ಪಲ್ಸರ್ ಬೈಕ್ ಖರೀದಿಸುವ ಪ್ಲಾನ್ ಇದೆಯೇ? ಹಾಗಾದ್ರೆ ಸರಿಯಾದ ಸಮಯ ಬಂದಿದೆ: ರೂ.10 ಸಾವಿರ...

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್, ತನ್ನ ಪ್ರಮುಖ ಪಲ್ಸರ್ ಶ್ರೇಣಿಯ ಮೇಲೆ ವಿಶೇಷ ಆಫರ್ ಘೊಷಿಸಿದೆ. ಇದನ್ನು ಬಜಾಜ್ ಪಲ್ಸರ್ ಹ್ಯಾಟ್ರಿಕ್ ಆಫರ್ ಎಂದು ಕಂಪನಿ ಪ್ರಕಟಿಸಿದೆ, ಇದರಡಿ ಹಬ್ಬದ ಸೀಸನ್‌ನಲ್ಲಿ ಖರೀದಿದಾರರಿಗೆ ಪಲ್ಸರ್ ಮೋಟಾರ್‌ಸೈಕಲ್ ಅನ್ನು ಹೆಚ್ಚು ಕೈಗೆಟುಕುವ ಮತ್ತು ಆಕರ್ಷಕವಾಗಿಸಲು ಗಮನಾರ್ಹ ಪ್ರಯೋಜನಗಳನ್ನು ಒದಗಿಸಲಾಗುತ್ತಿದೆ. ಈ ಹಬ್ಬದ ಸೀಸನ್‌ನಲ್ಲಿ ನೀವು ಪಲ್ಸರ್ ಬೈಕ್ ಖರೀದಿಸಲು ನೋಡುತ್ತಿದ್ದರೆ, ಈ ಆಫರ್ ನಿಮಗೆ ವೆಚ್ಚದ ಪ್ರಯೋಜನಗಳನ್ನು ಪಡೆಯಲು ಉತ್ತಮ ಅವಕಾಶವಾಗಿದೆ. ಏನೆಲ್ಲಾ ಆಫರ್‌ಗಳಿವೆ ಬನ್ನಿ ನೋಡೋಣ.

ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ, ಈಶಾನ್ಯ ಮತ್ತು ಉತ್ತರ ಪ್ರದೇಶಗಳನ್ನು ಒಳಗೊಂಡಂತೆ ಮಾರುಕಟ್ಟೆಗಳಲ್ಲಿ ತನ್ನ ಹ್ಯಾಟ್ರಿಕ್ ಆಫರ್ ಅನ್ನು ಬಿಡುಗಡೆ ಮಾಡುವುದಾಗಿ ಕಂಪನಿ ಘೋಷಿಸಿದೆ. ಸೀಮಿತ ಅವಧಿಯ ಆಚರಣೆಯ ಉಪಕ್ರಮವಾಗಿ ಈ ಹ್ಯಾಟ್ರಿಕ್ ಆಫರ್ ಪರಿಚಯಿಸಲಾಗಿದೆ.

bajaj-announced-pulsar-hattrick-offer-for-festive-season

ಈ ಆಫರ್ ಅಡಿಯಲ್ಲಿ ಪಲ್ಸರ್ ಶ್ರೇಣಿಯ ಮೇಲೆ ವಿಶೇಷ ಬೆಲೆಗಳು (special prices), ನಗದು ಪ್ರಯೋಜನಗಳು (cash benefits) ಮತ್ತು ಮೌಲ್ಯವರ್ಧನೆಗಳ (value additions) ಮೂರು ಪಟ್ಟು ಪ್ರಯೋಜನವನ್ನು ಗ್ರಾಹಕರಿಗೆ ಪರಿಚಯಿಸಲಾಗಿದೆ. ಒಟ್ಟಾರೆ ರೂ. 10,000 ಮೌಲ್ಯದ ಪ್ರಯೋಜನಗಳನ್ನು ಇದರಡಿ ನೀಡಲಾಗುತ್ತದೆ. ಇದು ಮೂರು ಹಂತಗಳನ್ನು ಹೊಂದಿದೆ - ಮೊದಲನೆಯದಾಗಿ ಕ್ಯಾಶ್‌ ಬ್ಯಾಕ್ ಕೊಡುಗೆ, ಎರಡನೆಯದಾಗಿ ವಿಮಾ ಉಳಿತಾಯ ಮತ್ತು ಮೂರನೆಯದಾಗಿ ಸಂಸ್ಕರಣಾ ಶುಲ್ಕವಿಲ್ಲದಿರುವುದು.

ವಿವರವಾಗಿ ಹೇಳುವುದಾದರೆ ಆಯ್ದ ಪಲ್ಸರ್ ಮಾಡಲ್‌ ಮೇಲೆ ರೂ. 10,000 ವರೆಗಿನ ಖಚಿತ ಉಳಿತಾಯ ಮಾಡಬಹುದಾಗಿದೆ. ಇದರಲ್ಲಿ ರೂ. 5,000 ವರೆಗಿನ ನಗದು ಆಫರ್, ರೂ. 3,000 ವರೆಗೆ ಸಂಸ್ಕರಣಾ ಶುಲ್ಕವಿಲ್ಲದೆ (Zero processing fee) ಉಳಿತಾಯ, ರೂ. 2,000 ವರೆಗೆ ಉಚಿತ ವಿಮಾ ಉಳಿತಾಯ ಮಾಡಬಹುದಾಗಿದೆ ಎಂದು ಬಜಾಜ್ ತಿಳಿಸಿದೆ.

bajaj-announced-pulsar-hattrick-offer-for-festive-season

ಪ್ರಮುಖ ರಾಜ್ಯಗಳಲ್ಲಿ ವಿಸ್ತರಿಸಲಾಗುತ್ತಿದೆ

ಗುಜರಾತ್‌ನಲ್ಲಿ ನವರಾತ್ರಿ ಸಂಭ್ರಮದಿಂದ ಹಿಡಿದು ಪಶ್ಚಿಮ ಬಂಗಾಳದ ದುರ್ಗಾ ಪೂಜೆಯ ಉತ್ಸಾಹ ಮತ್ತು ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ದಸರಾ ಸಂಭ್ರಮದವರೆಗೆ, ಕೇರಳದ ಓಣಂ ಹಬ್ಬಗಳವರೆಗೆ ಇದನ್ನು ವಿಸ್ತರಿಸಲಾಗುತ್ತಿದೆ. ಈ ಆಫರ್ ಅವಧಿಯು ಆಗಸ್ಟ್ 18 ರಿಂದ ಅಕ್ಟೋಬರ್ 3, 2025 ರವರೆಗೆ ನಡೆಯುತ್ತದೆ, ಇದು ಹಬ್ಬದ ಖರೀದಿಗೆ ಸೂಕ್ತವಾಗಿದೆ.

ಈ ಪ್ರಚಾರವು ನೇರ ರಿಯಾಯಿತಿಗಳನ್ನು ಆರ್ಥಿಕ ಪ್ರಯೋಜನಗಳೊಂದಿಗೆ ಸಂಯೋಜಿಸುವ ಮೂಲಕ ಹಬ್ಬದ ಮಾರಾಟವನ್ನು ಹೆಚ್ಚಿಸಲು ಕಂಪನಿಯ ಹೊಸ ಕೊಡುಗೆಯಾಗಿದೆ. ಇದು ಭಾರತದಲ್ಲಿ ಸ್ಪರ್ಧಾತ್ಮಕ ಪ್ರಯಾಣಿಕ ಮತ್ತು ಪರ್ಫಾಮೆನ್ಸ್ ಮೋಟಾರ್‌ ಸೈಕಲ್ ವಿಭಾಗಗಳಲ್ಲಿ ಬಜಾಜ್ ಪಲ್ಸರ್ ತನ್ನ ಬಲವಾದ ಉಪಸ್ಥಿತಿಯನ್ನು ಕಾಯ್ದುಕೊಳ್ಳಲು ಸಹಾಯ ಮಾಡಲಿದೆ.

ಹೊಸ ಆಫರ್ ಮೂಲಕ ಬಜಾಜ್ ಪಲ್ಸರ್ ಅನ್ನು ಪ್ರತಿಯೊಬ್ಬ ಸವಾರನು ಹೆಮ್ಮೆ ಮತ್ತು ಹೆಚ್ಚುವರಿ ಮೌಲ್ಯದೊಂದಿಗೆ ಖರೀದಿಸಬಹುದು ಎಂದು ಖಚಿತಪಡಿಸುತ್ತದೆ. ಈ ಕೊಡುಗೆ ಬಹುತೇಕ ಎಲ್ಲಾ ಪಲ್ಸರ್ ಮಾಡಲ್‌ ಗಳನ್ನು ಒಳಗೊಂಡಿದೆ. ಇದು ಪಲ್ಸರ್ ಶ್ರೇಣಿಯ ಮೇಲೆ ಬಿಡುಗಡೆ ಮಾಡಲಾದ ಅತಿದೊಡ್ಡ ಆಫರ್‌ಗಳಲ್ಲಿ ಒಂದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, August 20, 2025, 18:25 [IST]
English summary
Bajaj announced pulsar hattrick offer for festive season
Read more on bajaj india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+