತ್ತದೆ. ಈ ಸ್ಕೂಟರ್‌ಗಳಿಗೆ ವಿಶ್ವದಾದ್ಯಂತ ಬೇಡಿಕೆಯಿದ್ದು, ಇವನ್ನು ಓಡಿಸಲು ಯಾರೂ ಕೂಡ ಖರೀದಿಸುವುದಿಲ್ಲ, ಬದಲಾಗಿ ಇದನ್ನು ಸಂಗ್ರಹಣೆಗಾಗಿ ಖರೀದಿಸುತ್ತಾರೆ.

vespa-collector-s-edition-946-dragon-launched-in-india

ವೆಸ್ಪಾ ಬಗ್ಗೆ: 1946 ರಲ್ಲಿ ಹುಟ್ಟಿಕೊಂಡ ವೆಸ್ಪಾ (ಇಟಾಲಿಯನ್ ಭಾಷೆಯಲ್ಲಿ "ಕಣಜ" ಎಂದರ್ಥ) ಕಂಪನಯು ಕಲೆ, ವಿನ್ಯಾಸ, ತಂತ್ರಜ್ಞಾನ ಮತ್ತು ವಿನೋದವನ್ನು ಸಂಕೇತಿಸುತ್ತದೆ. ತನ್ನ ವಿಶಿಷ್ಟತೆಯಿಂದಲೇ ಅತ್ಯಂತ ಮೆಚ್ಚುಗೆ ಮತ್ತು ಅಪೇಕ್ಷಿತ ಬ್ರಾಂಡ್‌ಗಳಲ್ಲಿ ಒಂದಾಗಿ ಗುರ್ತಿಸಿಕೊಂಡಿದೆ. ವಿಶ್ವಾದ್ಯಂತ ವೆಸ್ಪಾ ಸ್ಕೂಟರ್‌ಗಳು ಇಟಲಿಯಲ್ಲಿ ತಯಾರಿಸಲಾದ ಒಂದು ಸಾಂಪ್ರದಾಯಿಕ, ಕ್ರಿಯಾತ್ಮಕ ಮತ್ತು ಸುಂದರವಾದ ಉತ್ಪನ್ನಗಳಾಗಿ ಜನಪ್ರಿಯತೆ ಪಡೆದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, July 1, 2024, 16:49 [IST]
English summary
Vespa collector s edition 946 dragon launched in india
Read more on piaggio india new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+