Hond Livo: ಹೀರೋಗೆ ಆತಂಕ... ಸ್ಪ್ಲೆಂಡರ್‌ಗೆ ಸೆಡ್ಡು... ಹೊಸ ಮೈಲೇಜ್ ಬೈಕ್ ಬಿಡುಗಡೆ!

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ, ತನ್ನ 'ಲಿವೊ' (Hond Livo) ಮೋಟಾರ್‌ಸೈಕಲ್ ಅನ್ನು ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಇತ್ತೀಚಿನ ನವೀಕರಣಗಳೊಂದಿಗೆ ಲಿವೊ ಮೋಟಾರ್‌ಸೈಕಲ್‌ ರೂ.83,080 (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ಹೊಸ ಹೋಂಡಾ ಲಿವೊ ಮೋಟಾರ್‌ಸೈಕಲ್‌ ಕೆಲವು ಪ್ರಮುಖ ನವೀಕರಣಗಳೊಂದಿಗೆ ಸ್ಪ್ಲೆಂಡರ್, ಹೀರೋ ಪ್ಯಾಷನ್ ಮತ್ತು ಟಿವಿಎಸ್‌ನಂತಹ ಪ್ರಮುಖ ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ. 2025ರ ಹೋಂಡಾ ಲಿವೊ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೋಂಡಾ ಲಿವೊ ಹೊಸ ಅಪ್‌ಡೇಟ್‌ಗಳು: 2025ರ ಹೋಂಡಾ ಲಿವೊ ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಟೆಲಿಸ್ಕೋಪಿಕ್ ಫೋರ್ಕ್‌ಗಳು, ಡ್ಯುಯಲ್ ರಿಯರ್ ಶಾಕ್ ಅಬ್ಸಾರ್ಬರ್‌ಗಳು, ಅಲಾಯ್ ವೀಲ್ಸ್ ಮತ್ತು ಎಂಜಿನ್ ಕಾಂಪೊನೆಂಟ್‌ಗಳನ್ನು ಕಪ್ಪು ಬಣ್ಣದಲ್ಲಿ ಫಿನಿಶ್ ಮಾಡಲಾಗಿದೆ. ಜೊತೆಗೆ ಹೊಸ ಗ್ರಾಫಿಕ್ಸ್ ಡಿಸೈನ್‌ನೊಂದಿಗೆ ಈಗ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತದೆ.

2025-new-updated-honda-livo-launched-in-india

ಹೊಸ ಹೋಂಡಾ ಲಿವೊ ಪರ್ಲ್ ಇಗ್ನಿಯಸ್ ಬ್ಲ್ಯಾಕ್ ವಿತ್ ಬ್ಲೂ ಸ್ಟ್ರೈಪ್ಸ್, ಪರ್ಲ್ ಇಗ್ನಿಯಸ್ ಬ್ಲ್ಯಾಕ್ ವಿತ್ ಆರೆಂಜ್ ಸ್ಟ್ರೈಪ್ಸ್ ಮತ್ತು ಪರ್ಲ್ ಸೈರನ್ ಬ್ಲೂ ಎಂಬ ಮೂರು ಹೊಸ ಬಣ್ಣಗಳಲ್ಲಿ ಲಭ್ಯವಿದೆ. ಹೊಸ ಹೋಂಡಾ ಲಿವೊ ಬೈಕ್ ಆಕರ್ಷಕ ಟ್ಯಾಂಕ್ ಕವರ್ ಮತ್ತು ಸಣ್ಣ ಬಿಕಿನಿ ಫೇರಿಂಗ್ ಹೊಂದಿರುವ ಮಸ್ಕುಲರ್ ಟ್ಯಾಂಕ್ ಹೊಂದಿದೆ.

ಪೀಚರ್ಸ್ ನೋಡುವುದಾದ್ರೆ, ರಿಯಲ್‌ ಟೈಮ್‌ ಮೈಲೇಜ್, ಸರಾಸರಿ ಮೈಲೇಜ್, ಗೇರ್ ಪೊಸಿಷನ್ ಇಂಡಿಕೇಟರ್, ಸರ್ವಿಸ್ ರಿಮೈಂಡರ್ ಹೊಂದಿರುವ ಸಂಪೂರ್ಣ ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಇದರ ಎಂಜಿನ್ ಈಗ ಒಬಿಡಿ 2 ಬಿ ಕಾಂಪ್ಲೈಂಟ್ ಆಗಿದೆ. 109.51 ಸಿಸಿ ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಏರ್ ಕೂಲ್ಡ್ ಎಂಜಿನ್ 8.4 ಬಿಹೆಚ್‌ಪಿ ಮತ್ತು 9.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2025-new-updated-honda-livo-launched-in-india

ಬೆಲೆಯ ವಿವರ: 2025 ಹೋಂಡಾ ಲಿವೊ ಬೇಸ್ ಡ್ರಮ್ ವೇರಿಯೆಂಟ್ ರೂ.83,080 (ಎಕ್ಸ್ ಶೋರೂಂ) ನಿಂದ ಪ್ರಾರಂಭವಾಗಲಿದ್ದು, ಡಿಸ್ಕ್ ವೇರಿಯೆಂಟ್ ಬೆಲೆಯು ರೂ.85,878 (ಎಕ್ಸ್ ಶೋರೂಂ) ಇದೆ. ಹೋಂಡಾ ಆಕರ್ಷಕ ಗ್ರಾಫಿಕ್ಸ್ ಅನ್ನು ಫ್ಯೂಯಲ್ ಟ್ಯಾಂಕ್, ಹೆಡ್ ಲೈಟ್ ಮತ್ತು ಸೈಡ್ ಬಾಡಿ ಪ್ಯಾನೆಲ್‌ಗಳಲ್ಲಿ ಕಾಣಬಹುದು.

ಸಾಮಾನ್ಯ ಡಿಸೈನ್ & ಫೀಚರ್ಸ್: ಹೋಂಡಾ ಲಿವೊ ಸ್ಟ್ಯಾಂಡರ್ಡ್ ಪಿಲಿಯನ್ ಗ್ರಾಬ್ ರೈಲ್ ಜೊತೆಗೆ ಉದ್ದವಾದ ಸಿಂಗಲ್ ಪೀಸ್ ಸೀಟ್, ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಇದೆ. ಇತರ ಗಮನಾರ್ಹ ಸೇರ್ಪಡೆಗಳಲ್ಲಿ ಎಂಜಿನ್ ಕಟ್-ಆಫ್ ವೈಶಿಷ್ಟ್ಯದೊಂದಿಗೆ ಸೈಡ್ ಸ್ಟ್ಯಾಂಡ್ ಸೆನ್ಸಾರ್ ಸೇರಿದೆ.

ಅದೇ ಆರ್‌ಎಸ್‌ಯು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು, ಟ್ವಿನ್ ರಿಯರ್ ಶಾಕ್ ಅಬ್ಸಾರ್ಬರ್‌ಗಳು, 80/100 ಟೈರ್‌ಳೊಂದಿಗೆ 18-ಇಂಚಿನ ಅಲಾಯ್ ವೀಲ್‌ಗಳು ಮತ್ತು ಸಿಬಿಎಸ್ (ಕಾಂಬಿ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ. 110 ಸಿಸಿ ವಿಭಾಗದಲ್ಲಿ ನಮ್ಮ ಗ್ರಾಹಕರಿಗೆ ಪ್ರೀಮಿಯಂ ಅನುಭವವನ್ನು ನೀಡುವ ನಮ್ಮ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ಹೇಳಿದೆ.

ಬಿಡುಗಡೆಯ ಬಗ್ಗೆ ಮಾತನಾಡಿದ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಯೋಗೇಶ್ ಮಾಥುರ್, "ಹೋಂಡಾ ಲಿವೊ ನಮ್ಮ ಗ್ರಾಹಕರಿಗೆ ವಿಶ್ವಾಸಾರ್ಹ ಆಯ್ಕೆಯಾಗಿದೆ. ಈ ಮೋಟಾರ್‌ ಸೈಕಲ್ 2025 ಮಾದರಿಯೊಂದಿಗೆ, ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, January 21, 2025, 11:48 [IST]
English summary
2025 new updated honda livo launched in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+