2025 Honda Dio: ಹೊಸ 2025 ಹೋಂಡಾ ಡಿಯೋ ಸ್ಕೂಟರ್‌ನಲ್ಲಿ ಟಾಪ್ ಫೀಚರ್ಸ್!

ಹೊಸ ತಂತ್ರಜ್ಞಾನ, ಹಲವು ಫೀಚರ್ಸ್ ಮತ್ತು ವಿವಿಧ ಬಣ್ಣಗಳ ಆಯ್ಕೆಗಳೊಂದಿಗೆ ಹೋಂಡಾ ಕಂಪನಿಯು ತನ್ನ ಬಹುನಿರೀಕ್ಷಿತ ಹೊಸ 2025ರ ಹೋಂಡಾ ಡಿಯೋ (2025 Honda Dio) ವನ್ನು ಮೊನ್ನೆಯಷ್ಟೆ ಬಿಡುಗಡೆ ಮಾಡಿದೆ. ಹೊಸ ಹೋಂಡಾ ಡಿಯೋ STD ಮತ್ತು DLX ಎಂಬ ಎರಡು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಡಿಯೋ STD ಬೆಲೆಯು ರೂ.74,930 (ಎಕ್ಸ್ ಶೋರೂಂ) ಇದ್ದರೇ, ಡಿಯೋ DLX ಬೆಲೆಯು ರೂ.85,648 (ಎಕ್ಸ್ ಶೋರೂಂ) ಇದೆ. ಹೊಸ 2025 ಹೋಂಡಾ ಡಿಯೋ ಸ್ಕೂಟರ್ ಟಾಪ್ ಫೀಚರ್ಸ್ ಇಲ್ಲಿವೆ.

ಈಗ ಹೊಸ ಡಿಯೋ ಹಲವು ಹೊಸ ಅಪ್‌ಡೇಟ್‌ಗಳ ಜೊತೆಗೆ ಒಬಿಡಿ 2 ಬಿ ಅನುಸರಣೆ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ. ಹಾಗೆಯೇ ಪರ್ಲ್ ಇಗ್ನಿಯಸ್ ಬ್ಲಾಕ್+ಪರ್ಲ್ ಡೀಪ್ ಗ್ರೌಂಡ್ ಗ್ರೇ, ಇಂಪೀರಿಯಲ್ ರೆಡ್ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲಾಕ್, ಮ್ಯಾಟ್ ಮಾರ್ವೆಲ್ ಬ್ಲೂ, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಗೆ ಸಿಗಲಿದೆ.

2025-honda-dio-top-things-you-should-know

ಹೊಸ ಡಿಯೋ 1808 ಮಿ.ಮೀ ಉದ್ದ, 723 ಎಂಎಂ ಅಗಲ, 1150 ಎಂಎಂ ಎತ್ತರ, 1260 ಎಂಎಂ ವ್ಹೀಲ್ ಬೇಸ್, 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಈ ಮೂಲಕ ಡಿಯೋ ತನ್ನ ಆಕರ್ಷಕ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಕಾಂಪ್ಯಾಕ್ಟ್ ಮತ್ತು ಪ್ರಾಯೋಗಿಕ ರಚನೆಯೊಂದಿಗೆ ಅದೇ ಅಳತೆಗಳನ್ನು ಉಳಿಸಿಕೊಂಡಿದೆ. ಹಾಗೆಯೇ 103 ಕೆಜಿ ತೂಕದ ಜೊತೆಗೆ 5.3 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

ಎಂಜಿನ್ ವಿಷಯಕ್ಕೆ ಬಂದರೆ 2025ರ ಹೊಸ ಹೋಂಡಾ ಡಿಯೋನಲ್ಲಿ 5.85 ಕಿಲೋವ್ಯಾಟ್ ಪವರ್ ಮತ್ತು 9.03 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ 109.51 ಸಿಸಿ ಸಿಂಗಲ್ ಸಿಲಿಂಡರ್, ಪಿಜಿಎಂ - ಎಫ್ಐ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಸೆಲ್ಫ್-ಸ್ಟಾರ್ಟ್ ಸಿಸ್ಟಮ್‌ನೊಂದಿಗೆ ಜೋಡಿಸಲಾಗಿದ್ದು, ಸವಾರರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ ಎಂದು ಕಂಪನಿ ತಿಳಿಸಿದೆ.

2025-honda-dio-top-things-you-should-know

ಫೀಚರ್ಸ್ ವಿಷಯಕ್ಕೆ ಬಂದರೆ ಹೊಸ ಡಿಯೋದಲ್ಲಿ ಹೆಚ್ಚು ಆಕರ್ಷಕವಾಗಿ ಕಾಣಲು ಟಾಪ್-ಸ್ಪೆಕ್ DLX ವೇರಿಯೆಂಟ್‌ನಲ್ಲಿ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ. ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಇಂಧನ ಮಿತವ್ಯಯಕ್ಕಾಗಿ ಐಡ್ಲಿಂಗ್ ಸ್ಟಾಪ್ ಸಿಸ್ಟಮ್, ಇವಿಷ್ಟೇ ಅಲ್ಲದೇ 4.2-ಇಂಚಿನ TFT ಡಿಜಿಟಲ್ ಡಿಸ್ಪ್ಲೇ, ಮೈಲೇಜ್ ಇಂಡಿಕೇಟರ್, ಟ್ರಿಪ್ ಮೀಟರ್, ಇಕೋ ಇಂಡಿಕೇಟರ್‌ನಂತಹ ಅಗತ್ಯ ಮಾಹಿತಿ ಪಡೆಯಬಹುದು.

2025 ಡಿಯೋ ಕೇವಲ ಸವಾರಿ ಮಾತ್ರವಲ್ಲದೆ ಪವರ್ ಮತ್ತು ಡಿಸೈನ್‌ನೊಂದಿಗೆ ಭಾರತದ ಯುವ ಪೀಳಿಗೆಯ ಆಕಾಂಕ್ಷೆಗಳನ್ನು ಈಡೇರಿಸುವ ಬೆಸ್ಟ್ ಸ್ಕೂಟರ್ ಆಗಿದೆ. ಈ ಸ್ಕೂಟರ್ ಒಬಿಡಿ 2 ಬಿ-ಕಾಂಪ್ಲೈಂಟ್ ಎಂಜಿನ್ ಇತ್ತೀಚಿನ ಹೊರಸೂಸುವಿಕೆಯ ಮಾನದಂಡಗಳನ್ನು ಪೂರೈಸುವುದಲ್ಲದೆ ಅಸಾಧಾರಣ ಪರ್ಫಾಮೆನ್ಸ್ ಮತ್ತು ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

2025-honda-dio-top-things-you-should-know

2025 ಡಿಯೋ ಬಿಡುಗಡೆಯೊಂದಿಗೆ ಸ್ಕೂಟರ್‌ನ ಪ್ರಮುಖ ಪರಿಕಲ್ಪನೆಯನ್ನು ಹಾಗೆಯೇ ಉಳಿಸಿಕೊಂಡು ಆಧುನಿಕ ತಂತ್ರಜ್ಞಾನ, ವರ್ಧಿತ ಪರ್ಫಾಮೆನ್ಸ್ ಮತ್ತು ಪರಿಸರ ಸ್ನೇಹಿ ಅನುಸರಣೆಯನ್ನು ಸಂಯೋಜಿಸುವ ಮೂಲಕ ಸ್ಕೂಟರ್ ಅನುಭವವನ್ನು ಮರುವ್ಯಾಖ್ಯಾನಿಸುವ ಗುರಿಯನ್ನು ಹೊಂದಿದ್ದೇವೆ. ಡಿಯೋ ಯಾವಾಗಲೂ ಯುವ ಶಕ್ತಿ ಮತ್ತು ನಾವೀನ್ಯತೆಗೆ ಸಮಾನಾರ್ಥಕವಾಗಿದೆ ಎಂದು ಹೋಂಡಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಯೋಗೇಶ್ ಮಾಥುರ್ ಹೇಳಿದರು.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 16, 2025, 11:26 [IST]
English summary
2025 honda dio top things you should know
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+