Komaki: ಸ್ಕೂಟರ್ ಖರೀದಿಸುವ ಪ್ಲಾನ್ ಇದೆಯೇ? ಅಗ್ಗದ ಹೊಸ ಸ್ಕೂಟರ್‌ಗಳು ಬಿಡುಗಡೆ!
ಭಾರತದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹೊಸ ಇವಿಗಳು ಸಾಲಾಗಿ ಬಿಡುಗಡೆಯಾಗುತ್ತಿವೆ. ಇದೀಗ ಹೊಸ ಸ್ಟಾರ್ಟ್‌ಅಪ್ ಕಂಪನಿಯಾಗಿರುವ ಕೋಮಾಕಿ ಎಲೆಕ್ಟ್ರಿಕ್ (Komaki electric) ಕಂಪನಿ ತನ್ನ SE ಎಲೆಕ್ಟ್ರಿಕ್ ಸ್ಕೂಟರ್ ಸಿರೀಸ್ ಬಿಡುಗಡೆ ಮಾಡಿದೆ. ಕಂಪನಿಯು ಈ ಸಿರೀಸ್‌ನಲ್ಲಿ SE ಪ್ರೋ, SE ಅಲ್ಟ್ರಾ, SE ಮ್ಯಾಕ್ಸ್ ಎಂಬ ಮೂರು ಹೊಸ ಮಾಡಲ್‌ಗಳನ್ನು ಪರಿಚಯಿಸಿದೆ. ವಾಹನಗಳ ಬೆಲೆಗಳು SE ಪ್ರೋಗೆ ರೂ. 67,999, SE ಅಲ್ಟ್ರಾಗೆ ರೂ. 76,999, SE ಮ್ಯಾಕ್ಸ್‌ಗೆ 1,10,000 ರೂ. ಎಕ್ಸ್ ಶೋರೂಂ ಬೆಲೆಯಿದೆ.
ವಿಶೇಷವೆಂದರೆ ಎಲ್ಲಾ ಮೂರು ಮಾದರಿಗಳನ್ನು ಕೊಮಾಕಿ MG Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಧರಿಸಿ ನಿರ್ಮಿಸಲಾಗಿದೆ. ಕೊಮಾಕಿ SE ಮ್ಯಾಕ್ಸ್ 4.2kw LiPo4 ಪ್ರದರ್ಶನವನ್ನು ಹೊಂದಿದೆ ಮತ್ತು 200 ಕಿಮೀ ವ್ಯಾಪ್ತಿಯನ್ನು ಒದಗಿಸುತ್ತದೆ. ಹಾಗೆಯೇ ಕೊಮಾಕಿ SE ಅಲ್ಟ್ರಾ 2.7 kW LiPo4 ಬ್ಯಾಟರಿಯನ್ನು ಹೊಂದಿದ್ದು, 130 ರಿಂದ 140 ಕಿ.ಮೀ ರೇಂಜ್ ನೀಡುವುದಾಗಿ ಹೇಳಲಾಗಿದೆ.

ಕೊಮಾಕಿ SE ಅಲ್ಟ್ರಾ ಮತ್ತು SE ಮ್ಯಾಕ್ಸ್ LiPo4 ಬ್ಯಾಟರಿ ತಂತ್ರಜ್ಞಾನವನ್ನು ಹೊಂದಿದ್ದು, ಸದ್ಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬಳಸುವ ಸುರಕ್ಷಿತ ಬ್ಯಾಟರಿಗಳಾಗಿವೆ. ಈ ಬ್ಯಾಟರಿಗಳು ಹೆಚ್ಚಿನ ಸಾಮರ್ಥ್ಯದ ಲಿಥಿಯಂ - ಐಯಾನ್ ಬ್ಯಾಟರಿ ತಂತ್ರಜ್ಞಾನವನ್ನು ಹೊಂದಿವೆ. ಈ ಹೊಸ ತಂತ್ರಜ್ಞಾನವು ವರ್ಧಿತ ಶ್ರೇಣಿಯನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿದೆ.
ವೈಶಿಷ್ಟ್ಯಗಳ ವಿಷಯದಲ್ಲಿ ಕೊಮಾಕಿ SE ಮ್ಯಾಕ್ಸ್ ಡ್ಯುಯಲ್ ಚಾರ್ಜರ್‌ಗಳು, TFT ಸ್ಕ್ರೀನ್ ಮತ್ತು ಡ್ಯುಯಲ್ ಡಿಸ್ಕ್‌ಗಳನ್ನು ಹೊಂದಿದ್ದು, ಗಂಟೆಗೆ 80 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. SE Pro ಮತ್ತು SE ಅಲ್ಟ್ರಾ ಸ್ಕೂಟರ್‌ಗಳು ಸಿಂಗಲ್ ಡಿಸ್ಕ್, LED ಡಿಜಿಟಲ್ ಸ್ಪೀಡೋಮೀಟರ್ ಮತ್ತು 70 ಕಿ.ಮೀ ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿವೆ.

ಕೊಮಾಕಿ MG Pro ವಿಶೇಷತೆಗಳು: SE ಸಿರೀಸ್ ಮಾಡಲ್‌ಗಳು ಇತ್ತೀಚಿನ ಬಿಡುಗಡೆಯಾದರೆ, Komaki MG Pro ಅನ್ನು 2024 ರಲ್ಲಿ ಬಿಡುಗಡೆ ಮಾಡಲಾಯಿತು. ಇದು ಕೂಡ MG PRO Li, MG PRO V ಮತ್ತು MG PRO+ ಸೇರಿದಂತೆ ಮೂರು ಮಾಡಲ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಆಕರ್ಷಕ ಫೀಚರ್ಸ್ ಹಾಗೂ ಉತ್ತಮ ಪರ್ಫಾಮೆನ್ಸ ಹೊಂದಿದೆ.
ಇ-ಸ್ಕೂಟರ್‌ನಲ್ಲಿ ಲಾಕ್ ಬೈ ರಿಮೋಟ್ ಫಂಕ್ಷನ್, ಸ್ವಯಂ-ರೋಗನಿರ್ಣಯ (self - diagnosis), ಕಳ್ಳತನ ವಿರೋಧಿ ಲಾಕ್ (anti - theft lock), ಮುಂಭಾಗದ ಡಿಸ್ಕ್ ಬ್ರೇಕ್, ರಿಪೇರಿ ಸ್ವಿಚ್, ಟೆಲಿಸ್ಕೋಪಿಕ್ ಶಾಕರ್, ಮತ್ತು ಮೊಬೈಲ್ ಚಾರ್ಜಿಂಗ್ ಸ್ಲಾಟ್ ಸೇರಿದಂತೆ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಕರೀದಿಗೆ ಲಭ್ಯವಿದೆ.
BLDC ಹಬ್-ಮೌಂಟೆಡ್ ಮೋಟಾರ್ ಹೊಂದಿದ್ದು ಸ್ಕೂಟರ್ ಡಿಜಿಟಲ್ ಮ್ಯಾಟ್ರಿಕ್ಸ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ವೈರ್‌ಲೆಸ್ ಆಗಿ ನವೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಎಲೆಕ್ಟ್ರಿಕ್ ಸ್ಕೂಟರ್ ಸುಧಾರಿತ ರೀಜೆನ್, ಕ್ರೂಸ್ ಕಂಟ್ರೋಲ್ ಮತ್ತು ರಿವರ್ಸ್ ಅಸಿಸ್ಟ್‌ನೊಂದಿಗೆ ವೈರ್‌ಲೆಸ್ ಕಂಟ್ರೋಲ್, ಪಾರ್ಕಿಂಗ್ ಅಸಿಸ್ಟ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಕಡಿಮೆ-ವೇಗದ Li ವೇರಿಯೆಂಟ್ 1.75 kW ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, 75 ಕಿ.ಮೀ ರೇಂಜ್ನೀಡುತ್ತದೆ, V 100 ಕಿ.ಮೀ ರೇಂಜ್ ಹೊಂದಿರುವ 2.2 kW ಬ್ಯಾಟರಿಯನ್ನು ಹೊಂದಿದೆ. + ವೇರಿಯೆಂಟ್ 150 ಕಿ.ಮೀ ರೇಂಜ್ ಹೊಂದಿರುವ 2.7 kW ಬ್ಯಾಟರಿಯನ್ನು ಹೊಂದಿದೆ. ಇದರ ಚಾರ್ಜರ್ ಮೂಲಕ 4 ರಿಂದ 5 ಗಂಟೆಗಳಲ್ಲಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.


Click it and Unblock the Notifications








