ಕೈಗೆಟುಕುವ ಬೆಲೆಯ ಎರಡು ಹೊಸ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆ ಸಜ್ಜು

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ, ಇದುವರೆಗು ಹೊಸ ಕಂಪನಿಗಳಾದ ಓಲಾ, ಎಥರ್, ಸಿಂಪಲ್ ಒನ್‌ನಂತಹ ಬ್ರಾಂಡ್‌ಗಳು ಅಬ್ಬರಿಸಿದ್ದವು. ಇದೀಗ ಇವಿಗಳಿಗೆ ಹೆಚ್ಚುತ್ತಿರುವ ಕ್ರೇಜ್ ಅನ್ನು ಮನಗಂಡಿರುವ ಪ್ರಮುಖ ಬ್ರಾಂಡ್‌ಗಳಾದ ಬಜಾಜ್, ಹೋಂಡಾ, ಟಿವಿಎಸ್ ಬ್ರಾಂಡ್‌ಗಳು ತಮ್ಮ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರ ವಿಶ್ವಾಸ ಗಳಿಸಿವೆ. ಹೊಸ ಆಧುನಿಕ ಇವಿಗಳು ಮಾರುಕಟ್ಟೆಯಲ್ಲಿ ಇಳಿದರೆ ಸಾಕು ಪೈಪೋಟಿಯೊಂದಿಗೆ ಇತರ ಬ್ರಾಂಡ್‌ಗಳು ಇನ್ನೂ ಅತ್ಯಾಧುನಿಕ ಇವಿಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿವೆ. ಇದೀಗ ಹೀರೋ ತನ್ನ ಅತ್ಯಾಧುನಿಕ ಇವಿಯನ್ನು ಪರಿಚಯಿಸಲು ರೆಡಿಯಾಗಿದೆ.

ಈಗಾಗಲೇ ಹೀರೋ ಕಂಪನಿಯು ತನ್ನ ನವೀಕರಿಸಿದ ವಿಡಾ ವಿ2 ಮಾಡಲ್ ಸಿರೀಸ್‌ನ್ನು ಡಿಸೆಂಬರ್ 2024 ರಲ್ಲಿ ಬಿಡುಗಡೆ ಮಾಡಿತ್ತು. ಇದಾದ ಬಳಿಕ ಕಂಪನಿಯು ಇದೀಗ ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ. ಕೆಲ ಮೂಲಗಳ ಪ್ರಕಾರ ಹೀರೋ ಕಂಪನಿಯು ತನ್ನ ಹೊಸ ಅಪ್‌ಡೇಟೆಡ್ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಜುಲೈ 1 ರಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

hero-set-to-launch-two-new-affordable-electric-scooters

ಒಂದು ತಿಂಗಳ ಹಿಂದೆ, ಹೀರೋ ಕಂಪನಿಯು ಜುಲೈನಲ್ಲಿ ಎರಡು ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಈಗ ಕಂಪನಿಯು ಜುಲೈ 1 ರಂದು ವಿಡಾ ಬಿಡುಗಡೆಗೆ ಆಹ್ವಾನವನ್ನು ಹಂಚಿಕೊಂಡಿದೆ. ಆದರೆ ಯಾವ ಸ್ಕೂಟರ್‌ಗಳು ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ.

ಈ ಹೊಸ ಸ್ಕೂಟರ್‌ಗಳು ಒಂದೇ ಮಾಡಲ್‌ನ ಎರಡು ವಿಭಿನ್ನ ಸ್ಕೂಟರ್‌ಗಳೇ ಅಥವಾ ವೇರಿಯೆಂಟ್‌ಗಳೇ ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಆದರೆ ಹೊಸ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ವಿಭಿನ್ನ ವಿನ್ಯಾಸದ ಥೀಮ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಇಐಸಿಎಂಎ 2024 ರಲ್ಲಿ ಪ್ರದರ್ಶಿಸಲಾದ ವಿಡಾ ಝಡ್ ಅನ್ನು ಹೋಲುತ್ತದೆ ಎಂದು ಗಟ್ಟಿಯಾಗಿ ನಂಬಲಾಗಿದೆ.

hero-set-to-launch-two-new-affordable-electric-scooters

ಹೀರೋ ಕಂಪನಿಯು ತನ್ನ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ಬೆಲೆ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಮುಂಬರಲಿರುವ ಹೊಸ ಸ್ಕೂಟರ್‌ಗಳು ಸ್ಪರ್ಧಾತ್ಮಕ ಬೆಲೆಯೊಂದಿಗೆ ಬಿಡುಗಡೆಯಾಗಲಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ವಿವರಗಳನ್ನು ಕಂಪನಿ ಹಂಚಿಕೊಳ್ಳಲಿದೆ.

ಪ್ರಸ್ತುತ ಹೀರೋ ಕಂಪನಿಯು ವಿಡಾ ವಿ2 ಸಿರೀಸ್‌ನಲ್ಲಿ ವಿ2 ಪ್ರೊ, ವಿ2 ಪ್ಲಸ್ ಮತ್ತು ವಿ2 ಲೈಟ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ಸ್ಕೂಟರ್ ಅನ್ನು ಮಾರಾಟ ಮಾಡಲಾಗುತ್ತಿದೆ. ವಿಡಾ ಲೈಟ್ ಮೊದಲ ಬಾರಿಗೆ ಬಿಡುಗಡೆಯಾದಾಗಿನಿಂದ ಸಬ್ಸಿಡಿಗಳು ಮತ್ತು ಡೀಲರ್ ರಿಯಾಯಿತಿಗಳನ್ನು ಒಳಗೊಂಡಂತೆ ಎಕ್ಸ್ ಶೋರೂಂ ದರದಂತೆ ರೂ.74,000 ಬೆಲೆಯನ್ನು ಹೊಂದಿದೆ.

hero-set-to-launch-two-new-affordable-electric-scooters

ಹೀರೋ ವಿಡಾ ವಿ2 ಸಿರೀಸ್‌ನಲ್ಲಿ ಬರುವ ವಿ2 ಪ್ರೊ, ವಿ2 ಪ್ಲಸ್ ಮತ್ತು ವಿ2 ಲೈಟ್ ಪ್ರತಿಯೊಂದೂ ವಿಭಿನ್ನ ಬ್ಯಾಟರಿ ಸಾಮರ್ಥ್ಯಗಳು, ಪರ್ಫಾಮೆನ್ಸ್ ಮತ್ತು ವೈಶಿಷ್ಟ್ಯಗಳನ್ನು ಹೊಂದಿವೆ. ಆಯಾ ವೇರಿಯೆಂಟ್‌ಗೆ ತಕ್ಕಂತೆ ಬೆಲೆಗಳು ಬದಲಾಗುತ್ತವೆ. ಹೀರೋ ಎಲೆಕ್ಟ್ರಿಕ್ ವಿಭಾಗದಲ್ಲಿ ಯಾವಮಟ್ಟಿಗೆ ತನ್ನ ಹೊಸ ಸ್ಕೂಟರ್‌ನೊಂದಿಗೆ ಯಶಸ್ಸು ಕಾಣಲಿದೆ ಎಂಬುದನ್ನು ಕಾದುನೋಡಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, May 27, 2025, 12:27 [IST]
English summary
Hero set to launch two new affordable electric scooters
Read more on hero electric india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+