Bajaj: ಅಗ್ಗದ ಬಜಾಜ್ ಚೇತಕ್ 3001 ಇವಿ ಸ್ಕೂಟರ್ ವಿಶೇಷತೆಗಳು
ಇತ್ತೀಚೆಗೆ ಬಿಡುಗಡೆಯಾಗಿರುವ ಚೇತಕ್ 3001 ಇವಿ ಸ್ಕೂಟರ್ ಭಾರತದಲ್ಲಿ ಸದ್ಯ ಒಂದು ಲಕ್ಷಕ್ಕಿಂದ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಬಜಾಜ್‌ನ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಈ ಸ್ಕೂಟರ್ ದೇಶಾದ್ಯಂತ ಈಗ ರೂ. 99,990 ಎಕ್ಸ್-ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಫ್ಲೋರ್‌ಬೋರ್ಡ್ ಬ್ಯಾಟರಿ ಆರ್ಕಿಟೆಕ್ಚರ್ ಹೊಂದಿರುವ ಈ ಸ್ಕೂಟರ್, ನಗರ ಪ್ರಯಾಣ, ಕಚೇರಿ ಮತ್ತು ಕಾಲೇಜುಗಳಿಗೆ ಸೂಕ್ತವಾದ ಇವಿ ಆಗಿದೆ. ಹಾಗೆಯೇ ಭಾರತೀಯ ಸ್ಕೂಟರ್ ಸವಾರರು ಬಯಸುವ ರೇಂಜ್ ಮತ್ತು ಪರ್ಫಾಮೆನ್ಸ್ ನೀಡುತ್ತದೆ. ಇದರ ಹೆಚ್ಚಿನ ಮುಖ್ಯಾಂಶಗಳನ್ನು ಇಲ್ಲಿ ನೋಡೋಣ.
ಚೇತಕ್ 3001 ಭಾರತೀಯ ಸವಾರರಿಗೆ ಹೊಸತನವನ್ನು ನೀಡುವ ಆಕರ್ಷಕ ಸ್ಕೂಟರ್ ಆಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ 127 ಕಿಲೋಮೀಟರ್ ಎಆರ್ಎಐ-ರೇಟೆಡ್ ರೇಂಜ್ ನೀಡುತ್ತದೆ. ವೈಶಿಷ್ಟ್ಯಗಳ ಭಾಗವಾಗಿ ರಿವರ್ಸ್ ಲೈಟ್, ಆಟೋ - ಫ್ಲಾಶಿಂಗ್ ಸ್ಟಾಪ್ ಲ್ಯಾಂಪ್, ಕರೆ ಸ್ವೀಕರಿಸುವುದು/ತಿರಸ್ಕರಿಸುವುದು, ಹಿಲ್ ಹೋಲ್ಡ್ ಅಸಿಸ್ಟ್, ಮ್ಯೂಸಿಕ್ ಕಂಟ್ರೋಲ್, ಗೈಡ್ ಮಿ ಹೋಮ್ ಲೈಟ್‌ಗಳಂತಹ ಫೀಚರ್ಸ್ ನೀಡಲಾಗಿದೆ.

127 ಕಿಲೋಮೀಟರ್ ವಿಸ್ತೃತ ಶ್ರೇಣಿಯು ಪೆಟ್ರೋಲ್ ಚಾಲಿತ ಸ್ಕೂಟರ್ ಗಳಿಂದ ಪರಿವರ್ತನೆಗೊಳ್ಳುವ ಬಳಕೆದಾರರ ಆತಂಕವನ್ನು ಕಡಿಮೆ ಮಾಡುತ್ತದೆ. ಹಿಂದಿನ ಚೇತಕ್ ಮಾದರಿಗಳಂತೆ, 3001 ಸ್ಟೀಲ್ ಮೆಟಲ್ ಬಾಡಿಯೊಂದಿಗೆ ನಿರ್ಮಾಣವಾಗಿರುವ ಈ ಸ್ಕೂಟರ್, ನೀರಿನ ಪ್ರತಿರೋಧಕ್ಕಾಗಿ ಐಪಿ 67 - ರೇಟಿಂಗ್ ಪಡೆದಿದೆ. ದೈನಂದಿನ ಪ್ರಯಾಣದ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ.
ಚೇತಕ್ 3001 ನಲ್ಲಿನ ಗಮನಾರ್ಹ ಅಪ್‌ಡೇಟ್ ಕೂಡ ನೀಡಲಾಗಿದ್ದು, ಬ್ಯಾಟರಿಯನ್ನು ಫ್ಲೋರ್ ಬೋರ್ಡ್ ಸ್ಥಳಾಂತರಿಸಾಗಿದೆ. ಈ ಮೂಲಕ ಸ್ಟೋರೇಜ್ ಅನ್ನು 35-ಲೀಟರ್ ಅಂಡರ್-ಸೀಟ್ ಕಂಪಾರ್ಟ್‌ಮೆಂಟ್‌ನೊಂದಿಗೆ ಸುಧಾರಿಸಲಾಗಿದೆ. ಇದು ನಿಯಮಿತವಾಗಿ ದಿನಸಿ ಅಥವಾ ಹೆಲ್ಮೆಟ್‌ಗಳನ್ನು ಸಾಗಿಸುವವರಿಗೆ ಪ್ರಮುಖ ಸುಧಾರಣೆಯಾಗಿದೆ.

ಈ ಬದಲಾವಣೆಯು ಸೀಟಿನ ಕೆಳಗೆ ಹೆಚ್ಚಿನ ಸ್ಥಳವನ್ನು ನೀಡುತ್ತದೆ. ಇದು ಪೂರ್ಣ-ಮುಖದ ಹೆಲ್ಮೆಟ್ ಅಥವಾ ಹಲವಾರು ಬ್ಯಾಗ್‌ಗಳಿಗೆ ಸ್ಥಳಾವಕಾಶ ನೀಡುವಷ್ಟು ದೊಡ್ಡದಾಗಿದ್ದು, ಬೃಹತ್ 35L ಬೂಟ್ ಸ್ಪೇಸ್ ನೀಡಲಾಗಿದೆ. ಇದರ 750 ವ್ಯಾಟ್ ಚಾರ್ಜರ್ ಸುಮಾರು 3 ಗಂಟೆ 50 ನಿಮಿಷಗಳಲ್ಲಿ ಬ್ಯಾಟರಿಯನ್ನು ಶೇ80 ರವರೆಗೆ ಜಾರ್ಜ್ ಮಾಡುತ್ತದೆ.
ಬಜಾಜ್ ಚೇತಕ್ ಇವಿ ಶ್ರೇಣಿ: ಈಗ ಅತ್ಯಂತ ಜನಪ್ರಿಯ ಚೇತಕ್ 2903 ಮಾಡಲ್‌ಗೆ ಅಪ್‌ಗ್ರೇಡ್ ಮಾದರಿಯಾಗಿ ಚೇತಕ್ ಇವಿ 3001 ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಚೇತಕ್‌ನ ಅತ್ಯಂತ ಕೈಗೆಟುಕುವ ಟ್ರಿಮ್ 2903, ಚೇತಕ್ 3503, ಚೇತಕ್ 3502 ಮತ್ತು ಟಾಪ್-ಆಫ್-ಲೈನ್ ಮಾದರಿಯಾಗಿ ಚೇತಕ್ 3501 ಇದ್ದವು.

ಚೇತಕ್ ಇವಿ 3001 ಸ್ಕೂಟರ್ ಈಗ ಓಲಾ ಎಸ್ 1 ಝಡ್ ಹಾಗೂ ಟಿವಿಎಸ್ ಐಕ್ಯೂಬ್‌ಗೆ ಪೈಪೋಟಿ ನೀಡಲಿದೆ. ಎರಡನೇ ತಲೆಮಾರಿನ ಚೇತಕ್ ಲೈನ್ 3503 ಸ್ಕೂಟರ್ ಬೆಲೆಯು 1.10 ಲಕ್ಷ ರೂ., 3502 ಸ್ಕೂಟರ್ ಬೆಲೆಯು 1.22 ಲಕ್ಷ ರೂ., 3501 ಸ್ಕೂಟರ್ ಬೆಲೆಯು 1.34 ಲಕ್ಷ ರೂ. ಇದೆ.
ಹೊಸ ಇವಿ ಸ್ಕೂಟರ್‌ಗಳ ಮೂಲಕ ಭಾರತದಲ್ಲಿ ಹೊಸ ಅಲೆ ಎಬ್ಬಿಸಿರುವ ಬಜಾಜ್, ಭಾರತದ ನಂ.1 ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ ಆಗಿ FY25 Q4 (ಜನವರಿ-ಮಾರ್ಚ್) ಅನ್ನು ಕೊನೆಗೊಳಿಸಿದೆ. ಚೇತಕ್‌ನ ಇತರ ಮಾಡಲ್‌ಗಳಾದ 3501, 3502 ನೇತೃತ್ವದ 35 ಸಿರೀಸ್ ಈಗಾಗಲೇ EV ಕ್ಷೇತ್ರದಲ್ಲಿನ ಎಲ್ಲಾ ಸ್ಕೂಟರ್‌ಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವುದಾಗಿ ಬಜಾಜ್ ಹೇಳಿಕೊಂಡಿದೆ.


Click it and Unblock the Notifications








