ಸ್ಪೋರ್ಟಿ ಬಜಾಜ್ ಪಲ್ಸರ್ 125 ಬೆಲೆ ಇಷ್ಟೆನಾ? ಹಣಕ್ಕೆ ತಕ್ಕ ಮೌಲ್ಯ ನೀಡುವ ಬೈಕ್!

ಬಜಾಜ್ ಪಲ್ಸರ್ 125 ಬೈಕ್ ಅನ್ನು 125 ಸಿಸಿ ವಿಭಾಗದಲ್ಲಿ ಸ್ಪೋರ್ಟಿ ಸ್ಟೈಲ್ ಬಯಸುವ ಸವಾರರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಭಾರತದಲ್ಲಿ ಲಭ್ಯವಿರುವ ಒಂದು ಸೊಗಸಾದ ಮತ್ತು ಸ್ಪೋರ್ಟಿ 125cc ಮೋಟಾರ್‌ಸೈಕಲ್ ಆಗಿದೆ. ಕಾಲೇಜು ಯುವಕರು ಹಾಗೂ ಕಚೇರಿಗಳಿಗೆ ತೆರಳುವ ಬೈಕ್ ಉತ್ಸಾಹಿಗಳಿಗೆ ಉತ್ತಮ ಆಯ್ಕೆಯಾಗಿದೆ. ಜೊತೆಗೆ ವಿಶ್ವಾಸಾರ್ಹ ಕಾರ್ಯಕ್ಷಮತೆ, ಉತ್ತಮ ಮೈಲೇಜ್ ಹಾಗೂ ಹಣಕ್ಕೆ ತಕ್ಕ ಮೌಲ್ಯ ಬಯಸುವವರಿಗೂ ಆಕರ್ಷಕ ಆಯ್ಕೆಯಾಗಿದೆ. ಹೊಸ ಬಜಾಜ್ 125 ಬೈಕ್ ಬೆಲೆ, ಎಂಜಿನ್ ವಿಶೇಷಣಗಳು, ಬಣ್ಣದ ಆಯ್ಕೆಗಳು ಮತ್ತು ಹೆಚ್ಚಿನವುಗಳ ಬಗ್ಗೆ ನೋಡೋಣ.

ಬಜಾಜ್ ಪಲ್ಸರ್ 125 ನಿಯಾನ್ ಸಿಂಗಲ್ ಸೀಟ್ ಬೆಲೆ ರೂ. 80,004 ರಿಂದ ಪ್ರಾರಂಭವಾಗುತ್ತದೆ. ಇತರ ವೇರಿಯೆಂಟ್‌ಗಳಾದ - ಪಲ್ಸರ್ 125 ಕಾರ್ಬನ್ ಫೈಬರ್ - ಸಿಂಗಲ್ ಸೀಟ್ ಮತ್ತು ಪಲ್ಸರ್ 125 ಕಾರ್ಬನ್ ಫೈಬರ್ - ಸ್ಪ್ಲಿಟ್ ಸೀಟ್ ಬೆಲೆಗಳು ಕ್ರಮವಾಗಿ ರೂ. 86,345 ಮತ್ತು ರೂ. 88,126 ಇದೆ. ಈ ಬೆಲೆಗಳು ಎಕ್ಸ್-ಶೋರೂಂ ಆಗಿವೆ. ಸ್ಥಳ ಹಾಗೂ ವೇರಿಯೆಂಟ್ ಅವಲಂಬಿಸಿ ಆನ್‌-ರೋಡ್ ಬೆಲೆಗಳು ಬದಲಾಗುತ್ತವೆ.

bajaj-pulsar-125-price-feature-engine-details

ಬಜಾಜ್‌ನ ಪಲ್ಸರ್ - 125 ವಿನ್ಯಾಸವು ದೊಡ್ಡ ಪಲ್ಸರ್ 150 ರಂತೆಯೇ ಇದ್ದರೂ, ಎಂಜಿನ್ ಹೊಂದಾಣಿಕೆಯ ಭಾಗಗಳನ್ನು ಹೊಂದಿರುವ ಸಣ್ಣ ಘಟಕವಾಗಿದೆ. ಉಳಿದಂತೆ ಪಲ್ಸರ್ - 125 ದೊಡ್ಡಣ್ಣನಂತೆ ಎಲ್ಲವನ್ನೂ ಉಳಿಸಿಕೊಂಡಿದೆ. ಇದು 124.4cc BS6 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, 11.64 bhp ಪವರ್ ಮತ್ತು 10.8 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮುಂಭಾಗದ ಡಿಸ್ಕ್ ಮತ್ತು ಹಿಂಭಾಗದ ಡ್ರಮ್ ಬ್ರೇಕ್‌ಗಳೊಂದಿಗೆ, ಬಜಾಜ್ ಪಲ್ಸರ್ 125 ಎರಡೂ ಚಕ್ರಗಳ ಸಂಯೋಜಿತ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಈ ಪಲ್ಸರ್ - 125 ಬೈಕ್ 140 ಕೆ.ಜಿ ತೂಕವಿದ್ದು 11.5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಪಲ್ಸರ್ - 125 ಶ್ರೇಣಿಯು ಹೋಂಡಾ SP 125, ಟಿವಿಎಸ್ ರೈಡರ್ 125 ಮತ್ತು ಹೀರೋ ಗ್ಲಾಮರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

bajaj-pulsar-125-price-feature-engine-details

ಪಲ್ಸರ್ 125 ಐದು ವೇರಿಯೆಂಟ್‌ಗಳಲ್ಲಿ ಬರುತ್ತದೆ, ಈ ಎಲ್ಲಾ ವೇರಿಯೆಂಟ್‌ಗಳು ಬೆಲೆ ಅವಲಂಬಿಸಿ ಬ್ಲೂಟೂತ್ ಲಭ್ಯತೆ ಮತ್ತು ಮುಂಭಾಗದ ಡಿಸ್ಕ್ ಬ್ರೇಕ್ ವಿಷಯದಲ್ಲಿ ಭಿನ್ನವಾಗಿರುತ್ತವೆ. ಅಲ್ಲದೆ, ನಾಲ್ಕು ವೇರಿಯೆಂಟ್‌ಗಳು ಸಿಂಗಲ್-ಪೀಸ್ ಸೀಟನ್ನು ಪಡೆದರೆ, ಟಾಪ್ ವೇರಿಯೆಂಟ್ ಸ್ಪ್ಲಿಟ್ ಸೀಟ್‌ನೊಂದಿಗೆ ಬರುತ್ತದೆ. ಇದು ಸ್ಪೋರ್ಟಿಯಾಗಿ ಕಾಣುವಂತೆ ಮಾಡುತ್ತದೆ.

ಕಾರ್ಬನ್ ಆವೃತ್ತಿಯು ಬೆಲ್ಲಿ ಪ್ಯಾನ್, ಫ್ರಂಟ್ ಫೆಂಡರ್, ಟ್ಯಾಂಕ್ ಮತ್ತು ಹಿಂಭಾಗದ ಕೌಲ್‌ನಲ್ಲಿ ಕಾರ್ಬನ್ - ಫೈಬರ್ ಗ್ರಾಫಿಕ್ಸ್ ಅನ್ನು ಹೊಂದಿರುವ ಬಣ್ಣ ಆಯ್ಕೆಗಳು ಬೈಕನ್ನು ಮತ್ತಷ್ಟು ವಿಭಿನ್ನಗೊಳಿಸುತ್ತವೆ. ಉಳಿದಂತೆ ಎಲ್ಲಾ ವೇರಿಯೆಂಟ್‌ಗಳಲ್ಲಿ ಎಂಜಿನ್ ವಿಶೇಷಣಗಳು ಮತ್ತು ಹೆಚ್ಚಿನ ಹಾರ್ಡ್‌ವೇರ್ ಒಂದೇ ಆಗಿರುತ್ತದೆ. 5 - ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.

bajaj-pulsar-125-price-feature-engine-details

ಹೊಸ ಪಲ್ಸರ್ - 125 ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಗ್ಯಾಸ್ - ಚಾರ್ಜ್ಡ್ ಟ್ವಿನ್ ರಿಯರ್ ಸ್ಪ್ರಿಂಗ್‌ಗಳನ್ನು ಒಳಗೊಂಡಿದೆ. ಬ್ರೇಕಿಂಗ್ ಸೆಟಪ್ ಮುಂಭಾಗದಲ್ಲಿ 240mm ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಯೂನಿಟ್ ಅನ್ನು ಒಳಗೊಂಡಿದೆ. ವೈಶಿಷ್ಟ್ಯಗಳ ಪಟ್ಟಿಯು ಬ್ಲೂಟೂತ್ ಸಂಪರ್ಕದೊಂದಿಗೆ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು USB ಚಾರ್ಜಿಂಗ್ ಪೋರ್ಟ್ ಅನ್ನು ಒಳಗೊಂಡಿದೆ.

ಪಲ್ಸರ್ - 125 ಭಾರತದಲ್ಲಿ ಖರೀದಿಸಬಹುದಾದ ಅತ್ಯಂತ ಕೈಗೆಟುಕುವ ಬೈಕ್ ಆಗಿದೆ. ಇದು ಸ್ವಲ್ಪ ಸ್ಪೋರ್ಟಿ ಲುಕ್ ಹೊಂದಿದೆ ಮತ್ತು ವರ್ಗ ಪ್ರಮುಖ ಕಾರ್ಯಕ್ಷಮತೆಯೊಂದಿಗೆ ನಗರ ಸಂಚಾರದಲ್ಲಿಯೂ ಉತ್ತಮ ಪ್ರಯಾಣ ಅನುಭವ ನೀಡುತ್ತದೆ. ಆದರೆ ವಿನ್ಯಾಸವು ಈಗ ತುಂಬಾ ಹಳೆಯದಾಗಿದ್ದು, ಪಲ್ಸರ್‌ನ ಹಳೆಯ ಲುಕ್ ಇಷ್ಟಪಡುವವರು ಈ ಬೈಕ್ ಖರೀದಿಸಬಹುದು.

More from DriveSpark

Article Published On: Tuesday, November 25, 2025, 10:20 [IST]
English summary
Bajaj pulsar 125 price feature engine details
Read more on bajaj india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+