ಬಡವರ ಬೈಕ್‌ಯಿದು.. ಒಮ್ಮೆ ಫುಲ್ ಟ್ಯಾಂಕ್ ಮಾಡಿಸಿದ್ರೆ 650 Km ಮೈಲೇಜ್, ರೂ.70,000ಕ್ಕೆ ಸಿಗುತ್ತೆ!
ಹೋಂಡಾ ಶೈನ್ 100 ಡಿಎಕ್ಸ್ (Honda Shine 100 DX) ವಿಶ್ವಾಸಾರ್ಹ ಪ್ರಯಾಣಿಕ ಮೋಟಾರ್‌ಸೈಕಲ್ ಎಂದೇ ಹೆಸರುವಾಸಿಯಾಗಿದೆ. ಇದರ ನಿರ್ವಹಣಾ ವೆಚ್ಚವು ತುಂಬಾ ಅಗ್ಗವಾಗಿದೆ. ಉತ್ತಮ ಇಂಧನ ದಕ್ಷತೆಯಿಂದಲೂ ಮನೆ ಮಾತಾಗಿದೆ. ಗ್ರಾಹಕರು ಸಹ ಮೆಚ್ಚಿಕೊಂಡಿದ್ದಾರೆ. ನೀವು ಹೊಚ್ಚ ಹೊಸ ಬೈಕ್‌ವೊಂದನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಇದೇ 'ಶೈನ್ 100 ಡಿಎಕ್ಸ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ.. ಈ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಕೈಗೆಟುಕುವ ಬೆಲೆ (Affordable Price):
ಸೆಪ್ಟೆಂಬರ್ 22 ರಿಂದ ಪರಿಷ್ಕೃತ ಜಿಎಸ್‌ಟಿ ತೆರಿಗೆ ದರಗಳು ಜಾರಿಗೊಂಡಿವೆ. ಆ ನಂತರದಲ್ಲಿ 'ಹೋಂಡಾ ಶೈನ್ 100 ಡಿಎಕ್ಸ್' ಬೆಲೆಯೂ ಇಳಿಕೆಯಾಗಿದೆ. ರೂ.70,505 (ಎಕ್ಸ್-ಶೋರೂಂ - ಕರ್ನಾಟಕ) ದರವನ್ನು ಹೊಂದಿದೆ. ರೂ.85,940 ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ಎಲ್ಲ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ.

ಸರಳ ವಿನ್ಯಾಸ & ಆಕರ್ಷಕವಾದ ಬಣ್ಣಗಳೊಂದಿಗೂ ಲಭ್ಯ (Simple Design & Available Attractive Colors):
ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ. ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಎಲ್ಇಡಿ ಟೈಲ್ ಲೈಟ್‌ನ್ನು ಹೊಂದಿದೆ. 168 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,245 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ. ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಇಂಪೀರಿಯಲ್ ರೆಡ್ ಮೆಟಾಲಿಕ್ ಮತ್ತು ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.
ಭರ್ಜರಿಯಾದ ಕಾರ್ಯಕ್ಷಮತೆ (Great Performance):
ಈ ಮೋಟಾರ್‌ಸೈಕಲ್ ಹೆಚ್ಚು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 98.98-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 7.28 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 8.04 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ.

ಸೂಪರ್ ಮೈಲೇಜ್ (Super Mileage):
ನೂತನ 'ಶೈನ್ 100 ಡಿಎಕ್ಸ್' ಬೈಕ್, ರೂ.103ಕ್ಕೆ 1 ಲೀಟರ್ ಪೆಟ್ರೋಲ್ ಹಾಕಿಸಿದರೆ 65 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. ಬರೋಬ್ಬರಿ 10 ಲೀಟರ್ ಸಾಮರ್ಥ್ಯದ ಫುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. ಒಮ್ಮೆ ಭರ್ತಿಯಾಗಿ ತುಂಬಿಸಿ ಬಿಟ್ಟರೆ, ಸರಿ ಸುಮಾರು 650 ಕಿಲೋಮೀಟರ್‌ವರೆಗೆ ಓಡಬಲ್ಲದು.
ಕಣ್ಣು ಕುಕ್ಕುವ ವೈಶಿಷ್ಟ್ಯಗಳು (Best Features):
ಇದು ನಾನಾ ಬಗೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್, ಸೈಲೆಂಟ್ ಎಲೆಕ್ಟ್ರಿಕ್ ಸ್ಟಾರ್ಟರ್ ಮತ್ತು ಸರ್ವಿಸ್ ಡ್ಯೂ ಇಂಡಿಕೇಟರ್‌ನ್ನು ಒಳಗೊಂಡಿದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಬರೀ 7 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ಉತ್ತಮವಾದ ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Excellent Suspension Setup & Braking System):
ಹೊಸ 'ಶೈನ್ 100 ಡಿಎಕ್ಸ್' ಮೋಟಾರ್‌ಸೈಕಲ್, ಮುಂದೆ (ಫ್ರಂಟ್) ಟೆಲಿಸ್ಕೋಪಿಕ್ ಪೋರ್ಕ್ಸ್ & ಹಿಂದೆ (ರೇರ್) ಅಡ್ಜಸ್ಟೇಬಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಸಿಬಿಎಸ್ (ಕಂಬೈನ್ಡ್ ಬ್ರೇಕ್ ಸಿಸ್ಟಮ್) ಮತ್ತು ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. 17-ಇಂಚಿನ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ.
ಒಟ್ಟಾರೆಯಾಗಿ 'ಹೋಂಡಾ ಶೈನ್ 100 ಡಿಎಕ್ಸ್' ಜಗಮೆಚ್ಚಿದ ಬೈಕ್ ಆಗಿದೆ. ಇದಕ್ಕೆ ಹಲವು ಎದುರಾಳಿಗಳಿವೆ. ಹೀರೋ ಸ್ಪ್ಲೆಂಡರ್ ಪ್ಲಸ್, ಬಜಾಜ್ ಪ್ಲಾಟಿನಾ 100, ಟಿವಿಎಸ್ ಸ್ಪೋರ್ಟ್, ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಮತ್ತು ಹೋಂಡಾ ಶೈನ್ 100ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








