ಅಗ್ಗದ ದರ.. 181 Km ರೇಂಜ್, ಬೆಂಗಳೂರಿನ ಸಿಂಪಲ್ ಎನರ್ಜಿಯ ಹೊಸ ಇ-ಸ್ಕೂಟರ್ ಕುರಿತ ಪ್ರಮುಖಾಂಶಗಳಿವು!
ಬೆಂಗಳೂರಿನ ಸಿಂಪಲ್ ಎನರ್ಜಿ (Simple Energy) ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಬುಧವಾರ ನೂತನ ಒನ್ಎಸ್ (OneS) ಇ-ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು ಹೆಚ್ಚು ಅತ್ಯಾಧುನಿಕವಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ನಾವಿಲ್ಲಿ ಈ 'ಸಿಂಪಲ್ ಒನ್ಎಸ್' ಮಾಡೆಲ್‌ನ ಬೆಲೆ ಹಾಗೂ ವಿಶೇಷತೆಗಳಿಗೆ ಸಂಬಂಧಿಸಿದ ಪ್ರಮುಖಾಂಶಗಳ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.
ಬೆಲೆ (Price): ನೂತನ ಸಿಂಪಲ್ ಒನ್ಎಸ್ (Simple OneS) ಇ-ಸ್ಕೂಟರ್ ಖರೀದಿದಾರರ ಕೈಗೆಟುಕುವಂತಿದ್ದು, ರೂ.1.40 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ಇದರಿಂದ ಮಧ್ಯಮ ವರ್ಗದ ಜನರು ಕೂಡ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ದಿನಬಳಕೆಗೂ ಹೆಚ್ಚು ಸೂಕ್ತವಾಗಿದೆ.

ವಿನ್ಯಾಸ & ಬಣ್ಣಗಳು (Design & Colors): ಈ ಸ್ಕೂಟರ್ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು (ಡಿಸೈನ್) ಪಡೆದಿದೆ. ಬಹುಮುಖ್ಯವಾಗಿ ಅಂಗುಲರ್ ಹೆಡ್‌ಲೈಟ್, ಸ್ಲೋಪಿಂಗ್ ಸೀಟ್ & ಶಾರ್ಪ್ ಬಾಡಿ ಪ್ಯಾನೆಲ್‌ಗಳನ್ನು ಹೊಂದಿದೆ. ಜೊತೆಗೆ ಬ್ರೇಜನ್ ಬ್ಲಾಕ್, ಗ್ರೇಸ್ ವೈಟ್ ಮತ್ತು ಅಜುರೆ ಬ್ಲೂ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.
ಕಾರ್ಯಕ್ಷಮತೆ (Performance): ಹೊಸ ಸಿಂಪಲ್ ಒನ್ಎಸ್ ಇ-ಸ್ಕೂಟರ್ ಗರಿಷ್ಠ ಸಾಮರ್ಥ್ಯದ 3.7 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ, 181 ಕಿ.ಮೀ ಓಡುತ್ತದೆ. ಈ ಸ್ಕೂಟರ್‌ನಲ್ಲಿ 8.5 ಕೆಡಬ್ಲ್ಯೂ ಮೋಟಾರ್‌ನ್ನು ಉಪಯೋಗ ಮಾಡಲಾಗಿದೆ.
ನೂತನ ಸ್ಕೂಟರ್ 105 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. 2.55 ಸೆಕೆಂಡುಗಳಲ್ಲಿ 40 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. ಇಕೋ, ರೈಡ್, ಡ್ಯಾಶ್ ಹಾಗೂ ಸೋನಿಕ್ ಎಂಬ ರೈಡಿಂಗ್ ಮೋಡ್‌ಗಳನ್ನು ತನ್ನದಾಗಿಸಿಕೊಂಡಿದೆ. ಸವಾರರು ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 35 ಲೀ. ಸಾಮರ್ಥ್ಯದ ಅಂಡರ್-ಸೀಟ್ ಸ್ಟೋರೇಜ್ ಅನ್ನು ಒಳಗೊಂಡಿದೆ.
ವೈಶಿಷ್ಟ್ಯಗಳು (Features): ಹೊಸ ಸಿಂಪಲ್ ಒನ್ಎಸ್ ಎಲೆಕ್ಟ್ರಿಕ್ ಸ್ಕೂಟರ್ ಟಚ್‌ಸ್ಕ್ರೀನ್ ಟಿಎಫ್‌ಟಿ ಸ್ಕ್ರೀನ್ (7-ಇಂಚು), ಬ್ಲೂಟೂತ್ ಕನೆಕ್ಟಿವಿಟಿ, ಫೈಂಡ್ ಮೈ ವೆಹಿಕಲ್, ರಾಪಿಡ್ ಬ್ರೇಕಿಂಗ್ ಸಿಸ್ಟಮ್, ವೈಫೈ, ನ್ಯಾವಿಗೇಷನ್, ಪಾರ್ಕ್ ಮತ್ತು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಒಳಗೊಂಡನಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇವುಗಳು ಯುವ ಗ್ರಾಹಕರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ.
ಇನ್ನು, ನೂತನ ಸಿಂಪಲ್ ಒನ್ಎಸ್ ಇ-ಸ್ಕೂಟರ್ ಮಾರಾಟಕ್ಕೆ ಬಂದಿರುವುದು ಖರೀದಿದಾರರಿಗೂ ಹೆಚ್ಚಿನ ಖುಷಿ ನೀಡಿದೆ. ಈ ಸ್ಕೂಟರ್ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ದೊಡ್ಡ ಸಂಖ್ಯೆಯಲ್ಲಿಯೂ ಬಿಕರಿಯಾಗುವ ನೀರಿಕ್ಷೆಯಿದೆ. ಓಲಾ, ಎಥರ್, ಟಿವಿಎಸ್ ಹಾಗೂ ಬಜಾಜ್ ಕಂಪನಿಗಳಿಂದಲೂ ದೊಡ್ಡ ಮಟ್ಟದ ಸ್ಪರ್ಧೆ ಎದುರಿಸಬೇಕಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ 'ಸಿಂಪಲ್ ಒನ್ಎಸ್' ಎಲೆಕ್ಟ್ರಿಕ್ ಸ್ಕೂಟರ್‌ಗೆ ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








