ರಾಕೆಟ್ ವೇಗದಲ್ಲಿ ಮಿಂಚಲು ಬಂದ ಹೊಸ ಬಿಎಂಡಬ್ಲ್ಯು ಬೈಕ್ ವಿಶೇಷತೆಗಳು
ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೊಟೊರಾಡ್ (BMW Motorrad) ತನ್ನ ಬಿಎಂಡಬ್ಲ್ಯು ಎಸ್ 1000 ಆರ್‌ಆರ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಸ್ 1000 ಆರ್‌ಆರ್ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.21.10 ಲಕ್ಷವಾಗಿದೆ. 2024ರ ಅಕ್ಟೋಬರ್ ತಿಂಗಳಿನಲ್ಲಿ ಜಾಗತಿಕವಾಗಿ ಈ ಹೊಸ ಬೈಕ್ ಅನಾವರಣಗೊಂಡಿತು. ಈ ಹೊಸ ಬಿಎಂಡಬ್ಲ್ಯು ಎಸ್ 1000 ಆರ್‌ಆರ್ (BMW S 1000 RR) ಬೈಕಿನಲ್ಲಿ 999 cc ಇನ್‌ಲೈನ್-ಫೋರ್ ಎಂಜಿನ್ ಅನ್ನು ಮುಂದುವರೆಸಿದೆ.
ಬಿಎಂಡಬ್ಲ್ಯು ಎಸ್ 1000 ಆರ್‌ಆರ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಇನ್ನು ಈ ಬಿಎಂಡಬ್ಲ್ಯು ಎಸ್ 1000 ಆರ್‌ಆರ್ ಬೈಕ್ 2025ರ ಏಪ್ರಿಲ್ ತಿಂಗಳಿನಲ್ಲಿ ವಿತರಣೆಗಳು ಪ್ರಾರಂಭವಾಗಲಿವೆ. ಈ ಹೊಸ ಬಿಎಂಡಬ್ಲ್ಯು ಎಸ್ 1000 ಆರ್‌ಆರ್ ಬೈಕ್ ಬ್ಲ್ಯಾಕ್‌ಸ್ಟಾರ್ಮ್ ಮೆಟಾಲಿಕ್, ಬ್ಲೂಸ್ಟೋನ್ ಮೆಟಾಲಿಕ್ ಜೊತೆಗೆ ಮ್ಯಾಟ್ ಗ್ರಾಫಿಕ್ಸ್, ಮತ್ತು ಲೈಟ್‌ವೈಟ್ ಯುನಿ/ಎಂ ಮೋಟಾರ್‌ಸ್ಪೋರ್ಟ್ ಕಲರ್ ಸ್ಕೀಮ್ ಎಂಬ ಬಣ್ಣಗಳ ಆಯ್ಜೆಗಳಲ್ಲಿ ಲಭ್ಯವಿರುತ್ತದೆ.

ವಿನ್ಯಾಸ ಮತ್ತು ಫೀಚರ್ಸ್: ಹೊಸ ಬಿಎಂಡಬ್ಲ್ಯು ಬೈಕ್ ಕೆಲವು ದೃಶ್ಯ ಟ್ವೀಕ್‌ಗಳನ್ನು ಪಡೆದುಕೊಂಡಿದೆ ಮತ್ತು ಈ ಬೈಕ್ ಬ್ರೇಕ್ ಕೂಲಿಂಗ್ ಅನ್ನು ಸುಧಾರಿಸಲು ಸಂಯೋಜಿತ ಬ್ರೇಕ್ ಡಕ್ಟ್‌ಗಳೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯು ಸೂಪರ್ ಬೈಕ್ ರೈನ್, ರೋಡ್, ಡೈನಾಮಿಕ್ ಮತ್ತು ರೇಸ್ ಎಂಬ ನಾಲ್ಕು ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿವೆ.
ಈ ಬೈಕ್ ಬೈಕ್ ಇದರ ಟ್ವಿನ್ ಹೆಡ್‌ಲ್ಯಾಂಪ್ ಸೆಟಪ್‌ನಿಂದ ಪೂರಕವಾದ ಕಾಂಪ್ಯಾಕ್ಟ್ ವಿನ್ಯಾಸದೊಂದಿಗೆ ಬರುತ್ತದೆ. ಈ ಹೊಸ ಬಿಎಂಡಬ್ಲ್ಯು ಎಸ್ 1000 ಆರ್‌ಆರ್ ಬೈಕಿನಲ್ಲಿ ನಾಲ್ಕು ರೈಡಿಂಗ್ ಮೋಡ್‌ಗಳಿಗೆ ನಾಲ್ಕು ಸ್ಥಿರ ಮೂಲಭೂತ ಸೆಟ್ಟಿಂಗ್‌ಗಳೊಂದಿಗೆ ಟ್ತ್ಯಾಕ್ಷನ್ ಕಂಟ್ರೋಲ್ ಅನ್ನು ಪಡೆಯುತ್ತದೆ. ಇನ್ನು ಈ ಬಿಎಂಡಬ್ಲ್ಯು ಸೂಪರ್ ಬೈಕಿನ ಪ್ರಮುಖ ಫೀಚರ್ಸ್ ಗಳಲ್ಲಿ ಒಂದು ಡೈನಾಮಿಕ್ ಬ್ರೇಕ್ ಕಂಟ್ರೋಲ್ (ಡಿಬಿಸಿ) ಆಗಿದೆ.

ಇನ್ನು ಈ ಬಿಎಂಡಬ್ಲ್ಯು ಸೂಪರ್ ಬೈಕಿನಲ್ಲಿ ಎಲೆಕ್ಟ್ರಾನಿಕ್ ಚಾಸಿಸ್, ಎಲೆಕ್ಟ್ರಾನಿಕ್ ಕ್ರೂಸ್ ಕಂಟ್ರೋಲ್ ಮತ್ತು ಹಿಟೆಡ್ ಗ್ರೀಪ್ ಅನ್ನು ಕಂಟ್ರೋಲ್ ಹೊಂದಿದೆ. ಒಟ್ಟಾರೆಯಾಗಿ ಹೊಸ ಬಿಎಂಡಬ್ಲ್ಯು ಎಸ್ 1000 ಆರ್‌ಆರ್ ಬೈಕ್ ರಗಡ್ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿವೆ. ಪ್ರೀಮಿಯಂ ಬೈಕ್ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಎಂಜಿನ್: ಈ ಹೊಸ ಬಿಎಂಡಬ್ಲ್ಯುಎಸ್ 1000 ಆರ್‌ಆರ್ ಬೈಕಿನಲ್ಲಿ 99cc, ಇನ್‌ಲೈನ್-ನಾಲ್ಕು ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 206.51 bhp ಪವರ್ ಮತ್ತು 113 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಈ ಬಿಎಂಡಬ್ಲ್ಯು ಎಸ್ 1000 ಆರ್‌ಆರ್ ಬೈಕ್ 3.3 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಹೊಸ ಬಿಎಂಡಬ್ಲ್ಯು ಬೈಕ್ 300 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಹೊಸ ಬಿಎಂಡಬ್ಲ್ಯು ಬೈಕ್ ಭರ್ಜರಿ ಪರ್ಫಾಮೆನ್ಸ್ ನೀಡುವ ಬೈಕ್ ಆಗಿದೆ. ಪರ್ಫಾಮೆನ್ಸ್ ಮತ್ತು ಮಾಸ್ ಲುಕ್ ಅನ್ನು ಕೂಡ ಹೊಂದಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








