ಹೊಸ ಸ್ಟೈಲಿಷ್ ಸುಜುಕಿ ಸ್ಕೂಟರ್ ಬಿಡುಗಡೆ: ಆಕರ್ಷಕ ಲುಕ್... ಅತ್ಯಾಧುನಿಕ ಫೀಚರ್ಸ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸುಜುಕಿ, ತನ್ನ 2025ರ ಸುಜುಕಿ ಅವೆನಿಸ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಸ್ಟೈಲಿಷ್ ಹಾಗೂ ಮೈಲೇಜ್ ಬಯಸುವ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಈ ಬಾರಿ ಹಲವು ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗಿದೆ. ಹೊಸ ಸ್ಕೂಟರ್ ಸುಜುಕಿ ಇಕೋ ಪರ್ಫಾಮೆನ್ಸ್ ಸಿಸ್ಟಮ್ ಹೊಂದಿದ್ದು, ಪವರ್, ಪರ್ಫಾಮೆನ್ಸ್ ಮತ್ತು ಹೆಚ್ಚಿನ ಮೈಲೇಜ್ ನೀಡುತ್ತದೆ ಎಂದು ಬ್ರಾಂಡ್ ಹೇಳಿಕೊಂಡಿದೆ. 2025ರ ಸುಜುಕಿ ಅವೆನಿಸ್ ಸ್ಕೂಟರ್ ಕುರಿತ ಹೆಚ್ಚಿನ ವಿಶೇಷತೆಗಳು ಕೆಳಗಿವೆ.
ಹೊಸ 2025ರ ಸುಜುಕಿ ಅವೆನಿಸ್ ಸ್ಕೂಟರ್ ಬೆಲೆಯ ವಿಷಯಕ್ಕೆ ಬಂದರೆ ರೂ.91,400 (ಎಕ್ಸ್ ಶೋರೂಂ)ಗೆ ಖರೀದಿಗೆ ಲಭ್ಯವಿದೆ. ಬೆಲೆಗೆ ತಕ್ಕಂತೆ ಹೊಸ ಬಣ್ಣ ಆಯ್ಕೆಗಳೊಂದಿಗೆ ಸೌಂದರ್ಯದ ನವೀಕರಣಗಳನ್ನು ಪಡೆದುಕೊಂಡಿರುವ ಈ ಸ್ಕೂಟರ್, ಕಠಿಣ ಒಬಿಡಿ -2 ಬಿ ಎಮಿಷನ್ ಮಾನದಂಡಗಳಿಗೆ ಅನುಸಾರವಾಗಿ ತನ್ನ ಪವರ್ ಟ್ರೇನ್ ನಲ್ಲಿ ಬದಲಾವಣೆಗಳೊಂದಿಗೆ ಬಿಡುಗಡೆಯಾಗಿದೆ.

ಹೊಸ 2025ರ ಸುಜುಕಿ ಅವೆನಿಸ್ ಸ್ಕೂಟರ್‌ನ ಫೀಚರ್ಸ್ ವಿಷಯಕ್ಕೆ ಬಂದರೆ, ಒನ್ ಪುಶ್ ಸೆಂಟ್ರಲ್ ಲಾಕಿಂಗ್ ಮತ್ತು ಶಟರ್ಡ್ ಕೀ ಸಿಸ್ಟಮ್, ಯುಎಸ್‌ಬಿ ಸುಸಜ್ಜಿತ ಫ್ರಂಟ್ ಬಾಕ್ಸ್, ಸ್ಟೋರೇಜ್ ಗಾಗಿ ಫ್ರಂಟ್ ರ್ಯಾಕ್, ಬಾಹ್ಯ ಹಿಂಜ್-ಟೈಪ್ ಫ್ಯೂಯಲ್ ಕ್ಯಾಪ್ ಮತ್ತು 21.8 ಲೀಟರ್ ಅಂಡರ್-ಸೀಟ್ ಸ್ಟೋರೇಜ್ ಸ್ಪೇಸ್ ಅನ್ನು ಒಳಗೊಂಡಿದೆ.
ಹೆಚ್ಚುವರಿ ವೈಶಿಷ್ಟ್ಯಗಳಲ್ಲಿ ಈಗ ಆಲ್ ಎಲ್ಇಡಿ ಲೈಟಿಂಗ್, ಸೈಡ್ ಸ್ಟ್ಯಾಂಡ್ ಇಂಟರ್ಲಾಕ್, ಸ್ಟೆಪ್ ಸೀಟ್, ಸುಜುಕಿ ಈಸಿ ಸ್ಟಾರ್ಟ್ ಸಿಸ್ಟಮ್ನೊಂದಿಗೆ ಇಂಟಿಗ್ರೇಟೆಡ್ ಎಂಜಿನ್ ಸ್ಟಾರ್ಟ್ ಅಂಡ್ ಸ್ಟಾಪ್ ಸ್ವಿಚ್, ಸ್ಪ್ಲಿಟ್ ಗ್ರಾಬ್ ರೇಲ್ಸ್ ಮತ್ತು ಫ್ಲೋರ್‌ರ್ಬೋರ್ಡ್ ಅನ್ನು ಸಹ ಈ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಒಳಗೊಂಡಿದೆ.
2025ರ ಸುಜುಕಿ ಅವೆನಿಸ್ ಪ್ರಮುಖ ಬದಲಾವಣೆಗಳನ್ನು ನೋಡುವುದಾದ್ರೆ, 6,750 ಆರ್ ಪಿಎಂನಲ್ಲಿ 8.5 ಬಿಹೆಚ್ ಪವರ್ ಮತ್ತು 5,500 ಆರ್ ಪಿಎಂನಲ್ಲಿ 10 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ 124.3 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನೀಡಲಾಗಿದೆ. ಸುಜುಕಿ ಅವೆನಿಸ್ ನಲ್ಲಿನ ಈ ಎಂಜಿನ್ ಅನ್ನು ಅಲ್ಯೂಮಿನಿಯಂನಿಂದ ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ.
ಬ್ಯಾಟರಿ ವೋಲ್ಟೇಜ್, ಆಯಿಲ್ ಚೇಂಜ್ ಇಂಡಿಕೇಟರ್, ಡಿಜಿಟಲ್ ವಾಚ್, ಡ್ಯುಯಲ್ ಟ್ರಿಪ್ ಮೀಟರ್, ಎಂಜಿನ್ ಹೀಟ್ ಇಂಡಿಕೇಟರ್, ಫ್ಯೂಲ್ ಗೇಜ್, ಇಕೋ-ಮೋಡ್ ಇಂಡಿಕೇಟರ್ ಮತ್ತು ಫ್ಯೂಲ್ ಬಳಕೆ ಮೀಟರ್ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸ್ಕೂಟರ್‌ನ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಸವಾರನಿಗೆ ನೀಡುತ್ತದೆ.
ಹೊಸ ಬಣ್ಣಗಳ ಆಯ್ಕೆಗಳನ್ನು ನೋಡುವುದಾದ್ರೆ, ಚಾಂಪಿಯನ್ ಯೆಲ್ಲೋ ನಂ 2 / ಗ್ಲಾಸಿ ಸ್ಪಾರ್ಕಲ್ ಬ್ಲ್ಯಾಕ್, ಗ್ಲಾಸಿ ಸ್ಪಾರ್ಕಲ್ ಬ್ಲ್ಯಾಕ್, ಗ್ಲಾಸಿ ಸ್ಪಾರ್ಕಲ್ ಬ್ಲ್ಯಾಕ್ / ಪರ್ಲ್ ಗ್ಲೇಸಿಯರ್ ವೈಟ್, ಗ್ಲಾಸಿ ಸ್ಪಾರ್ಕಲ್ ಬ್ಲ್ಯಾಕ್ / ಪರ್ಲ್ ಮೀರಾ ರೆಡ್ ನಂತಹ ಹೊಸ ಬಣ್ಣಗಳ ಸ್ಕೀಮ್ ಆಯ್ಕೆಗಳನ್ನು ಪರಿಚಯಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








