Bajaj Chetak: ಬಡವರ ಬಂಡಿ ಬಜಾಜ್ ಚೇತಕ್ 3001 ಸ್ಕೂಟರ್ ಈ ವಾರಾಂತ್ಯ ಬಿಡುಗಡೆ?

ಭಾರತದಲ್ಲಿ ತನಗೆಂದೆ ವಿಶೆಷ ಹೆಸರನ್ನು ಸಂಪಾದಿಸಿಕೊಂಡಿರುವ ಬಜಾಜ್ ಬ್ರಾಂಡ್, ಈ ಹಿಂದೆ ಚೇತಕ್ ಸ್ಕೂಟರ್ ಮೂಲಕ ಭಾರತೀಯ ಕುಟುಂಬಗಳ ಮನಗೆದ್ದಿತ್ತು. ಈ ಸ್ಕೂಟರ್ ಇಂದಿಗೂ ಹಲವರ ನೆಚ್ಚಿನ ವಾಹನವಾಗಿರುವುದರಿಂದ ಚೇತಕ್ ಹೆಸರನ್ನು ಬಳಸಿಕೊಂಡು ಬಜಾಜ್ ತನ್ನ ಎಲೆಕ್ಟ್ರಿಕ್ ರೂಪದಲ್ಲಿ ಈ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ದೇ ತಡ ಜನ ಮುಗಿಬಿದ್ದು ಖರೀದಿಸಿದ್ದರು. ಸದ್ಯ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾಡಲ್‌ಗಳಿಗೆ ಉತ್ತಮ ಬೇಡಿಕೆಯಿದ್ದು, ಹೆಚ್ಚುತ್ತಿರುವ ಸ್ಪರ್ಧಾತ್ಮಕ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಕಂಪನಿಯು ಹೊಸ ಚೇತಕ್ ಇವಿಯನ್ನು ಪರಿಚಯಿಸಲು ಸಜ್ಜಾಗಿದೆ.

ಚೇತಕ್ 3001 ಎಂದು ಕರೆಯಲ್ಪಡುವ ಸಾಧ್ಯತೆಯಿರುವ ಮುಂಬರುವ ಸ್ಕೂಟರ್ ಈ ವಾರದ ಕೊನೆಯಲ್ಲಿ ಬರುವ ನಿರೀಕ್ಷೆಯಿದೆ. ಅಧಿಕೃತ ವಿಶೇಷಣಗಳನ್ನು ಇನ್ನೂ ದೃಢಪಡಿಸಲಾಗಿಲ್ಲವಾದರೂ, ಮೂಲಗಳ ಪ್ರಕಾರ ಚೇತಕ್ 3001 ಸ್ಕೂಟರ್ ಪ್ರಸ್ತುತ ಶ್ರೇಣಿಗೆ ಹೊಸ ಸೇರ್ಪಡೆಯಾಗಿ ಕಾರ್ಯನಿರ್ವಹಿಸಬಹುದು. ಇಲ್ಲದಿದ್ದರೇ ಈಗ ಅಸ್ತಿತ್ವದಲ್ಲಿರುವ ಚೇತಕ್ 2903 ಇವಿಯನ್ನು ಬದಲಾಯಿಸಿ ಅದರ ಜಾಗದಲ್ಲಿ ಮಾರಾಟವಾಗಬಹುದು.

bajaj-chetak-3001-ev-launching-soon-in-india

ಬಜಾಜ್ ಕಂಪನಿಯು ಹೊಸ ಚೇತಕ್ ಮಾದರಿಯನ್ನು ಬಿಡುಗಡೆ ಮಾಡುವ ಮೂಲಕ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಪೋರ್ಟ್ಫೋಲಿಯೊವನ್ನು ಹೆಚ್ಚಿಸಲು ಸಜ್ಜಾಗಿದೆ. ಬಜಾಜ್ ಚೇತಕ್ 3001 ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 1 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಲಿದೆ.

ಇದು ಹೆಚ್ಚುತ್ತಿರುವ ಸ್ಪರ್ಧಾತ್ಮಕ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಕಂಪನಿಯ ಉಪಸ್ಥಿತಿಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಬಜಾಜ್ ಚೇತಕ್ 3001 ಬೈಕ್ ಬಿಡುಗಡೆಯಾದ ನಂತರ ಓಲಾ ಎಸ್ 1 ಝಡ್ ಹಾಗೂ ಟಿವಿಎಸ್ ಐಕ್ಯೂಬ್ ಗೆ ಪೈಪೋಟಿ ನೀಡಲಿದೆ. ಈ ವಾರ ಅಧಿಕೃತ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ರೇಂಜ್, ಫೀಚರ್ಸ್ ಮತ್ತು ಲಭ್ಯತೆ ಸೇರಿದಂತೆ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು.

bajaj-chetak-3001-ev-launching-soon-in-india

ನಿರೀಕ್ಷೆಗಳು: ಬಜಾಜ್ ತನ್ನ ಚೇತಕ್ ಇವಿ ಸ್ಕೂಟರ್‌ಗಳನ್ನು ಆರಂಭದಿಂದಲೂ ಮೂಲ ವಿನ್ಯಾಸದಲ್ಲೇ ಮುನ್ನಡೆಸುತ್ತಿರುವ ಕಾರಣ, ಹೊಸ ಮಾದರಿಯು ಈಗ ಮಾರಾಟದಲ್ಲಿರುವ ಚೇತಕ್ ಶ್ರೇಣಿಯ ಸ್ಟೈಲಿಂಗ್ ಅನ್ನು ಪ್ರತಿಬಿಂಬಿಸುವ ಸಾಧ್ಯತೆಯಿದೆ. ಯಾವುದೇ ಪ್ರಮುಖ ಡಿಸೈನ್ ಬದಲಾವಣೆಗಳನ್ನು ನಿರೀಕ್ಷಿಸಲಾಗಿಲ್ಲ. ಸಣ್ಣ ಪುಟ್ಟ ಲೈಟಿಂಗ್ ಹಾಗೂ ಬಣ್ಣಗಳನ್ನು ಪರಿಚಯಿಸಬಹುದು ಎನ್ನಲಾಗಿದೆ.

ಹೊಸ ಮುಂಬರಲಿರುವ ಬಜಾಜ್ ಚೇತಕ್ 3001 ಸ್ಕೂಟರ್‌ನಲ್ಲಿ 3 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹಾಗೂ 3.1 ಕಿಲೋವ್ಯಾಟ್ ಎಲೆಕ್ಟ್ರಿಕ್ ಮೋಟರ್ ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ. ಈ ಮೂಲಕ ಸ್ಕೂಟರ್ 62 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿರುತ್ತದೆ. ಸ್ಕೂಟರ್ ಎರಡೂ ತುದಿಗಳಲ್ಲಿ 90/90-12 ಟೈರ್ ಗಳನ್ನು ಹೊಂದಿದ್ದು, ಇದು ಪ್ರಸ್ತುತ ಮಾದರಿಗಳಿಗೆ ಅನುಗುಣವಾಗಿ ಸೆಟಪ್ ಆಗಿದೆ.

bajaj-chetak-3001-ev-launching-soon-in-india

ಬಜಾಜ್ ಚೇತಕ್‌ನ ಕ್ಲಾಸಿಕ್ ವಿನ್ಯಾಸವನ್ನು ಅದರ ಪ್ರಸ್ತುತ ಆಯಾಮಗಳೊಂದಿಗೆ ಉಳಿಸಿಕೊಳ್ಳಲಿದೆ. ಚೇತಕ್ 3001 ಸ್ಕೂಟರ್ 1,914 ಎಂಎಂ ಉದ್ದ, 1,143 ಎಂಎಂ ಎತ್ತರ ಮತ್ತು 725 ಎಂಎಂ ಅಗಲವನ್ನು ಹೊಂದಿರಲಿದೆ. ಎಲೆಕ್ಟ್ರಿಕ್ ಸ್ಕೂಟರ್ ನ ಗ್ರೌಂಡ್ ಕ್ಲಿಯರೆನ್ಸ್ 168 ಎಂಎಂ ಆಗಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ 12 ಇಂಚಿನ ಚಕ್ರಗಳನ್ನು ಹೊಂದಿದೆ.

ಬಜಾಜ್ ಚೇತಕ್ ಇವಿ ಪ್ರಸ್ತುತ ಶ್ರೇಣಿ: ಚೇತಕ್‌ನ ಅತ್ಯಂತ ಕೈಗೆಟುಕುವ ಟ್ರಿಮ್ 2903, ಚೇತಕ್ 3503, ಚೇತಕ್ 3502 ಮತ್ತು ಟಾಪ್-ಆಫ್-ಲೈನ್ ಮಾದರಿಯಾಗಿ ಚೇತಕ್ 3501 ಇದೆ. ಎರಡನೇ ತಲೆಮಾರಿನ ಚೇತಕ್ ಲೈನ್ 3503 ಸ್ಕೂಟರ್ ಬೆಲೆಯು 1.10 ಲಕ್ಷ ರೂ., 3502 ಸ್ಕೂಟರ್ ಬೆಲೆಯು 1.22 ಲಕ್ಷ ರೂ., 3501 ಸ್ಕೂಟರ್ ಬೆಲೆಯು 1.34 ಲಕ್ಷ ರೂ. ಇದೆ.

More from DriveSpark

Article Published On: Tuesday, June 17, 2025, 12:18 [IST]
English summary
Bajaj chetak 3001 ev launching soon in india
Read more on bajaj india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+