17 ಲಕ್ಷದ 'ಅಂಬಾರಿ' ಬೈಕ್‌ನ್ನು ಖರೀದಿಸಿದ ಬೆಂಗಳೂರಿನ ಮಹಿಳಾ ಉದ್ಯಮಿ: ಸಂಪ್ರದಾಯ ಮರೆಯಲಿಲ್ಲ, ಸ್ಪೆಷಲ್ ಪೂಜೆ!

ಸಾಮಾನ್ಯವಾಗಿ ಬಹುಪಾಲು ಪುರುಷರು ಮೋಟಾರ್‌ಸೈಕಲ್‌ಗಳನ್ನು ಮುಗಿಬಿದ್ದು ಖರೀದಿ ಮಾಡುತ್ತಾರೆ. ಆದರೆ, ಮಹಿಳೆಯರು ಈ ಬೈಕ್‌ಗಳನ್ನು ಲೈಕ್ ಮಾಡುವುದು ಬಹಳ ಕಡಿಮೆ.. ಅಲ್ಲೊಬ್ಬರು, ಇಲ್ಲೊಬ್ಬರು ಎಂಬಂತೆ ಮಹಿಳೆಯರು ಕೂಡ ಮೋಟಾರ್‌ಸೈಕಲ್‌ಗಳನ್ನು ಕೊಂಡುಕೊಳ್ಳುವುದನ್ನು ನೋಡಿದ್ದೇವೆ. ವಿಶೇಷವಾಗಿ ಸ್ವಲ್ಪ ಮಟ್ಟಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುವ 'ರಾಯಲ್ ಎನ್‌ಫೀಲ್ಡ್ ಬುಲೆಟ್ 350' ಬೈಕ್‌ನ್ನು ಇಟ್ಟುಕೊಂಡಿರುತ್ತಾರೆ. ಅದರ ಹೊರತಾಗಿ ಲಕ್ಷ - ಲಕ್ಷ ಹಣ ಕೊಟ್ಟು ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ಐಷಾರಾಮಿ ಮೋಟಾರ್‌ಸೈಕಲ್‌ಗಳನ್ನು ತೆಗೆದುಕೊಳುತ್ತಾರೆ.

ಸದ್ಯ, ಬೆಂಗಳೂರಿನ ಮಹಿಳಾ ಉದ್ಯಮಿಯೊಬ್ಬರು, ಭಾರೀ ಮೊತ್ತದ 2025ರ ಹೊಚ್ಚ ಹೊಸ ಸುಜುಕಿ ಹಯಾಬುಸಾ (Suzuki Hayabusa) ಬೈಕ್‌ನ್ನು ಖರೀದಿ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಇಸ್ಟಾಗ್ರಾಮ್‍ನಲ್ಲಿ ಸಹ ಕಾಣಿಕೊಂಡಿದೆ. ನೂತನ ಮೋಟಾರ್‌ಸೈಕಲ್‌ನ್ನು ತೆಗೆದುಕೊಂಡಿರುವ ಮಹಿಳೆಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Bengaluru Woman Entrepreneur Buys New Suzuki Hayabusa Motorcycle Details

ನೂತನ 'ಸುಜುಕಿ ಹಯಾಬುಸಾ' ಬೈಕ್‌ನ್ನು ಕಿಂಟು ಸಿಂಗ್ ಎಂಬುವವರು ಕೊಂಡುಕೊಂಡಿದ್ದಾರೆ. ಇವರು ಉದ್ಯಮಿಯಾಗಿದ್ದಾರೆ ಎನ್ನಲಾಗಿದೆ. ಆದರೆ, ಯಾವ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿಯು ಲಭ್ಯವಾಗಿಲ್ಲ. ಹೊಸ ಮೋಟಾರ್‌ಸೈಕಲ್‌ನ್ನು ಮನೆಗೆ ತಂದ ಬಳಿಕ ಉದ್ಯಮಿ ಕಿಂಟು ಸಿಂಗ್, ಅದನ್ನು ದೇಗುಲಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ವಿಶೇಷವಾದ ಪೂಜೆಯನ್ನು ಸಲ್ಲಿಸಿದ್ದಾರೆ.

ಈ ಮೊದಲು ಡೀಲರ್‌ಶಿಪ್‌ಗೆ ತೆರಳಿ ಹೊಸ ಮೋಟಾರ್‌ಸೈಕಲ್‌ನ್ನು ವಿತರಣೆ ಪಡೆಯುತ್ತಿರುವ ವಿಡಿಯೋವನ್ನು ಕೂಡ ಕಿಂಟು ಸಿಂಗ್ ಅವರು, ತಮ್ಮ ಇಸ್ಟಾಗ್ರಾಮ್‍ ಖಾತೆಯಲ್ಲಿ ಹಂಚಿಕೊಂಡಿದ್ದರು. 'ಸುಜುಕಿ ಹಯಾಬುಸಾ' ಸೂಪರ್ ಬೈಕ್‌ ಆಗಿದ್ದು, ಇದನ್ನು ಬಾಲಿವುಡ್‌ನ 'ಧೂಮ್' ಸಿನಿಮಾದಲ್ಲಿ ಬಳಕೆ ಮಾಡಲಾಗಿತ್ತು. ಆ ನಂತರದಲ್ಲಿ ಹೆಚ್ಚು ಜನಪ್ರಿಯವಾಯಿತು.

Bengaluru Woman Entrepreneur Buys New Suzuki Hayabusa Motorcycle Details

ಸುಜುಕಿ ಹಯಾಬುಸಾ ಬೈಕ್ ವಿಶೇಷತೆಗಳೇನು..

ಹೊಸ ಸುಜುಕಿ ಹಯಾಬುಸಾ ಮೋಟಾರ್‌ಸೈಕಲ್‌, ದುಬಾರಿ ಬೆಲೆಯನ್ನು ಹೊಂದಿದೆ. ಮೂರನೇ ತಲೆಮಾರಿನ ಈ ಬೈಕ್, ರೂ.17 ಲಕ್ಷದಿಂದ ರೂ.17.80 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಹೊರಭಾಗದಲ್ಲಿ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಪಡೆದಿದ್ದು, ಮೆಟಾಲಿಕ್ ಥಂಡರ್ ಗ್ರೇ, ಕ್ಯಾಂಡಿ ಡೇರಿಂಗ್ ರೆಡ್ ಹಾಗೂ ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಮೋಟಾರ್‌ಸೈಕಲ್‌ ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. ಇದು 1340 ಸಿಸಿ ಲಿಕ್ವಿಡ್-ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 190 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 150 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 17 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ನೂತನ ಸುಜುಕಿ ಹಯಾಬುಸಾ ಮೋಟಾರ್‌ಸೈಕಲ್‌, ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಈ ಬೈಕ್ 266 ಕೆಜಿ ತೂಕವಿದ್ದು, 20 ಲೀ.ನಷ್ಟು ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಈ ಸುಜುಕಿ ಹಯಾಬುಸಾಗೆ ಕವಾಸಕಿ ನಿಂಜಾ ಝಡ್ಎಕ್ಸ್-14ಆರ್ & ಬಿಎಂಡಬ್ಲ್ಯು ಆರ್1250 ಆರ್‌ ಮೋಟಾರ್‌ಸೈಕಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, May 7, 2025, 16:05 [IST]
English summary
Bengaluru woman entrepreneur buys new suzuki hayabusa motorcycle details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+