2025 ಆಟೋ ಎಕ್ಸ್‌ಪೋದಲ್ಲಿ ಎರಡು ಆಕರ್ಷಕ ಸ್ಕೂಟರ್‌ಗಳ ಅನಾವರಣ: ವಿಶೇಷತೆಗಳೇನು?

ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕರಾದ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ ಲಿಮಿಟೆಡ್, ಇಂದು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ತನ್ನ ಉತ್ಪನ್ನ ಪೋರ್ಟ್ಫೋಲಿಯೊಗೆ ಹೊಸ ಸೇರ್ಪಡೆಗಳನ್ನು ಅನಾವರಣಗೊಳಿಸಿದೆ. ಕಂಪನಿಯು ಎಬ್ಲು ಫಿಯೋ Z, ಎಬ್ಲು ಫಿಯೋ DX ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಎಬ್ಲು ಫಿಯೋ Z ಅನ್ನು ಕಡಿಮೆ-ವೇಗದ ಸ್ಕೂಟರ್‌ನಂತೆ ವಿನ್ಯಾಸಗೊಳಿಸಲಾಗಿದ್ದು, ಎಬ್ಲು ಫಿಯೋ DX ಅನ್ನು ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಪ್ರತಿ ಚಾರ್ಜ್‌ಗೆ 150 ಕಿ.ಮೀ ರೇಂಜ್ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಗ್ರಾಹಕರ ಅನುಕೂಲತೆಯನ್ನು ಸುಧಾರಿಸಲು, ಕಂಪನಿಯು EbluCare ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. EbluCare ಎಂಬ ನವೀನ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅನ್ನು ಎಲೆಕ್ಟ್ರಿಕ್ ವಾಹನಗಳನ್ನು (EV) ಸುಲಭವಾಗಿ ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಈ ಅಪ್ಲಿಕೇಶನ್ ಬಳಕೆದಾರರಿಗೆ ಸುಲಭತೆ ಮತ್ತು ಸಂಪರ್ಕವನ್ನು ಒತ್ತಿಹೇಳುವ ಮೂಲಕ EV ಮಾಲೀಕರಿಗೆ ಸುಗಮ ಅನುಭವವನ್ನು ಒದಗಿಸುತ್ತದೆ.

godawari-electric-motors-unveils-two-new-e-scooters-at-auto-expo-2025

ಇದರಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು iOS ಆಪ್ ಸ್ಟೋರ್ ಎರಡೂ ಅಪ್ಲಿಕೇಶನ್ ಅನ್ನು ಡೌನ್‌ಲೋಡ್‌ಗಾಗಿ ನೀಡುತ್ತವೆ. ಈ ಹೊಸ ಉತ್ಪನ್ನಗಳ ಅನಾವರಣವು ಭಾರತದ ಎಲೆಕ್ಟ್ರಿಕ್ ವಲಯದಲ್ಲಿ ನಮ್ಮ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ರೀಜೆನ್ ಬ್ರೇಕಿಂಗ್, ಸುಧಾರಿತ ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳು ಮತ್ತು ಉತ್ತಮ ನಿರ್ಮಾಣ ಗುಣಮಟ್ಟದಂತಹ ವೈಶಿಷ್ಟ್ಯಗಳೊಂದಿಗೆ, ಈ ವಾಹನಗಳು ಭಾರತದಲ್ಲಿ ಎಲೆಕ್ಟ್ರಿಕ್ ಭವಿಷ್ಯವನ್ನು ಪ್ರತಿನಿಧಿಸುತ್ತವೆ ಎಂದು ಕಂಪನಿ ಹೇಳಿದೆ.

ಎಬ್ಲು ಫಿಯೋ DX ವಿಶೇಷತೆಗಳು: ಎಬ್ಲು ಫಿಯೋ ಡಿಎಕ್ಸ್ ಒಂದು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಇದು 5.0 ಕಿಲೋವ್ಯಾಟ್ ಪೀಕ್ ಪವರ್ ಮೋಟಾರ್ ಅನ್ನು ಹೊಂದಿದೆ. ಈ ಮೋಟಾರ್‌ 140 ಎನ್‌ಎಂ ಗರಿಷ್ಠ ಟಾರ್ಕ್ ಹೊರ ಹಾಕುತ್ತದೆ. ಗಂಟೆಗೆ 80 ಕಿ.ಮೀ ಗರಿಷ್ಠ ವೇಗ ಮತ್ತು 150 ಕಿ.ಮೀ ರೇಂಜ್ ನೀಡುವ ಈ ಸ್ಕೂಟರ್, 11-ಡಿಗ್ರಿ ಗ್ರೇಡಿಯಂಟ್ ಅನ್ನು ಬೆಂಬಲಿಸುತ್ತದೆ.

godawari-electric-motors-unveils-two-new-e-scooters-at-auto-expo-2025

ಇದು ಎಕಾನಮಿ, ನಾರ್ಮಲ್, ಪವರ್ ಎಂಬ ಮೂರು ರೈಡಿಂಗ್ ಮೋಡ್‌ಗಳು, ಬ್ಲೂಟೂತ್ ಸಂಪರ್ಕ, 7-ಇಂಚಿನ ಟಿಎಫ್‌ಟಿ ಸ್ಕ್ರೀನ್‌ನೊಂದಿಗೆ ಬರುತ್ತದೆ. ಈ ಸ್ಕೂಟರ್ 28-ಲೀಟರ್ ಬೂಟ್ ಸ್ಥಳವನ್ನು ಹೊಂದಿದ್ದು, ಅದರ 4.2 ಕಿಲೋವ್ಯಾಟ್ ಬ್ಯಾಟರಿಯನ್ನು ಅದರ 60V 20 ಆಂಪ್ ಹೋಮ್ ಚಾರ್ಜರ್ ಬಳಸಿ ಕೇವಲ 3.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಎಬ್ಲು ಫಿಯೋ Z ವಿಶೇಷತೆಗಳು: ಎಬ್ಲು ಫಿಯೋ Z ಭಾರತೀಯ ಕುಟುಂಬಗಳಿಗೆ ಉದ್ದೇಶಿಸಲಾದ ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ವಿಶಾಲವಾದ 25-ಲೀಟರ್ ಬೂಟ್ ಸ್ಥಳವನ್ನು ಹೊಂದಿದೆ. ವಾಹನವು ಡ್ಯುಯಲ್ ಎಲ್‌ಇಡಿ ಲೈಟಿಂಗ್ ಜೊತೆಗೆ ಡಿಟ್ಯಾಚೇಬಲ್ ಎಲ್‌ಎಂಎಫ್‌ಪಿ ಸಿಲಿಂಡರಾಕಾರದ ಬ್ಯಾಟರಿ ಸಿಸ್ಟಮ್ (48V/30Ah) ಅನ್ನು ಹೊಂದಿದೆ.

godawari-electric-motors-unveils-two-new-e-scooters-at-auto-expo-2025

ಈ ಸ್ಕೂಟರ್ ಪ್ರತಿ ಚಾರ್ಜ್‌ಗೆ 80 ಕಿ.ಮೀ ರೇಂಜ್ ನೀಡುತ್ತದೆ. ಇದು ವಾಹನದ ಮೇಲೆ 3 ವರ್ಷಗಳು ಅಥವಾ 30,000 ಕಿ.ಮೀಗಳ ಸಮಗ್ರ ಖಾತರಿ ಪ್ಯಾಕೇಜ್ ಮತ್ತು ಬ್ಯಾಟರಿಯ ಮೇಲೆ ಪ್ರಭಾವಶಾಲಿ 5 ವರ್ಷಗಳು ಅಥವಾ 50,000 ಕಿ.ಮೀಗಳ ವಾರೆಂಟಿಯೊಂದಿಗೆ ಬರುತ್ತದೆ. ಈ ಸ್ಕೂಟರ್‌ಗಳ ಬಿಡುಗಡೆ ಬಗ್ಗೆ ಕಂಪನಿಯು ಶೀಘ್ರದಲ್ಲೆ ಮಾಹಿತಿ ಹಂಚಿಕೊಳ್ಳಲಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, January 19, 2025, 9:00 [IST]
English summary
Godawari electric motors unveils two new e scooters at auto expo 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+