auto expo 2025: ಎಥರ್ ಎಲೆಕ್ಟ್ರಿಕ್ ಬೈಕ್ ಪ್ರದರ್ಶನ? ಎಕ್ಸ್‌ಪೋದಲ್ಲಿ ಹೊಸ ಅಪ್‌ಡೇಟ್‌ಗಳು!

ಆಟೋ ಉದ್ಯಮಕ್ಕೆ ಅತಿಮುಖ್ಯ ಹಾಗೂ ಬಹುದೊಡ್ಡ ಈವೆಂಟ್ ಆಗಿರುವ 2025ರ ಆಟೋ ಎಕ್ಸ್‌ಪೋ ನಾಳೆಯಿಂದ ದೆಹಲಿಯಲ್ಲಿ ನಡೆಯಲಿದೆ. ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ಬಹುನಿರೀಕ್ಷಿತ ಮುಂಬರುವ ವಾಹನಗಳನ್ನು ಈ ಎಕ್ಸ್‌ ಪೋದಲ್ಲಿ ಪ್ರದರ್ಶಿಸಲಿದ್ದಾರೆ. ಹಾಗೆಯೇ ಬಿಡುಗಡೆ ಕೂಡ ಮಾಡಲಿದ್ದಾರೆ. ಇನ್ನು ಬೆಂಗಳೂರು ಮೂಲದ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾದ ಎಥೆರ್ ವಿಷಯಕ್ಕೆ ಬಂದರೆ ಗಮನಾರ್ಹ ಯೋಜನೆಗಳನ್ನು ಹೊಂದಿದೆ. ಎಕ್ಸ್ ಪೋದಲ್ಲಿ ಎಥೆರ್ ಏನೆಲ್ಲಾ ಪ್ಲಾನ್‌ಗಳನ್ನು ಹೊಂದಿದೆ. ಯಾವೆಲ್ಲಾ ಹೊಸ ಮಾದರಿಗಳನ್ನು ಅನಾವರಣಗೊಳಿಸಬಹುದು ಎಂಬುದರ ಒಂದು ನೋಟ ಇಲ್ಲಿದೆ.

ಆಟೋ ಎಕ್ಸ್ ಪೋ ಮೇಲೆ ನಿರೀಕ್ಷೆ ಹೆಚ್ಚುತ್ತಿದ್ದಂತೆ, ಉತ್ಸಾಹಿಗಳು ಎಥೆರ್‌ನಿಂದ ಯಾವೆಲ್ಲಾ ವಾಹನಗಳು ಬರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಕಾರ್ಯಕ್ರಮವು ಕಂಪನಿಗೆ ಮಹತ್ವದ ಮೈಲಿಗಲ್ಲಾಗಲ್ಲಾಗಿದೆ. ಏಕೆಂದರೆ ಇಲ್ಲಿ ಪ್ರದರ್ಶಿಸಲಾಗಿವ ಮಾದರಿಗಳು ಎಥರ್ ಕಂಪನಿಯ 2025 ಮತ್ತು ನಂತರ ಕಂಪನಿ ಪಥವನ್ನು ರೂಪಿಸಬಹುದು ಎಂದು ಹೇಳಲಾಗುತ್ತಿದೆ.

auto-expo-2025-ather-energy-to-be-showcased-450x-and-motorcycles

ಎಥರ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್: ಇತ್ತೀಚೆಗೆ ಎಥೆರ್ ತನ್ನ ಮುಂಬರುವ ಐಪಿಒಗೆ ಸೆಬಿಯಿಂದ ಅನುಮೋದನೆ ಪಡೆದಿದೆ. ಕಂಪನಿಯ ಐಪಿಒ ದಾಖಲೆಯು ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳ ಸರಣಿ ಸೇರಿದಂತೆ ಹೊಸ ವಾಹನಗಳನ್ನು ಅಭಿವೃದ್ಧಿಪಡಿಸಲು ಕೆಲವು ಹಣವನ್ನು ಬಳಸುವ ಯೋಜನೆಗಳನ್ನು ಬಹಿರಂಗಪಡಿಸಿದೆ. ಎಕ್ಸ್‌ಪೋದಲ್ಲಿ ಈ ಬೆಳವಣಿಗೆಗಳ ಬಗ್ಗೆ ಎಥೆರ್ ಪ್ರಕಟಣೆಗಳನ್ನು ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಹಾಗೆಯೇ ಎಥರ್‌ನ ಪ್ರಮುಖ ಸ್ಕೂಟರ್ ಆಗಿರುವ 450X ಅಪ್‌ಡೇಟ್‌ಗಳು ಮತ್ತು ಸಂಭಾವ್ಯ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಪ್ರಕಟಣೆಗಳೊಂದಿಗೆ, ಎಥೆರ್ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಆಟೋ ಎಕ್ಸ್‌ಪೋ ಎಥೆರ್‌ಗೆ ತನ್ನ ಆವಿಷ್ಕಾರಗಳು ಮತ್ತು ಭವಿಷ್ಯದ ಯೋಜನೆಗಳನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.

auto-expo-2025-ather-energy-to-be-showcased-450x-and-motorcycles

450X ಅಪ್‌ಡೇಟ್‌ಗಳು: ಎಥೆರ್ 2025 ರಲ್ಲಿ ತನ್ನ ಜನಪ್ರಿಯ 450X ಎಲೆಕ್ಟ್ರಿಕ್ ಸ್ಕೂಟರ್‌ಗೆ ಹಲವಾರು ನವೀಕರಣಗಳನ್ನು ಪರಿಚಯಿಸಿದೆ. ಈ ವರ್ಧನೆಗಳು ಸುಧಾರಿತ ತಂತ್ರಜ್ಞಾನ ಮತ್ತು ಸುಧಾರಿತ ರೇಂಜ್ ಒಳಗೊಂಡಿವೆ. ನವೀಕರಿಸಿದ 450X ಅನ್ನು ಸಂಕ್ಷಿಪ್ತವಾಗಿ ಟೆಸ್ಟ್ ರೈಡ್ ಮಾಡುವ ಅವಕಾಶವನ್ನು ಪಡೆದ ನಂತರ, ಈ ಬದಲಾವಣೆಗಳು ಗಮನಾರ್ಹವೆಂದು ನಾವು ಕಂಡುಕೊಂಡಿದ್ದೇವೆ.

ಎಥೆರ್ ಎನರ್ಜಿ 450X ನೊಂದಿಗೆ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈಗ, ಇತ್ತೀಚೆಗೆ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಸೇರ್ಪಡೆಯೊಂದಿಗೆ, ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಆಕರ್ಷಣೆಯನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಇವೆಲ್ಲದರ ಜೊತೆಗೆ ಎಲ್ಲವೂ ಅಂದುಕೊಂಡಂತೆ ನಡೆದರೆ ಒಂದು ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಕೂಡ ಹೊರಬರಲಿದೆ.

auto-expo-2025-ather-energy-to-be-showcased-450x-and-motorcycles

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಆಟೋ ಎಕ್ಸ್‌ಪೋದಲ್ಲಿ ಎಥರ್ ಮಾತ್ರವಲ್ಲದೆ ಓಲಾ ಕೂಡ ತನ್ನ ಮುಂಬರುವ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳ ಪ್ರದರ್ಶನಕ್ಕೆ ಸಜ್ಜಾಗಿದೆ. ಸದ್ಯದ ಟಾಪ್ ಇವಿ ಬ್ರಾಂಡ್‌ಗಳಾಗಿರುವ ಇವೆರಡು ಕಂಪನಿಗಳು ಆಟೋ ಎಕ್ಸ್‌ಪೋದಲ್ಲಿ ಪೈಪೋಟಿಯೊಂದಿಗೆ ಉತ್ಪನ್ನಗಳ ಪ್ರದರ್ಶನ ಮಾಡಲಿರುವ ಸಾಧ್ಯತೆ ಇದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, January 16, 2025, 14:14 [IST]
English summary
Auto expo 2025 ather energy to be showcased 450x and motorcycles
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+