ವೆಸ್ಪಾ ಕಲೆಕ್ಟರ್ ಎಡಿಷನ್ 946 ಡ್ರ್ಯಾಗನ್ ದುಬಾರಿ ಸ್ಕೂಟರ್ ಬೆಲೆ, ವಿಶೇಷತಗಳು!

ಇತ್ತೀಚೆಗೆ ಇಟಾಲಿಯನ್ ಕಂಪಿಯಾದ ಪಿಯಾಜಿಯೊ, ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಸೀಮಿತ ಸಂಖ್ಯೆಯಲ್ಲಿ ಲಭ್ಯವಿರಲಿದ್ದು, ಈ ವಿಶೇಷ ಸ್ಕೂಟರ್ ಅನ್ನು ಸಂಪೂರ್ಣವಾಗಿ ನಿರ್ಮಿಸಿದ ಘಟಕಗಳಾಗಿ (CBU) ಭಾರತಕ್ಕೆ ತಂದು ಮಾರಾಟ ಮಾಡಲಾಗುವುದು. ಇಟಲಿಯಲ್ಲಿ ಕೈಯಿಂದ ರಚಿಸಲಾದ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾದ ವೆಸ್ಪಾ 946 ಡ್ರ್ಯಾಗನ್‌ನ ವಿನ್ಯಾಸವು ಸಂಸ್ಕೃತಿ, ನಾವೀನ್ಯತೆ ಮತ್ತು ಅತ್ಯಾಧುನಿಕತೆಯ ಒಟ್ಟುಗೂಡಿಸುವಿಕೆಗೆ ಗೌರವವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇಂತಹ ವಿಶೇಷ ಸ್ಕೂಟರ್ ಕುರಿತ ಹೆಚ್ಚಿನ ವಿಷಯಗಳನ್ನು ಇಲ್ಲಿ ನೋಡೋಣ.

ವೆಸ್ಪಾ ಬಗ್ಗೆ: 1946 ರಲ್ಲಿ ಹುಟ್ಟಿಕೊಂಡ ವೆಸ್ಪಾ (ಇಟಾಲಿಯನ್ ಭಾಷೆಯಲ್ಲಿ "ಕಣಜ" ಎಂದರ್ಥ) ಕಂಪನಿಯು ಕಲೆ, ವಿನ್ಯಾಸ, ತಂತ್ರಜ್ಞಾನ ಮತ್ತು ವಿನೋದವನ್ನು ಸಂಕೇತಿಸುತ್ತದೆ. ತನ್ನ ವಿಶಿಷ್ಟತೆಯಿಂದಲೇ ಅತ್ಯಂತ ಮೆಚ್ಚುಗೆ ಮತ್ತು ಅಪೇಕ್ಷಿತ ಬ್ರಾಂಡ್‌ಗಳಲ್ಲಿ ಒಂದಾಗಿ ಗುರ್ತಿಸಿಕೊಂಡಿದೆ. ವಿಶ್ವಾದ್ಯಂತ ವೆಸ್ಪಾ ಸ್ಕೂಟರ್‌ಗಳು ಇಟಲಿಯಲ್ಲಿ ತಯಾರಿಸಲಾದ ಒಂದು ಸಾಂಪ್ರದಾಯಿಕ, ಕ್ರಿಯಾತ್ಮಕ ಮತ್ತು ಸುಂದರವಾದ ಉತ್ಪನ್ನಗಳಾಗಿ ಜನಪ್ರಿಯತೆ ಪಡೆದಿವೆ.

vespa-collector-s-edition-946-dragon-scooter-price-specs-details

ಇನ್ನು ಹೊಸ ವೆಸ್ಪಾ ಡ್ರ್ಯಾಗನ್ ಎಡಿಷನ್ ವಿಷಯಕ್ಕೆ ಬಂದರೆ, ವೆಸ್ಪಾ 946 ಡ್ರ್ಯಾಗನ್‌ಗಾಗಿ ಭಾರತದಾದ್ಯಂತ ಇರುವ ಪಿಯಾಜಿಯೊದ ಮೋಟೋಪ್ಲೆಕ್ಸ್ ಶೋರೂಮ್‌ಗಳಲ್ಲಿ ಬುಕ್ಕಿಂಗ್ ಮಾಡಬಹುದು. ಈ ಸ್ಕೂಟರ್ ಬೆಲೆಯು ರೂ. 14,27,999 (ಎಕ್ಸ್ ಶೋರೂಂ, ಭಾರತ) ಇದೆ. ಬೆಲೆ ನೋಡಿ ಅಚ್ಚರಿಗೊಳ್ಳಬಹುದು, ಅದ್ರೆ ವೆಸ್ಪಾ ಇಂತಹ ಸ್ಕೂಟರ್‌ಗಳನ್ನು ವಿಶೇಷ ಆವೃತ್ತಿಗಳಂತೆ ಆಗಾಗ್ಗೆ ಬಿಡುಗಡೆ ಮಾಡುತ್ತದೆ.

ಈ ಸ್ಕೂಟರ್‌ಗಳಿಗೆ ವಿಶ್ವದಾದ್ಯಂತ ಬೇಡಿಕೆಯಿದ್ದು, ಇವನ್ನು ಓಡಿಸಲು ಯಾರೂ ಕೂಡ ಖರೀದಿಸುವುದಿಲ್ಲ, ಬದಲಾಗಿ ಇದನ್ನು ಸಂಗ್ರಹಣೆಗಾಗಿ ಖರೀದಿಸುತ್ತಾರೆ. 946 ಡ್ರ್ಯಾಗನ್ ಆವೃತ್ತಿಯು ಅದರ ಹೆಡ್‌ಲ್ಯಾಂಪ್‌ನ ಕೆಳಗೆ ವಿಶೇಷ ಡ್ರ್ಯಾಗನ್ ಲೈವರಿಯನ್ನು ಹೊಂದಿದೆ. ಇದು 150cc ಎಂಜಿನ್‌ನಿಂದ ಚಾಲಿತವಾಗಿದ್ದು, ಐರನ್ - ಮೊನೊಕೊಕ್ ಬಾಡಿಯನ್ನು ಹೊಂದಿದೆ.

vespa-collector-s-edition-946-dragon-scooter-price-specs-details

12 - ಇಂಚಿನ ಸೊಗಸಾದ ವೀಲ್‌ಗಳನ್ನು ಹೊಂದಿರುವ ಈ ಸ್ಕೂಟರ್ ಮುಂಭಾಗದಲ್ಲಿ 220mm ಡಿಸ್ಕ್ ಬ್ರೇಕ್ ಅನ್ನು ಪಡೆದಿದೆ. ವೆಸ್ಪಾ 946 ಡ್ರ್ಯಾಗನ್ ಜೊತೆಗೆ ವಿಶೇಷವಾದ ವಾರ್ಸಿಟಿ ಜಾಕೆಟ್ ಅನ್ನು ಸಹ ನೀಡಲಾಗುತ್ತಿದೆ. ಈ ಜಾಕೆಟ್ ಅನ್ನು ವೆಸ್ಪಾ 946 ಡ್ರ್ಯಾಗನ್‌ನ ವಿನ್ಯಾಸದಿಂದ ಚಿತ್ರಿಸಲಾಗಿದ್ದು, ಉಣ್ಣೆ ಮತ್ತು ಚರ್ಮದಲ್ಲಿ ತಯಾರಿಸಲಾಗಿದೆ.

ಹಾಗೆಯೇ ವಾರ್ಸಿಟಿ ಜಾಕೆಟ್‌ನ ಎಡ ಪಾಕೆಟ್ ಮತ್ತು ಹಿಂಭಾಗದ ಪ್ಯಾನೆಲ್‌ನಲ್ಲಿ ಪ್ರಿಂಟ್‌ಗಳು ಮತ್ತು ಎಂಬ್ರಾಯಿಡರಿ ಜೊತೆಗೆ ಹಸಿರು ಬಣ್ಣದಲ್ಲಿ ಡ್ರ್ಯಾಗನ್ ಮೋಟಿಫ್ ಅನ್ನು ನೀಡಲಾಗಿದೆ. ವಿಶೇಷ ವೆಸ್ಪಾ ಡ್ರ್ಯಾಗನ್ ವಾರ್ಸಿಟಿ ಜಾಕೆಟ್‌ನೊಂದಿಗೆ ಭಾರತದಲ್ಲಿ ನಮ್ಮ ಮೊದಲ ಫ್ಯಾಶನ್ ಐಟಂ ಅನ್ನು ಪ್ರಸ್ತುತಪಡಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಕಂಪನಿ ಹೇಳಿಕೊಂಡಿದೆ.

vespa-collector-s-edition-946-dragon-scooter-price-specs-details

ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಡಿಯಾಗೋ ಗ್ರಾಫಿ ಮಾತನಾಡಿ, ಅಪರೂಪದ ಸಂಗ್ರಹಣೆಗಳನ್ನು ಮೆಚ್ಚುವ ಗ್ರಾಹಕರಿಗಾಗಿ ನಮ್ಮ ಸಂಗ್ರಾಹಕರ ಆವೃತ್ತಿ ವೆಸ್ಪಾ 946 ಡ್ರ್ಯಾಗನ್ ಅನ್ನು ಭಾರತಕ್ಕೆ ತರಲು ನಾವು ಉತ್ಸುಕರಾಗಿದ್ದೇವೆ. ವೆಸ್ಪಾ 946 ಡ್ರ್ಯಾಗನ್ ಖರೀದಿಯೊಂದಿಗೆ ಗ್ರಾಹಕರು ಪಡೆಯುವ ನಮ್ಮ ವಿಶೇಷ ವೆಸ್ಪಾ ಡ್ರ್ಯಾಗನ್ ವಾರ್ಸಿಟಿ ಜಾಕೆಟ್‌ನೊಂದಿಗೆ ಭಾರತದಲ್ಲಿ ನಮ್ಮ ಮೊದಲ ಫ್ಯಾಶನ್ ಐಟಂ ಅನ್ನು ಪ್ರಸ್ತುತಪಡಿಸಲು ನಾವು ಹೆಮ್ಮೆಪಡುತ್ತೇವೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, July 26, 2024, 9:00 [IST]
English summary
Vespa collector s edition 946 dragon scooter price specs details
Read more on piaggio india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+