Ather: ಬೆಂಗಳೂರಿನ ಎಥರ್‌ ಸ್ಕೂಟರ್‌ಗಳಿಗೆ ಮನಸೋತ ಗ್ರಾಹಕರು.. ನಿರೀಕ್ಷೆಗೂ ಮೀರಿದ ಡಿಮ್ಯಾಂಡ್, ಬಿಸಿ ಜಿಲೇಬಿಯಂತೆ ಸೇಲ್ಸ್!

ಬೆಂಗಳೂರಿಗೆ ಸೇರಿರುವ ಎಥರ್ ಎನರ್ಜಿ (Ather Energy), ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯವಾಗಿ ಹಲವು ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಇವುಗಳು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಮತ್ತು ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈ 2025ರ ಆಗಸ್ಟ್‌ನಲ್ಲಿ ಕಂಪನಿಯ ಸ್ಕೂಟರ್‌ಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಕೇಂದ್ರ ಸರ್ಕಾರದಡಿ ಕಾರ್ಯನಿರ್ವಹಿಸುವ ವಾಹನ್ ಪೋರ್ಟಲ್ ಪ್ರಕಾರ, ಇದೇ ಆಗಸ್ಟ್‌ ತಿಂಗಳು ಎಥರ್ ಎನರ್ಜಿ ಒಟ್ಟು 17,856 ಯುನಿಟ್‌ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. 2024ರಲ್ಲಿ ಆಗಸ್ಟ್‌ನಲ್ಲಿ 11,046 ಯುನಿಟ್‌ಗಳನ್ನು ಮಾರಾಟಗೊಳಿಸಿದೆ. ಈ ಅಂಕಿ ಸಂಖ್ಯೆಯನ್ನು ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 62% ಪ್ರಗತಿಯಾಗಿದೆ.

Ather Energy Highest Monthly Sales In August 2025 Report

ಈ ವರ್ಷದ ಮೊದಲ 7 ತಿಂಗಳಲ್ಲಿ ಅಂದರೆ, ಜನವರಿಯಿಂದ ಜುಲೈವರೆಗೂ ಎಥರ್ ಸ್ಕೂಟರ್‌ಗಳು ಭಾರೀ ಸಂಖ್ಯೆಯಲ್ಲಿ ಮಾರಾಟವಾಗಿವೆ. ಬರೋಬ್ಬರಿ 98,190 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಅಂಕಿ ಸಂಖ್ಯೆಯನ್ನು ಲೆಕ್ಕಾ ಹಾಕಿದಾಗ ಪ್ರತಿ ತಿಂಗಳು ಸರಾಸರಿ 14,027 ಯುನಿಟ್‌ಗಳನ್ನು ಮಾರಲಾಗಿದೆ.

2018ರಲ್ಲಿ ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಎಥರ್ ಎನರ್ಜಿಯು ಪ್ರವೇಶಿಸಿದ ಬಳಿಕ, ಅತಿ ಹೆಚ್ಚಿನ ತಿಂಗಳ ಮಾರಾಟ ಸಂಖ್ಯೆ ಇದಾಗಿದೆ. ಟಿವಿಎಸ್ ಐಕ್ಯೂಬ್, ಬಜಾಜ್ ಚೇತಕ್, ಹೀರೋ ವಿಡಾಗಳ ತೀವ್ರ ಸ್ಪರ್ಧೆಯ ನಡೆವೆಯು ಎಥರ್ ರಿಜ್ಟಾ, 450 ಹಾಗೂ 450 ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ದೊಡ್ಡ ಪ್ರಮಾಣದಲ್ಲಿ ಮಾರಾಟಗೊಂಡಿವೆ.

Ather Energy Highest Monthly Sales In August 2025 Report

ಇತ್ತಿಚೆಗೆ ಎಥರ್ 450ಎಸ್ 3.7 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ರೂಪಾಂತರ ಮಾರಾಟಕ್ಕೆ ಬಂದಿತ್ತು:

ಈ ಸ್ಕೂಟರ್ ರೂ.1.45 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 161 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದ್ದು, ಎಲ್ಇಡಿ ಹೆಡ್‌ಲ್ಯಾಂಪ್‌ನ್ನು ಹೊಂದಿದೆ. ಸ್ಮಾರ್ಟ್ ಇಕೋ, ಇಕೋ, ರೈಡ್ & ಸ್ಪೋರ್ಟ್ ಎಂಬ 4 ರೈಡಿಂಗ್ ಮೋಡ್‌ಗಳನ್ನು ತನ್ನದಾಗಿಸಿಕೊಂಡಿದೆ.

ಇದರಲ್ಲಿ ಉಪಯೋಗ ಮಾಡಿರುವ 5.4 ಕೆಡಬ್ಲ್ಯೂ ಎಲೆಕ್ಟ್ರಿಕ್ ಮೋಟಾರ್, 22 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 7-ಇಂಚಿನ ಡಿಸ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಎಥರ್‌ಸ್ಟ್ಯಾಕ್ ಪ್ರೊ ಸಾಫ್ಟ್‌ವೇರ್‌, ಆಟೋಹೋಲ್ಡ್, ಫಾಲ್ ಸೇಫ್ ಹಾಗೂ ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಫ್ಯಾಮಿಲಿ ಸ್ಕೂಟರ್ ಆಗಿ ಹೊರಹೊಮ್ಮಿದೆ ಎಥರ್ ರಿಜ್ಟಾ:

ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1.11 ಲಕ್ಷದಿಂದ ರೂ.1.47 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಸೆಳೆಯುವಂತಿದೆ. ಡೆಕ್ಕನ್ ಗ್ರೇ, ಸಿಯಾಚಿನ್ ವೈಟ್, ಪ್ಯಾಂಗೊಂಗ್ ಬ್ಲೂ, ಕಾರ್ಡಮೊಮ್ ಗ್ರೀನ್ ಮತ್ತು ಪ್ಯಾಂಗೊಂಗ್ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ ರಿಜ್ಟಾ ಸ್ಕೂಟರ್ ಶಕ್ತಿಯತವಾದ ಪವರ್‌ಟ್ರೇನ್‌ ಆಯ್ಕೆಯನ್ನು ಪಡೆದಿದೆ. 2.9 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.7 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 123 ರಿಂದ 160 ಕಿಲೋಮೀಟರ್‌ ರೇಂಜ್ (ಮೈಲೇಜ್) ನೀಡುತ್ತದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.

ಇದು 7-ಇಂಚಿನ ಎಲ್‌ಸಿಡಿ ಸ್ಕ್ರೀನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸ್ಮಾರ್ಟ್, ಇಕೋ & ಜಿಪ್ ಎಂಬ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

Article Published On: Monday, September 1, 2025, 22:04 [IST]
English summary
Ather energy highest monthly sales in august 2025 report
Read more on india ather energy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+