ಕಾರಿನಂತಹ ಫೀಚರ್ಸ್: ನಮ್ಮೂರ ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಇ-ಸ್ಕೂಟರ್ ಖರೀದಿಸಲು ಪ್ರಮುಖ 5 ಕಾರಣಗಳು!

ಬೆಂಗಳೂರಿನ ಅಲ್ಟ್ರಾವೈಲೆಟ್ (Ultraviolette), ಈ ತಿಂಗಳಾರಂಭದಲ್ಲಿ ನೂತನ ಟೆಸ್ಸೆರಾಕ್ಟ್ (Tesseract) ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಈ ಸ್ಕೂಟರ್‌ಗೆ ದೇಶೀಯ ಗ್ರಾಹಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬುಕ್ಕಿಂಗ್ ಪ್ರಾರಂಭಿಸಿದ ಕೇವಲ ಎರಡು ವಾರಗಳಲ್ಲಿ 50,000ಕ್ಕೂ ಅಧಿಕ ಗ್ರಾಹಕರು ಆರ್ಡರ್ ಮಾಡಿದ್ದರು. ಇದು ಅತ್ಯಂತ ಕೈಗೆಟುಕುವ ಬೆಲೆಯಲ್ಲೂ ಲಭ್ಯವಿದೆ. ನೀವು ಹೊಸ ಟೆಸ್ಸೆರಾಕ್ಟ್ ಸ್ಕೂಟರ್‌ನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ, ಪ್ರಮುಖ 5 ಕಾರಣಗಳು ಇಲ್ಲಿವೆ.

ಸುರಕ್ಷತೆಗೆ ಹೆಚ್ಚಿನ ಆದ್ಯತೆ: ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಇ-ಸ್ಕೂಟರ್‌ನಲ್ಲಿ ಸವಾರರ ರಕ್ಷಣೆಗೆ ಸಾಕಷ್ಟು ಒತ್ತು ನೀಡಲಾಗಿದೆ. ಇದು ಮುಂಭಾಗ (ಫ್ರಂಟ್) ಮತ್ತು ಹಿಂಭಾಗ (ರೇರ್) ಡ್ಯಾಶ್‌ಕ್ಯಾಮ್‌ಗಳನ್ನು ಹೊಂದಿರುವ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ರೈಡಿಂಗ್ ವಿಡಿಯೋವನ್ನು ರೆಕಾರ್ಡ್ ಮಾಡಲು ಸಾಧ್ಯವಾಗಲಿದೆ. ಇದರೊಟ್ಟಿಗೆ ಎಆರ್‌ಎಎಸ್ (ಅಡ್ವಾನ್ಸ್ಡ್ ರೈಡರ್ ಅಸಿಸ್ಟೆನ್ಸ್ ಸಿಸ್ಟಮ್), ಡಿಸ್ಕ್ ಬ್ರೇಕ್‌ಗಳು, ಡುಯಲ್- ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಹಾಗೂ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್‌ನ್ನು ಒಳಗೊಂಡಿದೆ.

New Ultraviolette Tesseract E-Scooter You Want Buy Here Top 5 Reasons

ಸಾಟಿಯಿಲ್ಲದ ಕಾರ್ಯಕ್ಷಮತೆ: ಈ ಎಲೆಕ್ಟ್ರಿಕ್ ಸ್ಕೂಟರ್ ಶಕ್ತಿಯುತವಾದ 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್), 5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 6 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ ಕ್ರಮವಾಗಿ 162, 220 ಮತ್ತು 261 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಬ್ಯಾಟರಿಯು ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ ಕೇವಲ ಒಂದು ಗಂಟೆಯೊಳಗೆ 80% ವರೆಗೆ ಚಾರ್ಜ್ ಆಗಿ ಬಿಡುತ್ತದೆ.

ಕಾರಿನಂತಹ ವಿನ್ಯಾಸ: ನೂತನ ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಇ-ಸ್ಕೂಟರ್‌ ಕಾರನ್ನು ಮೀರಿಸುವಂತಹ ವಿನ್ಯಾಸವನ್ನು ಹೊಂದಿದೆ. ಬಹುಮುಖ್ಯವಾಗಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಫ್ಲೋಟಿಂಗ್ ಡಿಆರ್‌ಎಲ್‌ಗಳನ್ನು ಒಳಗೊಂಡಿದೆ. ಜೊತೆಗೆ ಡೆಸರ್ಟ್ ಬ್ಲ್ಯಾಕ್, ಸೋನಿಕ್ ಪಿಂಕ್ ಹಾಗೂ ಸ್ಟೆಲ್ತ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

New Ultraviolette Tesseract E-Scooter You Want Buy Here Top 5 Reasons

ಜಬರ್ದಸ್ತ್ ವೈಶಿಷ್ಟ್ಯಗಳು: ಈ ಸ್ಕೂಟರ್ ಎಲ್ಲ ವಯೋಮಾನದ ಗ್ರಾಹಕರನ್ನು ಮನಸೆಳೆಯುವಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಟಿಎಫ್‌ಟಿ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಕೀಲೆಸ್ ಆಕ್ಸೆಸ್, ಪಾರ್ಕ್ ಅಸಿಸ್ಟ್, ಹಿಲ್-ಹೋಲ್ಡ್, ಕ್ರೂಸ್ ಕಂಟ್ರೋಲ್, ನ್ಯಾವಿಗೇಷನ್ & ಮ್ಯೂಸಿಕ್ ಕಂಟ್ರೋಲ್‌ನ್ನು ಹೊಂದಿದೆ. ಹೆಚ್ಚಿನ ಲಗೇಜ್ ಸಾಗಿಸಲು 34-ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್ ಅನ್ನು ಒಳಗೊಂಡಿದೆ.

ಕೈಗೆಟುಕುವ ಬೆಲೆಯಲ್ಲೂ ಲಭ್ಯ: ಹೊಸ ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್‌ ರೂ.1.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಅದರ ಹೊರತಾಗಿ ರೂ.1.20 ಲಕ್ಷಕ್ಕೆ ಕಂಪನಿಯು ಪ್ರಿ-ಬುಕ್ಕಿಂಗ್‌ನ್ನು ತೆಗದುಕೊಳ್ಳುತ್ತಿದೆ. ಆಸಕ್ತ ಗ್ರಾಹಕರು ರೂ.999 ಮುಂಗಡ ಹಣವನ್ನು ಪಾವತಿ ಮಾಡುವುದರೊಂದಿಗೆ ಆರ್ಡರ್ ಮಾಡಬಹುದು.

ಇನ್ನು, ಹೊಸ ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಇ-ಸ್ಕೂಟರ್ ಬಿಡುಗಡೆಯಾಗಿರುವುದು ಕರ್ನಾಟಕ ಸೇರಿದಂತೆ ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಅಗ್ಗದ ಬೆಲೆಯನ್ನು ಹೊಂದಿರುವುದರಿಂದ ಹಲವು ಖರೀದಿದಾರರ ಆಯ್ಕೆಯ ದ್ವಿಚಕ್ರ ವಾಹನವಾಗುವುದರಲ್ಲಿ ಎರಡು ಮಾತಿಲ್ಲ. ಇದರ ವಿತರಣೆಗಳು ಆರಂಭವಾದ ಮೇಲೆ ಮಾರಾಟ ಪ್ರಮಾಣ ಮತ್ತಷ್ಟು ಅಧಿಕಗೊಳ್ಳುವ ನಿರೀಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, March 28, 2025, 8:29 [IST]
English summary
New ultraviolette tesseract e scooter you want buy here top 5 reasons
Read more on ultraviolette india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+