Honda: ಹೊಸ ಬೈಕ್ ಅನಾವರಣ: 125 ಸಿಸಿ ವಿಭಾಗದ ಅತ್ಯಂತ ಪವರ್‌ಫುಲ್ ಮೋಟಾರ್‌ಸೈಕಲ್!

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೋಂಡಾ (Honda), ಭಾರತಕ್ಕೆ ಲಗ್ಗೆಯಿಟ್ಟು ಇಂದಿಗೆ 25 ವರ್ಷಗಳನ್ನು ಪೂರ್ಣಗೊಳಿಸಿದೆ. ಇದರ ಭಾಗವಾಗಿ ಕಂಪನಿಯು CB125 ಹಾರ್ನೆಟ್ (CB125 Hornet) ಬೈಕ್‌ನ್ನು ಅನಾವರಣಗೊಳಿಸಿದೆ. ಹೊಚ್ಚ ಹೊಸ ಹೋಂಡಾ CB125 ಹಾರ್ನೆಟ್ ಬುಕಿಂಗ್‌ಗಳು ಆಗಸ್ಟ್ 1, 2025 ರಿಂದ ಪ್ರಾರಂಭವಾಗಲಿವೆ. ಹೋಂಡಾ CB125 ಹಾರ್ನೆಟ್ ಅನ್ನು ಇಂದಿನ ನಗರ ಯುವಕರಿಗಾಗಿ ವಿನ್ಯಾಸಗೊಳಿಸಲಾಗಿದೆ, ಆಕ್ರಮಣಕಾರಿ ವಿನ್ಯಾಸ, ಸುಧಾರಿತ ವೈಶಿಷ್ಟ್ಯಗಳು ಮತ್ತು ರೋಮಾಂಚಕ ಪರ್ಫಾಮೆನ್ಸ್‌ನೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

ಕಂಪನಿಯ ಪ್ರಕಾರ ಹೊಸ CB125 ಹಾರ್ನೆಟ್, ತನ್ನ ವರ್ಗದಲ್ಲಿಯೇ ಅತ್ಯಂತ ವೇಗದ ಮೋಟಾರ್‌ಸೈಕಲ್ ಆಗಿದೆ. ಇದು LED DRL ಗಳೊಂದಿಗೆ ಸಿಗ್ನೇಚರ್ ಟ್ವಿನ್-LED ಹೆಡ್‌ಲ್ಯಾಂಪ್ ಮತ್ತು ಹೈ-ಮೌಂಟೆಡ್ LED ಟರ್ನ್ ಇಂಡಿಕೇಟರ್‌ಗಳನ್ನು ಒಳಗೊಂಡಂತೆ ಸಂಪೂರ್ಣ-LED ಸೆಟಪ್ ಹೊಂದಿದೆ. ಸೈಡ್ ಪ್ರೊಫೈಲ್‌ ಡಿಸೈನ್ ವಿಷಯಕ್ಕೆ ಬಂದರೆ ಹಾರ್ನೆಟ್ ಮಸ್ಕುಲರ್ ಫ್ಯೂಲ್ ಟ್ಯಾಂಕ್ ಹಾಗೂ ಟ್ಯಾಂಕ್ ಶ್ರೌಡ್‌ಗಳು ಸೇರಿದಂತೆ ಸ್ಟೈಲಿಶ್ ಮಫ್ಲರ್‌ನೊಂದಿಗೆ ಬರುತ್ತದೆ.

all-new-honda-cb125-hornet-unveiled-in-india

ಇದರ ಪ್ರೀಮಿಯಂ ವಿನ್ಯಾಸದೊಂದಿಗೆ ಮೊದಲ ಇನ್ ಸೆಗ್ಮೆಂಟ್ ಗೋಲ್ಡನ್ USD ಫ್ರಂಟ್ ಫೋರ್ಕ್‌ಗಳು, 5-ಸ್ಟೆಪ್ ಅಡ್ಜಸ್ಟಬಲ್ ಮೊನೊ - ಶಾಕ್ ಅಬ್ಸಾರ್ಬರ್, ಇಂಧನ ಟ್ಯಾಂಕ್‌ನಲ್ಲಿ ಇಗ್ನಿಷನ್ ಕೀ, ಮಲ್ಟಿ ಸ್ಪೋಕ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಸವಾರ ಮತ್ತು ಹಿಂಬದಿ ಸವಾರರಿಬ್ಬರಿಗೂ ಉತ್ತಮ ಸೌಕರ್ಯಕ್ಕಾಗಿ ಸ್ಪ್ಲಿಟ್ ಸೀಟ್ ಸೆಟಪ್ ನೀಡಲಾಗಿದೆ.

ಯುವ ಸವಾರರ ಆದ್ಯತೆಗಳಿಗೆ ಅನುಗುಣವಾಗಿ ಹೊಸ CB125 ಹಾರ್ನೆಟ್ ಅನ್ನು ನಾಲ್ಕು ಡೈನಾಮಿಕ್ ಬಣ್ಣಗಳಲ್ಲಿ ನೀಡಲಾಗುತ್ತಿದೆ. ಅವುಗಳೆಂದರೆ - ಲೆಮೆನ್ ಐಸ್ ಯೆಲ್ಲೋದೊಂದಿಗೆ ಪರ್ಲ್ ಸೈರೆನ್ ಬ್ಲೂ, ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಅಥ್ಲೆಟಿಕ್ ಬ್ಲೂ ಮೆಟಾಲಿಕ್‌ನೊಂದಿಗೆ ಪರ್ಲ್ ಸೈರೆನ್ ಬ್ಲೂ ಮತ್ತು ಸ್ಪೋರ್ಟ್ಸ್ ರೆಡ್‌ನೊಂದಿಗೆ ಪರ್ಲ್ ಸೈರೆನ್ ಬ್ಲೂ ಇವೆ.

all-new-honda-cb125-hornet-unveiled-in-india

ಫೀಚರ್ಸ್ ವಿಷಯಕ್ಕೆ ಬಂದರೆ, ಇದು ಬ್ಲೂಟೂತ್ ಸಂಪರ್ಕ ಮತ್ತು ಹೋಂಡಾ ರೋಡ್‌ಸಿಂಕ್ ಅಪ್ಲಿಕೇಶನ್ ಹೊಂದಾಣಿಕೆಯೊಂದಿಗೆ 4.2-ಇಂಚಿನ TFT ಡಿಸ್ಪ್ಲೇಯನ್ನು ಹೊಂದಿದೆ. ಹೆಡ್‌ಸೆಟ್‌ನೊಂದಿಗೆ ನ್ಯಾವಿಗೇಷನ್, ಕರೆಗಳು ಮತ್ತು SMS ಎಚ್ಚರಿಕೆಗಳು, ಎಡಬದಿಯ ಹ್ಯಾಂಡಲ್‌ಬಾರ್‌ನಲ್ಲಿ ಇರಿಸಲಾದ ಸ್ವಿಚ್‌ಗಳ ಮೂಲಕ ಸ್ಕ್ರೀನ್ ಟಾಗಲ್ ಮಾಡಬಹುದು.

CB125 ಹಾರ್ನೆಟ್ ಯುನಿವರ್ಸಲ್ USB ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಸಹ ಹೊಂದಿದ್ದು, ಸವಾರರು ಪ್ರಯಾಣದಲ್ಲಿರುವಾಗ ತಮ್ಮ ಸಾಧನಗಳನ್ನು ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಇದು ಹೆಚ್ಚುವರಿ ಸುರಕ್ಷತೆಗಾಗಿ ಎಂಜಿನ್ ಸ್ಟಾಪ್ ಸ್ವಿಚ್ ಮತ್ತು ಎಂಜಿನ್ ಇನ್ಹಿಬಿಟರ್‌ನೊಂದಿಗೆ ಸೈಡ್ - ಸ್ಟ್ಯಾಂಡ್ ಇಂಡಿಕೇಟರ್ ಹೊಂದಿದೆ.

all-new-honda-cb125-hornet-unveiled-in-india

ಹೊಸ CB125 ಹಾರ್ನೆಟ್ ಬೈಕ್ 123.94cc, ಸಿಂಗಲ್-ಸಿಲಿಂಡರ್, ಫ್ಯೂಲ್-ಇಂಜೆಕ್ಟೆಡ್, OBD2B ಕಂಪ್ಲೈಂಟ್ ಎಂಜಿನ್ ಹೊಂದಿದ್ದು, ಇದು 7500 RPM ನಲ್ಲಿ 8.2 kW ಪವರ್ ಮತ್ತು 6000 RPM ನಲ್ಲಿ 11.2 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಎಂಜಿನ್ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿ ಬರುತ್ತದೆ.

ಇದು ಕೇವಲ 5.4 ಸೆಕೆಂಡುಗಳಲ್ಲಿ 60 ಕಿ.ಮೀ ವೇಗದಲ್ಲಿ ಚಲಿಸಬಲ್ಲದು, ಇದು ತನ್ನ ವರ್ಗದಲ್ಲಿ ಅತ್ಯಂತ ವೇಗದ ಮೋಟಾರ್‌ಸೈಕಲ್ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಕೇವಲ 124 ಕೆ.ಜಿ ತೂಕದ ಹಗುರವಾದ ನಿರ್ಮಾಣ ಮತ್ತು ಪವರ್ ಪ್ಯಾಕ್ಡ್ ಪರ್ಫಾಮೆನ್ಸ್ ನೀಡುತ್ತದೆ. ಮುಂಭಾಗದಲ್ಲಿ 240mm ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 130mm ಡ್ರಮ್ ಬ್ರೇಕಿಂಗ್ ನೀಡಲಾಗಿದೆ.

ಹೆಚ್ಚುವರಿ ಸುರಕ್ಷತಾ ಕ್ರಮವಾಗಿ, CB125 ಹಾರ್ನೆಟ್ ಸಿಂಗಲ್-ಚಾನೆಲ್ ABS ಅನ್ನು ಹೊಂದಿದೆ. ಇದು ಅಗಲವಾದ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದ್ದು, ಮುಂಭಾಗದಲ್ಲಿ 80/100-17 ಯುನಿಟ್ ಮತ್ತು ಹಿಂಭಾಗದಲ್ಲಿ 110/80-17 ಯುನಿಟ್ ನೀಡಲಾಗಿದೆ. ಈ ಸೆಟಪ್ ಸವಾರನಿಗೆ ಪ್ರತಿ ಸವಾರಿಯನ್ನು ಸುಲಭವಾಗಿ ಮತ್ತು ನಿಯಂತ್ರಣದೊಂದಿಗೆ ಓಡಿಸಲು ಅನುವು ಮಾಡಿಕೊಡುತ್ತದೆ.

Article Published On: Wednesday, July 23, 2025, 12:53 [IST]
English summary
All new honda cb125 hornet unveiled in india
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+