ಯಾವುದೇ ಬೆಟ್ಟ, ಗುಡ್ಡಗಳು ಇದರ ಮುಂದೆ ಲೆಕ್ಕಕ್ಕಿಲ್ಲ: ಹೊಸ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್ ವಿಶೇಷತೆಗಳು

ಜರ್ಮನಿ ಮೂಲದ ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಬಿಎಂಡಬ್ಲ್ಯು ಮೊಟೊರಾಡ್ (BMW Motorrad) ತನ್ನ 2025ರ ಬಿಎಂಡಬ್ಲ್ಯು ಆರ್ 1300 GS ಅಡ್ವೆಂಚರ್ ಬೈಕ್ ಅನ್ನು ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯು ಆರ್ 1300 GS ಅಡ್ವೆಂಚರ್ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.22.95 ಲಕ್ಷವಾಗಿದೆ. ಈ ಹೊಸ ಬಿಎಂಡಬ್ಲ್ಯು ಆರ್ 1300 GS ಅಡ್ವೆಂಚರ್ ಬೈಕ್ 30-ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಚೆನ್ನಾಗಿ ಸಂಯೋಜಿಸಿದ್ದು, ಇದು ಬಾಕ್ಸಿ ಲುಕ್ ಅನ್ನು ನೀಡುತ್ತದೆ.

ಹೊಸ ಬಿಎಂಡಬ್ಲ್ಯು ಆರ್ 1300 GS ಅಡ್ವೆಂಚರ್ ಬೈಕ್ ವಿತರಣೆಯು 2025ರ ಏಪ್ರಿಲ್ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಈ ಹೊಸ ಬಿಎಂಡಬ್ಲ್ಯು ಆರ್ 1300 GS ಅಡ್ವೆಂಚರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಡುಕಾಟಿ ಮಲ್ಟಿಸ್ಟ್ರಾಡಾ V4 ರ್ಯಾಲಿ ಬೈಕಿಗೆ ನೇರವಾಗಿ ಪೈಪೋಟಿಯನ್ನು ನೀಡುತ್ತದೆ. ಇದರ ಮೂಲ ರೂಪಾಂತರವನ್ನು ರೇಸಿಂಗ್ ರೆಡ್ ಪೇಂಟ್‌ವರ್ಕ್‌ನಲ್ಲಿ ಮಾತ್ರ ನೀಡಲಾಗಿದ್ದು, ಆದರೆ ಟ್ರಿಪಲ್ ಬ್ಲ್ಯಾಕ್ ಅನ್ನು ಬ್ಲ್ಯಾಕ್‌ಸ್ಟಾರ್ಮ್ ಮೆಟಾಲಿಕ್ ಪೇಂಟ್‌ವರ್ಕ್‌ನಲ್ಲಿ ಪಡೆಯಬಹುದಾಗಿದೆ.

BMW R 1300 GS Adventure

ವಿನ್ಯಾಸ: ಹೊಸ ಬಿಎಂಡಬ್ಲ್ಯು ಆರ್ 1300 GS ಅಡ್ಚೆಂಚರ್ ಬೈಕ್ ಅನ್ನು ಇತರ ಬಿಎಂಡಬ್ಲ್ಯು ಬೈಕುಗಳಿಗಿಂತ ಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಬಿಎಂಡಬ್ಲ್ಯು ಆರ್ 1300 GS ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಅಡ್ವೆಂಚರ್ ಮಾದರಿಯು ಹೊಸ ವಿನ್ಯಾಸವನ್ನು ಪಡೆದುಕೊಂಡಿದೆ. ಹೊಸ ಬಿಎಂಡಬ್ಲ್ಯು ಆರ್ 1300 GS ಅಡ್ವೆಂಚರ್ ಬೈಕ್ 30 ಲೀಟರ್ ಅಲ್ಯೂಮಿನಿಯಂ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಇದರೊಂದಿಗೆ ಎಲ್ಇಡಿ DRL ಗಳೊಂದಿಗೆ ಮ್ಯಾಟ್ರಿಕ್ಸ್ ಫುಲ್ LED ಹೆಡ್‌ಲ್ಯಾಂಪ್, ರಿಸೆಸ್ಡ್ BMW ಲೋಗೋ, ದೊಡ್ಡ ಹೊಂದಾಣಿಕೆಯ ವಿಂಡ್‌ಶೀಲ್ಡ್, ಇಂಟಿಗ್ರೇಟೆಡ್ ಟರ್ನಿಂಗ್ ಇಂಡಿಕೇಟರ್‌ಗಳೊಂದಿಗೆ ಹ್ಯಾಂಡ್ ಪ್ರೊಟೆಕ್ಟರ್‌ಗಳು, ಮತ್ತು ರಬ್ಬರಿಸ್ಡ್ ಮುಂತಾದ ಅಂಶಗಳನ್ನು ಹೊಂದಿದೆ. ಇನ್ನು ಗ್ರಾಹಕರಿಗೆ ಆಯ್ಕೆಯಾಗಿ ಎಲೆಕ್ಟ್ರಿಕ್ ವಿಂಡ್‌ಶೀಲ್ಡ್ ಅನ್ನು ಸಹ ಆಯ್ಕೆ ಮಾಡಬಹುದು.

BMW R 1300 GS Adventure

ಎಂಜಿನ್: ಹೊಸ ಬಿಎಂಡಬ್ಲ್ಯು ಆರ್ 1300 GS ಅಡ್ವೆಂಚರ್ ಬೈಕಿನಲ್ಲಿ 1,300cc, ಬಾಕ್ಸರ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,750rpm ನಲ್ಲಿ 145 bhp ಪವರ್ ಮತ್ತು 6,500rpm ನಲ್ಲಿ 149 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಫೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಫೀಚರ್ಸ್: ಹೊಸ ಬಿಎಂಡಬ್ಲ್ಯು ಆರ್ 1300 GS ಅಡ್ವೆಂಚರ್ ಬೈಕಿನಲ್ಲಿ 6.5-ಇಂಚಿನ TFT ಸ್ಕ್ರೀನ್, ಕೀಲೆಸ್ ರೈಡ್, ಹೀಟೆಡ್ ಗ್ರಿಪ್ಸ್, ಇಂಟಿಗ್ರೇಟೆಡ್ USB ಸಾಕೆಟ್‌ನೊಂದಿಗೆ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಕಂಪಾರ್ಟ್‌ಮೆಂಟ್, 12V ಆನ್-ಬೋರ್ಡ್ ಪವರ್ ಸಾಕೆಟ್, M ಲೈಟ್‌ವೈಟ್ ಬ್ಯಾಟರಿ ಮತ್ತು ಡೈನಾಮಿಕ್ ಕ್ರೂಸ್ ಕಂಟ್ರೋಲ್ (DCC) ನಂತಹ ಫೀಚರ್ಸ್ ಗಳನ್ನು ಹೊಂದಿವೆ.

BMW R 1300 GS Adventure

ಸುರಕ್ಷತಾ ಫಿಚರ್ಸ್ : ಅಡ್ವೆಂಚರ್ ಬೈಕ್ ಸುರಕ್ಷತಾ ಫಿಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಎಂಜಿನ್ ಡ್ರ್ಯಾಗ್ ಟಾರ್ಕ್ ಕಂಟ್ರೋಲ್, ಬಿಎಂಡಬ್ಲ್ಯು ಮೊಟೊರಾಡ್ ಫುಲ್ ಇಂಟಿಗ್ರಲ್ ABS ಪ್ರೊ, ಹಿಲ್-ಸ್ಟಾರ್ಟ್ ಕಂಟ್ರೋಲ್ (HSC) ಪ್ರೊ, ಡೈನಾಮಿಕ್ ಬ್ರೇಕ್ ಕಂಟ್ರೋಲ್ (DBC) ಮತ್ತು ಡೈನಾಮಿಕ್ ಸಸ್ಪೆನ್ಶನ್ ಅಡ್ಜಸ್ಟ್‌ಮೆಂಟ್ ಅನ್ನು ಹೊಂದಿದೆ. ಈ ಅಡ್ವೆಂಚರ್ ಬೈಕ್ ಇಕೋ, ರೈನ್, ರೋಡ್ ಮತ್ತು ಎಂಡ್ಯೂರೋ ಎಂಬ ನಾಲ್ಕು ರೈಡ್ ಮೋಡ್‌ಗಳನ್ನು ಹೊಂದಿವೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, January 23, 2025, 7:30 [IST]
English summary
New bmw r 1300 gs adventure top things details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+